Link copied!
Sign in / Sign up
0
Shares

ಮಕ್ಕಳಲ್ಲಿ ಹಾಸ್ಯಪ್ರಜ್ಞೆಯ ಮಹತ್ವ ಮತ್ತು ಅದನ್ನು ನೀವು ಬೆಳೆಸಲು ಇರುವ ಮಾರ್ಗಗಳು!

ನಿಮ್ಮ ಮಕ್ಕಳು ಹುಟ್ಟುತ್ತಲೇ ತಮ್ಮಲ್ಲಿ ಹಾಸ್ಯ ಪ್ರಜ್ಞೆಯನ್ನು ಇಟ್ಟುಕೊಂಡೆ ಭೂಮಿಗೆ ಬಂದಿರುತ್ತಾರೆ. ಆದರೆ ವಿಶೇಷ ಏನೆಂದರೆ ಹಾಸ್ಯಪ್ರಜ್ಞೆಯು ಜೆನೆಟಿಕ್ ಅಂದರೆ ಅನುವಂಶಿಕವಾಗಿ ಬರುವಂತದ್ದಲ್ಲ. ಬದಲಿಗೆ ಹಾಸ್ಯಪ್ರಜ್ಞೆಯು ಮಕ್ಕಳು ಬೆಳೆಯುತ್ತಾ ತಮ್ಮಲ್ಲಿ ಬೆಳೆಸಿಕೊಳ್ಳುತ್ತಾ ಹೋಗಬೇಕು. ಅಲ್ಲದೆ ನಿಮ್ಮ ಮಗುವಿನ ಹಾಸ್ಯ ಪ್ರಜ್ಞೆಯನ್ನು ಪ್ರೋತ್ಸಾಹಿಸುವುದು ನೀವು ಅಂದುಕೊಂಡಿರುವುದಕ್ಕಿಂತಲೂ ಮುಖ್ಯ ಆಗಿರುತ್ತದೆ.


ಖಂಡಿತವಾಗಿಯೂ, ಹಾಸ್ಯಪ್ರಜ್ಞೆ ಹೊಂದಿರುವ ಮಕ್ಕಳು ಕಡೆಯ ಪಕ್ಷ ಮೇಲ್ನೋಟಕ್ಕಾದರೂ ಸುಲಭವಾಗಿ ಸ್ನೇಹಿತರನ್ನ ಗಳಿಸಿಕೊಳ್ಳುತ್ತಾರೆ ಮತ್ತು ತಮ್ಮ ಜೀವನವನ್ನು ಗಂಭೀರ ಮಕ್ಕಳಿಗಿಂತ ಹೆಚ್ಚು ಖುಷಿಯಾಗಿ ಸಾಗಿಸುತ್ತಾರೆ. ಆದರೆ ಹಾಸ್ಯಪ್ರಜ್ಞೆ ಹೊಂದುವುದು ಎಂದರೆ ಅದರಲ್ಲಿ ಮುಖ್ಯವಾದದು ಹಾಸ್ಯವನ್ನು ಹುಟ್ಟಿಹಾಕುವಂತಹ ಸಂದರ್ಭಗಳನ್ನ ಗುರುತಿಸುವುದು. ಈ ಕಲೆಯನ್ನು ಹೆಚ್ಚು ಮಾತನಾಡದ ಮಕ್ಕಳಿಂದಲೂ ನಿಮ್ಮ ಮಗುವು ಕಲಿಯಬಹುದು.

ಸಂಶೋಧನೆಯ ಪ್ರಕಾರ ಹಾಸ್ಯಪ್ರಜ್ಞೆ ಹೊಂದಿರುವ ಮಕ್ಕಳು ದೃಢವಾದ ಹಾಸ್ಯಪ್ರಜ್ಞೆ ಹೊಂದಿರುವ ಮಕ್ಕಳು ಇತರೆ ಮಕ್ಕಳಿಗಿಂತ ಹೆಚ್ಚು ಸಂತೋಷ, ಆಶಾಭಾವನೆ ಮತ್ತು ಸ್ವಾಭಿಮಾನ ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ. ಹಾಸ್ಯಪ್ರಜ್ಞೆಯು ಮಕ್ಕಳಿಗೆ ಬಾಲ್ಯದ ಸವಾಲುಗಳನ್ನು ಸಕಾರಾತ್ಮಕವಾಗಿ ಎದುರಿಸಲು ಶಕ್ತಿ ನೀಡುತ್ತದೆ. ಉದಾಹರಣೆಗೆ ನಿಮ್ಮ ಮಗು ಮತ್ತು ಅವನ ಸ್ನೇಹಿತರ ನಡುವಿನ ಭಿನ್ನಾಭಿಪ್ರಾಯಗಳು ಎದುರಾದಾಗ, ಒಂದು ಶಾಲೆಯಿಂದ ಬಿಟ್ಟು ಹೊಸ ಶಾಲೆಗೇ ಸೇರುವಾಗ ಮತ್ತು ಇಂತಹ ಹಲವು ಸವಾಲುಗಳು. ನಿಮ್ಮ ಮಕ್ಕಳನ್ನ ನಗಿಸುವುದಕ್ಕಿಂತ ಮತ್ತು ನಿಮ್ಮ ಮಕ್ಕಳು ಆಡುವ ಯಾವುದಾದರೂ ಮಾತಿಗೆ ಮನಸಾರೆ ನಗುವುದಕ್ಕಿಂತ ಖುಷಿಯ ವಿಷಯ ಮತ್ತೇನಿದೆ? ನಿಜಕ್ಕೂ, ಹಾಸ್ಯಪ್ರಜ್ಞೆ ಹೊಂದಿರುವುದು ನಿಮ್ಮ ಮಗುವಿನ ಜೀವನಪರ್ಯಂತವೂ ಮಗುವಿಗೆ ಒಂದು ಬಲುದೊಡ್ಡ ಶಕ್ತಿ ಮತ್ತು ಉಪಯೋಗಕ್ಕೆ ಬರುವಂತದ್ದು ಆಗಿರುತ್ತದೆ. ಇಂತಹ ಹಾಸ್ಯಪ್ರಜ್ಞೆಯನ್ನು ನಿಮ್ಮ ಮಗುವಿನಲ್ಲಿ ಬೆಳೆಸಲು ಕೆಲವು ದಾರಿಗಳು ಇವೆ ನೋಡಿ.


೧. ನಿಮ್ಮ ಹಾಸ್ಯಪ್ರಜ್ಞೆಯನ್ನು ಅವರ ಮುಂದೆ ವ್ಯಕ್ತಪಡಿಸುತ್ತಿರಿ


ಮಕ್ಕಳು ಯಾವಾಗ ಹಾಸ್ಯಪ್ರಜ್ಞೆ ಮೆರೆಯಬೇಕು ಮತ್ತು ಯಾವಾಗ ಮೆರೆಯಬಾರದು ಎಂದು ಕಲಿಯಲು ಅತ್ಯುತ್ತಮ ವಿಧಾನ ಎಂದರೆ ಅದು ನಿಮ್ಮನ್ನು ನೋಡಿ ಕಲಿಯುವುದು. ಅವರಿಗೆ ಜೋಕ್ಸ್ ಮತ್ತು ಹಾಸ್ಯಕಥೆಗಳನ್ನು ಹೇಳಿ. ಮುಖವನ್ನು ವಿಚಿತ್ರವಾಗಿ ಮಾಡುವುದು, ವಿಚಿತ್ರವಾಗಿ ಕುಣಿಯುವುದನ್ನು ಮಾಡಿ ಅವರ ಮೊಗದಲ್ಲಿ ನಗು ತರಿಸಿ ಮತ್ತು ಜೀವನವನ್ನು ನಗುತ್ತಲೇ ಬಾಳಬೇಕು, ತುಂಬಾ ಗಂಭೀರವಾಗಿ ಸ್ವೀಕರಿಸಬಾರದು ಎಂಬುದನ್ನು ತಿಳಿಸಿ. ಮಗು ನೀರು ಚೆಲ್ಲಿದಾಗ ಅಥವಾ ಆಟಿಕೆ ಮುರಿದಾಗ ಬೈಯ್ಯುವ ಬದಲು, ಅಂತಹ ಸಣ್ಣ ಎಡವಟ್ಟುಗಳು ಉಂಟಾದಾಗ ನಕ್ಕು ಸುಮ್ಮನಾಗಿ.


೨. ನಿಮ್ಮ ಮಗುವು ಹಾಸ್ಯಪ್ರಜ್ಞೆ ಮೆರೆಯಬೇಕಾದರೆ ನೀವೂ ಪಾಲ್ಗೊಳ್ಳಿ


ನನ್ನ ಮಗಳು ನನಗೆ ತಾನು TV ಅಲ್ಲಿ ನೋಡುವ, ಪುಸ್ತಕದಲ್ಲಿ ನೋಡುವ ಅಥವಾ ಮೊಬೈಲ್ ಅಲ್ಲಿ ನೋಡುವ ಅಥವಾ ತಾನೇ ಹುಟ್ಟಿಸುವ ಪೆದ್ದು ಪೆದ್ದು ಜೋಕ್ಸ್ ಅನ್ನು ಹೇಳುತ್ತಲೇ ಇರುತ್ತಾಳೆ. ಇದಕ್ಕೆಲ್ಲಾ ನಾನು ಹೊಟ್ಟೆ ಹುಣ್ಣಾಗುವಂತೆ ನಗುತ್ತಲೇ ಇರುವೆ ಎಂದರೆ ನೀವು ನಂಬಲೇ ಬೇಕು. ನಿನಗೆ ಇನ್ನೊಬ್ಬರನ್ನು ನಗಿಸುವ ಶಕ್ತಿ ಇದೆ ಎಂದು ನಿಮಗೆ ತೋರಿಸುವುದೇ ನೀವು ಅವನಿಗೆ ಒಂದು ದೊಡ್ಡ ಆಯುಧ ನೀಡಿದಂತೆ. ಈ ಆಯುಧ ನಿಮ್ಮಿಬ್ಬರಿಗೂ ಸಂತಸವನ್ನೇ ತರುತ್ತದೆ.


೩. ಹಾಸ್ಯ ತುಂಬಿದ ಜಗತ್ತನ್ನು ಸೃಷ್ಟಿಸಿ


ಮಗುವಿನ ವಯಸ್ಸಿಗೆ ತಕ್ಕಂತಹ ಹಾಸ್ಯ ಪುಸ್ತಕ, ವರ್ಣರಂಜಿತ ಕವನಗಳ ಪುಸ್ತಕಗಳ ಭಂಡಾರವನ್ನೇ ಮನೆಯಲ್ಲಿಡಿ. ಜೋಕ್ಸ್ ಅನ್ನು ಅವಾಗವಾಗ ಹೇಳುತ್ತಲೇ ಇರುತ್ತಿರಿ - ಅವುಗಳು ಕೆಟ್ಟದಾಗೇ ಇರಲಿ. ನೀವು ಪೆದ್ದು ಪೆದ್ದಾಗಿ ಆಡುವಂತಹ ಆಟಗಳನ್ನೇ ಅವರ ಜೊತೆ ಆಡಿ. ಹಾಸ್ಯವನ್ನು ನಿಮ್ಮ ದೈನಂದಿನ ಜೀವನದ ಒಂದು ಭಾಗ ಮಾಡಿಕೊಂಡರೆ, ನಿಮ್ಮ ಮಗುವು ಅದರ ಜೀವನ ಪರ್ಯಂತ ಅದನ್ನು ಕಾಪಾಡಿಕೊಂಡೇ ಬಾಳುತ್ತಾರೆ.


೪. ಅವರಿಗೆ ಹಾಸ್ಯದ ಇತಿಮಿತಿಗಳನ್ನು ತಿಳಿಸಿ


ಒಂದು ವೇಳೆ ನಿಮ್ಮ ಮಗುವಿನ ಹಾಸ್ಯವು ಇತರರಿಗೆ ಬೇಸರ ಉಂಟು ಮಾಡುವ ಅಥವಾ ಸಮಯೋಚಿತವಾಗಿ ಇರದಿದ್ದರೆ, ಕೂಡಲೇ ಮಗುವಿಗೆ ತನ್ನ ಇತಿಮಿತಿ ನಿಂತ ಜಾಗದಲ್ಲೇ ತಿಳಿಸಿ ಹೇಳಿ. ಇತರರ ಮೇಲೆ ಜೋಕ್ಸ್ ಮಾಡುವುದು ತಪ್ಪೆಂದು ತಿಳಿಸಿ ಹೇಳಿ ಮತ್ತು ಈ ಸಮಯದಲ್ಲಿಯೇ ಅಸಹ್ಯಕರ ಜೋಕ್ಸ್ ಅನ್ನು ಅಥವಾ ಹೀಯಾಳಿಸುವ ಜೋಕ್ಸ್ ಅನ್ನು ಮಾಡಬಾರದೆಂದು ಅವರಿಗೆ ಮನವರಿಕೆ ಮಾಡಿಕೊಡಿ. ಮಕ್ಕಳು ಚಿಕ್ಕವರಿದ್ದಾಗ ಜೋಕ್ ಮಾಡುವುದೆಂದರೆ ಸಾಮಾನ್ಯವಾಗಿ ಶೌಚದ ಬಗ್ಗೆಯೇ ಮಾಡುತ್ತಾರೆ. ಅದು ಒಂದೆರೆಡು ಬಾರಿ ಆದರೆ ಪರವಾಗಿಲ್ಲ, ಆದರೆ ಅದರ ಬಗ್ಗೆಯೇ ಜೋಕ್ ಮಾಡುತ್ತಿದ್ದರೆ, ಅವರನ್ನು ದಾರಿಗೆ ತನ್ನಿ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon