Link copied!
Sign in / Sign up
5
Shares

ಮಕ್ಕಳಲ್ಲಿ ಚಿಕುನ್ ಗುನ್ಯಾ

ತೇವಾಂಶ ನೆಲೆಗೊಂಡಾಗ ಮಳೆಗಾಲದಲ್ಲಿ ಅಭಿವೃದ್ಧಿಗೊಳ್ಳುವ ಗುಂಯ್ ಗುಟ್ಟುವ ಸೊಳ್ಳೆಗಳ ಹಾವಳಿಗಳಿಂದ ಚಿಕುನ್ ಗುನ್ಯಾಗಳು ಹರಡುತ್ತವೆ. ಚಿಕುನ್ ಗುನ್ಯಾದಿಂದ ಬಳಲುವ ವ್ಯಕ್ತಿಯು ಅಥವಾ ಮಗುವು ಮಲೇರಿಯಾ ಪೀಡಿತರಾದವರ ಅದೇ ಲಕ್ಷಣಗಳನ್ನು ತೋರ್ಪಡಿಸುತ್ತಾರೆ. ಸೊಳ್ಳೆಗಳಿಂದ ಹರಡಲ್ಪಡುವ ಮಾರಣಾಂತಿಕ ರೋಗಗಳ ಬಗ್ಗೆ ಹಲವರಿಗೆ ಸರಿಯಾದ ತಿಳುವಳಿಕೆಯಿಲ್ಲ.

ಚಿಕುನ್ ಗುನ್ಯಾ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ತುಂಬಾ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಚಿಕನ್ಗುನ್ಯಾ ಸೋಂಕು ರೋಗವು ತಾಯಿಯಿಂದ ಮಗುವಿಗೆ ಹರಡುತ್ತದೆಯೆಂದು ೨೦೦೫-೨೦೦೬ರಲ್ಲಿ ಪತ್ತೆ ಹಚ್ಚಲಾಯಿತು.

ಆಗ ತಾನೇ ಜನಿಸಿದ ಮಕ್ಕಳಲ್ಲಿ ರೋಗ ಪ್ರತಿರೋಧಕ ಶಕ್ತಿಯು ಇನ್ನೂ ಅಭಿವೃದ್ಧಿಗೊಳ್ಳದ ಕಾರಣ,ಈ ರೋಗಕ್ಕೆ ಎದುರಾಗಿ ಹೋರಾಡಲು ಬಹಳ ಕಷ್ಟವಾಗುವುದು. ಮಾತ್ರವಲ್ಲದೆ ಮಕ್ಕಳಲ್ಲಿ ಹರಡಿದ ಚಿಕುನ್ ಗುನ್ಯಾವನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ.

ಚಿಕುನ್ ಗುನ್ಯಾ ಹರಡುವುದು ಹೇಗೆ ?

ಏಡಿಸ್ ಈಜಿಪ್ಟಿ ಮತ್ತು ಎಡಿಸಿ ಆಲ್ಬೊಪಿಕ್ಟಸ್ ಎಂದು ಕರೆಯಲ್ಪಡುವ ಸೊಳ್ಳೆಗಳು ಚಿಕನ್ ಗುನ್ಯ ಹರಡಲು ಕಾರಣವಾಗುತ್ತದೆ. ಈ ಸೊಳ್ಳೆಗಳು ಸಂಧ್ಯಾಕಾಲದಲ್ಲಿ ಅಥವಾ ರಾತ್ರಿ ಕಾಲಗಳಲ್ಲಿ ಮಾತ್ರವಲ್ಲ, ದಿನದ ಯಾವುದೇ ವೇಳೆಗಳಲ್ಲೂ ನಮ್ಮನ್ನು ಕಚ್ಚಬಹುದು ಎಂಬುದು ಬೆಚ್ಚಿ ಬೀಳಿಸುವ ಸತ್ಯ ಸಂಗತಿ ಎಂದರೆ ನಿಮ್ಮ ಮಗುವು ದಿನದ ಯಾವುದೇ ವೇಳೆಯಲ್ಲೂ ಚಿಕನ್ ಗುನ್ಯಾದ ಆಮಂತ್ರಣಕ್ಕೆ ಬಲಿಯಾಗಬಹುದು ಎಂದರ್ಥ.

ಲಕ್ಷಣಗಳು

ರೋಗಪೀಡಿತವಾದ ವ್ಯಕ್ತಿಯು ಬಹಳ ನೋವನ್ನು ಅನುಭವಿಸುವನು.

೧೦೦ F ಶರೀರ ಉಷ್ಣತೆ ಯೊಂದಿಗೆ ಕಾಣಿಸಿಕೊಳ್ಳುವ ಜ್ವರ

ಮಗುವು ಆಹಾರವನ್ನು ಸೇವಿಸಲು ನಿರಾಸಕ್ತವಾಗಿರುವುದು.

ಮಗುವು ಅಸ್ವಾಭಾವಿಕವಾದ ತೂಕಡಿಕೆ ಹಾಗೂ ಅಸ್ವಸ್ಥತೆಯನ್ನು ಕಾಣಿಸಬಹುದು

ಮಗುವಿನ ಶರೀರದಲ್ಲಿ ಕೆಂಪು ಕೆಂಪಾದ ಬೊಬ್ಬೆಗಳು.

ಸೂಜಿಯಿಂದ ಚುಚ್ಚಿ ನೋಯಿಸುವಂತಹ ತಲೆನೋವು.

ಮಗುವು ಚಿಕುನ್ ಗುನ್ಯಾದಿಂದ ಬಳಲುತ್ತಿದೆಯೇ ಎಂದು ಪರೀಕ್ಷಿಸುವುದು ಹೇಗೆ ?

ಮೇಲೆ ತಿಳಿಸಿದ ಯಾವುದೇ ಲಕ್ಷಣಗಳು ಮಗುವಲ್ಲಿ ಕಾಣಿಸಿಕೊಂಡರೆ ತಡಮಾಡದೆ ಮಕ್ಕಳನ್ನು ವೈದ್ಯರಲ್ಲಿಗೆ ಕೊಂಡೊಯ್ಯಿರಿ. ಅವರ ಶಿಫಾರಸ್ಸಿನಂತೆ ರಕ್ತ ಪರಿಶೋಧನೆಯಿಂದ ಮಗುವು ಚಿಕನ್ ಗುನ್ಯಾ ಪೀಡಿತವಾಗಿದೆಯೇ, ಇಲ್ಲವೇ ಎಂದು ಖಾತ್ರಿಪಡಿಸಿದ ಬಳಿಕ ಸಂದರ್ಭೋಚಿತವಾದ ಚಿಕಿತ್ಸೆಯನ್ನು ಮಗುವಿಗೆ ನೀಡಬಹುದು.

ಮಗುವಿಗೆ ನೀಡಬಹುದಾದ ಚಿಕಿತ್ಸೆಗಳು

ಮಗುವು ನಿರ್ಜಲೀಕರಣದಿಂದ ಬಳಲದಂತೆ ಮಗುವಿಗೆ ಆಗಾಗ ದ್ರವಾಹಾರಗಳನ್ನು ಕುಡಿಸಬೇಕು. ಆರು ತಿಂಗಳು ಪ್ರಾಯವಾಗದ ಮಗುವಾದರೆ ಹಾಲನ್ನಲ್ಲದೇ ಬೇರೇನನ್ನೂ ನೀಡಬಾರದು. ಇತರ ಆಹಾರಗಳನ್ನು ಜೀರ್ಣ ಮಾಡಿಕೊಳ್ಳಲು ಸಾಮರ್ಥ್ಯವಿರುವ ಮಗುವಾದರೆ ತಜ್ಞರ ಸಲಹೆಯಂತೆ ಇತರ ದ್ರವಾಹಾರಗಳನ್ನು ನೀಡಬಹುದು.

ಮಗುವು ಯಾವುದೇ ತೊಂದರೆಗಳಾಗದಂತೆ ಹೇಗೆ ತಡೆಯಬಹುದು ?

ಮನೆ ಹಾಗೂ ಮನೆಯ ಪರಿಸರಗಳಲ್ಲಿ ನೀರು ನಿಶ್ಚಲವಾಗಿ ಕಟ್ಟಿಕೊಳ್ಳದಂತೆ ಎಚ್ಚರವಹಿಸಿರಿ. ಉದಾಹರಣೆಗೆ ಮನೆಯೊಳಗಿರುವ ಹೂದಾನಿಗಳಲ್ಲಿರುವ ನೀರನ್ನು ಆಗಾಗ ಬದಲಾಯಿಸುವತ್ತ ಗಮನಿಸಿರಿ. ಇಲ್ಲದಿದ್ದರೆ ನಿಮ್ಮ ಮನೆಯು ಸೊಳ್ಳೆಗಳು ತಮ್ಮ ಸಂತಾನೋತ್ಪತ್ತಿಗಾಗಿ ಕಂಡುಕೊಂಡ ಅತ್ಯಂತ ಸುರಕ್ಷಿತವಾದ ತಾಣವಾಗಬಹುದು.

ಮನೆಯ ಸುತ್ತಮುತ್ತ ಎಲ್ಲೆಂದರಲ್ಲಿ ಕಸ ಬಿಸಾಡುವ ದುರ್ಗುಣವನ್ನು ತಿದ್ದಿಕೊಳ್ಳಿ. ಅನಗತ್ಯ ಪದಾರ್ಥಗಳನ್ನು ಬಿಸಾಡಲು ಕಸದ ತೊಟ್ಟಿಯ ಉಪಯೋಗವನ್ನು ಪಡೆಯಿರಿ ಅನ್ ಕ್ಲೋಗಿಂಗ್ ಡ್ರೈನ್ ವಿಧಾನಗಳಿಂದ ನೀರು ಕಟ್ಟಿನಿಲ್ಲದಂತೆ ತಡೆಯಿರಿ.

ಮನೆಯೊಳಗೆ ವಾತಾನುಕೂಲಿಗಳಿದ್ದರೆ ಅವುಗಳ ಸಂಪೂರ್ಣ ಪ್ರಯೋಜನ ಪಡೆಯಿರಿ. ಯಾಕೆಂದರೆ,ಸೊಳ್ಳೆಗಳು ತಂಪಗಿನ ತಾಪಮಾನದಲ್ಲಿ ಬದುಕಲಾರವು. ಮಗುವಿನ ತೊಟ್ಟಿಲು ಅಥವಾ ಸುತ್ತಾಡುವಾಗ ಬಳಸುವ ವಾಹನ ಸ್ಟ್ರಾಲರ್ ಅನ್ನು ಸೊಳ್ಳೆ ಬಲೆಯಿಂದ ಬಂಧಿಸಲ್ಪಡುವುದರಿಂದ ಮಗುವು ಈ ಮಾರಣಾಂತಿಕ ರೋಗಕ್ಕೆ ತುತ್ತಾಗದಂತೆ ತಡೆಯಬಹುದು.

ಮಗುವಿನ ಶರೀರವನ್ನು ಸಂಪೂರ್ಣವಾಗಿ ಆವರಿಸುವಂತಹ, ದೊಗಲುದೊಗಲಾದ ಬಟ್ಟೆಗಳನ್ನು ಧರಿಸುವುದರಿಂದ ಮಗುವು ಸುರಕ್ಷಿತವಾಗಿಯೂ, ಆರಾಮದಾಯಕವಾಗಿಯೂ ಇರುವಂತೆ ನೋಡಿಕೊಳ್ಳಬಹುದು.

ತಾಯಿಯರೇ, ಸ್ವಯಂ ಜಾಗೃತರಾಗಿ ನಿಮ್ಮನ್ನು ಕಾಯ್ದುಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon