Link copied!
Sign in / Sign up
3
Shares

ಮಕ್ಕಳ ಹುಳುಕು ಹಲ್ಲಿನ ತೊಂದರೆಯ ನಿವಾರಣೆಗೆ ಅದ್ಭುತ ದಾರಿಗಳು

chocolate ಇಷ್ಟ ಪಡದ ಮಕ್ಕಳಿಲ್ಲ. ಪ್ರತಿ ನಿತ್ಯ ಸಿಹಿ ಪಾದರ್ಥ ತಿನ್ನುವುದರಿಂದ, ಬಾಯಿಯ ಒಳಗೆ ರೋಗಾಣುಗಳು ಉತ್ಪತ್ತಿಯಾಗಿ ಹಲ್ಲಿನ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಲ್ಲು ಹುಳುಕು, ವಸಡಿನ ಖಾಯಿಲೆ, ಬಾಯಿಯ ದುರ್ವಾಸನೆ ಮೊದಲಾದ ಲಕ್ಷಣಗಳು ಕಂಡುಬರುತ್ತದೆ. ಪೋಷಕರು ಮಕ್ಕಳಿಗೆ ಶಾರೀರಿಕ ಖಾಯಿಲೆಗಳು ಬಂದ ಕೂಡಲೇ, ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾರೆ, ಆದರೆ ಹಲ್ಲಿನ ಸಮಸ್ಯೆಯನ್ನು ಅಸಡ್ಡೆ ಮಾಡುತ್ತಾರೆ. ಹಾಗಾದರೆ ಬನ್ನಿ, ನಿಮ್ಮ ಮಗುವಿನ ಹಲ್ಲಿನ ಆರೋಗ್ಯ ಕಾಪಾಡಲು ನೀವು ಏನು ಮಾಡಬೇಕು ಎಂದು ನಾವು ನಿಮಗೆ ತಿಳಿಸುತ್ತೇವೆ.


೧. ಡೆಂಟಿಸ್ಟ್ಅನ್ನು ಭೇಟಿ ಮಾಡಬೇಕು

ನಾವೆಲ್ಲರು ಹಲ್ಲಿನ ವೈದ್ಯರ ಬಳಿ ಕೇವಲ ಹಲ್ಲಿನ ಸಮಸ್ಯೆಯಾದಾಗ ಮಾತ್ರ ಹೋಗುತ್ತೇವೆ. ಆದರೆ ಪ್ರತಿ ೪ ತಿಂಗಳಿಗೆ ಒಂದು ಸಲ ನಿಮ್ಮ ಮಗುವನ್ನು ಹಲ್ಲಿನ ಪರೀಕ್ಷೆಗೆ ಕರೆದುಕೊಂಡು ಹೋಗಬೇಕು. ಹೀಗೆ ಮಾಡುವುದರಿಂದ ಬೆಳೆಯುತ್ತಿರುವ ನಿಮ್ಮ ಮಗುವಿನ ಹಲ್ಲಿನ ಸಮಸ್ಯೆಗಳು ಬೇಗನೆ ಕಂಡು ಬಂದು ಚಿಕಿತ್ಸೆಗೆ ಸಹಾಯಾವಗಲಿದೆ.


೨.  ಪ್ರತಿನಿತ್ಯ ಹಲ್ಲು ಉಜ್ಜುವುದು

೬-೭ ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೋಷಕರು ಅವರಿಗೆ ಹಲ್ಲು ಉಜ್ಜಲು ಬಿಡುತ್ತಾರೆ. ಆದರೆ ಮಕ್ಕಳು ಹಲ್ಲಿನ ಸಂದಿಗಳ್ಳನ್ನು ಉಜ್ಜದೆ ಕೇವಲ ಪೋಷಕರ ಭಯಕ್ಕೆ ಮೇಲೆ ಮೇಲೆ ಉಜ್ಜಿ ಬರುತ್ತಾರೆ. ಹೇಗೆ ಮಾಡುವುದರಿಂದ ಮಕ್ಕಳ್ಳಲ್ಲಿ ಹಲ್ಲಿನ ರೋಗಗಳು ಸಾಮಾನ್ಯ. ಸರಿಯಾದ ರೀತಿಯಲ್ಲಿ ಹಲ್ಲಿನ ಎಲ್ಲ ಭಾಗಗಳಿಗೆ ಬ್ರಷ್ ತಾಗುವ ಹಾಗೆ ೫-೭ ನಿಮಿಷಗಳ ಕಾಲ ಹಲ್ಲು ಉಜ್ಜಿಸಬೇಕು.


೩. ರಾತ್ರಿ ಮಲಗುವ ಮುನ್ನ ಹಲ್ಲು ಉಜ್ಜುವುದು

ತುಂಬಾ ಮಕ್ಕಳ್ಳಲ್ಲಿ ರಾತ್ರಿ ಹಲ್ಲು ಉಜ್ಜುವ ಅಭ್ಯಾಸವಿರುವುದಿಲ್ಲ. ಹೀಗೆ ಮಾಡಿದರೆ, ಹಲ್ಲು ಹುಳುಕಿನ ಸಮಸ್ಯೆ ಶೇಕಡಾ ೯೦ % ಬರುವ ಸಾಧ್ಯತೆಗಳು ಹೆಚ್ಚು. ಬಾಯಿ ಮುಕ್ಕಳಿಸಿ,  ನೀರು ಕುಡಿದು ಮಲಗಿಸುವ ಅಭ್ಯಾಸವನ್ನು ರೂಢಿಸಿ. ಹಲ್ಲು ಉಜ್ಜಿದ ನಂತರ ಸಿಹಿ ಪಾದರ್ಥಗಳಾಗಲಿ, ಹಾಲಾಗಲಿ ನೀಡದಿರಿ. ಇನ್ನು ಹಲ್ಲು ಬಾರದ ಕಂದಮ್ಮಗಳಿಗೆ ಬಿಸಿ ನೀರಿನಿಂದ ಅವರ ಬಾಯಿ ಒರೆಸಿ, ಸ್ವಲ್ಪ ನೀರನ್ನು ಕುಡಿಸಿ ನಂತರ ಮಲಗಿಸಿ.


೪. ಸಿಹಿ ಪದಾರ್ಥಗಳಿಂದ ದೂರ ಉಳಿಯಿರಿ

ಸಿಹಿ ಇಷ್ಟವಿಲ್ಲದ ಮಗುವಿಲ್ಲ. ಹೌದು, ಆದರೆ ಹೆಚ್ಚಿನ ಸಿಹಿ ಪದಾರ್ಥಗಳಾದ ಚಾಕಲೇಟ್, ಕ್ಯಾಂಡಿ, ಪಸ್ತ್ರಿ, ಪಾಸ್ಟಾ , ಹಣ್ಣಿನ ರಸಗಳ್ಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ನೀಡಿ. ಜೊತೆಗೆ ಹಾಲಿನ ಪದಾರ್ಥಗಳ್ಳನ್ನು ರಾತ್ರಿಯ ಸಮಯದಲ್ಲಿ ನೀಡದಿರಿ. ಇಲ್ಲವಾದಲ್ಲಿ, ರಾತ್ರಿ ಮಲಗಿದಾಗ ಬಾಯಿಯ ಒಳಗೆ ರೋಗಾಣುಗಳು ಹೆಚ್ಚಾಗಿ ಬೆಳೆದು ಹಲ್ಲಿನ ಸಮಸ್ಯೆ, ಗಂಟಲಿನ ಸಮಸ್ಯೆಯನ್ನು ಉಂಟಾಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon