Link copied!
Sign in / Sign up
8
Shares

ನೀವು ಈ 7 ಕೆಲಸಗಳನ್ನ ಮಾಡಿದರೆ ಮಗುವು ಸುಮ್ಮನೆ ನಿದ್ರೆಗೆ ಜಾರುತ್ತದೆ

ತಾಯಿಯ ದೇಹದೊಳಗೊಂದು ಪುಟ್ಟ ಜೀವ. ಆ ಜೀವ ಕಣ್ಣು ಬಿಟ್ಟು, ಹೊರ ಪ್ರಪಂಚ ನೋಡಿದ ದಿನ ತಾಯಿಯ ಆನಂದಕ್ಕೆ ಪಾರವೇ ಇಲ್ಲ. ಪುಟ್ಟ ಕಂದಮ್ಮಗಳು, ಎಲ್ಲರ ಮನಸ್ಸನ್ನು ಕ್ಷಣಮಾತ್ರದಲ್ಲಿ ತಮ್ಮ ಕಡೆಗೆ ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ.ನಿಮ್ಮ ಪುಟ್ಟ ಕಂದಮ್ಮಗಳು ಸದಾಕಾಲ ಹುಮ್ಮಸಿನಿಂದಿರಬೇಕಾದರೆ, ಸರಿ ಸುಮಾರು ೧೨-೧೫ ಗಂಟೆಗಳ ನಿದ್ರೆಯ ಅಗತ್ಯವಿದೆ. ಅಲ್ಪ ನಿದ್ರೆಯಿಂದ ಮಕ್ಕಳು ಎಡೆ-ಬಿಡದೆ ಅಳುವುದು, ಆಹಾರ ಸೇವಿಸದೆ ಇರುವುದು ಹಾಗು ಆಟದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ನಿದ್ರೆಯ ಅಭಾವ ಮಕ್ಕಳ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ಹಸಿವಿನಿಂದ ಅಥವಾ ಹೆದರಿಕೆಯಿಂದ ಮಕ್ಕಳು ಮಲಗಿರುವಾಗ ಎಚ್ಚರಗೊಳ್ಳುತ್ತಾರೆ. ನಿಮ್ಮ ಕಂದಮ್ಮಗಳು ಕೂಡ ಹೀಗೆ ಮಾಡುತ್ತವೆಯೇ? ಹಾಗಾದರೆ, ನಿಮ್ಮ ಕಂದಮ್ಮಗಳ್ಳನ್ನು ಪೂರ್ಣಪ್ರಮಾಣದ ನಿದ್ರೆಗೆ ಜಾರಿಸುವುದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ.

೧. ಮಸಾಜ್ ಮಾಡಿ

ಹೌದು ತಾಯಂದಿರೆ, ನಿಮ್ಮ ಮಗವು ನಿದ್ರೆಯ ಮಧ್ಯೆ ಎಚ್ಚರವಾಗಬಾರದೆಂದರೆ ರಾತ್ರಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ, ಮೈಯನ್ನು ಬೆಚ್ಚೆಗೆ ಉಜ್ಜುವುದರಿಂದ ಮಕ್ಕಳು ಸಲಿಸಾಗಿ ನಿದ್ರೆಗೆ ಜಾರುತ್ತಾರೆ.


೨ .ಮೃದುವಾದ ಸಂಗೀತವನ್ನು ಕೇಳಿಸಿ

ನಿಮ್ಮ ಕಂದಮ್ಮಗಳು ಮಲಗುವ ಕೋಣೆಯಲ್ಲಿ, ಮೆಲುವಾದ ಧ್ವನಿಯ ಸಂಗೀತವನ್ನು ಹಾಕಿ. ಹೀಗೆ ಮಾಡುವುದರಿಂದ ಮಗುವಿನ ಮನಸ್ಸು ತಿಳಿಗೊಂಡು, ಶಬ್ಧಗ್ರಹಿಕೆಯ ಕಲೆಯು ಹೆಚ್ಚಾಗುತ್ತದೆ.  ಇದು ಮಗುವಿಗೆ, ತಾಯಿ ಹಾಡುತ್ತಿರುವ ಜೋಗುಳದ ಅನುಭವವಾಗಿ ಸುಲಭವಾಗಿ ನಿದ್ರೆಗೆ ಜಾರುತ್ತವೆ.


೩. ಕೋಣೆಯನ್ನು ಕತ್ತಲಾಗಿಸಿ

ಮಗುವಿನ ಕೋಣೆಯಲ್ಲಿ ಸಣ್ಣದೊಂದು ಬೆಳಕು ಕಂಡರೂ, ಮಗುವಿನ ಗಮನ ಅದರೆಡೆಗೆ ಹೋಗಿ, ನಿದ್ರೆ ಮಾಡುವುದಿಲ್ಲ. ಅದಕ್ಕಾಗಿ ಕೋಣೆಯನ್ನು ಕತ್ತಲಾಗಿಸಿ, ತಂಪಾದ ಗಾಳಿ ಬೀಸುವ ಹಾಗೆ ನೋಡಿಕೊಳ್ಳಿ. ಕೋಣೆಯ ವಾತವರಣದಲ್ಲಿ ಸ್ವಲ್ಪ ಬದಲಾವಣೆಯಾದರು ಸಹ ಮಕ್ಕಳು ನಿದ್ರೆಯಿಂದ ಎಚ್ಚರಗೊಳ್ಳುತ್ತಾರೆ. ಆದ್ದರಿಂದ ನಿಮ್ಮ ಕಂದಮ್ಮಗಳು ಮಲಗಿರುವ ಕೋಣೆಯ ವಾತಾವರಣದ ಮೇಲೆ ಗಮವಹಿಸಿ.


೪. ಶುಚಿಯಾದ ಬಟ್ಟೆಗಳು

ಹೌದು, ಮಲ ಮೂತ್ರದಿಂದ ಒದ್ದೆಯಾದ ಬಟ್ಟೆಗಳು ಮಕ್ಕಳ್ಳನ್ನು ನಿದ್ರೆಯಿಂದ ದೂರ ಸರಿಯುವಂತೆ ಮಾಡುತ್ತದೆ. ಮಲಗಿಸುವ ಮೊದಲು ಮಕ್ಕಳಿಗೆ ಹೊಟ್ಟೆಯ ತುಂಬ ಹಾಲನ್ನು ಕುಡಿಸಿ, ಶುಚಿಯಾದ ಬಟ್ಟೆಗಳ್ಳನ್ನು ತೊಡಿಸಿ, ನಂತರ ನಿಮ್ಮ ಕಂದಮ್ಮಗಳ್ಳನ್ನು ಮಲಗಿಸಿ.


೫. ದೃಷ್ಟಿಸಿ ನೋಡದಿರಿ

ತಾಯಿಗೆ ತನ್ನ ಮಗುವನ್ನು ಎಷ್ಟು ಬಾರಿ ನೋಡಿದರೂ ಸಾಕೆನಿಸುವುದಿಲ್ಲ. ಆದರೆ ನಿಮ್ಮ ಮಕ್ಕಳ್ಳನ್ನು ಮಲಗಿಸುವ ಸಮಯದಲ್ಲಿ, ಮಗುವಿನ ಕಣ್ಣಿಗೆ ಕಣ್ಣಿಟ್ಟು ನೋಡದಿರಿ. ಹೀಗೆ ನೀವು ಮಗುವನ್ನು ನೋಡುತ್ತಿದರೆ, ಮಗುವಿಗೆ ನಿಮ್ಮೊಂದಿಗೆ ಆಟವಾಡಲು ಮನಸ್ಸಾಗಿ ನಿದ್ರೆಗೆ ಜಾರುವುದಿಲ್ಲ.

 
೬. ಹಾವಾ-ಭಾವವನ್ನು ಗಮನಿಸಿ

ಕೆಲವೊಂದು ಮಕ್ಕಳು ತಾಯಿಯ ತೊಡೆಯ ಮೇಲೆ ಮಲಗಿದಾಗ ನಿದ್ರೆಗೆ ಜಾರುತ್ತವೆ, ಮತ್ತೆ ಕೆಲವು ಮಕ್ಕಳು ತೊಟ್ಟಿಲೊಳಗೆ ಆಟವಾಡುವಾಗ ನಿದ್ರೆಗೆ ಜಾರುತ್ತವೆ. ನಿಮ್ಮ ಮಗುವು ಎಲ್ಲಿ, ಯಾವ ರೀತಿಯಲ್ಲಿ ನಿದ್ರೆಗೆ ಜಾರುತ್ತದೆ ಎಂದು ತಿಳಿದುಕೊಳ್ಳಿ. ನಂತರ ಪ್ರತಿದಿನ ಅದೇ ರೀತಿಯಲ್ಲಿ ಮಲಗಿಸಲು ಅಭ್ಯಾಸ ಮಾಡಿ.


೭. ತೂಕಡಿಕೆಯನ್ನು ಗಮನಿಸಿ

ಮಕ್ಕಳು ತೂಕಡಿಸುತ್ತಿದರೆ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನದ ಬದಲು, ಮಗುವನ್ನು ಕೂಡಲೇ ಮಲಗಿಸಿ. ಹೀಗೆ ಮಾಡುವುದರಿಂದ ಮಕ್ಕಳು ನಿದ್ರೆಯ ಅಭವಾದಿಂದ ಅಳುವುದನ್ನು ತಡೆಯಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon