Link copied!
Sign in / Sign up
5
Shares

ಮಗುವು ಎದೆಹಾಲನ್ನು ಸರಿಯಾಗಿ ಹೀರಲು ಆಗುತ್ತಿಲ್ಲ ಎಂದರೆ ನೀವು ಹೀಗೆ ಮಾಡಿ

ಎದೆಹಾಲಿಗೆ ಸಮನಾದ ಹಾಲು ಎಲ್ಲೂ ಇಲ್ಲ. ಮಗುವಿಗೆ ಕನಿಷ್ಠ ೬ ತಿಂಗಳು ನಿಮ್ಮ ಎದೆಹಾಲಿನ ಅವಶ್ಯ ಇರುತ್ತದೆ. ಪುಡಿ ಹಾಲು ಅಥವಾ ಸಂಸ್ಕರಿಸಿದ ಹಾಲು ನಿಮ್ಮ ಮಗುವಿನ ಹೊಟ್ಟೆ ತುಂಬಿಸಿದರು ಅದು ಮಗುವಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ನೀಡುವುದಿಲ್ಲ, ಇದನ್ನು ವೈದ್ಯರು, ತಜ್ಞರು ಒಪ್ಪಿಕೊಳ್ಳುತ್ತಾರೆ ಮತ್ತು ಕನಿಷ್ಠ ೬ ತಿಂಗಳ ವರೆಗೆ ಎದೆಹಾಲನ್ನು ಉಣಿಸಲು ಸಲಹೆ ನೀಡುತ್ತಾರೆ.

ಆದರೆ ಮಗುವು ಸರಿಯಾಗಿ ಮೊಲೆಯನ್ನು ಕಚ್ಚಿ ಹಾಲನ್ನು ಹೀರುತ್ತಿಲ್ಲ, ಸ್ತನವನ್ನು ಸರಿಯಾಗಿ ಹಿಡಿಯುವುದಿಲ್ಲ, ಎದೆಹಾಲುಣುವಾಗ ಹಾಗೆಯೆ ಮಲಗಿ ಬಿಡುತ್ತದೆ, ಮುಂತಾದ ತೊಂದರೆಗಳನ್ನು ನೀವು ಅನುಭವಿಸುತ್ತಿದ್ದರೆ ಈ ಲೇಖನ ನಿಮಗೆ ಖಂಡಿತ ಸಹಾಯ ಆಗುತ್ತದೆ.

ಹಲವು ಕಾರಣಗಳಿಂದ ಮಗುವು ಮೊಲೆಹಾಲನ್ನು ಹೀರಲು ವಿಫಲವಾಗಬಹುದು. ಅದು ನಿಮ್ಮ ಮೊಲೆ ಇಂದ ಹಾಲು ಸರಾಗವಾಗಿ ಬರದೇ ಇರುವುದು ಆಗಿರಬಹುದು. ನಿಮ್ಮ ಮೊಲೆಯಲ್ಲಿ ಹಾಲು ಇದ್ದರು, ಮಗುವು ಹಾಲನ್ನು ಹೀರುವ ಸಮಯ ತೊಟ್ಟಿನ ಮೂಲಕ ಸರಿಯಾಗಿ ಹಾಲು ಮಗುವನ್ನು ಸೇರದೆ ಇರುವುದು ಮಗುವು ನಿದ್ರೆಗೆ ಜಾರುವಂತೆ ಮಾಡಬಹುದು. ಇಂತಹ ಯಾವುದೇ ಸಮಸ್ಯೆಗಳಿಗೆ ನೀವು ಈ ಕೆಳಗಿನ ಮಾರ್ಗಗಗಳನ್ನು ಉಪಯೋಗಿಸಿಕೊಳ್ಳಿ.

ನಿಮ್ಮ ಮೊಲೆಹಾಲನ್ನು ನೀವೇ ಬಾಟಲಿಗೆ ಹಾಕಿ ಮಗುವಿಗೆ ಕುಡಿಸಿ

ಎದೆಹಾಲು ಶ್ರೇಷ್ಠ ಮತ್ತು ಅದು ಮಗುವಿಗೆ ತುಂಬಾ ಅವಶ್ಯವಿರುವುದರಿಂದ ನೀವು ನಿಮ್ಮ ಮೊಲೆಹಾಲನ್ನು ನಿಮ್ಮ ಕೈಯಲ್ಲಿ ಕರೆದು ಒಂದು ಬಾಟಲಿಗೆ ಹಾಕಿ ಅದನ್ನು ಮಗುವಿಗೆ ಕುಡಿಸಿ. ಬಾಟಲಿಯ ತುದಿಯಿಂದ ಮಗುವಿಗೆ ಸರಾಗವಾಗಿ ಹಾಲು ಹೋಗುವಂತೆ ನೋಡಿಕೊಳ್ಳಿ.


ನೀವು ಮಗುವಿಗೆ ಹೆಚ್ಚು ಮೊಲೆಹಾಲು ಉಣಿಸಿದಷ್ಟು ನಿಮ್ಮ ಸ್ತನದಲ್ಲಿ ಹಾಲು ಹೆಚ್ಚು ಉತ್ಪತ್ತಿ ಆಗುತ್ತದೆ. ಮಗುವು ಮೊಲೆಹಾಲನ್ನು ಸೇವಿಸುತ್ತಿಲ್ಲ ಎಂದರೆ, ನೀವೇ ಮೊಲೆಹಾಲನ್ನು ಕರೆದು ಅದನ್ನು ಒಂದು ಬಾಟಲಿಗೆ ಹಾಕಿ ಅದಕ್ಕೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ಮಗುವಿಗೆ ನೀಡಿ.

ನಿಮ್ಮ ಸ್ತನದಿಂದ ಹಾಲನ್ನು ಕರೆಯುವಾಗ ಎರಡು ಸ್ತನಗಳಿಂದ ಹಾಲನ್ನು ಕರೆಯಿರಿ.

ಹಾಲನ್ನು ಕರೆಯುವ ಮುನ್ನ ಸ್ತನವನ್ನು ಮೃದುವಾಗಿ ಅದುಮಿ(ಮೆತ್ತಗೆ ಒತ್ತಿ).

ನಿಮ್ಮ ಮಗುವಿಗೆ ಹಾಲು ನೀಡುವ ಸಮಯಕ್ಕೆ ಎದೆಹಾಲನ್ನು ಬಾಟಲಿಗೆ ಹಾಕಿ ನೀಡಿ.

ಸ್ತನವನ್ನು ಉಜ್ಜಿ ಎರಡು ಸ್ತನಗಳಿಂದ ಹಾಲನ್ನು ತೆಗೆಯಿರಿ. ಮಗುವಿಗೆ ಅವಶ್ಯವಿರುವಷ್ಟು ಹಾಲನ್ನು ಸ್ತನದಿಂದ ಬಾಟಲಿಗೆ ಹಾಕಿ ಮಗುವಿಗೆ ಕುಡಿಸಿ.

ನೀವು ಸಂಸ್ಕರಿಸಿದ ಅಥವಾ ಪುಡಿಹಾಲನ್ನು ನೀಡುವ ಬದಲು ಎದೆಹಾಲನ್ನು ಬಾಟಲಿಗೆ ಹಾಕಿ ಕುಡಿಸುವುದು ಉತ್ತಮ.

ನೀವು ಹಾಲನ್ನು ಸ್ತನದಿಂದ ಬಾಟಲಿಗೆ ಹಾಕುವ ಮುನ್ನ ಸ್ತನ ಮಸಾಜ್ ಅನ್ನು ಮಾಡಿ.

ನೀವು ಇದನ್ನು ಮಾಡುವಾಗ ಯಾವುದೇ ಟೆನ್ಶನ್ ತೆಗೆದುಕೊಳ್ಳಬೇಡಿ, ಮಗುವು ನೇರವಾಗಿ ಕುಡಿಯುವ ಬದಲು ಮೊಲೆಹಾಲನ್ನು ಬಾಟಲಿ ಮೂಲಕ ಸೇವಿಸುತ್ತದೆ ಅಷ್ಟೇ. ಬಾಟಲಿಯನ್ನು ಚೆನ್ನಾಗಿ ತೊಳೆದು ನಂತರ ಅದಕ್ಕೆ ಮೊಲೆಹಾಲನ್ನು ಹಾಕಿ.

ಪ್ರತಿ ಬಾರಿ ಮಗುವು ಹಾಲು ಕುಡಿದ ನಂತರ ಬಾಟಲಿಯನ್ನು ನೀಟಾಗಿ ತೊಳೆಯಿರಿ.

ನೀವು ಕೈಯಿಂದ ಸ್ತನದಿಂದ ಹಾಲನ್ನು ಕರೆಯುವಾಗ ತೊಟ್ಟನ್ನು ನಿದಾನವಾಗಿ ಅದುಮಿದರೆ ಸಾಕು.

ಮೊಲೆಗೆ ಹೆಚ್ಚು ಒತ್ತಡ ನೀಡಬೇಕೆಂದು ಏನು ಇಲ್ಲ. ಇದನ್ನು ಮಾಡುವಾಗ ನೋವು ಕಂಡರೆ ಎದೆಹಾಲನ್ನು ತೊಟ್ಟಿನ ಸುತ್ತ ಹಚ್ಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon