Link copied!
Sign in / Sign up
1
Shares

ನಿಮ್ಮ ಮಗುವಿನೊಂದಿಗೆ ಮೊದಲ ವರ್ಷ ಸಾಗಲು 7 ಸಲಹೆಗಳು

ನಿಮ್ಮ ಮುದ್ದು ಕಂದಮ್ಮಗಳು, ನಿಮ್ಮ ಒಳ್ಳೆಯ ಗೆಳೆಯ/ಗೆಳತಿ ಎಂದರೆ ತಪ್ಪಾಗುವುದಿಲ್ಲ. ತಾಯಿಗೆ ಮಗುವು ನಡೆದಾಡುವ ಅವಳ ಹೃದಯವಿದ್ದಂತೆ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸುವ ಶಕ್ತಿ ಕೇವಲ ಮಕ್ಕಳಿಗೆದೆಯಷ್ಟೇ. ಆದರೆ ಕೆಲವೊಮ್ಮೆ, ನಿಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಅಸಮರ್ಥ್ಯರನ್ನಾಗಿ ಮಾಡುತ್ತವೆ. ಅಲ್ಪ ನಿದ್ರೆ, ಉಸಿರುಗಟ್ಟಿಸುವ ವೇಳಾಪಟ್ಟಿ, ಬಾಣಂತನದ ನಂತರ ವೈವಾಹಿಕ ಜೀವನ ಇವೆಲ್ಲವೂ ತಾಯಿಯಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಮಕ್ಕಳ ಮನೋಭಾವ ಬೇರೆ ಬೇರೆಯಾದರು, ಒಂದು ವರ್ಷದವರೆಗೆ ಸಾಮಾನ್ಯವಾಗಿ ಎಲ್ಲಾ ತಾಯಂದಿರ ಕೆಲಸ ಮಾತ್ರ ಒಂದೆಯಾಗಿರುತ್ತದೆ. ಇದರಿಂದ ತಾಯಂದಿರು, ಹೆರಿಗೆಯ ನಂತರದ ಖಿನ್ನತೆಗೆ ಒಳಗಾಗುವು ಸಾಧ್ಯತೆಗಳಿವೆ. ಇದನ್ನು ತಡೆಯಬೇಕಾದ್ದಲ್ಲಿ, ನೀವು ಅನುಸರಿಸಬೇಕಾದಂತಹ ನಿಯಮಗಳ್ಳನ್ನು ವೈದ್ಯರಿಂದ ತಿಳಿಯೋಣ ಬನ್ನಿ.

೧. ಸಹಾಯವನ್ನು ಪಡೆಯಿರಿ

ಹುಟ್ಟಿದ ಮಗುವನ್ನು ನೋಡಲು ಮನೆಗೆ ನೆಂಟರು, ಸ್ನೇಹಿತರು ಬಂದು ಹೋಗುತ್ತಾರೆ. ಈ ಸಮಯದಲ್ಲಿ ನಿಮಗೆ ಎಲ್ಲರ ಸಹಾಯ ಅತ್ಯವಶ್ಯಕವಾಗಿರುತ್ತದೆ. ಸಹಾಯವನ್ನು ಪಡೆಯುವಲ್ಲಿ ಯಾವುದೇ ರೀತಿಯ ಮುಜುಗರ, ಅಪರಾದ ಪ್ರಜ್ಞೆ, ಪ್ರತಿಷ್ಟೇಯ ಮನೋಭಾವವನ್ನು ಬದಿಗೊತ್ತಿ ಸಹಾಯವನ್ನು ಸ್ವೀಕರಿಸಿ. ಹೀಗೆ ಮಾಡುವುದರಿಂದ ನಿಮ್ಮಆಯಾಸವೆಲ್ಲಾ ಮಾಯವಾಗಿ, ನಿಮ್ಮ ಮಗುವಿನೊಂದಿಗೆ ಹೆಚ್ಚು ಕಾಲ ಕಳೆಯಲು ಸಮಯ ಸಿಕ್ಕಂತ್ತಾಗುತ್ತದೆ.

 

೨. ವಿರಾಮವನ್ನು ಪಡೆಯಿರಿ

ನಿಮಗೆ ವಿರಾಮದ ಅಗತ್ಯವೆನಿಸಿದಾಗ ಒಂದು ಒಳ್ಳೆಯ ಜಾಗಕ್ಕೆ ಪ್ರಯಾಣವನ್ನು ಮಾಡಿ ಅಥವಾ ಮನೆಯಲ್ಲೇ ದೀರ್ಘಕಾಲದ ನಿದ್ರೆಯನ್ನು ಮಾಡಿ. ಇಲ್ಲವೇ ಪ್ರತಿನಿತ್ಯವು, ವಾಯುವಿಹಾರಕ್ಕೆ ಹೋಗುವುದನ್ನು ರೂಡಿಸಿಕೊಳ್ಳಿ  ಹಾಗೂ ಈ ಅಭ್ಯಾಸವನ್ನು ಪ್ರತಿನಿತ್ಯ ಪಾಲಿಸಿ. ತಾಯಿಯು ಆರೋಗ್ಯದಿಂದಿದ್ದರೆ, ಮಗುವು ಆರೋಗ್ಯದಿಂದಿರುತ್ತದೆ.


೩. ಬಿಡುವಿನ ವೇಳೆಯಲ್ಲಿ ನಿದ್ರಿಸಿ

ಮನೆಯೊಡತಿ ಎಂದರೆ ಸುಲಭದ ಕೆಲಸವಲ್ಲ. ಮನೆಯ ಕೆಲಸಗಳೊಂದಿಗೆ, ಮಗುವನ್ನು ನೋಡಿಕೊಳ್ಳುವುದು ಸಹ ತ್ರಾಸದಾಯಕ ಕೆಲಸವಾಗಿದೆ. ಬಟ್ಟೆ ಒಗೆಯುವುದು, ಮಗುವಿಗೆ ನಿಗದಿತ ವೇಳೆಗೆ ಊಟ ಮಾಡಿಸುವುದು, ಮನೆಯವರೆಲ್ಲರ ಆರೋಗ್ಯವನ್ನು ಕಾಪಾಡುವುದು ಇತ್ಯಾದಿ. ಇವೆಲ್ಲವುದರ ಮಧ್ಯೆ, ನಿದ್ರೆ ಮಾಡಲು ನಿಮಗೆ ಸಮಯ ಸಿಗುವುದಿಲ್ಲ. ಇನ್ನು ಈ ಮಕ್ಕಳು ಹಗಲೆಲ್ಲಾ ಮಲಗಿ, ರಾತ್ರಿ ಎಚ್ಚರದಿಂದಿರುತ್ತವೆ. ಹೀಗಾಗುವುದರಿಂದ ರಾತ್ರಿಯ ವೇಳೆಯೂ ನಿದ್ರಿಸುವುದು ಕಷ್ಟ ಸಾಧ್ಯವಾಗುತ್ತದೆ. ಆದರೆ ಇದಕ್ಕಿಂತ ಮಿಗಿಲಾಗಿ, ತಾಯಂದಿರಿಗೆ ಅವರ ಆರೋಗ್ಯ ಬಹು ಮುಖ್ಯ. ಇದಕ್ಕೆ ಮೊದಲನೆಯ ಪ್ರಾಮುಖ್ಯತೆಯನ್ನು ನೀಡಿ, ಕೆಲಸಗಳು ಮಾಡಿದಷ್ಟು ಮುಗಿಯುವುದಿಲ್ಲ. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಮಗುವು ಮಲಗಿರುವ ವೇಳೆ, ನೀವು ಕೂಡ ವಿಶ್ರಮಿಸಿ, ನಂತರ ಕೆಲಸಗಳ್ಳನ್ನು ನಿಧಾನವಾಗಿ ಮುಗಿಸಿ. ನಿಮ್ಮ ಆರೋಗ್ಯಕ್ಕಿಂತ ಮಿಗಿಲಾಗಿರುವುದು ಯಾವುದು ಇಲ್ಲ ಅಲ್ಲವೇ?


೪. ನಿಮ್ಮ ಹೊಸ ಜೀವನವನ್ನು ಆನಂದಿಸಿ

ನಿಮ್ಮದೇ ಕರುಳ ಬಳ್ಳಿಯ ಜನನದ ನಂತರ, ನಿಮ್ಮ ಜೀವನದಲ್ಲಿ ಕರ್ತವ್ಯಗಳು ಹೆಚ್ಚಾಗುತ್ತವೆ. ಸಣ್ಣ ಪುಟ್ಟ ಬದಲಾವಣೆಯ ಅಗತ್ಯವಿರುತ್ತದೆ. ಇದಲ್ಲದೆ, ಬಹು ದೊಡ್ಡ ಕರ್ತ್ಯವ್ಯವೆಂದರೆ ನಿಮ್ಮ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ನಿಮ್ಮ ಮುದ್ದು ಮಗು. ಈ ಹೊಸ ತರಹದ ಆನಂದ, ಉಲ್ಲಾಸ, ಸಂತೃಪ್ತಿ , ನೆಮ್ಮದಿಯನ್ನು ಮನಸ್ಪೂರ್ವಕವಾಗಿ ಆನಂದಿಸುವ ಸಮಯವಿದು. ಇದು ಜೀವನದಲ್ಲಿ ಬರುವ ಅತ್ಯುತ್ತಮ ಘಳಿಗೆಗಳ್ಳಲ್ಲಿ ಒಂದಾಗಿದೆ. ಇದನ್ನು ಕೇವಲ ಓತ್ತಡವೆಂದು ಭಾವಿಸದೆ, ಈ ಸುಮಧುರ ಕ್ಷಣಗಳನ್ನು ಆನಂದಿಸಿ.


೫. ಈ ಸಂತೋಷದ ಕ್ಷಣಗಳನ್ನು ಶೇಖರಿಸಿ

ಮುಗಿವಿಗೆ  ಮೊದಲನೆಯ ವರುಷ ತುಂಬುವವರೆಗೆ ಮಾತ್ರ, ಕೆಲಸಗಳು ಆಯಾಸದಾಯಕವೆನಿಸುತ್ತದೆ. ಆದರೆ ಈ ಆಯಾಸ ಶಾಶ್ವತವಲ್ಲ. ಇದರ ಬದಲಿಗೆ ನಿಮ್ಮ ಮಗುವಿನ ಫೋಟೋ ಅಥವಾ ವೀಡಿಯೋವನ್ನು ಮಾಡಿದರೆ, ವರುಷಗಳು ಕಳೆದರೂ, ನಿಮ್ಮ ಮಗುವಿನ ಸಿಹಿ ನೆನಪುಗಳು ಮಾತ್ರ ಹಾಗೆ ಉಳಿದಿರುತ್ತದೆ. ನಿಮ್ಮ ಮಗುವಿನ ಮೊದಲನೆಯ ಮಾತು, ಮೊದಲ ನಗು, ಮೊದಲ ಹೆಜ್ಜೆ, ಅಜ್ಜಿ ಹೆಣೆದ ಉಣ್ಣನೆಯ ಅಂಗಿ, ಅಂಬೆಗಾಲು ಇಡುವುದು, ನೆಚ್ಚಿನ ಮೊದಲನೆಯ ಆಟಿಕೆ ಹೀಗೆ ಮೊದಲಾದ ನೆನಪುಗಳ್ಳನ್ನು ಸೆರೆಹಿಡಿದರೆ, ಮುಂದೊಂದು ದಿನ ನಿಮ್ಮ ಜೀವನದ್ದಲ್ಲಿ, ಈ ನೆನಪುಗಳು ನಿಮ್ಮ ಮುಖದಲ್ಲಿ ನಗು ತರಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.


೬. ಬಿಟ್ಟಿ ಸಲಹೆಗಳ್ಳನ್ನು ಬದಿಗಿಡಿ

ತಾಯಿಯಾಗುತ್ತಿದೀರ ಎಂದು ತಿಳಿದ ಕೊಡಲೇ, ಎಲ್ಲರಿಂದ ನಿಮಗೆ ಸಲಹೆಗಳ ಮಹಾಪೂರವೇ ಹರಿದುಬರುತ್ತದೆ. ಎಲ್ಲರೂ ತಮ್ಮ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಸಲಹೆಗಳ್ಳನ್ನು ನೀಡುತ್ತಾರೆ. ಸ್ನೇಹಿತರು, ಬಂಧು-ಮಿತ್ರರು, ಸಹೋದ್ಯೋಗಿಗಳು, ಅಕ್ಕ-ಪಕ್ಕದ ಮನೆಯವರು ಹೀಗೆ ಎಲ್ಲರು ಅವರವರ ಅನುಭವದ ಮೇರೆಗೆ ಸಲಹೆಗಳ್ಳನ್ನು ನೀಡುತ್ತಾರೆ. ಕೆಲವೊಂದು ಬಾರಿ ಇದು ಕಿರಿಕಿರಿ ಎಂದು ಅನಿಸುತ್ತದೆಯು ಹೌದು. ನಿಮ್ಮ ಮಗುವಿನ ಬಗ್ಗೆ ನಿಮಗಿಂತ ಯಾರಿಗೂ ಹೆಚ್ಚು ತಿಳಿದಿರುವುದ್ದಿಲ್ಲ. ಆದ್ದರಿಂದ ನಿಮಗೆ ಯಾವುದು ಸರಿ ಕಾಣುತ್ತದೆ ಅದನ್ನು ಮಾತ್ರ ತೆಗೆದುಕೊಂಡು, ಉಳಿದ ಸಲಹೆಗಳ್ಳನ್ನು ಗಾಳಿಯಲ್ಲಿ ಬಿಡಿ. ಇದರಿಂದ ನೀವು ನೆಮ್ಮದಿಯಾಗಿ ಬದುಕಬಹುದು.


೭. ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ

ಹೇಗೆ ಪ್ರತಿಯೊಂದು ಮಗುವು ವಿಶಿಷ್ಟವೋ ಹಾಗೇ ಅದರ ಬೆಳವಣಿಗೆಯು ಅನನ್ಯವಾಗಿರುತ್ತದೆ. ನಿಮ್ಮ ಮಗುವಿನ ವಯಸ್ಸಿರುವ ಮಕ್ಕಳು ಮಾತನಾಡುವುದು/ನಡೆದಾಡಲು ಪ್ರಾರಂಭಿಸುವುದು/ಕುಳಿತುಕೊಳ್ಳುವುದನ್ನು ಮಾಡುತ್ತಿದ್ದರೆ, ತಾಯಂದಿರಿಗೆ ಯಾಕೆ ತಮ್ಮ ಮಗು ಇನ್ನೂ ಈ ಮೈಲಿಗಲ್ಲನ್ನು ಮುಟ್ಟಿಲ್ಲ ಎಂಬ ಆತಂಕವಿರುತ್ತದೆ. ಯಾಕೆಂದರೆ ಎಲ್ಲಾ ಮಕ್ಕಳು ವಿಭಿನ್ನ.ಇದು ಪ್ರಕೃತಿ ಸಹಜವೂ ಹೌದು. ಕೆಲವು ಮಕ್ಕಳು ಬೇಗ ಕಲಿಯುತಾರೆ, ಮತ್ತೆ ಕೆಲವು ಮಕ್ಕಳು ನಿಧಾನವಾಗಿ ಕಲಿಯುತ್ತಾರೆ. ಇದರಲ್ಲಿ ಆತಂಕಪಡುವ ಯಾವುದೇ ವಿಷಯವಿಲ್ಲ ಎಂದು ವೈದ್ಯರು ಹೇಳುತ್ತಾರೆ. ಈ ರೀತಿಯ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ, ನಿಮ್ಮ ಮಗುವಿನೊಂದಿಗೆ ಅತ್ಯುತ್ತಮ ಕ್ಷಣಗಳನ್ನು ಆನಂದಿಸಿ.

ತಾಯಂದಿರೇ, ನಿಮ್ಮ ಆರೋಗ್ಯಕ್ಕಿಂತ ಮಿಗಲಾಗಿರುವುದು ಯಾವುದು ಇಲ್ಲ. ನೀವು ಆರೋಗ್ಯದಿಂದ್ದಿದ್ದರೆ, ನಿಮ್ಮ ಮುದ್ದು ಕಂದಮ್ಮಗಳು ಸಹ ಸಹಜವಾಗಿ ಆರೋಗ್ಯದಿಂದಿರುತ್ತವೆ. ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon