Link copied!
Sign in / Sign up
6
Shares

ಮಗುವಿನಿಂದ ದೂರ ಇರಿಸಬೇಕಾದ ೫ ಆಹಾರಗಳು ಮತ್ತು ಅದಕ್ಕೆ ಕಾರಣ

ನಿಮ್ಮ ಮಗುವಿನ ಆಹಾರದಲ್ಲಿ ಘನವಸ್ತುಗಳನ್ನು ಪರಿಚಯಿಸುವ ನಿರೀಕ್ಷೆಯೊಂದಿಗೆ ನೀವು ತುಂಬಾ ಉತ್ಸುಕರಾಗಿರಬಹುದು ಮತ್ತು ನಿಮ್ಮ ಶಿಶುಗಳಿಗೆ ನೀಡಬಹುದಾಂತಹ ಆರೋಗ್ಯಕರ ಆಹಾರಗಳ ಬಗ್ಗೆ ತಿಳಿದುಕೊಳ್ಳಲು ನೋಡುತ್ತಿರುವಿರಿ. ಇದು ಮುಖ್ಯವಾದರೂ, ನಿಮ್ಮ ಮಗುವು ಸ್ವಲ್ಪ ಬೆಳೆಯುವವರೆಗೂ ಕೆಲವು ಆಹಾರಗಳಿಂದ ಅವರನ್ನು ದೂರವಿರಿಸುವುದು ಒಳ್ಳೆಯದು.

ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ.

೧.ಜೇನುತುಪ್ಪ

ತೋರಿಕೆಯಲ್ಲಿ ಹಾನಿಕಾರಕವಲ್ಲದ ಈ ಆಹಾರ ಪದಾರ್ಥ, ವಾಸ್ತವವಾಗಿ ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಅಪಾಯಕಾರಿ(ಶಿಶುಗಳಿಗೆ). ಇದು ಕರುಳಿನಲ್ಲಿ ದ್ವಿಗುಣಗೊಂಡು ಮತ್ತು ಶಿಶು ಬೊಟುಲಿಸಮ್ಗೆ ಕಾರಣವಾಗುವ ಕ್ಲಾಸ್ಟ್ರಿಡಿಯಮ್ ಬೊಟುಲಿನಮ್ ಎಂಬ ಬ್ಯಾಕ್ಟೀರಿಯಾದ ಬೀಜಕಗಳನ್ನು ಹೊಂದಿರುತ್ತದೆ. ನಿಮ್ಮ ಮಗುವಿಗೆ ಒಂದು ವರ್ಷ ತುಂಬಿದ ನಂತರ ಜೇನುತುಪ್ಪವನ್ನು ಕೊಡಬಹುದು, ಆಗ ಮಗುವಿನ ಕರಳು ಬೆಳೆವಣಿಗೆಯಾಗಿರುತ್ತದೆ.

೨.ಕಾಳುಗಳು ಮತ್ತು ಬೀಜಗಳು

ಕಾಳುಗಳು ಮತ್ತು ಬೀಜಗಳು ಬಾಯಿಯಲ್ಲಿ ಕರಗುವುದಿಲ್ಲ, ಅದನ್ನು ಚೆನ್ನಾಗಿ ಅಗಿಯಲು ಮಕ್ಕಳಲ್ಲಿ ಸಂಪೂರ್ಣ ಹಲ್ಲುಗಳ ಬೆಳವಣಿಗೆಯಾಗಿರುವುದಿಲ್ಲ, ಆದ್ದರಿಂದ ಮಕ್ಕಳು ಇವನ್ನು ಹಾಗೆಯೆ ನುಂಗಬಹುದು, ಇದರಿಂದ ಮಕ್ಕಳು ಉಸಿರುಗಟ್ಟುವ ಅಪಾಯವನ್ನು ಎದುರಿಸಬಹುದು. ಇದನ್ನು ಹೊರತು ಪಡಿಸಿ, ಕೆಲವು ಕಾಳುಗಳು ಅಥವಾ ಬೀಜಗಳು ಮಗುವಿನಲ್ಲಿ ಅಲರ್ಜಿಯನ್ನುಂಟುಮಾಡಬಹುದು. ಆದ್ದರಿಂದ ಮಗುವು ಸ್ವಲ್ಪ ಬೆಳೆಯುವವರೆಗೆ ಇದನ್ನು ನೀಡುವುದನ್ನು ತಡೆಯುವುದು ಉತ್ತಮ.

೩.ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು ನೈಸರ್ಗಿಕವಾಗಿ ಆಮ್ಲಿಯ ಗುಣವನ್ನು ಹೊಂದಿರುತ್ತವೆ. ಇದು ನಿಮ್ಮ ಮಗುವಿನ ಚರ್ಮದ ಮೇಲೆ ವಿಪರೀತ ದದ್ದುಗಳನ್ನು ಉಂಟುಮಾಡಬಹುದು. ಆದರೆ ಕೆಲವು ಪೋಷಕರು ಕಿತ್ತಳೆ ಹಣ್ಣನ್ನು ಮಗುವಿಗೆ ನೀಡಿದ್ದಾರೆ ಮತ್ತು ಅದರಿಂದ ಯಾವುದೇ ಅಲರ್ಜಿ ಕಂಡುಬಂದಿಲ್ಲ. ಆದ್ದರಿಂದ ನೀವು ನಿಮ್ಮ ಮಗುವಿಗೆ ಹಣ್ಣನ್ನು ನೀಡಲು ಬಯಸಿದರೆ, ಜಾಗರೂಕರಾಗಿರಿ ಮತ್ತು ಅದರಿಂದ ಯಾವುದೇ ಅಲರ್ಜಿಯಾಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿಕ್ಕೊಳ್ಳಿ.

೪.ಹಸಿ ತರಕಾರಿಗಳು

ಹಸಿ ತರಕಾರಿಗಳ ಗಾತ್ರ ಮತ್ತು ದೃಢತೆಯಿಂದ, ಶಿಶುಗಳು ಅದನ್ನು ನುಂಗಲು ಕಷ್ಟ ಪಡಬಹುದು ಮತ್ತು ಅದು ಗಂಟಲಲ್ಲಿ ಸಿಲುಕಿಕೊಳ್ಳಬಹುದು. ಆದ್ದರಿಂದ ತರಕಾರಿಗಳನ್ನು ನೀಡುವ ಮೊದಲು, ಅದು ಮೃದುವಾಗುವವರೆಗೆ ಬೇಯಿಸಿ, ಕಿವುಚಿ ನಂತರ ನೀಡಿ.

೫.ಹಸು ಹಾಲು

ಹಸುವಿನ ಹಾಲಿನಲ್ಲಿರುವ ಪ್ರೊಟೀನ್ ಮತ್ತು ಖನಿಜಾಂಶಗಳನ್ನು ಜೀರ್ಣಮಾಡಿಕೊಳ್ಳುವುದು ಶಿಶುಗಳಿಗೆ ಕಠಿಣ ಕೆಲಸ. ಆದ್ದರಿಂದ ಮಗುವಿಗೆ ಒಂದು ವರ್ಷ ತುಂಬುವವರೆಗೆ ಹಸು ಹಾಲು ಅಥವಾ ಡೈರಿ ಹಾಲನ್ನು ನೀಡದಿರುವುದು ಉತ್ತಮ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon