Link copied!
Sign in / Sign up
2
Shares

ಭಯಂಕರ ಘಟನೆ: ಮನೆಗೆ ನುಗ್ಗಿ ಮಲಗಿರುವ ಮಗುವಿನ ಮೇಲೆ ಅಟ್ಯಾಕ್ ಮಾಡಿದ ನಾಯಿಗಳು..


ನಾವು ರೋಡಿನಲ್ಲಿ ನಾಯಿಗಳು ಮಕ್ಕಳಮೇಲೆ ಹಾಗು ಹಿರಿಯಾರಮೇಲೆ ದಾಳಿಮಾಡಿರುವುದನ್ನು ನೋಡಿದ್ದೇವೆ. ಆದರೆ ಶಿವಮೊಗ್ಗದ ಬಳಿ ನಡೆದ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ.

ಏನಾಯಿತು?

ನಾಯಿಯ ದಾಳಿಗೆ ಒಳಗಾಗಿರುವುದು 4 ತಿಂಗಳ ಕಂದಮ್ಮ ಒಳಗಾಗಿ ಮುಖ, ಕಿವಿ, ಕತ್ತಿನಮೇಲೆ ನಾಯಿ ದಾಳಿ ಮಾಡಿದೆ. ಮಗುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.ಲಕ್ಷ್ಮಣ್ ಹಾಗು ಪೂಜಾ ದಂಪತಿಗಳ ಹೆಣ್ಣು ಮಗು  ದಾಳಿಗೆ ಒಳಗಾಗಿದೆ. 

ಘಟನೆ ನಡೆದದ್ದು ಹೇಗೆ?

ಘಟನೆಯನ್ನು ಮಗುವಿನ ಸಂಭಂದಿ ಘಟನೆಯನ್ನು ವಿವರಿಸಿ ಹೇಳಿದ್ದು ಹೀಗೆ, ಮಗುವಿನ ತಾಯಿ ಪೂಜಾ ಮನೆ ಬಳಿ ಬಟ್ಟೆ ಒಗೆಯುತ್ತಿದ್ದಾಗ ಅವರಿಗೆ ಕಾಣದಂತೆ ನಾಯಿಗಳು ಮನೆಗೆ ನುಗ್ಗಿ ಮಗಿವಿನಮೇಲೆ ಧಾಳಿ ನಡೆಸಿವೆ. ಇದರಿಂದ ತೀವ್ರ ದಾಳಿಗೊಳಗಾದ 4 ತಿಂಗಳ ಕಂದಮ್ಮ ಅಳಲು ಪ್ರಾರಂಭಿಸಿದೆ, ಮನೆಯಲ್ಲೇ ಇದ್ದ 7 ವರ್ಷದ ಹುಡುಗಿ ಜೋರಾಗಿ ಕಿರುಚಿಕೊಂಡು ಅಕ್ಕ ಪಕ್ಕದ ಮನೆಯವರೆಲ್ಲರನ್ನು ಕರೆದಿದೆ. ನಂತರ ಮಗುವನ್ನು ಹತ್ತಿರದ ಸರ್ಕಾರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಅಲ್ಲಿ ವೈದ್ಯರು ಹಾಗು ಆಂಬುಲೆನ್ಸ್ ಕೂಡ ಇಲ್ಲದೆ ಮತ್ತೆ ಮಗುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಖಾಸಗಿ ವಾಹನದಲ್ಲಿ ಕರೆದೊಯ್ದು ಚಿಕಿಸ್ತೆ ಕೊಡಿಸಿದ್ದಾರೆ.

ಮಗುವಿನ ಸಂಬಂದಿ ಹೇಳುವುದೇನೆಂದರೆ ಮಗುವಿಗೆ ಮುಖ,ಕಿವಿ, ಕತ್ತು ಸೇರಿದಂತೆ ಕನಿಷ್ಠ 10 ಕಡೆಯಲ್ಲ್ಕಿ ನಾಯಿ ಕಚ್ಚಿದೆ.

ಮಗು ಇನ್ನು ಆಸ್ಪತ್ರೆಯಲ್ಲಿ ಚಿಕಿಸ್ತೆ ಪಡೆಯುತ್ತಿದೆ. 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon