Link copied!
Sign in / Sign up
2
Shares

ಮಗುವಿನ ತ್ವಚೆಯ ಸಮಸ್ಯೆಗೆ ನೈಸರ್ಗಿಕ ಪರಿಹಾರಗಳು!

ಯಾರು ಹೇಳಿ ಕೊಡದೆ ತನ್ನ ಕೆಲಸವನ್ನು ತಾನೇ ಅಚ್ಚುಕಟ್ಟಾಗಿ ನಿಭಾಯಿಸುವುದು ತಾಯಿ ಮಾತ್ರ. ಮಗುವಿನ ಯಾವುದೇ ಕೆಲಸವನ್ನು ತಾನು ಬಹಳ ಎಚ್ಚರಿಕೆ ಇಂದ ನಿಭಾಯಿಸುವಳು. ಅದು ಏನೇ ಆದರೂ ಮಗುವು ಹೊರ ಜಗತ್ತಿಗೆ ಹೊಸದಾಗಿ ಹೊಂದಿಕೊಳ್ಳಲು ಸಮಯ ಬೇಕು ಮತ್ತು ಮಗುವಿನ ತ್ವಚೆಯು ತುಂಬಾ ಸೂಕ್ಷ್ಮವಾಗಿದ್ದು, ಅದರ ಕಾಳಜಿಯನ್ನು ಮಾಡುವಾಗ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ನಿಮಗೆ ಮಗುವಿನ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ತ್ವಚೆಯನ್ನು ಕಾಪಾಡಲು ಕೆಲವು ಸಲಹೆಗಳು.

ಈ ಕೆಳಗಿನ ಸಲಹೆಗಳು ನಿಮ್ಮ ಮಗುವಿನ ತ್ವಚೆಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳಾಗಿದ್ದು ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.

೧.ಬಿಸಿ ನೀರು

ಮಗುವಿನ ದೈಪರ್ ನಿಂದ ತ್ವಚೆಯ ಸಮಸ್ಯೆ ಉಂಟಾಗಿದ್ದರೆ, ಇದೊಂದು ಸುಲಭ ಪರಿಹಾರವಾಗಿದೆ. ಉಗುರು ಬೆಚ್ಚನೆಯ ನೀರಿನಲ್ಲಿ ಮಗುವಿನ ತ್ವಚೆಯನ್ನು ತೊಳೆಯುವುದರಿಂದ ತ್ವಚೆಯ ಕಿರಿಕಿರಿ ಕಡಿಮೆ ಆಗುತ್ತದೆ. ಅಥವಾ ಮಗುವನ್ನು ಉಗುರು ಬೆಚ್ಚನೆಯ ನಿರಿನಲ್ಲಿ 10-15 ನಿಮಿಷ ಕುರಿಸಿ. ನಂತರ ಮಗುವನ್ನು ಒಂದು ಶುದ್ಧ ಬಟ್ಟೆಯಿಂದ ಹೊರಿಸಿ.

೨.ಎದೆಹಾಲು

ತ್ವಚೆಯ ಸಮಸ್ಯೆ ಅದರಲ್ಲೂ ದೈಪರ್ ಅಥವಾ ತ್ವಚೆಯ ಅಲರ್ಜಿ ಆಗಿದ್ದರೆ, ಆ ಜಾಗಕ್ಕೆ ಸ್ವಲ್ಪ ಎದೆಹಾಲನ್ನು ಸವರುವುದರಿಂದ ತ್ವಚೆಯ ಉರಿ ಅಥವಾ ಕಿರಿಕಿರಿ ಕಡಿಮೆಯಾಗುತ್ತದೆ ಮತ್ತು ಅದು ಮಗುವಿನ ತ್ವಚೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

೩.ಅಡುಗೆ ಸೋಡಾ

ಇದು ಅಲ್ಕಲೈನ್ ಎಂಬ ಅಂಶವನ್ನು ಹೊಂದಿದ್ದು, ಇದು ಮೂತ್ರದಿಂದ ಉಂಟಾಗುವ ನವೆ ಮತ್ತು ಕಿರಿಕಿರಿಯನ್ನು ದೂರಮಾಡುತ್ತದೆ. ಒಂದು ಬಟ್ಟಲಿಗೆ ಅಡುಗೆ ಸೋಡಾ ಅಥವಾ ಬೇಕಿಂಗ್ ಸೋಡಾವನ್ನು ನೀರಿನ ಜೊತೆ ಮಿಶ್ರಣ ಮಾಡಿ, ಒಂದು ಹತ್ತಿಯನ್ನು ಆ ಮಿಶ್ರಣದಲ್ಲಿ ಹಜ್ಜಿ ತ್ವಚೆಯ ಗುಳ್ಳೆ ಅಥವಾ ನವೆ ಇರುವ ಅಥವಾ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ.

೪.ಲೋಗಸರ

ಇದರಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಇದ್ದು, ಮಗುವಿನ ಸೂಕ್ಷ್ಮ ತ್ವಚೆಯ ಸೂಕ್ಷ್ಮತೆಯನ್ನು ಕಾಪಾಡಲು ಸಹಾಯವಾಗುತ್ತದೆ. ಲೋಗಸರದ ಲೋಳೆಯನ್ನು ಮಗುವಿನ ತೊಂದರೆ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ಶುಚಿಮಾಡಿ.

೫.ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಅಥವಾ ಸ್ವಲ್ಪ ಬಿಸಿ ಮಾಡಿ, ಉಗುರು ಬೆಚ್ಚಗೆ ಇರುವಾಗ ಅದನ್ನು ಮಗುವಿನ ತ್ವಚೆಗೆ ಹಚ್ಚಿ, ಇದರಿಂದ ಮಗುವಿನ ತ್ವಚೆಯ ಹೊಳಪು ಹೆಚ್ಚಾಗುತ್ತದೆ. ಇದನ್ನು ಮಗುವಿನ ತ್ವಚೆ ಪೂರ್ತಿ ಹಚ್ಚಿ, ಮಗುವನ್ನು ಎತ್ತಿಕೊಳ್ಳುವಾಗ ತುಂಬಾ ಎಚ್ಚರವಹಿಸಿ, ಏಕೆಂದರೆ ಮಗುವಿನಲ್ಲಿನ ಎಣ್ಣೆ ಜಾರುವಂತೆ ಮಾಡಿ ಹಾನಿಯಾಗಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon