Link copied!
Sign in / Sign up
4
Shares

ಹೆರಿಗೆ ಮುನ್ನ ಗರ್ಭದಲ್ಲಿನ ಮಗುವಿನ ಸ್ತಿತಿ ಮತ್ತು ಭಂಗಿ (ಚಿತ್ರಗಳೊಂದಿಗೆ)

ಗರ್ಭದಲ್ಲಿ ಇದ್ದಾಗ ಮಗುವು ತನ್ನ ಜಾಗವನ್ನ ಹಾಗು ಭಂಗಿಗಳನ್ನ ಬದಲಾಯಿಸುತ್ತಿರುತ್ತದೆ. ಅವರು ಗಾತ್ರದಲ್ಲಿ ಬೆಳೆಯುತ್ತಲೇ ಹೋಗುವ ಕಾರಣ, ಅವರು ತಮ್ಮ ಸ್ಥಾನಗಳನ್ನ ಬದಲಿಸುತ್ತಾರೆ. ಆದರ್ಶವಾಗಿ, ಅವರ ತಲೆ ಮೊದಲು ಹೊರಗಡೆ ಬರುವಂತೆ ಸ್ತಿತಿಯಲ್ಲಿ ಅವರು ಇರಬೇಕು.ಅವರ ತಲೆಯು ನಿಮ್ಮ ಹಿಂಭಾಗದ ಕಡೆ ಮುಖ ಮಾಡಿದ್ದರೆ ಮಗುವನ್ನ ಸುರಕ್ಷಿತವಾಗಿ ಹೊರತೆಗೆಯಬಹುದು. ಆದರೆ, ಎಲ್ಲಾ ಸಮಯದಲ್ಲೂ ಮಕ್ಕಳಿಗೆ ಗರ್ಭದಲ್ಲ್ಲಿ ತಮ್ಮ ಚಲನವಲನಗಳಿಗೆ ಸಾಕಷ್ಟು ಜಾಗ ಇರುವುದಿಲ್ಲ. ಹೆರಿಗೆ ದಿನದಂದು ನಿಮ್ಮ ಗರ್ಭದಲ್ಲಿ ನಿಮ್ಮ ಮಗುವಿನ ಸ್ತಿತಿಗಳು ಹೀಗಿರುತ್ತವೆ

ಬ್ರೀಚ್ ಸ್ತಿತಿ

ಮಗುವಿನ ಕಾಲುಗಳು ಅಥವಾ ಪೃಷ್ಠ ನಿಮ್ಮ ಜನನನಾಳಕ್ಕೆ ಹತ್ತಿರದಲ್ಲಿ ಇದ್ದರೆ, ಅದನ್ನ ಬ್ರೀಚ್ ಸ್ತಿತಿ ಎನ್ನುತ್ತಾರೆ. ಬಹಳಷ್ಟು ಶಿಶುಗಳು ಜನ್ಮ ತಾಳುವುದು ಇದೇ ಸ್ತಿತಿಯಲ್ಲಿ. ನಿಮ್ಮ ಮಗುವು ಈ ಸ್ತಿತಿಯಲ್ಲಿ ಇದ್ದಾಗ ಸ್ವಾಭಾವಿಕ ಹೆರಿಗೆಯಲ್ಲಿ ತೊಂದರೆಗಳು ಉಂಟಾಗಬಹುದೆಂದು ವೈದ್ಯರು ಸಿಸೇರಿಯನ್ ಮಾಡಿಸಿಕೊಳ್ಳಲು ಸಲಹೆ ಮಾಡುತ್ತಾರೆ. ಅವರು ಅವರ್ಷನ್ (ನಿವಾರಣೆ) ಎಂಬ ಪ್ರಕ್ರಿಯೆಯಿಂದ ಅವರು ನಿಮ್ಮ ಮಗುವಿನ ಸ್ತಿತಿಯನ್ನ ಬದಲಾಯಿಸಲು ಪ್ರಯತ್ನಿಸಬಹುದು. ನೀವು ಇದಾದ ನಂತರ ಸ್ವಾಭಾವಿಕವಾಗಿ ಜನನ ನೀಡಬಹುದು.

ಮೂರು ರೀತಿಯ ಬ್ರೀಚ್ ಸ್ತಿತಿಗಳು ಇವೆ :

೧. ಸಂಪೂರ್ಣ ಬ್ರೀಚ್

ಮಗುವಿನ ಕಾಲುಗಳು ಮತ್ತು ಹಿಂಭಾಗವು ನಿಮ್ಮ ಜನನನಾಳಕ್ಕೆ ಹತ್ತಿರವಿದ್ದು, ಮಗುವಿನ ಮೊಣಕಾಲುಗಳು ಮದಚಿದ್ದರೆ ಅದು ಸಂಪೂರ್ಣ ಬ್ರೀಚ್.

೨. ಫ್ರಾಂಕ್ (ಸರಳ) ಬ್ರೀಚ್

ಮಗುವಿನ ಹಿಂಭಾಗವು ನಿಮ್ಮ ಜನನನಾಳಕ್ಕೆ ಹತ್ತಿರುವಿದ್ದು, ನಿಮ್ಮ ಮಗುವಿನ ಕಾಲುಗಳು ಚಾಚಿದ್ದು, ಅದರ ಪಾದಗಳು ಅವರ ತಲೆ ಹತ್ತಿರ ಅಂದರೆ ನಿಮ್ಮ ಎದೆಭಾಗದ ಬಳಿ ಇದ್ದರೆ ಅದು ಫ್ರಾಂಕ್ ಬ್ರೀಚ್.

೩. ಅಪೂರ್ಣ ಬ್ರೀಚ್

ಮಗುವಿನ ಹಿಂಭಾಗ ನಿಮ್ಮ ಜನನನಾಳಕ್ಕೆ ಹತ್ತಿರವಿದ್ದು, ಅದರ ಒಂದು ಕಾಲು ನಿಮ್ಮ ಜನನನಾಳದ ಬಳಿ ಮತ್ತು ಇನ್ನೊಂದು ಕಾಲು ಅದರ ತಲೆ ಬಳಿ ಇದ್ದರೆ, ಅದು ಅಪೂರ್ಣ ಬ್ರೀಚ್.

ಹಿಂದೆ ಮುಖ ಮಾಡಿಕೊಂಡಿರುವ (ಪೋಸ್ಟೀರಿಯರ್) ಸ್ತಿತಿ

ನಿಮ್ಮ ಹಿಂಭಾಗದ ಕಡೆ ಮುಖ ಮಾಡುವ ಬದಲು ಇಲ್ಲಿ ಮಗುವು ನಿಮ್ಮ ಹೊಟ್ಟೆಯ ಕಡೆ ಮುಖ ಮಾಡಿರುತ್ತದೆ. ಈ ಸ್ತಿತಿಯಲ್ಲಿ ನಿಮ್ಮ ಮಗು ಇದ್ದಾಗ ನಿಮಗೆ ಹೆರಿಗೆ ನೋವು ಉಂಟಾದರೆ, ನಿಮಗೆ ಸಹಜವಾಗಿ ಹೆರಿಗೆಯಲ್ಲಿ ಹೊಟ್ಟೆ ನೋವಾಗುವ ಬದಲು

ನಿಮ್ಮ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದ ಹೆರಿಗೆ ನಂತರ ನಿಮಗೆ ಬಹುಕಾಲದವರೆಗೆ ಬೆನ್ನು ನೋವು ಕಾಣಿಸಿಕೊಳ್ಳಬಹುದು.

ತಲೆ ಕೆಳಗೆ ಮಾಡಿಕೊಂಡಿರುವ (ಆಂಟೀರಿಯರ್) ಸ್ತಿತಿ

ಹೆರಿಗೆ ಅತ್ಯಂತ ಸೂಕ್ತವಾದ ಸ್ತಿತಿಯೆಂದರೆ ಅದು ಇದೇ. ನಿಮ್ಮ ಮಗವಿನ ಮುಖವು ನಿಮ್ಮ ಬೆನ್ನಿನ ಕಡೆ ತಿರುಗಿರುತ್ತದೆ ಮತ್ತು ಅದರ ತಲೆಯು ನಿಮ್ಮ ಜನನನಾಳಕ್ಕೆ ಸಮೀಪದಲ್ಲಿ ಇರುತ್ತದೆ. ಮಗುವು ಕಾಲು ಚಾಚಿದರೆ ಅವುಗಳು ನಿಮ್ಮ ಎದೆಯವರೆಗೆ ಬರಬಹುದು.

ಅಡ್ಡಡ್ಡ (ಟ್ರಾನ್ಸ್ವೆರ್ಸ್) ಸ್ತಿತಿಯಲ್ಲಿ

ಈ ಸ್ತಿತಿಯಲ್ಲಿ ನಿಮ್ಮ ಮಗುವು ನಿಮ್ಮ ಗರ್ಭಕೋಶಕ್ಕೆ ಅಡ್ಡಡ್ಡವಾಗಿ ಮಲಗಿರುತ್ತದೆ. ಆದರೆ ಇಂತಹ ಪ್ರಕರಣಗಳು ತುಂಬಾನೇ ವಿರಳ. 2000 ಮಕ್ಕಳಲ್ಲಿ ಒಂದು ಮಗುವು ಹೀಗೆ ಜನಿಸುವುದು. ಮಗುವಿಗೆ ಗರ್ಭಕೋಶದಲ್ಲಿ ಸ್ತಿತಿಗಳನ್ನ ಬದಲಾಯಿಸಲಿಕ್ಕೆ ಬೇಕಿರುವಷ್ಟು ಜಾಗ ಸಿಗದಿದ್ದಾಗ ಹೀಗೆ ಆಗುತ್ತದೆ. ಸುರಕ್ಷತೆಯ ಸಲುವಾಗಿ ತಾಯಂದಿರು ಸಿಸೇರಿಯನ್ ವಿಧಾನವನ್ನ ಆಯ್ದುಕೊಳ್ಳ ಬೇಕಾಗುತ್ತದೆ.



Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon