Link copied!
Sign in / Sign up
17
Shares

ಈ 6 ಉಪಾಯಗಳಿಂದ ನಿಮ್ಮ ಮಗುವಿನ ಶ್ರದ್ದೆ ಹೆಚ್ಚಿಸಿ, ತರಗತಿಯ ಟಾಪರ್ ಮಾಡಿ!

“ಒಂದು ಕಡೆಯಲ್ಲಿ ಕುಳಿತುಕೊಂಡು ಒಂದೇಸಲಕ್ಕೆ, ನಿನ್ನ ಕೆಲಸವನ್ನು ಮುಗಿಸಲು ಏಕೆ ಪ್ರಯತ್ನಿಸುತ್ತಿಲ್ಲ ನೀನು ?”- ಇದು ಪ್ರತಿಯೊಂದು ಮಗು ಎದುರಿಸುತ್ತಿರುವ ಪ್ರಶ್ನೆಯಾಗಿರಬಹುದು..!!ಮಕ್ಕಳು ಮಕ್ಕಳ ಆಗಿರುವುದರಿಂದಲೇ ಸುಮ್ಮನೆ ಒಂದೇ ಕಡೆಯಲ್ಲಿ ಕುಳಿತುಕೊಂಡು ಒಂದೇ ಕೆಲಸವನ್ನು ಸಂಪೂರ್ಣ ಗಮನದಿಂದ ಅದರಲ್ಲೂ, ಹೋಮ್ ವರ್ಕ್ ನಂತಹ ಬೇಸರ ಮೂಡಿಸುವಂತಹ ಕಾರ್ಯಗಳನ್ನು ಮಾಡಲು ಖಂಡಿತ ಪ್ರಯತ್ನಿಸಲಾರರು. 

ಹಾಗಾದರೆ ಮಗುವಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬೇರೇನನ್ನು ಮಾಡಬಹುದು ?

೧.ಮಕ್ಕಳನ್ನು ಆಟವಾಡಲು ಬಿಡಿ

ಆಟವೆಂದರೆ ಕಂಪ್ಯೂಟರ್ ಅಥವಾ ಮೊಬೈಲ್ಗಳಲ್ಲಿ ಆಡುವ ಆಟಗಳಲ್ಲ.ಮಕ್ಕಳ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾಗುವಂತಹ ಸ್ಕ್ರ್ಯಾಬಲ್‌‌ ,ವಿಕ್ಷನರಿ ಪದಬಂಧ ಜಿಗ್ ಸಾರ್ ಪಾರ್ಸಲ್ ಯು ನೋ ಅಥವಾ ನೆನಪಿನ ಶಕ್ತಿಗಳಿಗೆ ಸವಾಲೆಸೆಯುವಂತಹ ಆಟಗಳನ್ನು ಆಡಬಹುದು ವರ್ಣ ವರ್ಣಮಾಲೆಗಳನ್ನು ಜೋಡಿಸುವಂತಹ ಆಟಗಳನ್ನು ಮಕ್ಕಳಿಗೆ ಕಲಿಸುವುದರಿಂದ ಮಕ್ಕಳ ಗಮನವೂ ಒಂದೇ ಕಡೆಯಲ್ಲಿ ಕೇಂದ್ರೀಕೃತವಾಗುವುದು.

೨.ಪೂರಕ ವಾತಾವರಣ

ತನ್ನ ಅಗತ್ಯದ ಪರಿಕರಗಳನ್ನು ಜೋಡಿಸಲು ೪ ೫ ಬಾರಿ ಕುಳಿತಲ್ಲಿಂದ ಏಳಬೇಕಾದ ಪರಿಸ್ಥಿತಿಯಾದರೆ, ಮಗುವು ಖಂಡಿತ ತನ್ನ ಗಮನವನ್ನು ಮಾಡುವ ಕೆಲಸದಲ್ಲಿ ಕೇಂದ್ರೀಕರಿಸಲು ಸಾಧ್ಯವಾಗದು. ಕೋಣೆಯು  ಮಗುವಿನ ಆಸಕ್ತಿಯನ್ನೂ, ಕುತೂಹಲವನ್ನೂ ಕೆರಳಿಸುವಂತಹ ಆಟಿಕೆಗಳಿಂದ ತುಂಬಿದ್ದರೆ ಅಥವಾ ಗಲಭೆ ,ಗಲಾಟೆ, ಗದ್ದಲಗಳಿಂದ ಕೂಡಿದ್ದರೆ, ಮಗುವು ತನ್ನ ಗಮನವನ್ನು ಪಾಠದೆಡೆಗೆ ಕೇಂದ್ರೀಕರಿಸಲು ಹೇಗೆ ಸಾಧ್ಯವಾಗುವುದೆಂದು ನೀವೇ ಒಮ್ಮೆ ಆಲೋಚಿಸಿ !

೩.ಆರೋಗ್ಯಕರ ಆಹಾರ ಅಭ್ಯಾಸಗಳು

ಮಕ್ಕಳು ಸೇವಿಸುವ ಆಹಾರವೂ, ಅವರ ಗಮನ ಕೇಂದ್ರೀಕರಣಕ್ಕೂ ಪರಸ್ಪರ ಗಾಢವಾದ ಸಂಬಂಧವಿದೆಯೆಂಬ ಸತ್ಯವನ್ನು ನೀವೆಂದಾದರೂ ಗ್ರಹಿಸಿದ್ದೀರಾ..? ಉದಾಹರಣೆಗೆ ಮಗುವು ಕೆಫಿನ್ ಭರಿತವಾದ ಚಹಾ ಅಥವಾ ಕಾಫಿಗಳನ್ನು ಸೇವಿಸುವುದರಿಂದ, ಶರೀರದ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳವುಂಟಾಗುತ್ತದೆ. ಇದು ಶರೀರದ ಚೈತನ್ಯವನ್ನೂ, ತನ್ಮೂಲಕ ಕಾರ್ಯಕ್ಷಮತೆಯನ್ನೂ ತಗ್ಗಿಸುತ್ತದೆ.  

೪.ಕಿರು ನಿದ್ರೆ ಮತ್ತು ವಿಶ್ರಾಮ

ಮಗುವು ಎಷ್ಟು ಬೇಗ ತನ್ನ ಕೆಲಸವನ್ನು ಪೂರ್ತಿಗೊಳಿಸಬೇಕೆಂದು ನೀವು ಬಯಸುವಿರೋ, ಅಷ್ಟೇ ಪ್ರಮಾಣದ ವಿಶ್ರಾಮ ಮಕ್ಕಳಿಗೆ ಅಗತ್ಯವಿದೆ. ಬೆಳೆಯುತ್ತಿರುವ ಮಕ್ಕಳಿಗೆ ಸಣ್ಣ ನಿದ್ರೆಯೂ ಅತಿ ಅಗತ್ಯ. ಯಾಕೆಂದರೆ, ಈ ವಿಶ್ರಾಮ ವೇಳೆಯಲ್ಲಿ ಮಗುವಿನ ಮೆದುಳು ಪುನಶ್ಚೇತನಗೊಂಡು, ಮಕ್ಕಳು ಚಟುವಟಿಕೆ ಹಾಗೂ ಲವಲವಿಕೆಯಿಂದಿರುವಂತೆ ಮಾಡುತ್ತದೆ.

೫.ಕೆಲಸದ ಹೊರೆಗಳನ್ನು ಚಿಕ್ಕ ಚಿಕ್ಕದಾಗಿ ವಿಂಗಡಿಸಿ

ಮಣಭಾರದ ಕೆಲಸಗಳನ್ನು ಮಕ್ಕಳ ಮೇಲೆ ಹೇರಬೇಡಿ. ಹೆದರಿಸಿ, ಬೆದರಿಸಿ ಕೆಲಸಗಳನ್ನು ಮಾಡಿಸುವ ಬದಲಾಗಿ,ಮಾಡಬೇಕಾದ ಕೆಲಸಗಳನ್ನು ಸಣ್ಣ ಸಣ್ಣ ಕಾರ್ಯಗಳನ್ನಾಗಿ ವಿಂಗಡಿಸಿದರೆ, ಮಕ್ಕಳಿಗೆ ಅದನ್ನು ಪೂರ್ತಿಗೊಳಿಸಲು ತ್ರಾಸವೆನಿಸದು . ಈ ವಿಧಾನವನ್ನು ಮಕ್ಕಳ ಕಲಿಯುವಿಕೆಯಲ್ಲಿ ಮಾತ್ರವಲ್ಲದೆ ಇತರ ಮನೆಗೆಲಸಗಳನ್ನು ಮಾಡಿಸಲು ಕೂಡ ಪ್ರಯೋಗಿಸಬಹುದು.

೬.ಮೆಚ್ಚುಗೆ ಅಥವಾ ಹೊಗಳಿಕೆಗಳಿಂದ ಪ್ರೋತ್ಸಾಹ

ನೀಡಲ್ಪಟ್ಟ ಕೆಲಸಗಳನ್ನು ಪೂರೈಸಿದ ಮಕ್ಕಳಿಗೆ ಚಾಕಲೇಟ್, ಅಪ್ಪುಗೆ ಅಥವಾ ಹೊಗಳಿಕೆಯಿಂದ ತೃಪ್ತಿ ಪಡಿಸಿ. ೫-೧೦ ನಿಮಿಷ ನಿಮ್ಮ ಮೊಬೈಲನ್ನು ಆಟವಾಡಲು ನೀಡುವೆನೆಂಬ ಆಮಿಷವನ್ನೂ ಒಡ್ಡಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon