Link copied!
Sign in / Sign up
32
Shares

ನಿಮ್ಮ ಮಗುವಿನ ರಾಶಿಗೆ ಅನುಗುಣವಾಗಿ ಅವರು ಅಳುವಾಗ ಹೇಗೆ ಸಮಾಧಾನ ಮಾಡುವುದೆಂದು ತಿಳಿಯಿರಿ

ನವಜಾತ ಶಿಶುವಿನ ಆರೈಕೆ ಮಾಡುವುದು ತಮಾಷೆ ವಿಷಯವೇ ಅಲ್ಲ. ಟಿವಿ ಅಥವಾ ಮಿಕ್ಸಿಯೊಂದಿಗೆ ಬರುವ ಗ್ರಾಹಕರ ಕೈಪಿಡಿಯು ಮಕ್ಕಳೊಂದಿಗೆ ಬರುವುದಿಲ್ಲ. ಮಕ್ಕಳಿಗೆ ತಮ್ಮ ಯೋಚನೆ ವ್ಯಕ್ತಪಡಿಸಲು ಗೊತ್ತಿರುವ ಒಂದೇ ದಾರಿ ಎಂದರೆ ಅದು ಅಳುವುದು. ಪ್ರತಿಯೊಂದು ಮಗುವಿಗೂ ಸಮಾಧಾನ ಪಡಿಸುವ ರೀತಿ ಬೇರೆ ಬೇರೆ ಆಗಿರುತ್ತದೆ.

ಆದರೆ ನಿಮ್ಮ ಮಗುವಿನ ರಾಶಿಯ ಪ್ರಕಾರ ನೀವು ಅವರನ್ನು ಅಳುವಾಗ ಸಮಾಧಾನ ಪಡಿಸುವುದು ಹೇಗೆ ಎಂದು ತಿಳಿದುಕೊಳ್ಳಬಹುದೇ? ಇದು ೧೦೦% ನಿಖರ ಅಲ್ಲದೆ ಇರಬಹುದು, ಆದರೆ ಪ್ರಯತ್ನಿಸುವುದರಲ್ಲಿ ತಪ್ಪೇನಿದೆ? ಅದರಲ್ಲೂ ನನ್ನ ಮಗು ಅಳುವುದನ್ನು ನಿಲ್ಲಿಸಲು ನಾನು ಈಗ ಏನು ಪ್ರಯತ್ನವಾದರೂ ಮಾಡಲು ಸಿದ್ದ! ನೀವು ಕೂಡ ಒಮ್ಮೆ ಇದನ್ನ ಪ್ರಯತ್ನಿಸಿ.

ಮಕರ

ನನ್ನನ್ನು ಕ್ಷಮಿಸಿ. ನಿಮ್ಮ ಮಗುವಿನದ್ದು ಮಕರ ರಾಶಿ ಆಗಿದ್ದರೆ, ನಿಮ್ಮ ಹಠಮಾರಿ ಮಗುವನ್ನು ನೀವು ಏನು ಮಾಡಿದರು ಸುಧಾರಿಸಲು ಆಗುವುದಿಲ್ಲ. ಜ್ಯೋತಿಷ್ಯದ ಪ್ರಕಾರ ಈ ರಾಶಿ ಅವರು ಯಾವುದಾದರೂ ಒಂದು ಘಟ್ಟದಲ್ಲಿ ಯಾವುದೇ ವಿಷಯವನ್ನು ಒಪ್ಪುವುದಿಲ್ಲ ಮತ್ತು ಬಾಗುವುದಿಲ್ಲ. ಆದರೆ ಒಳ್ಳೆಯ ವಿಷಯ ಏನೆಂದರೆ ಈ ರಾಶಿಯವರು ತುಂಬಾ ಸ್ವಾವಲಂಬಿ ಇರುತ್ತಾರೆ ಮತ್ತು ಕೆಲಸಗಳನ್ನ ತಾವಾಗಿಯೇ ಬೇಗ ಬೇಗ ಕಲಿಯುತ್ತಾರೆ. ಹೀಗಾಗಿ ನೀವು ನಿಮ್ಮ ಮಗುವನ್ನು ಸಮಾಧಾನ ಪಡಿಸಬೇಕೆಂದರೆ, ಅವರಿಗೆ ಮಲಗುವುದನ್ನು ಕಲಿಸಬೇಕು ಅಥವಾ ಅವರಾಗೇ ಅವರು ಸಮಾಧಾನ ಪಟ್ಟುಕೊಳ್ಳಲು ಕಲಿಯುವಂತೆ ಬಿಡಬೇಕು.

ಕುಂಭ

ಈ ರಾಶಿಯಲ್ಲಿ ಜನಿಸಿದವರು ಸ್ನೇಹಜೀವಿ, ಚತುರ ಹಾಗು ಖಾಲಿ ಕೂರುವುದನ್ನು ಇಷ್ಟಪಡದ ವ್ಯಕ್ತಿಗಳಾಗಿರುತ್ತಾರೆ. ಇವರು ಯಾವಾಗಲೂ ಹೊಸತನ್ನು ಬಯಸುತ್ತಿರುತ್ತಾರೆ. ಹೀಗಾಗಿ ಇವರನ್ನು ಸಮಾಧಾನ ಪಡಿಸಲು ನೀವು ದಿನಕ್ಕೊಂದು ದಾರಿ ಹುಡುಕುತ್ತಾ ಇರಬೇಕು. ನೀವು ಯಾವುದೋ ಒಂದು ವಿಧಾನ ಈಗ ಪಾಲಿಸುತ್ತಿದ್ದರೆ, ಮುಂದಿನ ದಿನ ಅದು ಕೆಲಸ ಮಾಡುವುದಿಲ್ಲ. ಹೀಗಾಗಿ ನೀವು ಒಂದೇ ವಿಧಾನಕ್ಕೆ ಅಂಟಿಕೊಳ್ಳದೆ ಬೇರೆ ಬೇರೆ ದಾರಿ ಹುಡುಕುತ್ತಿರಬೇಕು.  

ಮೀನಾ

ಮೀನಾ ರಾಶಿಯವರಿಗೆ ಸಂಗೀತ ಎಂದರೆ ಬಹಳ ಇಷ್ಟ. ಹೀಗಾಗಿ ನಿಮಗೆ ಈ ರಾಶಿಯ ಮಗು ಇದ್ದರೆ, ನೀವು ನಿಮಗೆ ಎಷ್ಟಾಗುತ್ತೋ ಅಷ್ಟು ಒಳ್ಳೊಳ್ಳೆ ಜೋಗುಳ ಹಾಡುಗಳನ್ನ ಕಲಿತು ಹಾಡಿರಿ. ನಿಮ್ಮ ಮಗು ಅಳಲು ಶುರು ಮಾಡಿದೊಡನೆ ನೀವು ಹಾಡಲು ಶುರು ಮಾಡಿ. ಮಗುವು ಯಾವ ಯಾವ ಹಾಡುಗಳಿಗೆ ಸರಿಯಾಗಿ ಸ್ಪಂದಿಸುತ್ತದೆ ಎಂದು ತಿಳಿದುಕೊಂಡು, ಅದು ಅತ್ತಾಗಲೆಲ್ಲಾ ಆ ಹಾಡುಗಳನ್ನೇ ಹಾಡಿ.

ಮೇಷ

ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯವರು ಭಾವೋದ್ರಿಕ್ತರು, ಉತ್ಸಾಹಿಗಳು, ಛಲವಾದಿಗಳು ಆಗಿರುತ್ತಾರೆ. ಆದರೆ ಇದರೊಂದಿಗೆ ಅವರು ಸ್ವಲ್ಪ ಅಸಹನೆ ಮತ್ತು ಆಕ್ರಮಣಶಾಲಿ ಮನೋಭಾವದಿಂದ ಕೊಡಿರುತ್ತಾರೆ. ನಿಮ್ಮ ಮಗುವಿನ ಅಳು ಒಂದೇ ಸಮನೆ, ಪದೇ ಪದೇ, ಜೋರಾಗಿ ಇರುತ್ತದೆ. ಹೀಗಾಗಿ ನೀವು ಅವರನ್ನ ಹಾಗೆ ಬಿಡುವ ಹಾಗೆಯೇ ಇಲ್ಲ. ನೀವು ಅದೃಷ್ಟ ಮಾಡಿದ್ದಾರೆ, ನಿಮಗೆ ಮಗುವಿನ ಬೇಡಿಕೆ ಈಡೇರಿಸುವ ಮಧ್ಯದಲ್ಲಿ ಸ್ವಲ್ಪ ಬಿಡುವು ಸಿಗಬಹುದು.

ವೃಷಭ

ವೃಷಭ ರಾಶಿಯ ಮಗುವು ಸಹನೆ ಇಂದ ಇದ್ದರೂ ತುಂಬಾನೇ ಭಂಡತನ ಕೂಡ ಮಾಡಬಹುದು. ನೀವು ಒಮ್ಮೆ ಮಗುವನ್ನು ಹೇಗೆ ಸಮಾಧಾನ ಪಡಿಸಬೇಕು ಎಂದು ತಿಳಿದುಕೊಂಡರೆ, ನೀವು ಅದನ್ನೇ ಉಪಯೋಗಿಸುತ್ತಾ ಇರಬಹುದು. ಈ ರಾಶಿಯ ಮಕ್ಕಳು ಇಂದ್ರಿಯ ಮತ್ತು ದೈಹಿಕ ಆರಾಮ, ಮೆತ್ತನೆ ಬಟ್ಟೆಗಳನ್ನ ಇಚ್ಛಿಸುತ್ತಾರೆ. ಹೀಗಾಗಿ ನಿಮಗೆ ಈ ರಾಶಿಯ ಮಗುವಿದ್ದರೆ, ಅವರನ್ನ ಬೆಣ್ಣೆಯಂತ ಮೃದು ಬಟ್ಟೆಗಳ ಮಡುವಿನಲ್ಲಿ ಮಲಗಿಸಿ ಮತ್ತು ಲೂಸ್ ಆಗಿರುವ ಬಟ್ಟೆಗಳನ್ನ ಹಾಕಿಸಿ.

ಮಿಥುನ

ಮಿಥುನ ರಾಶಿಯ ಮಕ್ಕಳು ಕುತೂಹಲ ಮತ್ತು ಅಕ್ಕರೆ ಹೊಂದಿರುವವರು ಆಗಿರುತ್ತಾರೆ. ಆದರೆ ಅದರೊಂದಿಗೆ ಅವರು ಗೊಂದಲಮಯ ಮತ್ತು ಆತಂಕವುಳ್ಳವರು ಕೂಡ ಆಗಿರುತ್ತಾರೆ. ಜ್ಯೋತಿಷ್ಯದ ಪ್ರಕಾರ ಮಿಥುನ ಎಂದರೆ ಅವಳಿಗಳು ಎಂದು ಹಾಗು ಅವರಿಬ್ಬರಿಗೂ ವಿರುದ್ಧ ವ್ಯಕ್ತಿತ್ವಗಳು ಇವೆ ಎಂದು. ಹೀಗಾಗಿ ನಿಮ್ಮ ಮಗು ಯಾವ ಸಮಯದಲ್ಲಿ ಹೇಗೆ ವರ್ತಿಸುವುದು ಎಂದು, ಯಾವುದಕ್ಕೆ ಸಮಾಧಾನ ಪಟ್ಟುಕೊಳ್ಳುವುದು ಎಂದು ತಿಳಿಯುವುದು ತುಂಬಾ ಕಷ್ಟ. ಕೆಲವೊಮ್ಮೆ ಒಂದು ಹಾಡು ಗುನುಗಿದರೆ ಸುಮ್ಮನಾಗಬಹುದು, ಇನ್ನೂ ಕೆಲವೊಮ್ಮೆ ಎತ್ತಿಕೊಂಡು ಊರೆಲ್ಲಾ ತಿರುಗಿಸಿದರು ಅಳುತ್ತಲೇ ಇರಬಹುದು.

ಕಟಕ

ಕಟಕ ರಾಶಿಯವರು ಸ್ವಲ್ಪ ಅಳುಮುಂಜಿಗಳೇ. ನಾನು ಕೂಡ ಕಟಕ ರಾಶಿಯವಳಾಗಿ ಈ ವಿಷಯ ಗೊತ್ತು. ನಮಗೆ ಕಾರಣವಿಲ್ಲದೆಯೇ ಧಾರಾಳವಾಗಿ ಕಣ್ಣೀರು ಹರಿದು ಬರುತ್ತದೆ. ಆದರೆ ಈ ರಾಶಿಯವರು ತುಂಬಾನೇ ಮುದ್ದು ಮತ್ತು ಮುದ್ದು ಮಾಡಿಸಿಕೊಳ್ಳುವುದನ್ನ ಇಷ್ಟ ಪಡುವವರು. ಹೀಗಾಗಿ ನಿಮ್ಮ ಕಟಕ ರಾಶಿಯ ಮಗು ಅಳುತ್ತಿದ್ದರೆ, ಸ್ವಲ್ಪ ಮುದ್ದು ಮಾಡಿದರೆ ಸಾಕು.

ಸಿಂಹ

ಸಿಂಹ ಅಗ್ನಿಯ ರಾಶಿಯಾಗಿರುವುದರಿಂದ ಇವರಿಗೆ ತಮ್ಮನ್ನು ಯಾರಾದರೂ ಕಡೆಗಣಿಸುತ್ತಿದ್ದಾರೆ, ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರೆ ಸಹಿಸಲು ಆಗುವುದಿಲ್ಲ. ಇದು ನಿಮ್ಮ ಮಗು ಹಸಿದುಕೊಂಡಾಗ, ಸಿಟ್ಟಾದಾಗ ನಿಮಗೆ ತಿಳಿಯುತ್ತದೆ. ಜ್ಯೋತಿಷ್ಯದ ಪ್ರಕಾರ ಇವರು ತುಂಬಾ ಪ್ರೀತಿಸುವವರು ಆಗಿರುತ್ತಾರೆ, ಆದರೆ ಸ್ವಲ್ಪ ಅಹಂ ಹೆಚ್ಚಿಗೇನೇ ಇರುತ್ತದೆ. ಹೀಗಾಗಿ ನೀವು ಅವರ ಕಡೆ ಗಮನ ಕೊಡುವವರೆಗೂ ಅವರು ಅಳುತ್ತಲೇ ಇರುವರು.

ಕನ್ಯಾ

ಕನ್ಯಾ ರಾಶಿಯ ಮಕ್ಕಳು ನಾಚಿಕೆಯ ಸ್ವಭಾವದವರು ಆಗಿರುತ್ತಾರೆ ಮತ್ತು ಸಹಾಯ ಬೇಡಲು ಸಂಕೋಚ ಪಟ್ಟುಕೊಳ್ಳುವವರು ಆಗಿರುತ್ತಾರೆ. ಹೀಗಾಗಿ ಅವರು ಹೆಚ್ಚಾಗಿ ಅಳುವುದಿಲ್ಲ, ಅತ್ತರೂ ನಿಮಗೆ ಕೇಳಿಸುವುದಿಲ್ಲ. ಇವರು ಕ್ರಮಬದ್ಧವಾಗಿ ಹಾಗು ವಾಸ್ತವಿಕವಾಗಿ ಇರುವುದಕ್ಕೆ ತುಂಬಾ ಹೆಸರುವಾಸಿ. ನೀವು ಅವರನ್ನು ತಟ್ಟುವುದರಿಂದ, ತೂಗುವುದರಿಂದ ಅಥವಾ ಶ್ ಅನ್ನುವುದರಿಂದ ಸಮಾಧಾನ ಪಡಿಸಬಹುದು.

ತುಲಾ

ಜ್ಯೋತಿಷ್ಯದ ಪ್ರಕಾರ ತುಲಾ ರಾಶಿಯವರು ಅತಂತ್ರವಾಗಿರುತ್ತಾರೆ ಮತ್ತು ಒಬ್ಬರೇ ಇರುವುದನ್ನು ದ್ವೇಷಿಸುತ್ತಾರೆ. ಹೀಗಾಗಿ ಅವರಿಗೆ ಸಮಾಧಾನ ವ್ಯಕ್ತಪಡಿಸುವ ವಿಧಾನ ಒಂದು ದಿನ ಕೆಲಸ ಮಾಡಬಹುದು, ಮತ್ತೊಂದು ದಿನ ಮಾಡದೆ ಇರಬಹುದು. ಆದರೆ, ನೀವು ಅವರ ಕಣ್ಣ ಮುಂದೆ ಇರುವವರೆಗೂ, ಆರಾಮಾಗಿ ನಿಭಾಯಿಸಬಹುದು.

ವೃಶ್ಚಿಕ

ಇವರು ಭಾವೋದ್ರಿಕ್ತ, ಛಲವಾದಿ ಮತ್ತು ತಾಳ್ಮೆಯ  ವ್ಯಕ್ತಿಗಳಾಗಿರುತ್ತಾರೆ. ಇವರು ಹೆಚ್ಚಾಗಿ ಅಳುವುದಿಲ್ಲ, ಆದರೆ ಅವರಿಗೆ ಏನಾದರೂ ಇಷ್ಟ ಆದರೆ, ಅದನ್ನು ಪಡೆಯುವವರೆಗೆ ಅಳು ನಿಲ್ಲಿಸುವುದಿಲ್ಲ. ಇವರು ಸ್ಪರ್ಶವನ್ನು ಹೆಚ್ಚು ಇಷ್ಟ ಪಡುತ್ತಾರೆ ಹಾಗು ತಾಯಿಯ ಮಡಿಲಿನ ಬೆಚ್ಚನೆ ಭಾವ ವ್ಯಕ್ತಪಡಿಸುತ್ತಾರೆ. ಹೀಗಾಗಿ ಇವರು ಅಳಲು ಶುರು ಮಾಡಿದಾಗ ಅವರು ಕೇಳೀದ್ದನ್ನು ಕೊಡಿ ಅಥವಾ ಅವರನ್ನು ಎತ್ತಿಕೊಂಡು ಸಾಂತ್ವಾನ ಹೇಳಿ.

ಧನು

ಜ್ಯೋತಿಷ್ಯದ ಪ್ರಕಾರ ಧನು ರಾಶಿ ಅಲ್ಲಿ ಜನಿಸಿದ ಮಕ್ಕಳು ಸ್ವಲ್ಪ ಅಸಹನೆ ಮತ್ತು ಆತುರ ಉಳ್ಳವರಾಗಿರುತ್ತಾರೆ. ಆದರೆ ಇವರಿಗೆ ಹೊರಗಡೆ ಸುತ್ತುವುದೆಂದರೆ ಇಷ್ಟ. ಹೀಗಾಗಿ ಅವರು ಅಳಲು ಶುರು ಮಾಡಿದರೆ ಅವರನ್ನು ಹೊರಗಡೆ ಗಾಳಿಗೆ ಕರೆತಂದು ಸಾಂತ್ವಾನ ಮಾಡಿ.  

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon