Link copied!
Sign in / Sign up
4
Shares

ಮಗುವಿನ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ೫ ಮಾರ್ಗಗಳು

ನಿಮ್ಮ ಮಗು ತನ್ನ ಕಣ್ಣಿನ ದೃಷ್ಟಿಯಲ್ಲಿ ತೊಂದರೆಯನ್ನು ಅನುಭವಿಸಲು ಶುರುಮಾಡುತ್ತಿದ್ದು, ತಾತ್ಕಾಲಿಕ ಕನ್ನಡಕದ ಬದಲು ಶಾಶ್ವತವಾಗಿ ಕನ್ನಡಕ ಹಾಕುವಂತಹ ಪರಿಸ್ಥಿತಿಯು ಎದುರಾಗುವುದು ನಿಮ್ಮನ್ನು ಚಿಂತೆಗೀಡಾಗುವಂತೆ ಮಾಡುತ್ತದೆ. ಆದರೆ ಅದರ ಬಗ್ಗೆ ಚಿಂತೆ ಮಾಡದೆ ಈ ಲೇಖನವನ್ನು ಓದಿ. ಕೆಲವು ಮಾರ್ಗಗಳಿಂದ ನಿಮ್ಮ ಮಗುವಿನ ಕಣ್ಣು ದುರ್ಬಲವಾಗುವುದನ್ನು ತಪ್ಪಿಸಬಹುದು.

ನಿಮ್ಮ ಮಗುವಿನ ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಕೆಲವು ಸರಳ ಮತ್ತು ಪರಿಣಾಮಕಾರಿ ಸಲಹೆಗಳು

೧.ವ್ಯಾಯಾಮಗಳು

#

ದೃಷ್ಟಿ ಸುಧಾರಿಸಲು ಎಲ್ಲರು ಮಾಡಬಹುದಾದ ಕೆಲವು ಸರಳ ವ್ಯಾಯಾಮಗಳು ಇವೆ. ನಿಮ್ಮ ಮಗು ಅವರ ಕಣ್ಣನ್ನು ತಿರುಗಿಸುವ ಮೂಲಕ(ಅವರ ಕಣ್ಣುಗುಡ್ಡೆಯನ್ನು ವೃತ್ತಾಕಾರದಲ್ಲಿ, ಆಕಡೆ ಈಕಡೆ ತಿರುಗಿಸುವುದು). ಮಗುವು ಅದನ್ನು ಪ್ರದಕ್ಷಿಣವಾಗಿ ಮತ್ತು ಅಪ್ರದಕ್ಷಿಣ ಎರಡು ದಿಕ್ಕಿನಲ್ಲಿ ಮಾಡಬೇಕಾಗಿದೆ.

ಕಣ್ಣಿನ ರೆಪ್ಪೆ ಬಡಿಯುದನ್ನು ೨೦-೩೦ಬಾರಿಗೆ ಹೆಚ್ಚಿಸುವುದು, ಅದರಲ್ಲೂ ವಿಶೇಷವಾಗಿ ಟಿವಿ ಅಥವಾ ಗಣಕಯಂತ್ರಗಳನ್ನು ಮಗುವು ವೀಕ್ಷಿಸುವಾಗ ಕಣ್ಣಿನ ರೆಪ್ಪೆ ಮಿಟುಕಿಸುವುದನ್ನು ಹೆಚ್ಚಿಸುವುದು ಕಣ್ಣಿನಲ್ಲಿ ತೇವಾಂಶವನ್ನು ಕಾಪಾಡುವುದರ ಮೂಲಕ ಕಣ್ಣಿನ ಉರಿ ಮತ್ತು ದೃಷ್ಟಿ ದುರ್ಬಲಗೊಳ್ಳುವುದನ್ನು ತಡೆಯಬಹುದು.

ಅವರ ಕಣ್ಣುಗಳನ್ನು ಬೇರೆ ವಸ್ತುಗಳ ಕಡೆ ತಿರುಗಿಸುವಂತೆ ಮಾಡಿ, ಅದು ವಿಭಿನ್ನ ದೂರದಲ್ಲಿದ್ದರೆ ಒಳ್ಳೆಯದು.

ಇದರ ಜೊತೆಗೆ ನೆನಪಿನ ಶಕ್ತಿ ಹೆಚ್ಚಿಸುವ ಆಟಗಳಾದ, ಹಲವು ಚಿತ್ರಗಳನ್ನು ಇಟ್ಟು ಅದನ್ನು ಗಮನಿಸಿ ನಂತರ ಅವುಗಳನ್ನು ನೋಡದೇ ಅಲ್ಲಿರುವ ಚಿತ್ರಗಳ ಹೆಸರುಗಳನ್ನು ಹೇಳುವುದು. ಇದು ಮಗುವಿನಲ್ಲಿ ಬುದ್ದಿ ಶಕ್ತಿಯನ್ನು ಹೆಚ್ಚಿಸುತ್ತದೆ.

೨.ಆಹಾರಗಳು

ದೃಷ್ಟಿ ಸುಧಾರಣೆಗೆ ಬಂದಾಗ ಸರಿಯಾದ ರೀತಿಯ ಆಹಾರವನ್ನು ತಿನ್ನುವುದು ದೀರ್ಘಕಾಲದವರೆಗೆ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯವಾಗುವುದು. ಪಾಲಕ್ ಸೊಪ್ಪು, ಕೋಸುಗಡ್ಡೆ ಮತ್ತು ನುಗ್ಗೆಸೊಪ್ಪಿನಂತಹ ಹಸಿರು ಪದಾರ್ಥಗಳು, ಕ್ಯಾಲ್ಸಿಯಂ ಮತ್ತು ವಿಟಮಿನ್ ಎ, ಬಿ ಮತ್ತು ಸಿ 12 ನೊಂದಿಗೆ ಸಮೃದ್ಧವಾಗಿದ್ದು ಕಣ್ಣಿನ ದೃಷ್ಟಿ ಹೆಚ್ಚಿಸಲು ಇವುಗಳ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ.

ತರಕಾರಿಗಳಾದ ಕ್ಯಾರೆಟ್, ದಪ್ಪಮೆಣಸಿನಕಾಯಿ, ಮೊಟ್ಟೆ ಮತ್ತು ಒಣ ಬೀಜಗಳಾದ, ಬಾದಾಮಿ, ಗೋಡಂಬಿ ಕೂಡ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೀನುಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಅವು ರೆಟಿನಾಕ್ಕೆ ಅನುಕೂಲಕರವಾಗಿವೆ.

೩.ಹೊರಾಂಗಣದಲ್ಲಿ ಕಾಲ ಕಳೆಯಿರಿ

ನಿಮ್ಮ ಮಕ್ಕಳು ಮನೆಯಲ್ಲಿದ್ದರೆ, ಇಲ್ಲ ಟಿವಿ ಅಥವಾ ಗಣಕಯಂತ್ರವನ್ನು ನೋಡುತ್ತಾರೆ, ಇಲ್ಲ ಮೊಬೈಲ್ ಫೋನ್ ನಲ್ಲಿ ಆಟವನ್ನು ಆಡುತ್ತಾರೆ. ಈ ಚಟುವಟಿಕೆಗಳು ಕಣ್ಣಿಗೆ ಹೆಚ್ಚಿನ ಆಯಾಸವನ್ನು ಉಂಟುಮಾಡುತ್ತವೆ. ಮತ್ತು ಕಣ್ಣಿನ ದೃಷ್ಟಿಯನ್ನು ದುರ್ಬಲಗೊಳಿಸುತ್ತದೆ. ಪ್ರತಿ ದಿನ ನಿಮ್ಮ ಮಗುವನ್ನು ಹಸಿರು ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಿ. ನೈಸರ್ಗಿಕ ಬೆಳಕು ಮತ್ತು ಹಸಿರು ಕಣ್ಣುಗಳಿಗೆ ಅದ್ಭುತಗಳನ್ನು ಮಾಡುತ್ತದೆ ಮತ್ತು ಸಮೀಪ/ಹತ್ತಿರ ದೃಷ್ಟಿ ದೋಷವನ್ನು ಕಡಿಮೆ ಮಾಡುತ್ತದೆ.

೪.ಕನ್ನಡಕವನ್ನು ತೆಗೆಯಿರಿ

ನಿಮ್ಮ ಮಗುವು ವೈದ್ಯರ ಸಲಹೆ ಮೇರೆಗೆ ಕನ್ನಡಕವನ್ನು ಬಳಸುತ್ತಿದ್ದರೆ, ದಿನದಲ್ಲಿ ಕೆಲವು ಸಮಯ ಅದನ್ನು ತೆಗೆದು ಇಡಲು ಹೇಳಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ, ನಿಮ್ಮ ಮಗುವು ಕನ್ನಡಕದ ಒಂದು ಭಾಗವನ್ನು ನಿರ್ಧಿಷ್ಟವಾಗಿ ನೋಡುತ್ತಿರಬೇಕು ಇದರಿಂದ ಕಣ್ಣಿನ ದುರ್ಬಲವನ್ನು ಕಡಿಮೆ ಮಾಡಲು ಕಷ್ಟವಾಗುತ್ತದೆ.

೫.ಪರೀಕ್ಷೆ

ನಿಮ್ಮ ಮಗುವಿನ ಕಣ್ಣಿನಲ್ಲಿ ಯಾವುದೇ ದೃಷ್ಟಿ ದೋಷ ಇಲ್ಲದಿದ್ದರೂ, ಆಗಾಗ್ಗೆ, ಮಗುವಿನ ಕಣ್ಣನ್ನು ಪರೀಕ್ಷೆ ಮಾಡಿಸಿ. ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಶಾಲೆಗಳಲ್ಲಿ ಕಡ್ಡಾಯ ಕಣ್ಣಿನ ಪರಿಶೀಲನೆ ಶಿಬಿರಗಳನ್ನು ಮಾಡುತ್ತಿದ್ದಾರೆ.

ನಿಮ್ಮ ಮಗುವು ಕನ್ನಡಕವನ್ನು ಬಳಸುತ್ತಿದ್ದರು ಈ ಮೇಲಿನ ಸಲಹೆಯನ್ನು ಪಾಲಿಸಿ ಅವನ/ಳ ದೃಷ್ಟಿ ದೋಷವನ್ನು ಕಡಿಮೆ ಮಾಡಬಹಹುದು. ಮತ್ತು ಅವನು/ಳು ಕನ್ನಡಕ ಹಾಕದೆ ಇರುವ ಮಟ್ಟಿಗೆ ಗುಣ ಹೊಂದಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon