Link copied!
Sign in / Sign up
34
Shares

ಮಗುವಿನ ಜ್ವರ : ನಿಮಗೆ ತಿಳಿದಿರುವುದೆಷ್ಟು? ಏನು ಮಾಡಬೇಕು?

        ನಡೆದಾಡಲು ಶುರುಮಾಡಿದ ಮಕ್ಕಳನ್ನು ಸಂಭಾಳಿಸುವುದೊಂದು ಸವಾಲೇ ಸರಿ..! ಅದರಲ್ಲೂ ಈ ಪ್ರಾಯದ ಮಕ್ಕಳು ಖಾಯಿಲೆ ಬಿದ್ದರಂತೂ ತಂದೆ ತಾಯಿಗಳ ಪಾಲಿಗೆ ಅದೊಂದು ದು:ಸ್ವಪ್ನವೇ ಹೌದು. ಮಗುವು ಜ್ವರದಿಂದ ಬಳಲುತ್ತಿದೆಯೆಂದು ನಡುರಾತ್ರಿಯಲ್ಲಿ ಮನಗಂಡ ಪಾಲಕರ ಕತೆಯಂತೂ ಆ ದೇವರಿಗೇ ಪ್ರೀತಿ. ಇಂತಹ ಸಂದರ್ಭಗಳಲ್ಲಿ ಧೃತಿಗೆಡದೇ, ಧೈರ್ಯವಾಗಿದ್ದು, ಮನಸ್ಸನ್ನು ಸ್ಥಿಮಿತದಲ್ಲಿಡಬೇಕು. 

ಜ್ವರವೆಂದರೇನು ? ಜ್ವರ ಬರುವುವುದು ಹೇಗೆ ? ಬಂದರೇನು ಮಾಡಬೇಕು ?- ಇವೇ ಮೊದಲಾದ ಪ್ರಶ್ನೆಗಳಿಗೆ, ವೈದ್ಯರ ಶಿಫಾರಸ್ಸಿನ ಮೇರೆಗೆ ತಯಾರಿಸಲಾದ ಮುಂಜಾಗರೂಕತಾ ಕ್ರಮಗಳನ್ನು  ಕೆಳಗೆ ನೀಡಲಾಗಿದೆ. 

೧.ಜ್ವರವೆಂದರೇನು ? 

 ಸಾಮಾನ್ಯ ಶರೀರದ ಉಷ್ಣತೆಗಿಂತ, ಮಗುವಿನ ಶರೀರ ತಾಪವು ಹೆಚ್ಚಾಗಿದ್ದರೆ, ಅದು ಜ್ವರವಾಗಿರಬಹುದು. ಜ್ವರವೆನ್ನುವುದು ಖಂಡಿತಾ ರೋಗವಲ್ಲ. ಆದರೆ, ರೋಗಲಕ್ಷಣವಾಗಿರಬಹುದು. ಶರೀರಕ್ಕೆ ತಗುಲಿದ ಯಾವುದಾದರೂ ಸೋಂಕಿಗೆದುರಾಗಿ ಹೋರಾಡುವ ಫಲವಾಗಿ ಶರೀರವು ಕಾವೇರುವುದು. ಮಗುವುನ ಶರೀರ ತಾಪಮಾನವನ್ನು ಪರೀಕ್ಷಿಸುವುದರಿಂದ ಮಗುವು ಜ್ವರ ಪೀಡಿತವಾಗಿದೆಯೇ ಎಂದು ಪರೀಕ್ಷಿಸಬಹುದು. 

೨. ಇದು ಜ್ವರವೆಂದೇ ನಾನು ಹೇಗೆ ಖಚಿತಪಡಿಸಿಕೊಳ್ಳಲಿ ? 

ವೈದ್ಯರ ಪ್ರಕಾರ ಮಕ್ಕಳ ಶರೀರದ ಸರಾಸರಿ ಉಷ್ಣಾಂಶವು 36 ಅಥವಾ 38ಡಿಗ್ರಿ ಸೆಲಿಷಿಯಸ್. ಎಂದರೆ, 97 ರಿಂದ 100.3 ಫೆಹೆರನ್ ಹೀಟುಗಳು. 100.4 ಫೆಹೆರನ್ನುಗಳಿಗಿಂತ ಅಧಿಕ ಉಷ್ಣತೆಯಿದ್ದರೆ, ಮಗುವು ಜ್ವರ ಪೀಡಿತವಾಗಿದೆಯೆಂದರ್ಥ..!  ಶರೀರದ ಉಷ್ಣತೆ ಹೆಚ್ಚಾದೊಡನೆಯೇ ಅದು ಜ್ವರವೆಂದು ಭಯಪಡಬೇಕಾದ್ದಿಲ್ಲ. ಕೆಲವೊಮ್ಮೆ ಹವಾಮಾನಕ್ಕನುಗುಣವಾಗಿಯೂ ಶರೀರದ ತಾಪಮಾದಲ್ಲಿ ಏರಿಳಿತವಾಗುವುದುಂಟು. ಮಧ್ಯಾಹ್ನದ ಸಮಯ ಮತ್ತು ಸಂಧ್ಯಾವೇಳೆಗಳಲ್ಲಿಗಲ್ಲಿ ಶರೀರವು ತಂಪಾಗಿದ್ದರೆ, ಮಧ್ಯರಾತ್ರಿಯಿಂದ ಮುಂಜಾನೆಯವರೆಗಿನ ಸಮಯಗಳಲ್ಲಿ ಶರೀರದ ಕಾವೇರುವುದು. ಆದರೆ, ಮಗುವಿನ ಚಟುವಟಿಕೆಗಳತ್ತ ನಿಗಾವಹಿಸುವುದರಿಂದ, ಮಗುವು ಆಯಾಸ ಹಾಗೂ ಕ್ಷೀಣಿತನಾಗಿ ತೋರಿದರೆ, ಮಗುವು ಜ್ವರಪೀಡಿತವಾಗಿದೆ ಎಂದು ಕಂಡುಹಿಡಿಯಬಹುದು.  

೩. ಮಗುವಿನ ಶರೀರೋಷ್ಣವನ್ನು ಅಳೆಯುವುದು ಹೇಗೆ ? 

 ಗುಧದ್ವಾರ, ಟೆಂಪೋರಲ್ ಆರ್ಟರಿ(ಕುತ್ತಿಗೆಯ ಭಾಗಗಳಲ್ಲಿ ಕಂಡುಬರುವ ರಕ್ತನಾಳಗಳು) ಕಂಕುಳಗಳು ಹಾಗೂ ಕಿವಿಯ ಭಾಗಗಳನ್ನು ಪರೀಕ್ಷಿಸುವುದರಿಂದ ಬಹಳ ಬೇಗನೇ ಶರೀರದ ತಾಪಮಾನವನ್ನು ಅಳೆಯಬಹುದು. ಮಗುವಿನ ಶರೀರ ತಾಪಮಾನವನ್ನು ಅಳೆಯಲು ಡಿಜಿಟಲ್ ಥರ್ಮೋಮೀಟರನ್ನು ಕೂಡಾ ಬಳಸಬಹುದು. ಇದು ಸುರಕ್ಷಿತವೆಂದು ಮಾತ್ರವಲ್ಲ, ಪ್ರಮಾದವಶಾತ್ ಒಡೆದುಹೋದರೂ ಯಾವುದೇ ಹಾನಿಯಾಗುವುದಿಲ್ಲ. 

೪. ಮಗುವಿಗೆ ಯಾವ ರೀತಿಯ ಜ್ವರ ಬಾಧಿಸಬಹುದು ? 

ಕೇವಲ ಶಾರೀರಿಕ ಪರಿಶೋಧನೆಗಳಿಂದ ಮಾತ್ರ ಮಗುವಿಗೆ ಯಾವ ರೀತಿಯ ಸೋಂಕು ಜ್ವರ ಬಾಧಿಸಿದೆಯೆಂದು ತಿಳಿಯಲಾಗದು. ವೈರಸ್ ಗಳಿಂದ ಅಥವಾ ಬಾಕ್ಟೀರಿಯಾಗಳಿಂದ ಜ್ವರ ತಗುಲಬಹುದು.       

ವೈರಸ್ ಗಳಿಂದ ಹರಡುವ ರೋಗಗಳಾದ ಫ್ಲೂ, ಶೀತ ಅಥವಾ ಜೀರ್ಣಾಂಗವ್ಯೂಹ ಸಂಬಂಧಿತ ವ್ಯಾಧಿಗಳಿಗೆದುರಾಗಿ ಹೋರಾಡುವಾಗ ವೈರಸ್ ಜ್ವರದ ಲಕ್ಷಣಗಳು ಕಾಣಲ್ಪಡುತ್ತದೆ.  

ಬ್ಯಾಕ್ಟೀರಿಯಾಗಳಿಂದ ಹರಡುವ ರೋಗಗಳಾದ ಯುರಿನರಿ ಟ್ರಾಕ್ಟ್ ಇನ್ಫೆಕ್ಷನ್(ಮೂತ್ರನಾಳ ಸಂಬಂಧಿತ ರೋಗಗಳು) ಕಿವಿಗೆ ಸಂಬಂಧಿತ ಸೋಂಕುಗಳು, ಬಾಕ್ಟೀರಿಯಲ್ ಮೆನೆಂಜೈಟಿಸ್ ಅಥವಾ ಬಾಕ್ಟೀರಿಯಲ್ ನ್ಯುಮೋನಿಯಾಗಳಿಗೆದುರಾಗಿ ಹೋರಾಡುವಾಗ ಬಾಕ್ಟೀರಿಯಾ ಜ್ವರವುಂಟಾಗುತ್ತದೆ. 

ವೈರಸ್ ನಿಂದ ಹರಡುವ ಜ್ವರಗಳಿಗಿಂತ ಬಾಕ್ಟೀರಿಯಾ ಸಂಬಂಧಿತ ಸೋಂಕು ರೋಗಗಳಿಗೆ ಹೆಚ್ಚು ಗಮನವನ್ನೀಯಬೇಕಾಗುತ್ತದೆ. ಯಾಕೆಂದರೆ, ಸರಿಯಾಗಿ ಸುಶ್ರೂಷಿಸಲ್ಪಡದಿದ್ದರೆ ಬಾಕ್ಟೀರೊಯಾ ಜ್ವರಗಳು ಪ್ರಾಣಾಪಾಯಕ್ಕೂ ಕಾರಣಗಳಾಗುತ್ತವೆ. ಮಗುವಿನ ರಕ್ಷಣಾಪೊರೆಯು ಬಹಳ ತೆಳುವಾಗಿರುವುದು ಮಾತ್ರವಲ್ಲದೇ, ಮಕ್ಕಳಿಗೆ ತಗಲುವ ತೀಕ್ಷ್ಣವಾದ ರೋಗಗಳನ್ನು ಅವುಗಳ ಲಕ್ಷಣಗಳಿಂದ  ಕಂಡುಹಿಡಿಯಲು ಸುಲಭ ಸಾಧ್ಯವಾಗಲಾರದು. ಆದಕಾರಣ ಮಗುವು ೩ ತಿಂಗಳುಗಳಿಗಿಂತ ಚಿಕ್ಕದಾಗಿದ್ದರೆ, ಖಂಡಿತಾ ಅಲಕ್ಷ್ಯ ಮಾಡದೇ ಮಗುವನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕಾಗುವುದು. 

 ೫. ಮಗುವಿಗೆ ಜ್ವರ ಬಂದರೇನು ಮಾಡಬೇಕು ? 

 ‘ಜ್ವರ’-ಎನ್ನುವುದು ಶರೀರವು ತನ್ನನ್ನು ಆಕ್ರಮಿಸಿದ ವೈರಿಗಳೊಂದಿಗೆ ಹೋರಾಡುವಾಗ ಕಾಣಿಸಿಕೊಳ್ಳುವ ಪ್ರಕಿೃಯೆ ಎನ್ನುವುದನ್ನು ನಾವು ಮೊದಲು ಅರಿತಿರಬೇಕು. ಆದಕಾರಣ ಜ್ವರ ಬಂದರೆ, ಆತಂಕಕ್ಕೊಳಗಾಗದೇ ಮಗುವು ರೋಗ ಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡಿದೆಯೆಂದು ಮನಗಾಣಬೇಕು. ಜ್ವರ ಬಂದಾಗ ರೋಗ ಪ್ರತಿರೋಧಕ ಶಕ್ತಿಗಳು ಹೆಚ್ಚು ಸಕ್ರಿಯವಾಗಿರುತ್ತದೆ.  

 ಜ್ವರದ ತಾಪ ಜಾಸ್ತಿಯಾದಷ್ಟೂ ಮಗುವಿನ ಅಸೌಖ್ಯವೂ ಹೆಚ್ಚಿರುವುದೆಂದು ಕೆಲವು ಪಾಲಕರು ಸುಮ್ಮನೇ ಆತಂಕಕ್ಕೊಳಗಾಗುತ್ತಾರೆ. ಕೆಲವೊಮ್ಮೆ 101 ಡಿಗ್ರಿ ಸೆಲಿಷಿಯಸ್ ತಾಪವನ್ನು ಹೊಂದಿರುವ ಮಗುವು ನಿಶ್ಯಕ್ತಿ ಹಾಗೂ ಆಯಾಸದಿಂದ ಬಳಲಿದರೆ 103 ಡಿಗ್ರಿ ಉಷ್ಣಾಂಶವನ್ನು ತೋರಿಸಿದ ಮಗುವು ಲವಲವಿಕೆಯಿಂದ ಕುಣಿಯುತ್ತಿರುವುದನ್ನು ಕಾಣಬಹುದು. 

ಜ್ವರದ ತಾಪದಿಂದ ಬಳಲುತ್ತಿರುವ ಮಗುವನ್ನು ಶುಭ್ರ ಹಾಗೂ ಆಹ್ಲಾದಕರ ವಾತಾವರಣದಲ್ಲಿ ಕಳೆಯುವಂತೆ ಮಾಡುವುದು ಅತೀ ಅಗತ್ಯ. ಮಗುವಿಗೆ ಸ್ಪೋಂಜ್ ಬಾತ್ ಮಾಡಿಸುವುದರಿಂದ ಶರೀರದ ಉಷ್ಣತೆಯನ್ನು ಕಡಿಮೆಗೊಳಿಸಬಹುದು.  ಹತ್ತಿ ಬಟ್ಟೆಯೊಂದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ, ಅದರಿಂದ ಹಣೆ ಹಾಗೂ ಕಂಕುಳನ್ನು ಉಜ್ಜುವುದರಿಂದ ಶರೀರೋಷ್ಣಾಂಶವನ್ನು 8೦ ಡಿಗ್ರಿಗೆ ಇಳಿಸಬಹುದು.  ಜ್ವರದ ಕಾವಿನಿಂದ ಬಳಲುತ್ತಿರುವ ಮಗುವು ನಿರ್ಜಲೀಕರಣಕ್ಕೊಳಗಾಗದಂತೆ ಆಗಾಗ ಎದೆ ಹಾಲು ಅಥವಾ ನೀರನ್ನು ನೀಡುತ್ತಿರಬೇಕು. ತೆಳ್ಳಗಿನ ಬಟ್ಟೆಯನ್ನು ಮಗುವಿಗೆ ತೊಡಿಸಿ ಆಹ್ಲಾದಕರ ವಾತಾವರಣವನ್ನು ನಿರ್ಮಿಸಬೇಕು.  ಇಷ್ಟೆಲ್ಲಾ ಮಾಡಿದ ಬಳಿಕವೂ ಮಗುವು ಕಸಿವಿಸಿಯನ್ನು ಅನುಭವಿಸುತ್ತಿದ್ದರೆ, ಔಷಧಗಳನ್ನು ನೀಡಬಹುದು. ವೈದ್ಯರ ಅನುಮತಿಯಿಲ್ಲದೆ, ೩ ತಿಂಗಳಿಗಿಂತ ಕಡಿಮೆ ಪ್ರಾಯದ ಮಗುವಿಗೆ ಮಾತ್ರೆಗಳನ್ನು ನೀಡದಿರಿ.  

ಇಬುಪ್ರೋಫಿನ್ ಮತ್ತು ಅಸಿಟಾಮಿನೋಫಿನ್ ಎಂಬ ಮಾತ್ರೆಗಳನ್ನು ೬ ತಿಂಗಳುಗಳು ಪ್ರಾಯವಾದ ಮಕ್ಕಳಿಗೆ ನೀಡುವುದು ಅವರು ಅನುಭವಿಸುವ ಅಸ್ವಸ್ಥತೆಗಳಿಗೆ ಪರಿಹಾರವಾಗಬಹುದು. ಆದರೂ, ವೈದ್ಯರ ಸಲಹೆಯಿಲ್ಲದೇ ಸ್ವಯಂವೈದ್ಯ ಮಾಡಬೇಡಿ. 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon