Link copied!
Sign in / Sign up
2
Shares

ಮಗುವಿನ ಜೊತೆ ಪ್ರಯಾಣ ಸುಲಭವಾಗಿಸಲು ಕೆಲವು ಸರಳ ಮಾರ್ಗಗಳು

ಪೋಷಕರು ಆಗಾಗ್ಗೆ, ತಮ್ಮ ಮಗುವಿನೊಂದಿಗೆ ಪ್ರಯಾಣಿಸುವುದನ್ನು ಆನಂದಿಸುತ್ತಾರೆ. ಆದರೆ ಮಗುವಿನೊಂದಿಗೆ ಪ್ರಯಾಣ ಮಾಡುವುದು ಮಕ್ಕಳ ಆಟವಲ್ಲ. ಮನಸ್ಥಿತಿ ಬದಲಾಗುವುದರಿಂದ, ಮಗುವು ಅಳುವುದರ ತನಕ ಹಲವು ಏರುಪೇರುಗಳನ್ನು ನೋಡಬೇಕಾದಿತು, ಆ ಪ್ರಯಾಣ ನಿಮಗೂ ಮತ್ತು ನಿಮ್ಮ ಮಗುವಿಗೂ ದುಃಸ್ವಪ್ನವಾಗಬಹುದು. ತುಂಬಾ ಸಂದರ್ಭಗಳಲ್ಲಿ ಸರಿಯಾದ ಪೂರ್ವ ನಿಯೋಜನೆ ಇಲ್ಲದಿರುವುದು ಇದಕ್ಕೆ ಕಾರಣ. ನಿಮ್ಮ ಮಗುವನ್ನು ನೀವು ಚೆನ್ನಾಗಿ ಅರಿತುಕೊಂಡಿರುವಿರಿ, ಅದರ ಆರಾಮದಾಯಕ ಸ್ಥಿತಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ.

ಪ್ರವಾಸವು ಒತ್ತಡ-ಮುಕ್ತ ಮತ್ತು ಸ್ಮರಣೀಯವಾಗುವಂತೆ ಪ್ರಯಾಣವನ್ನು ಯೋಜಿಸಿ.

೧. ಸರಿಯಾದ ಪೂರ್ವ ಯೋಜನೆಯುಳ್ಳ ಪ್ರವಾಸ

ಕೊನೆಯ ಕ್ಷಣದಲ್ಲಿ ನಿರ್ಧಾರವಾದ ಪ್ರವಾಸದಿಂದ ಒತ್ತಡ ಅಥವಾ ಅಸ್ತವ್ಯಸ್ತವಾಗಬಹುದು. ನಿಮ್ಮ ಜೊತೆ ಮಗುವಿರಲು ಸಾಧ್ಯವಾದಷ್ಟು ಅಚ್ಚರಿಯ ಪ್ರಯಾಣಗಳನ್ನು ತಪ್ಪಿಸಿ. ನೀವು ರಜೆಯಲ್ಲಿ ಪ್ರವಾಸಕ್ಕೆ ಯೋಜಿಸುತ್ತಿದ್ದರೆ, ಮುಂಚೆಯೇ ಅದರ ಬಗ್ಗೆ ಯೋಜನೆಯನ್ನು ರೂಪಿಸಿಕೊಳ್ಳಿ. ನೀವು ಪ್ರಯಾಣ ಆರಂಭಿಸುವ ಮೊದಲು ನಿಮ್ಮ ಮಗುವು ತನ್ನ ನಿದ್ರೆಯನ್ನು ಸಂಪೂರ್ಣವಾಗಿ ಪುರೈಸಿಕೊಂಡಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಮಗುವಿಗೆ ಅರ್ಧ ನಿದ್ರೆಯಾದರೆ ನಿಮ್ಮ ಪ್ರವಾಸವನ್ನು ಆನಂದಿಸಲು ಬಿಡುವುದಿಲ್ಲ.

೨. ಆಯಾಸದ ಮತ್ತು ದೂರದ ಪ್ರಯಾಣವನ್ನು ತಡೆಯಿರಿ

ನಿಮ್ಮ ಮಗು ಇನ್ನೂ ಸಣ್ಣವನು ಆದ್ದರಿಂದ ದೂರದ ಪ್ರಯಾಣಕ್ಕೆ, ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದು, ಮತ್ತು ಚಲಿಸುತ್ತಿರುವುದು ಮಗುವಿಗೆ ಕಿರಿಕಿರಿ ಅಥವಾ ಬೇಸರವೆನಿಸಬಹುದು. ಸಣ್ಣ ಪ್ರಯಾಣವನ್ನು ಯೋಜಿಸಿ, ಅದರಿಂದ ನಿಮಗೆ ಮತ್ತು ಮಗು ಇಬ್ಬರಿಗೂ ಒತ್ತಡದಿಂದ ಪರಿಹಾರ ಸಿಗುತ್ತದೆ. ಮನಸ್ಸಿಗೆ ಖುಷಿ ನೀಡುತ್ತದೆ. ಗಾಳಿಯಲ್ಲಿ ಪ್ರಯಾಣಿಸಲು ಚಿಂತಿಸಿದ್ದರೆ, ಕಡಿಮೆ ಸಮಯದಲ್ಲಿ ನಿಮ್ಮ ಜಾಗವನ್ನು ತಲುಪುವಂತೆ ಯೋಜಿಸಿಕೊಳ್ಳಿ.

೩. ಸಂದರ್ಭಕ್ಕಿಂತ ಹೆಚ್ಚಾಗಿ ಋತುವಿನ ಪ್ರಕಾರ ನಿಮ್ಮ ಮಗುವಿಗೆ ಉಡುಪು ಧರಿಸಿ

ನಿಮ್ಮ ಮಗುವಿಗೆ ಹೆಚ್ಚು ಅನುಕ್ರಮವಾಗಿ ಅಥವಾ ಕಸೂತಿ ಮಾಡಿರುವ ಬಟ್ಟೆ ಬಳಸುವುದನ್ನು ತಪ್ಪಿಸಿ. ದೇಹಕ್ಕೆ ಬಿಗಿಯಾದ ಅಥವಾ ಹೆಚ್ಚು ಜಿಪ್ ಗಳು ಇರುವ ಬಟ್ಟೆಯನ್ನು ಹಾಕದಿರಿ. ಮಗುವಿಗೆ ಸ್ಟೈಲ್(ಶೈಲಿ) ಮಾಡುವುದಕ್ಕಿಂತ ಆರಾಮದಾಯಕವಾಗಿರುವುದನ್ನು ಬಯಸುತ್ತದೆ. ಆರಾಮದಾಯಕವಾಗಿರುವ ಮಗುವು ಬೇಗ ಒತ್ತಡಕ್ಕೆ ಒಳಗಾಗುವುದಿಲ್ಲ.

೪. ನಿಮ್ಮ ಮಗುವು ಆಟಿಕೆಯಲ್ಲ

ಕೆಲವು ಜನರು ಮಕ್ಕಳ ಕೆನ್ನೆ ಗಿಂಡುವುದು, ಸುಮ್ಮನೆ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವಂತಹ ಕೆಟ್ಟ ಅಭ್ಯಾಸವನ್ನು ರೂಡಿಸಿಕೊಂಡಿರುತ್ತಾರೆ. ಅಂತಹವರಿಂದ ನಿಮ್ಮ ಮಗುವನ್ನು ದೂರವಿರಿಸಿ. ನಿಮ್ಮ ಮಗುವಿಗೆ ಕಿರಿಕಿರಿ ಮಾಡುವವರನ್ನು ಪ್ರೋತ್ಸಾಹಿಸದಿರಿ. ನಿಮ್ಮ ಮಗುವನ್ನು ಆದಷ್ಟು ನಿಮ್ಮ ಬಳಿಯಲ್ಲೇ ಇರಿಸಿಕೊಳ್ಳಿ. ಅಥವಾ ಮಗು ಯಾರ ಬಳಿ ಹೆಚ್ಚು ಖುಷಿಯಿಂದ ಇರುತ್ತದೆ ಅವರ ಬಳಿ ಇರಿಸಿ.

೫. ಮಕ್ಕಳು ತಮ್ಮ ಪೋಷಕರ ಇರುವಿಕೆಯನ್ನು ಆನಂದಿಸುತ್ತವೆ

ನಿಮ್ಮ ಮಗುವು ನಿಮ್ಮನ್ನು ಹೆಚ್ಚು ಪ್ರೀತಿಸುತ್ತದೆ, ಮತ್ತು ನಿಮ್ಮ ಬಳಿ ಇರುವಾಗ ಹೆಚ್ಚು ಸುರಕ್ಷಿತವಾಗಿರುತ್ತದೆ. ಕೆಲವು ಮಕ್ಕಳು ಪ್ರಯಾಣಿಸುವಾಗ ನಿಮ್ಮ ಇರುವುಕೆಯನ್ನು ಬಯಸಿ ಅಳಲು ಶುರುಮಾಡುತ್ತವೆ. ಇಂತಹ ಸಂದರ್ಭಗಳು ಬರದಂತೆ ನೋಡಿಕೊಳ್ಳಿ. ಅವರ ಜೊತೆ ಆಟವಾಡಿ, ಮತ್ತು ಅವರನ್ನು ಮುದ್ದಿಸಿ. ಯಾವಾಗಲು ನಿಮ್ಮ ಮಗುವಿನ ಜೊತೆಯಿರಿ, ಇದರಿಂದ ಮಗುವಿನ ಮನಸ್ಥಿತಿ ಬದಲಾಗುವುದಿಲ್ಲ.

೬. ಪ್ರಯಾಣದಿಂದ ಮಗುವಿನ ಚಟುವಟಿಕೆಗಳಿಗೆ ಮತ್ತು ಆಹಾರಕ್ಕೆ ಯಾವುದೇ ತೊಂದರೆಯಾಗಬಾರದು

ನೀವು ಎಲ್ಲಾದರೂ ಇರಿ, ಆದರೆ ನಿಮ್ಮ ಮಗುವಿನ ಸರಿಯಾದ ಆಹಾರದ ಸಮಯಕ್ಕೆ ಆಹಾರವನ್ನು ನೀಡಿ. ಅವರಿಗೆ ಇಷ್ಟವಾದ ಆಹಾರವನ್ನು ಕೊಡಿ. ಇದನ್ನು ನೀಡುವುದರಿಂದ ಮಗುವು ಖುಷಿಯಾಗಿರುತ್ತದೆ. ಉತ್ಸಾಹದಲ್ಲಿ ಮಗುವಿಗೆ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ನೀಡಬೇಡಿ.

೭. ಪ್ರಯಾಣಿಸುವಾಗ ನಿಮ್ಮ ಮಗುವಿನ ನೈರ್ಮಲ್ಯತೆ ಬಗ್ಗೆ ಕಾಳಜಿವಹಿಸಿ

ನಿಮ್ಮ ಮಗುವಿನ ಬಟ್ಟೆ ಒದ್ದೆಯಾಗದಂತೆ ನೋಡಿಕೊಳ್ಳಿ., ಆಗಾಗ ನಿಮ್ಮ ಮಗುವಿನ ಬಟ್ಟೆಯನ್ನು ನೋಡಿ ಒದ್ದೆಯಾಗಿದ್ದರೆ ಅದನ್ನು ಬದಲಿಸಿ. ಒದ್ದೆ ಬಟ್ಟೆಯನ್ನು ಹಾಕಿಕೊಳ್ಳುವುದರಿಂದ ಕೆರೆತ ಬರಬಹುದು, ಇದು ಮಗುವಿಗೆ ಅಸಹಜಕರವಾಗಬಹುದು. ವೈದ್ಯರ ಸಲಹೆಯ ಕ್ರೀಂ ಬಳಸುವುದು ಒಳ್ಳೆಯದು. ನಿಮ್ಮ ಮಗು ಒದ್ದೆ ಮಾಡಿಕೊಂಡಾಗ ಅದನ್ನು ಬದಲಿಸಲು ಡಯಾಪರ್ ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿರಿ.

೮. ಪ್ರಯಾಣಿಸುವುದು ಮಗುವಿನ ಚಲನವಲನಗಳಿಗೆ ಅಡ್ಡಿಯಾಗುತ್ತದೆ

ಅವರು ಮನೆಯಲ್ಲಿ ಆಡುತ್ತಿದ್ದಂತೆ, ಸ್ವತಂತ್ರವಾಗಿ ಆಡಲು, ಓಡಲು, ಅಥವಾ ಆಟವಾಡಲು ಸಾಧ್ಯವಿಲ್ಲ. ನೈಸರ್ಗಿಕವಾಗಿ, ಮಗುವಿಗೆ ಪ್ರಕ್ಷುಬ್ಧತೆ ಮತ್ತು ಕ್ಷೋಭೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಅವರಿಗೆ ಇಷ್ಟವಾದ ಆಟಿಕೆಗಳು, ಹಾಡುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿರಿ. ಇದು ನಿಮ್ಮ ತಾಳ್ಮೆಗೆ ಪರೀಕ್ಷೆಯಾಗಬಹುದು, ಅದನ್ನು ಜಾಗರೂಕತೆಯಿಂದ ನಿಭಾಯಿಸಿ. ತಾಳ್ಮೆ ಕಳೆದುಕೊಳ್ಳಬೇಡಿ, ಇದರಿಂದ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾದಿತು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon