Link copied!
Sign in / Sign up
1
Shares

ಈ 6 ವಿಷಯಗಳನ್ನ ತಿಳಿದರೆ ಮಗುವಿನ ಜೊತೆ ಮೊದಲ ತಿಂಗಳು ಕಳೆಯುವುದು ಹೇಗೆಂದು ತಿಳಿಯುತ್ತದೆ

ಮುದ್ದು ಕಂದಮ್ಮಗಳು ಜನಿಸಿದಾಗ ಮನೆಯಲ್ಲಿ ಸಂತೋಷ ಸಡಗರದ ವಾತಾವರಣ ತುಂಬಿ ತುಳುಕುತ್ತಿರುತ್ತದೆ. ಇದರೊಂದಿಗೆ ಪೋಷಕರಿಗೆ ಹೆಚ್ಚಿದ ಜವಾಬ್ಧಾರಿ, ಅದರಲ್ಲೂ ತಾಯಿಯ ಜವಾಬ್ಧಾರಿ ಮತ್ತಷ್ಟು ಇಮ್ಮಡಿಯಾಗುತ್ತದೆ. ಇತ್ತಕಡೆ ಮಗುವಿನ ಪಾಲನೆ ಪೋಷಣೆ ಒಂದು ಕಡೆಯಾದರೆ, ಮತ್ತ್ತೊಂದು ಕಡೆ ಪ್ರಸವದ ನೋವಿನಿಂದ ಚೇತರಿಸಿಕೊಳ್ಳಲು, ತನ್ನ ಆರೋಗ್ಯದ ಬಗ್ಗೆ ತಾಯಿ ಜವಾಬ್ಧಾರಿ ವಹಿಸಬೇಕಾಗುತ್ತದೆ. ಮಗು ಜನಿಸಿದ ಮೊದಲ ತಿಂಗಳು, ಬದಲಾದ ನಿಮ್ಮ ಜೀವನ ಶೈಲಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದರಿಂದ ಹೆಚ್ಚಿನ ತಾಯಂದಿರು ಒತ್ತಡಕ್ಕೆ ಒಳಗಾಗುತ್ತಾರೆ. ಚಿಂತಿಸಬೇಡಿ, ಮಗುವಾದ ಮೊದಲ ತಿಂಗಳು ನೀವು ಮಾಡಬೇಕಾದ ಕೆಲಸಗಳೇನು? ಅವುಗಳನ್ನು ಸ್ಮಾರ್ಟ್ ಅಂಡ್ ಕ್ವಿಕ್ ಆಗಿ ಹೇಗೆ ಮಾಡಬೇಕು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.


೧. ಆದಷ್ಟು ಸಹಾಯ ಪಡೆಯಿರಿ

ನೀವು ಎಷ್ಟೇ ಸೂಪರ್-ವುಮನ್ ಆಗಿದ್ದರೂ, ನಿಮಗೆ ಈ ಸಮಯದಲ್ಲಿ ಸಹಯಾದ ಅಗತ್ಯವಿರುತ್ತದೆ. ಸಹಾಯವನ್ನು ಪಡೆಯುವಲ್ಲಿ ಯಾವುದೇ ರೀತಿಯ ಮುಜುಗರ, ಇಗೋ ಎಲ್ಲವನ್ನು ಬಿಟ್ಟು, ನಿಮ್ಮ ಬಂಧು-ಬಳಗದವರು, ನಿಮ್ಮ ನೆರೆಹೊರೆಯವರಿಂದ ಆದಷ್ಟು ಸಹಾಯ ಕೇಳಿ ಪಡಿಯಿರಿ. ಮಗುವಿಗೆ ಸ್ನಾನ ಮಾಡಿಸುವುದರಿಂದ ಹಿಡಿದು, ಅಡಿಗೆ ಮಾಡುವುದುರ ತನಕ ನಿಮಗೆ ಸಹಾಯದ ಅಗತ್ಯವಿರುತ್ತದೆ.


೨. ಕೆಲಸಗಳನ್ನು ಹಂಚಿಕೊಳ್ಳಿ.

ಮಗುವಿನ ಜವಾಬ್ಧಾರಿ ಕೇವಲ ತಾಯಿಯದಷ್ಟೇ ಅಲ್ಲ, ತಂದೆಯ ಜವಾಬ್ಧಾರಿಯೂ ಹೌದು. ಮಗುವಿನ ಆಗಮನದಿಂದ ಪೋಷಕರಿಬ್ಬರಿಗೂ ಒತ್ತಡ ಹಾಗೂ ಕೆಲಸಗಳು ಇಮ್ಮಡಿಯಾಗುತ್ತವೆ. ಹಾಗಾಗಿ, ಇಬ್ಬರು ಕುಳಿತು ಮಾತನಾಡಿ ಮಗುವಿನ ಕೆಲಸಗಳು ಹಾಗು ಮನೆಯ ಜವಾಬ್ಧಾರಿಯನ್ನು ಸಮಾನಾಗಿ ಹಂಚಿಕೊಳ್ಳುವುದರಿಂದ, ಇಬ್ಬರಿಗೂ ಕೆಲಸದ ಒತ್ತಡವೆನಿಸುವುದಿಲ್ಲ.


೩. ನಿಗದಿತ ವೇಳಾಪಟ್ಟಿಯನ್ನು ರಚಿಸಿ

ಹೌದು, ಇದರಿಂದ ನಿಮಗೆ ತುಂಬಾ ಸಹಾಯವಾಗಲಿದೆ. ಮುಂಜಾನೆಯಿಂದ ರಾತ್ರಿಯವರೆಗೂ, ಯಾವ ಯಾವ ಕೆಲಸಗಳಿಗೆ ಎಷ್ಟು ಸಮಯ ನಿಗಧಿ ಮಾಡಬೇಕು ಎಂಬುದನ್ನು ಮೊದಲೇ ಪಟ್ಟಿ ಮಾಡಿ. ಇದರಿಂದ ನೀವು ಮಗುವಿನ ಪಾಲನೆ ಪೋಷಣೆಯ ಕಡೆ ಹೆಚ್ಚು ಗಮನವಹಿಸಲು ಸಹಾಯವಾಗುತ್ತದೆ ಹಾಗು ನಿಮಗೂ ಫ್ರೀ ಟೈಮ್ ಸಿಕ್ಕಿದಂತಾಗುತ್ತದೆ.


೪. ಮಗು ಮಲಗಿದ ವೇಳೆ ನೀವು ವಿಶ್ರಮಿಸಿ

ಈ ಮಾತನ್ನು ನೀವು ಹೆಚ್ಚು ಕೇಳಿರಬಹುದು. ಹೌದು, ನಿಮಗೆ ಸಿಗುವ ಬಿಡುವಿನ ವೇಳೆ ಎಂದರೆ ಮಗು ಮಲಗಿದಾಗ ಎಂದರೆ ತಪ್ಪಾಗುವುದಿಲ್ಲ. ಮಗು ಮಲಗಿದ ಸಮಯಕ್ಕೆ ನೀವು ಕೂಡ, ಮಗುವಿನೊಂದಿಗೆ ಮಲಗಿ ವಿಶ್ರಮಿಸಿ. ಹೀಗೆ ಮಾಡುವುದರಿಂದ ಧಣಿದ ನಿಮ್ಮ ಶರೀರರ ಹಾಗು ಮನಸಿಗ್ಗೆ ಸ್ವಲ್ಪ ವಿಶ್ರಾಂತಿ ಸಿಕ್ಕಂತೆ ಆಗಿ ನೀವು, ಮತ್ತಷ್ಟು ಉತ್ಸುಕರಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.


೫. ಬೇಡ ಅಂತ ಹೇಳಲು ಮುಜುಗರಬೇಡ

ಈಗಾಗಲೇ ನಿಮ್ಮ ಜೀವನದಲ್ಲಿ ಜವಾಬ್ಧಾರಿಗಳು ಹೆಚ್ಚಾಗಿದೆ. ನಿಮಗೆ ಬಿಡುವು ಸಿಗುವುದೇ ಬಹಳ ಅಪರೂಪವಾಗಿದೆ. ಇಂತಹ ಸಂದರ್ಭದಲ್ಲಿ, ನೆಂಟರಿಷ್ಟರು, ಸ್ನೇಹಿತರು ಮನೆಗೆ ಬರುತ್ತೇವೆ ಎಂದು ಕೇಳಿದಾಗ, ಸುಲಭವಾಗಿ ಈಗ ಬೇಡ ಸ್ವಲ್ಪ ದಿನದ ನಂತರ ನಾವೇ ನಿಮ್ಮನ್ನು ಬರಹೇಳುತ್ತೇವೆ ಎಂದು ಉತ್ತರಿಸಿ. ಅವರು ಏನು ಅಂದುಕೊಳ್ಳುತ್ತಾರೆ ಎಂದು ನೀವು ನಿಮ್ಮ ಜವಾಬ್ಧಾರಿಗಳನ್ನು, ಒತ್ತಡವನ್ನು ಜಾಸ್ತಿ ಮಾಡಿಕೊಳ್ಳುವುದು ಮೂರ್ಖತನವೆನಿಸುತ್ತದೆ.


೬. ಆರೋಗ್ಯಕರ ಆಹಾರ ಸೇವಿಸಿ

ಕೆಲವು ಮಹಿಳೆಯರು ಕೇವಲ ಗರ್ಭಿಣಿಯಾಗಿದ್ದಾಗ ಆರೋಗ್ಯಕರ ಆಹಾರ ಸೇವಿಸಿ, ನಂತರ ಪ್ರಸವದ ನಂತರ ತಮ್ಮ ಆಹಾರ ಕ್ರಮದ ಬಗ್ಗೆ ಅಸಡ್ಡೆ ತೋರಿಸುತ್ತಾರೆ. ಹೀಗೆ ಮಾಡಿದರೆ, ಪ್ರಸವದ ನೋವಿನಿಂದ ಚೇತರಿಸಿಕೊಳ್ಳಲು ನಿಮಗೆ ಮತ್ತಷ್ಟು ಸಮಯ ಬೇಕಾಗುತ್ತದೆ ಹಾಗು ನಿಮ್ಮ ಮಗುವಿಗೆ ನೀಡುವ ಎದೆ-ಹಾಲಿನಲ್ಲಿ ಪೋಷಕಾಂಶಗಳು ಕಡಿಮೆಯಾಗಿ, ಬೆಳವಣಿಗೆಯಲ್ಲಿ ಏರು-ಪೇರು ಉಂಟಾಗುತ್ತದೆ. ಆದ್ದರಿಂದ ತಾಯಂದಿರೇ ಮಗುವಿನ ಆರೋಗ್ಯದೊಂದಿಗೆ ನಿಮ್ಮ ಆರೋಗ್ಯದ ಕಡೆಯೂ ಗಮನವಹಿಸುವುದನ್ನು  ಮರೆಯದಿರಿ.

ಈ ಲೇಖನ ನಿಮಗೆ ಇಷ್ಟವಾದಲ್ಲಿ, ಇದನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon