Link copied!
Sign in / Sign up
9
Shares

ನಿಮ್ಮ ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ಇರುವುದರ ಸೂಚನೆ ಹಾಗು ಅದರ ನಿವಾರಣೆ

ಅನಿಲ ಅಂದರೆ ಗ್ಯಾಸ್ ತೊಂದರೆ ಕೇವಲ ವಯಸ್ಸಾದವರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ. ಇದಕ್ಕೇನೆ ಅನ್ಸುತ್ತೆ ಹೇಳೋದು ಮುಪ್ಪು ಇನ್ನೊಂದು ಬಾಲ್ಯವೆಂದು. ಹಾಸ್ಯ ಇರಲಿ, ಆದರೆ ಮಕ್ಕಳಲ್ಲಿ ಗ್ಯಾಸ್ ತೊಂದರೆ ತುಂಬಾ ಸಹಜವಾಗಿದ್ದು, ಇದು ಅವರಿಗೆ ತುಂಬಾನೇ ಅಹಿತಕರ ತೊಂದರೆಗಳನ್ನು ಸೃಷ್ಟಿ ಮಾಡುತ್ತವೆ. ಜಾಸ್ತಿ ಪ್ರಮಾಣದಲ್ಲಿ ಮಕ್ಕಳು ಗಾಳಿಯನ್ನು ನುಂಗುವುದರಿಂದ ಇದು ಅವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ಅವರು ತಿನ್ನುವಾಗ, ಅಳುವಾಗ ಅಥವಾ ಏನಾದರು ಚೀಪುವಾಗ ಆಗಬಹುದು. ಇದು ಏನು ಮಾಡುತ್ತದೆ ಅಂದರೆ ಕರಳಿನಲ್ಲಿ ಅಡಚಣೆ ಉಂಟು ಮಾಡಿ, ಗ್ಯಾಸ್ಟ್ರಿಕ್ ಆಮ್ಲಗಳನ್ನು ತಡೆಯೊಡ್ಡುವಂತೆ ಮಾಡಿ ಅವುಗಳು ಮೇಲೇರುವಂತೆ ಮಾಡುತ್ತದೆ.

ನಿಮ್ಮ ಮಗುವಿನ ಹೊಟ್ಟೆಯಲ್ಲಿ ಅನಿಲ ತುಂಬಿಕೊಂಡಿದೆ ಎಂದು ಸೂಚಿಸುವಂತ ಚಿಹ್ನೆಗಳು ಇಲ್ಲಿವೆ :

೧. ಅನಿಲವು ಬೇರೇ ರೀತಿಯಲ್ಲಿ ಮಾರ್ಪಾಡಾಗಿ ಹೊರಬರುತ್ತವೆ(ಉದಾಹರಣೆಗೆ ತೇಗುವುದು)

೨. ಇದರೊಂದಿಗೆ ನೀವು ನಿಮ್ಮ ಮಗುವಿನ ಹೊಟ್ಟೆ ಗಟ್ಟಿಯಾಗಿ ಅಥವ ತುಂಬಿಕೊಂಡಂತೆ ಅನಿಸುತ್ತವೆ.

೩. ನಿಮ್ಮ ಮಗು ಇದರಿಂದ ಉಂಟಾಗುವ ಇರಿಸುಮುರಿಸಿನಿಂದ ಅಳಲು ಶುರು ಮಾಡಬಹುದು ಹಾಗು ಬಿಕ್ಕಿಳಿಸುವುದು ಹಾಗು ಎಂದಿಗಿಂತ ಜಾಸ್ತಿ ಉಗುಳುವುದು ಮಾಡಬಹುದು. ಅಳುವು ಕೂಡ ಸಾಮಾನ್ಯವಾಗಿ ಅಳುವುದಕ್ಕಿಂತ ಬೇರೆಯದ್ದಾಗಿರುತ್ತದೆ.

ಇದಕ್ಕೆ ಮುಖ್ಯವಾಗಿ ಮಾದಬೇಕಾಗಿರುವುದೇ ನಿವಾರಣೆ. ನಿಮ್ಮ ಮಗುವುಗೆ ಗ್ಯಾಸ್ ತೊಂದರೆ ಉಂಟಾಗಬಾರದೆಂದರೆ, ಉಣಿಸಿದ ಮೇಲೆ ನಿಮ್ಮ ಮಗುವಿಗೆ ತೆಗುವಂತೆ ಮಾಡಲು ಸಾಧ್ಯವಾದಷ್ಟು ಪ್ರಯತ್ನ ಮಾಡಿ. ಇದನ್ನು ಮಾಡಲು ನಿಮ್ಮ ಮಗುವಿಗೆ ಊಟ ಮಾಡಿಸಿದೊಡನೆ, ಅದರ ಬೆನ್ನ ಮೇಲೆ ಮೃದುವಾಗಿ ತಟ್ಟಿ ಹಾಗು ಉಜ್ಜಿ. ಇನ್ನೊಂದು ಉಪಾಯ ಏನು ಅಂದರೆ ನೀವು ಮಗುವಿಗೆ ಹಾಲುಣಿಸುವ ಕೋನವನ್ನು (angle) ನೋಡಿಕೊಳ್ಳಿ. ಯಾವ ಕೋನದಿಂದ ಮಗುವಿಗೆ ಹಾಳುಣಿಸಿದರೆ, ಮಗುವಿನ ದೇಹದೊಳಗೆ ಕಮ್ಮಿ ಗಾಳಿ ಹೋಗುವುದು ಎಂದು ನೋಡಿಕೊಂಡು ಹಾಲುಣಿಸಿ. ಹಾಲುಣಿಸುವಾಗ, ನಿಮ್ಮ ಮಗುವನೂ ನನೇರವಾಗಿ ಕೂರಿಸಿ ಉಣಿಸಲು ಪ್ರಯತ್ನಿಸಿ. ಹೀಗೆ ಮಾಡಿದರೆ ಮಗು ಸೇವಿಸಿದ ಹಾಲು ದೇಹದೊಳಗಿನ ಬೇರೆ ಪಥಗಳಲ್ಲಿ ಸಂಚರಿಸುವುದು ತಪ್ಪುತ್ತೆ. ಹಾಗು ನೀವು ತರಾತುರಿಯಲ್ಲಿ ಇದ್ದಾಗ ಮಗುವಿಗೆ ಹಾಳುನಿಸುವುದು ಮಾಡಬೇಡಿ. ಹೀಗೆ ಮಾಡಿದರೆ, ಮಗುವು ಸರಿಯಾಗಿ ಕಚ್ಚಿಕೊಂಡಿರುವುದಿಲ್ಲ ಹಾಗು ನೀವು ಮಗುವಿನ ಕಡೆ ಗಮನ ಸರಿಯಾಗಿ ಹರಿಸುವುದಿಲ್ಲ.

“ಆದ್ರೆ, ನಾನು ಈ ತಪ್ಪುಗಳನ್ನೆಲ್ಲಾ ಮಾಡ್ಬಿತ್ತಿದ್ದೀನಿ, ಈಗ ನನ್ನ ಮಗುವಿಗೆ ಗ್ಯಾಸ್ ತೊಂದರೆ ಇದೆ...ನಾನ್ ಏನ್ ಮಾಡ್ಬೇಕು?”

ಈ ಪ್ರಶ್ನೆಯನ್ನು ನೀವು ಈಗ ನಿಮ್ಮಲ್ಲಿ ನೀವು ಕೆಲಿಕೊಲ್ಲುತ್ತಿದ್ದರೆ, ಅದಕ್ಕೂ ಪರಿಹಾರ ನಮ್ಮ ಬಳಿ ಇವೆ! ಮೊದಲನೆಯದಾಗಿ ನೀವು ನಿಮ್ಮ ಮಗುವಿಗೆ ಮಸಾಜ್ ಮಾಡಬಹುದು. ಮೃದುವಾಗಿ ನಿಮ್ಮ ಮಗುವಿನ ಹೊಕ್ಕಳು ಹಾಗು ಬೆನ್ನಿನ ಮೇಲೆ ಮಸಾಜ್ ಮಾಡಿ. ಇದು ನಿಮ್ಮ ಮಗುವಿನ ಹೊಟ್ಟೆಯೊಳಗೆ ಸಿಲುಕಿಕೊಂಡ ಗ್ಯಾಸ್ ಅನ್ನು ಹೊರಹಾಕುವಂತೆ ಮಾಡುತ್ತದೆ. ಇನ್ನೊಂದು ಉಪಯುಕ್ತ ವಿಧಾನ ಅಂದರೆ ಅದು ನಿಮ್ಮ ಮಗುವಿಗೆ ಸೈಕಲ್ ತುಳಿಯುವ ರೀತಿಯ ಆಕಾರದಲ್ಲಿ ವ್ಯಾಯಾಮ ಮಾಡಿಸುವುದು. ಇದರಿಂದ ಹೊಟ್ಟೆಯೊಳಗೆ ತುಂಬಿಕೊಂಡ ಅನಿಲವು ಹೊರಗಡೆ ಬರುವುದಲ್ಲದೆ, ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ.

ನೀವು ನಿಮ್ಮ ವೈದ್ಯರನ್ನು ಭೇಟಿಯಾದ ನಂತರ ಮಾಡಬಹುದಾದಂತ ಕೆಲವು ಕೆಲಸಗಳಿವೆ. ಮೊದಲನೆಯದಾಗಿ ನೀವು ಗ್ಯಾಸ್ ಡ್ರಾಪ್ಗಳನ್ನು ಬಯಸಬಹುದು. ಎರಡನೆಯದ್ದು, ನೀವು ಗ್ಯಾಸ್ ಉಪಶಮನ ಮಾಡುವ ಔಷಧಗಳನ್ನು ನೀಡಬಹುದು. ಇಷ್ಟಾದರೂ, ನಿಮ್ಮ ಮಗುವಿನ ಗ್ಯಾಸ್ ತೊಂದರೆ ಉಪಶಮನವಾಗದಿದ್ದರೆ, ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯಿರಿ.     

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon