Link copied!
Sign in / Sign up
1
Shares

ನಿಮ್ಮ ಮಗುವಿನ ಕಣ್ಣಿನ ಬಣ್ಣ, ಎತ್ತರ, ತೂಕ, ವಿಶೇಷ ಪ್ರತಿಭೆಗಳು ಹೇಗಿರುತ್ತವೆ? ನೀವೇ ತಿಳಿಯಿರಿ!

ಪ್ರತಿಯೊಬ್ಬರೂ ಕೂಡ ತಮ್ಮ ಮಗು ನೋಡಲು ಹೇಗೆ ಕಾಣುವುದು ಎಂದು ಯೋಚಿಸಿಯೇ ಇರುತ್ತಾರೆ. ಮಗುವಿನ ಕಣ್ಣಿನ ಬಣ್ಣ ಹೇಗಿರುತ್ತದೆ, ಮಗುವಿಗೆ ಗುಳಿಕೆನ್ನೆ ಇರುವುದೇ, ಎಷ್ಟು ಎತ್ತರ ಬೆಳೆಯಬಹುದು, ಹೀಗೆ ಹಲವು. ಆದರೆ, ನಮ್ಮ, ಅಥವಾ ನಮ್ಮ ಸಂಗಾತಿಯ ಅಥವಾ ನಮ್ಮಿಬ್ಬರ ಕುಟುಂಬದಲ್ಲಿನ ಯಾರದಾರ ಗುಣಲಕ್ಷಣಗಳನ್ನ ನಮ್ಮ ಮಗು ಹೊಂದುವುದೇ ಎಂದು ತಿಳಿಯಲು ಯಾವುದೇ ದಾರಿ ಇಲ್ಲ. ಆದರೆ ನೀವೊಂದು ವಿದ್ಯಾವಂತ ಊಹೆ ಮಾಡಬಹದು. ಅದು ಹೇಗೆ ತಜ್ಞರು ಹೀಗೆ ತಿಳಿಸುತ್ತಾರೆ ನೋಡಿ.

ಕಣ್ಣಿನ ಬಣ್ಣ

ನನ್ನ ಮತ್ತು ನನ್ನ ಪತಿಯ ಇಬ್ಬರ ಕಣ್ಣುಗಳು ಕಂದು(ಬ್ರೌನ್) ಬಣ್ಣ ಹೊಂದಿವೆ. ಹಾಗಾದರೆ ನಮ್ಮ ಮಗುವಿನ ಕಣ್ಣುಗಳು ಕೂಡ ಗಾಢ ಬಣ್ಣವನ್ನು ಹೊಂದಲಿವೆಯೇ?


ಹಾಗೇನಿಲ್ಲ. ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ದಂಪತಿಗಳಿಗೆ ನೀಲಿ ಬಣ್ಣದ ಕಣ್ಣಿನ ಮಗುವು ಜನಿಸಬಹುದು ಅಥವಾ ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ ದಂಪತಿಗೆ ಕಂದು ಬಣ್ಣ ಕಣ್ಣಿನ ಮಗು ಜನಿಸಬಹುದು. ಇದು ಜೀನ್ (ಅನುವಂಶಿಕ ಧಾತು)ಗಳ ಮೇಲೆ ಆಧಾರಿತವಾಗಿರುತ್ತದೆ. ಒಂದು ಜೀನ್ ಕಂದು ಬಣ್ಣವನ್ನು ತಂದರೆ, ಇನ್ನೊಂದು ಜೀನ್ ನೀಲಿ ಬಣ್ಣ ತರಬಹುದು. ಇದು ನೀವು ಬಣ್ಣದ ಪೆನ್ಸಿಲ್ ಅಲ್ಲಿ ಒಂದು ಬಣ್ಣದ ಮೇಲೆ, ಇನ್ನೊಂದು ಬಣ್ಣವನ್ನು ಹಚ್ಚುವಂತೆ. ಈ ಥರ ಬಣ್ಣದ ಪದರಗಳು ಒಂದರ ಮೇಲೊಂದು ಕುಳಿತು ನಮ್ಮ ಕಣ್ಣಿನ ಬಣ್ಣಕ್ಕೆ ಕಾರಣವಾಗುತ್ತವೆ.


ದೈಹಿಕ ಅಂಶಗಳು

ನನ್ನ ಮಗುವಿಗೆ ಗುಳಿ ಕೆನ್ನೆ (ಡಿಂಪಲ್) ಇರುತ್ತದೆಯೇ?


ಹೌದು, ನಿಮಗೆ ಅಥವಾ ನಿಮ್ಮ ಸಂಗಾತಿಗೆ ಅಥವಾ ನಿಮ್ಮಿಬ್ಬರ ಕುಟುಂಬಗಳಲ್ಲಿ ಯಾರಿಗಾದರೂ ಗುಳಿ ಕೆನ್ನೆ ಇದೆ ಎಂದರೆ ನಿಮ್ಮ ಮಗುವಿಗೂ ಗುಳಿ ಕೆನ್ನೆ ಇರಬಹುದು. ಗುಳಿಕೆನ್ನೆಯು ಒಂದು ಪ್ರಬಲ ಗುಣಲಕ್ಷಣವಾಗಿದ್ದು, ಇದು ಮಗುವಲ್ಲಿ ಕಾಣಿಸಿಕೊಳ್ಳಬೇಕೆಂದರೆ, ಅಪ್ಪ-ಅಮ್ಮರಲ್ಲಿ ಕೇವಲ ಒಬ್ಬರಿಗೆ ಮಾತ್ರ ಗುಳಿಕೆನ್ನೆ ಇರಬೇಕು.


ಎತ್ತರ

ಅಪ್ಪ ಉದ್ದ ಇದ್ದು, ಅಮ್ಮ ಕುಳ್ಳಗೆ ಇದ್ದರೆ, ಮಗುವಿನ ಎತ್ತರವು ಈ ಎರಡು ಎತ್ತರಗಳ ನಡುವಿನದ್ದು ಆಗಿರುತ್ತದೆಯೇ?


ಸಾಮಾನ್ಯವಾಗಿ, ಹೌದು. ಸಹಜವಾಗಿ ನಾವು ಮಗುವಿನ ಎತ್ತರ ಲೆಕ್ಕಹಾಕಬೇಕಾದರೆ, ಅಪ್ಪ-ಅಮ್ಮರ ಎತ್ತರಗಳ ಸರಾಸರಿ ತೆಗೆದುಕೊಳ್ಳುತ್ತೇವೆ. ನಂತರ, ಗಂಡು ಮಗುವಾಗಿದ್ದರೆ ಆ ಸರಾಸರಿಗೆ 2 ಇಂಚುಗಳನ್ನು ಕೂಡಿಸುತ್ತೇವೆ ಮತ್ತು ಹೆಣ್ಣು ಮಗುವಾಗಿದ್ದರೆ ಆ ಸರಾಸರಿಯಲ್ಲಿ 2 ಇಂಚುಗಳನ್ನು ಕಳೆಯುತ್ತೇವೆ. ಆದರೆ ಎತ್ತರವು ಕೇವಲ ಒಂದು ಜೀನ್ ಮೇಲೆ ಆಧಾರಿತವಾಗಿರುವುದಿಲ್ಲ. ಬದಲಿಗೆ ಹಲವು ಜೀನ್ಸ್ ಮೇಲೆ ಆಧಾರಿತ ಆಗಿರುತ್ತದೆ. ಅಲ್ಲದೆ, ಬೆಳೆಯುವ ವಾತಾವರಣ, ಆಹಾರಪದ್ಧತಿ ಕೂಡ ಇದರ ಮೇಲೆ ಪ್ರಭಾವ ಬೀರಬಹುದು.

 

ತೂಕ

ನಾನು ಮತ್ತು ನನ್ನ ಪತಿ, ಇಬ್ಬರೂ ನಮ್ಮ ತೂಕದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ನಾವು ಸ್ವಲ್ಪ ಹೆಚ್ಚಿನ ಗಾತ್ರ ಹೊಂದಿದ್ದೇವೆ. ಈ ಕಾರಣಕ್ಕೆ ನಮ್ಮ ಮಗುವು ಸ್ಥೂಲಕಾಯತೆ ಅನುಭವಿಸುತ್ತದೆಯೇ?


ನಾವು ಬಹುಕಾಲದಿಂದ ಗಮನಿಸಿರುವುದು ಏನೆಂದರೆ, ದೊಡ್ಡ ಗಾತ್ರದ ಪೋಷಕರು ದೊಡ್ಡ ಗಾತ್ರದ ಮಕ್ಕಳನ್ನು ಹೊಂದುತ್ತಾರೆ ಎಂಬುದು. ಅಲ್ಲದೆ ಒಂದು ಥರದ ನಿರ್ದಿಷ್ಟ ಜೀನ್ (ಅನುವಂಶಿಕ ಧಾತು) ಅಪ್ಪ ಮತ್ತು ಅಮ್ಮ ಇಬ್ಬರಿಂದಲೂ ಮಗುವು ಪಡೆದುಕೊಂಡಿದ್ದರೆ, ಆ ಮಗುವು ಅಂತಹ ಜೀನ್ಸ್ ಅನ್ನು ಪಡೆದುಕೊಳ್ಳದ ಮಕ್ಕಳಿಗಿಂತ ಸುಮಾರು 3-4 ಕೆಜಿಗಳಷ್ಟು ದಪ್ಪ ಇರುತ್ತದೆ ಎಂಬುದು ಕೂಡ ನಮಗೆ ತಿಳಿದು ಬಂದಿದೆ.

ಆದರೆ ಹೀಗೆಂದ ಮಾತ್ರಕ್ಕೆ ನಿಮ್ಮ ಮಗುವು ದಪ್ಪವೇ ಇರಬೇಕು ಎಂದೇನಲ್ಲ. ಸ್ಥೂಲಕಾಯತೆಯನ್ನು ಬಹಳ ಅಂಶಗಳ ಮೇಲೆ ಆಧಾರಿತವಾದ ಒಂದು ಗುಣಲಕ್ಷಣ ಎಂದು ಪರಿಗಣಿಸಲಾಗಿದ್ದು, ಇದರ ಮೇಲೆ ಅನುವಂಶಿಕ ಅಂಶಗಳು ಮತ್ತು ಪರಿಸರಾಂಶಗಳು ಎರಡೂ ಪ್ರಭಾವ ಬೀರುತ್ತವೆ.


ವಿಶೇಷ ಸಾಮರ್ಥ್ಯಗಳು

ಎಲ್ಲರೂ ಬುದ್ದಿವಂತ ಪೋಷಕರಿಗೆ ಬುದ್ದಿವಂತ ಮಕ್ಕಳು ಹುಟ್ಟುತ್ತವೆ ಎಂದು ಮತ್ತು ಕ್ರೀಡಾಪಟು ದಂಪತಿಗೆ ಕ್ರೀಡಾಪಟು ಮಗು ಹುಟ್ಟುತ್ತದೆ ಎಂದು ಹೇಳುತ್ತಾರೆ. ಅದು ನಿಜಾನಾ?


“ಬುದ್ದಿವಂತ ಕುಟುಂಬಗಳಿಂದ ಬುದ್ದಿವಂತ ಮಕ್ಕಳು ಬರುತ್ತಾರೆ”. ಇದರ ಅರ್ಥ ತಳಿಶಾಸ್ತ್ರ ಏನೇ ಹೇಳಿದರು, ಕಲಿಕೆಯೊಂದರಿಂದ ಮಾತ್ರ ಮಕ್ಕಳು ಬುದ್ದಿವಂತರು ಆಗುತ್ತಾರೆ ಎಂದು. ಪೋಷಕರು ತಮ್ಮ ಬುದ್ದಿವಂತಿಕೆಯನ್ನು ಮಗುವಿಗೆ ಹಾಗೆ ಧಾರೆ ಎಳೆಯುವುದಿಲ್ಲ, ಬದಲಿಗೆ ಅವರು ಮಕ್ಕಳಲ್ಲಿ ಕಲಿಕೆಯ ಪ್ರೀತಿ ಹುಟ್ಟಿಸುತ್ತಾರೆ. ಆಗ ಮಕ್ಕಳು ಬುದ್ದಿವಂತರಾಗುತ್ತಾರೆ.

ಅದೇ ರೀತಿ ಕ್ರೀಡೆಯಲ್ಲೂ ಕೂಡ ಮಗುವಿನ ದೇಹವು ಮಾತ್ರ ತನ್ನ ಪೋಷಕರ ಪ್ರಭಾವದಿಂದ ರೂಪುಗೊಂಡಿರಬಹದು. ಆದರೆ, ಪರಿಶ್ರಮ ಮತ್ತು ಅಭ್ಯಾಸ ಇದ್ದರೆ, ಕ್ರೀಡಾಪಟು ದಂಪತಿಯಲ್ಲದ ಮಕ್ಕಳು ಕೂಡ ದೊಡ್ಡ ಕ್ರೀಡಾಪಟು ಆಗಬಹುದು ಎಂದು ಹೇಳುತ್ತಾರೆ ತಜ್ಞರು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon