Link copied!
Sign in / Sign up
2
Shares

ಎದೆಹಾಲು ಕುಡಿಯುವಾಗ ಮಗುವಿನ ದೇಹದಲ್ಲಿ ಆಗುವ 7 ವಿಷಯಗಳು

ನೀವು  ಯೋಚಿಸಿದಾಗ ನಿಮಗೆ ಅನಿಸುತ್ತದೆ ಮಕ್ಕಳು ಎಂತಹ ಒಂದು ವಿಸ್ಮಯ ಎಂಬುದು. ಕೇವಲ ಒಂದು ವೀರ್ಯಾಣು ಮತ್ತು ಒಂದು ಅಂಡಾಣು ಕೂಡಿಕೊಂಡು, ನಿಮ್ಮ ಹೊಟ್ಟೆಯೊಳಗೆ ಬೆಳೆದು, ಒಂದು ಮಾನವನಾಗಿ ಹೊರಬರುತ್ತದೆ ಎಂದರೆ ಅದು ನಂಬಲಿಕ್ಕೇ ಕಷ್ಟ ಆಗುವಂತಹ ವಿಷಯ. ತಜ್ಞರ ಪ್ರಕಾರ ಎದೆಹಾಲು ಮಗುವಿಗೆ ಬೇಕಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಒಂದು ಸಂಪೂರ್ಣ ಆಹಾರ. ಇದರಿಂದ ಆಗುವ ಅನೇಕಾನೇಕ ಉಪಯೋಗಗಳು ಏನೆಂದು ನಾವು ಈಗಾಗಲೇ ನಮ್ಮ ಹಿಂದಿನ ಲೇಖನಗಳಲ್ಲಿ ನಿಮಗೆ ತಿಳಿಸಿದ್ದೆವು. ಆದರೆ ಎದೆಹಾಲು ಸೇವಿಸುವಾಗ ಮಗುವಿನ ದೇಹದಲ್ಲಿ ಆಗುವ ಬದಲಾವಣೆಗಳು ಎಂಥವು ಎಂಬುದನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ ಓದಿ :

೧. ಎದೆಹಾಲಿನ ಚಯಾಪಚಯಗೊಳಿಸುವಿಕೆ (ಮೆಟಬಾಲಿಸಂ)

ಕೆಲವೊಮ್ಮೆ ನಾವು ಎದೆಹಾಲಿನ ಉಪಯೋಗಗಳ ಬಗ್ಗೆ ಹೇಳುವಾಗ, ಅದು ಕೂಡ ಒಂದು ಆಹಾರ ಎನ್ನುವುದನ್ನೇ ಮರೆತು ಬಿಡುತ್ತೇವೆ. ಇನ್ಫ್ಯಾಂಟ್ ನ್ಯೂಟ್ರಿಷನ್ ಕೌನ್ಸಿಲ್ ಪ್ರಕಾರ ಮಗುವಿನ ದೇಹದ ಮತ್ತು ಮೆದುಳಿನ ಆರು ತಿಂಗಳುಗಳ ಬೆಳವಣಿಗೆಗೆ ಬೇಕಿರುವ ಎಲ್ಲಾ ಪೂರಕಗಳನ್ನೂ ಎದೆಹಾಲು ಹೊಂದಿರುತ್ತದೆ. ಅದರ ನಂತರವೂ ಎದೆಹಾಲು ಅಥವಾ ಫಾರ್ಮುಲಾ ಹಾಲು ಮಗುವಿಗೆ ಇತರೆ ಪೂರಕ ಆಹಾರಗಳ ಜೊತೆ ನೀಡುವುದನ್ನು ಮುಂದುವರೆಸಬೇಕು.


೨. ಕ್ಯಾಲೋರಿಗಳನ್ನ ಕರಗಿಸುವುದು

ಬಹಳಷ್ಟು ಜನರಿಗೆ ತಾಯಿಯು ಎದೆಹಾಲು ಉತ್ಪತ್ತಿ ಮಾಡುವ ಮೂಲಕ ಕ್ಯಾಲೋರಿಗಳನ್ನ ಕರಗಿಸುತ್ತಾಳೆ ಎಂಬುದು ತಿಳಿದಿರುತ್ತದೆ. ಆದರೆ ಗೊತ್ತಿರದ ಒಂದು ವಿಷಯ ಎಂದರೆ, ಎದೆಹಾಲನ್ನು ಸೇವಿಸುವುದರಿಂದ ಮಗುವೂ ಬಹಳಷ್ಟು ಕ್ಯಾಲೋರಿಗಳನ್ನ ಕರಗಿಸುತ್ತದೆ. ಹೀಗಾಗಿಯೇ ಮಗುವಿಗೆ ಮೊದಲ ಕೆಲವು ದಿನಗಳು ಹೆಚ್ಚು ಕ್ಯಾಲೊರಿಗಳ ಅಗತ್ಯ ಇರುತ್ತದೆ. ತಜ್ಞರ ಪ್ರಕಾರ ಪದೇ ಪದೇ ಮಕ್ಕಳಿಗೆ ಹಾಲು ಕುಡಿಸುವುದರ ಮೂಲಕ ಎದೆಹಾಲಿನಿಂದ ಸಿಗಬೇಕಿದ್ದ ಕ್ಯಾಲೋರಿಗಳಿಗಿಂತ ಹೆಚ್ಚು ಕ್ಯಾಲೋರಿಗಳನ್ನ ಮಗುವು ಖರ್ಚು ಮಾಡಬೇಕಾಗುತ್ತದೆ. ಇದು ಮಗುವಿನ ತೂಕ ಇಳಿಕೆಗೆ ಕೂಡ ಕಾರಣ ಆಗಬಹದು.


೩. ನಾದುವುದು, ಹೀರುವುದು, ಚೀಪುವುದು

ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಮಗುವು ತನಗೆ ತಿಳಿಯದ ಹಾಗೆಯೇ ತನ್ನ ಪ್ರತಿವರ್ತನ ಕ್ರಿಯೆಗಳ ಮೂಲಕ ಎದೆಹಾಲಿನ ಹರಿವಿಗೆ ಉತ್ತೇಜನ ನೀಡುತ್ತವೆ. ಅದು ತಮ್ಮ ಬೆರಳುಗಳಿಂದ ನಿಮ್ಮ ಎದೆಯನ್ನು ಚಪಾತಿ ಹಿಟ್ಟಿನಂತೆ ನಾದುವುದು, ಒತ್ತುವುದು, ಚೀಪುವುದು ಆಗಿರುತ್ತವೆ. ಈ ಪ್ರತಿವರ್ತನಗಳು ಮಗುವು ಹೊಟ್ಟೆಯಲ್ಲಿದ್ದಾಗಲೇ ಕಲಿತಿರುತ್ತದೆ. ಹೀಗಾಗಿ ಅವರಿಗೆ ಸುಸ್ತು ಅಥವಾ ಹಸಿವು ಆದಾಗ, ತಮ್ಮ ಬೆರಳುಗಳನ್ನ ಬಾಯಿಯೊಳಗೆ ಇಟ್ಟುಕೊಳ್ಳುತ್ತಾರೆ.


೪. ವಿಶ್ರಾಂತಿ ಪಡೆಯುವುದು

ಎದೆಹಾಲು ಕುಡಿದು “ಮತ್ತು” ಬಂದಂತೆ ಕಣ್ಣಾಡಿಸುವ ಮಕ್ಕಳನ್ನು ನೋಡಿರುವ ಅಮ್ಮಂದಿರಿಗೆ ಇದೇನೆಂದು ಚೆನ್ನಾಗಿ ಅರ್ಥವಾಗುತ್ತದೆ. ಎದೆಹಾಲು ಕುಡಿಯುವುದು ಮಗುವಿಗೆ ತುಂಬಾ ಆರಾಮ ನೀಡುವ ಒಂದು ಕೆಲಸ. ಅಲ್ಲದೆ ಇದು ಮಕ್ಕಳಿಗೆ ಚುಚ್ಚು ಮದ್ದುಗಳಿಂದ ಅಥವಾ ಇನ್ನ್ಯಾವುದೋ ವೈದ್ಯಕೀಯ ಪ್ರಕ್ರಿಯೆಗಳಿಂದ ಉಂಟಾದ ನೋವನ್ನು ಕೂಡ ಕಡಿಮೆ ಮಾಡಿಸುವ ಶಕ್ತಿ ಇರುತ್ತದೆ. ಒಂದು ವಿವರಣೆ ಏನು ಅಂದರೆ, ಅದು ಎದೆಹಾಲಿನಲ್ಲಿ ಸಕ್ಕರೆ ಅಂಶ ತುಂಬಾ ಇದ್ದು, ಇದು ಮಗುವಿನ ದೇಹದೊಳಗೆ ಎಂದೋರ್ಫಿನ್ ಬಿಡುಗಡೆ ಮಾಡಿಸುತ್ತದೆ.


೫. ಬೆಚ್ಚಾಗಾಗುವುದು

ಮಗುವಿಗೆ ಎದೆಹಾಲು ನೀಡುವುದು, ಅದರಲ್ಲೂ ಮುಖ್ಯವಾಗಿ ಮಗುವಿನ ಚರ್ಮ ಮತ್ತು ನಿಮ್ಮ ಚರ್ಮ ಸ್ಪರ್ಶ ಹೊಂದುವಂತೆ ಇಟ್ಟುಕೊಂಡು ಎದೆಹಾಲುಣಿಸುವುದು, ಮಗುವಿನ ದೇಹದ ತಾಪಮಾನ ಮತ್ತು ಅದರ ಉಸಿರಾಟವನ್ನ ಸರಿಯಾದ ಪ್ರಮಾಣದಲ್ಲಿ ಇಡಲು ಸಹಾಯ ಮಾಡುತ್ತದೆ. ಇದು ಇಬ್ಬರಿಗೂ ಆರಾಮ ನೀಡುತ್ತದೆ. ಅಷ್ಟೇ ಅಲ್ಲದೆ ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನೂ ನಿಯಂತ್ರಣದಲ್ಲಿ ಇಡುತ್ತದೆ.


೬. ನಿಷ್ಕ್ರಿಯ ಪ್ರತಿರಕ್ಷಣೆಯನ್ನು (ಪ್ಯಾಸ್ಸಿವ್ ಇಮ್ಮ್ಯೂನಿಟಿ) ಪಡೆದುಕೊಳ್ಳುವುದು

ತಾಯಿಯ ಎದೆಹಾಲನ್ನು ನೀಡಲು ಶುರು ಮಾಡಿದಾಗ, ಮೊದಲು ಉತ್ಪತ್ತಿ ಆಗುವುದೇ ಕೊಲೊಸ್ಟ್ರಮ್. ಇದು ಬಹಳಷ್ಟು ಸಂಖ್ಯೆಯಲ್ಲಿ IgA ಪ್ರತಿಕಾಯಗಳನ್ನ ಒಳಗೊಂಡಿರುತ್ತದೆ. ಎದೆಹಾಲಿನಲ್ಲಿರುವ ಈ ಪ್ರತಿಕಾಯಗಳೇ ಮಗುವನ್ನು ಸೋಂಕಿನಿಂದ ರಕ್ಷಿಸುವುದು.


೭. ಮಲ ಉತ್ಪತ್ತಿ

ತಜ್ಞರ ಪ್ರಾಕಾರ ನಿಮ್ಮ ಮೊದಲು ಕೆಲವು ದಿನಗಳ ಎದೆಹಾಲು ಒಂದು ಮೃದು ಲಕ್ಸಾಟಿವ್ ಆಗಿ ಕೆಲಸ ಮಾಡಿ, ಮಗುವಿಗೆ ದಪ್ಪದಾದ, ಗಾಢ-ಹಸಿರು ಬಣ್ಣದ ಮೆಕೋನಿಯಂ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅದಾದ ಮೇಲೆ ಮಕ್ಕಳು ತಿಂದೊಡನೆ ಅಥವಾ ತಿನ್ನುವಾಗಲೇ ಮಲವನ್ನು ಹೊರಹಾಕಲು ಆರಂಭಿಸುತ್ತಾರೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon