Link copied!
Sign in / Sign up
7
Shares

ಮಗುವಿನ ಆರೋಗ್ಯಕರ ಬೆಳವಣಿಗೆಗೆ ಮುಳುವಾಗುವ ೫ ಅಭ್ಯಾಸಗಳು

ಮಗುವಿನ ಬೆಳವಣಿಗೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ತೊಡಕನ್ನು ಉಂಟು ಮಾಡುವ ಹಲವಾರು ಘಟಕಗಳಿವೆ. ಮಗುವಿನ ಪೋಷಕರಾಗುವುದೆಂದರೆ, ಸಿಪ್ಪೆ ಸುಲಿದ ಬಾಳೆಹಣ್ಣನ್ನು ತಿಂದಷ್ಟು ಸುಲಭವಲ್ಲ. ಆದರೂ ನಮ್ಮ ಮಗುವಿಗೆ ನಮ್ಮಿಂದ ಸಾಧ್ಯವಾದಷ್ಟು ಒಳಿತನ್ನು ಮಾಡಲು ನಾವು ಹಗಲಿರುಳೂ ಶ್ರಮಿಸುತ್ತೇವೆ. ಮಕ್ಕಳ ತಂದೆ ತಾಯಿಯರು, ತಮ್ಮ ಮಕ್ಕಳ ಶಾರೀರಿಕ ಬೆಳವಣಿಗೆಯ ಬಗ್ಗೆ ಸದಾ ಕಾಳಜಿವಹಿಸುತ್ತಾರೆ. 

ಆದರೆ ಮಗುವಿನ ಬೆಳವಣಿಗೆಗೆ ತೊಡಕಾಗುವ ಹಲವಾರು ಘಟಕಗಳಿವೆ. ನಿಮಗೆ ಅದರ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಪ್ರಯತ್ನ ಮಾಡಿದ್ದೇವೆ.

೧.ಪಾದರಕ್ಷೆಗಳು

ಹೌದು, ಮಗುವಿಗೆ ಪಾದರಕ್ಷೆಗಳು ಅತ್ಯಂತ ಅನಿವಾರ್ಯವೆಂದು ನಾವು ಭಾವಿಸುತ್ತೇವೆ. ಆದರೆ, ಅದು ಪ್ರತಿಕೂಲ ಪರಿಣಾಮ ನೀಡುತ್ತದೆ. ಮಗುವಿನ ಪಾದ ಬಹಳ ಶೀಘ್ರವಾಗಿ ಬೆಳೆಯುತ್ತಿರುತ್ತದೆ. ಪಾದ ರಕ್ಷೆಯನ್ನು ಬಳಸಿದರೆ ಮಗುವಿನ ಪಾದದ ಬೆಳವಣಿಗೆ ಕುಂಠಿತವಾಗುತ್ತದೆ. ಆದಕಾರಣ ಮಗು ಸರಿಯಾಗಿ ನಡೆಯದ ಹೊರತು ಪಾದರಕ್ಷೆಯ ಬಳಕೆ ಬೇಡ.

೨.ಬೇಬಿ ಜಂಪರ್

ಮಗುವಿನ ಸಂಪೂರ್ಣವಾದ ಶಾರೀರಿಕ ಚಲನೆಗೆ ಪ್ರತಿಕೂಲವಾಗಿ ಪರಿಣಾಮ ಬೀರುವ ಬೇಬಿ ಜಂಪರ್ ನ ಬಳಕೆಯು ಮಗುವಿನ ನೈಸರ್ಗಿಕ ಬೆಳವಣಿಗೆಯಲ್ಲೂ ತೊಡಕಾಗಿ ಪರಿಣಮಿಸುತ್ತದೆ. ಜಂಪರ್ ಮಗುವಿನ ತೊಡೆ, ಸೊಂಟ ಮತ್ತು ಕಂಕುಳ ಭಾಗಕ್ಕೆ ಬೆಂಬಲವಾಗಿ ಹಿಡಿದಿಟ್ಟುಕೊಳ್ಳುವುದರಿಂದ ಮಗುವಿನ ಶರೀರವು ನೇರವಾಗಿರದೆ, ಮುಂದಕ್ಕೆ ಬಾಗುವುದು. ಇದರಿಂದ ಮಗುವಿನ ಶರೀರದ ನೇರ ನಿಲುವಿಗೂ ತೊಡಕುಂಟಾಗುವುದು. ಜಂಪರ್ ಬಳಸುವಾಗ ಮಗುವು ತನ್ನ ಹೆಬ್ಬೆರಳನ್ನು ಒತ್ತಿ ಹಾರ ಬೇಕಾಗುತ್ತದೆ.ಇದೇ ಅಭ್ಯಾಸ ಬಲದಿಂದ ಮಗುವು ನಡೆಯುವಾಗ ಕೂಡ ತನ್ನ ಹೆಬ್ಬೆರಳನ್ನು ಬಳಸುವುದು. ಇದು ಶರೀರದ ನೈಜ ಭಂಗಿಯಲ್ಲ.

೩.ಸ್ಟ್ರೋಲರ್

ಮಗುವಿನ ವಿಷಯಕ್ಕೆ ಬಂದಾಗ ಯಾವುದನ್ನೂ ತುಂಬಾ ಸಮಯಗಳವರೆಗೆ ನಿಮ್ಮ ಅಧೀನದಲ್ಲಿಟ್ಟುಕೊಳ್ಳುವಂತೆ ಮಾಡುವುದು ಜಾಣತನವಲ್ಲ. ಮಕ್ಕಳು ನಿಮ್ಮ ಗುಲಾಮರಲ್ಲ. ಮಕ್ಕಳು ನಡೆಯಲು ಮಕ್ಕಳು ನಡೆದಾಡಲು ಪ್ರಾರಂಭಿಸುವಾಗ, ನಿಮ್ಮ ಜತೆಯಾಗಿ ಅಥವಾ ನಿಮ್ಮ ಮುಂದೆ ನಡೆಯುವರು.ನಡೆಯಲು ತಿಳಿಯದ ಮಗುವನ್ನು ಎತ್ತಿ ತಿರುಗಾಡುವುದು ಆಯಾಸವೆಂದೆನಿಸಿ, ನೀವು ಖರೀದಿಸಿದ ಸ್ಟ್ರೋಲರಿನ ಅತಿಯಾದ ಬಳಕೆಯು ಮಗುವಿನ ಶರೀರ ಘಟನೆಗೆ ಉತ್ತಮವಲ್ಲ.

೪.ಬೇಬಿ ವಾಕರ್

ಜೀವನದ ಮೈಲಿಗಲ್ಲನ್ನು ದಾಟಲಿರುವ ನಿಮ್ಮ ಮಗುವಿನ ನೈಸರ್ಗಿಕ ನಡಿಗೆಯ ಮೇಲಿನ ಸಂದೇಹವೇ ನಿಮಗೆ ಬೇಬಿ ವಾಕರ್ ನ ಖರೀದಿಗೆ ಪ್ರೇರೇಪಿಸಿರಬಹುದು. ಬೇಬಿ ವಾಕರಿನ ಬಳಕೆಯಿಂದ ತನ್ನ ಸಾಮರ್ಥ್ಯಕ್ಕೂ ಮೀರಿದ ವೇಗದಲ್ಲಿ ಮಗುವು ನಡೆಯುವುದಲ್ಲದೆ, ತನ್ನನ್ನು ಗುರಿ ಮುಟ್ಟಿಸುವಲ್ಲಿ, ತಾನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು. ಮಾತ್ರವಲ್ಲದೆ ಪಕ್ಕನೆ ಅಪಘಾತಕ್ಕೂ ಗುರಿಯಾಗುವುದು. ಇದಕ್ಕಿಂತಲೂ ಮಿಗಿಲಾಗಿ ಸ್ವಂತ ಪರಿಶ್ರಮದಿಂದ ನಡೆಯಲು ಕಲಿತ ಮಗುವಿನ ವಿಜಯೋತ್ಸವದ ಸಂಭ್ರಮವನ್ನು ಮಗುವಿಗೆ ನೀಡಬೇಕಾದದ್ದು ಪಾಲಕರ ಕರ್ತವ್ಯ.

೫.ಸೊಂಟದ ಆಸರೆಯಿಲ್ಲದೇ ಎತ್ತುವ ರೀತಿ

ಒಬ್ಬ ವ್ಯಕ್ತಿಯು ನಿಮ್ಮನ್ನು ಬೆನ್ನ ಮೇಲೆ ತುಂಬಾ ಹೊತ್ತು ಹೊತ್ತುಕೊಳ್ಳುವಾಗ, ಗಾಳಿಯಲ್ಲಿ ತೇಲಾಡಲು ಬಯಸುವಿರೋ ಅಥವಾ ನಿಮ್ಮ ಸೊಂಟ/ ಬೆನ್ನಿಗೆ ಆಸರೆಯಾಗಿ ಏನನ್ನಾದರೂ ಬಯಸುವಿರೋ ? ನಿಮ್ಮ ಮಗುವಿನ ವಿಚಾರದಲ್ಲಿ ಸಂಭವಿಸುವುದೂ ಇದೇ. ಮಾತ್ರವಲ್ಲದೆ,ಮಗುವು ಆರಾಮದಾಯಕ ಸ್ತಿತಿಯಲ್ಲಿರುವುದು ತನ್ನ “ಉತ್ತಮ ಮೂಡ್ “ ಗೆ ಕೂಡಾ ಒಳ್ಳೆಯದು. ಮಾತ್ರವಲ್ಲದೆ ಇಂತಹ ವಸ್ತುಗಳ ಬಳಕೆಯೂ ಮಗುವಿನ ಚರ್ಮದ ತುರಿಕೆ, ಬೊಬ್ಬೆಗಳು ಅಥವಾ ಅಲರ್ಜಿಯನ್ನುಂಟು ಮಾಡಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon