Link copied!
Sign in / Sign up
3
Shares

ನಿಮ್ಮ ಮಗುವಿನ ಹಾವಭಾವಗಳನ್ನು ಅರ್ಥೈಸಿಕೊಳ್ಳುವುದು ಹೇಗೆ ?

ನವಜಾತ ಮಗುವಿನ ಪಾಲಕತ್ವ ಕಷ್ಟಕರವಾಗಿದೆ .ಎಲ್ಲ ಸಮಯದಲ್ಲೂ ಮಗುವನ್ನು ಯಾರಾದರೂ ನೋಡಬೇಕಾಗಿದೆ. ಹಾಗಿದ್ದರೂ, ಮಗುವಿನ ಹಸಿವು ಅಥವಾ ನಿದ್ದೆ ಆಗುವುದನ್ನು ಊಹಿಸಲು ತುಂಬಾ ಕಷ್ಟ. ಒಂದು ನಿಮಿಷ ಅವರು ನಿಜವಾಗಿಯೂ ಸಂತೋಷದಿಂದ ಕಾಣುತ್ತಾರೆ ಮತ್ತು ಮುಂದಿನದು, ಪ್ರಪಂಚವು ಅಂತ್ಯಗೊಳ್ಳುವಂತೆಯೇ ಅವರು ಅಳುವುದಕ್ಕೆ ಪ್ರಾರಂಭಿಸುತ್ತಾರೆ. ನೀವು ಹೆಚ್ಚಿನ ಹೆತ್ತವರಂತೆ ಇದ್ದರೆ - ಅವರು ಏಕೆ ಅಳುತ್ತಿದ್ದಾರೆಂಬುದನ್ನು ಲೆಕ್ಕಾಚಾರ ಮಾಡಲು ಸಾಧ್ಯವಿರುವ ಎಲ್ಲವನ್ನೂ ನೀವು ಪ್ರಯತ್ನಿಸಬಹುದು ಮತ್ತು ನಿಜವಾದ ಕಾರಣ ಏನೆಂಬುದನ್ನು ಕಂಡು ಹಿಡಿಯಲು ಯಾವಾಗಲೂ ನೀವು ಪ್ರಯತ್ನಿಸುವುದನ್ನು ಆಲೋಚಿಸುತ್ತೀರಿ. ನಿಮ್ಮ ಮಗುವನ್ನು ನೀವು ದೂಷಿಸಲು ಸಾಧ್ಯವಿಲ್ಲ, ಏಕೆಂದರೆ ಅಳುವುದು ಮತ್ತು  ಕೈಗಳು ,ಕಾಲುಗಳನ್ನು ಹೊಡೆದುಹಾಕುವುದು ಅವರಿಗೆ ಬೇಕಾದುದನ್ನು ಪಡೆಯಲು ಅವರು ತಿಳಿದಿರುವ ಏಕೈಕ ಮಾರ್ಗವಾಗಿದೆ.ಪುಟ್ಟ ಶಿಶುವನ್ನು  ಹೇಗೆ ಮಾತನಾಡಬೇಕೆಂಬುದು ನಿಮಗೆ ತಿಳಿದಿಲ್ಲದಿರುವುದರಿಂದ ನಿಮ್ಮನ್ನು ದೂಷಿಸಲೂ ಆಗುವುದಿಲ್ಲ . ನವಜಾತ ಮಗುವಿನ ಪಾಲಕತ್ವ ಕಷ್ಟಕರವಾಗಿದೆ .ಎಲ್ಲ ಸಮಯದಲ್ಲೂ ಮಗುವನ್ನು ಯಾರಾದರೂ ನೋಡಬೇಕಾಗಿದೆ. ಹಾಗಿದ್ದರೂ, ಮಗುವಿನ ಹಸಿವು ಅಥವಾ ನಿದ್ದೆ ಆಗುವುದನ್ನು ಊಹಿಸಲು ತುಂಬಾ ಕಷ್ಟ. ಒಂದು ನಿಮಿಷ ಅವರು ನಿಜವಾಗಿಯೂ ಸಂತೋಷದಿಂದ ಕಾಣುತ್ತಾರೆ ಮತ್ತು ಮುಂದಿನದು, ಪ್ರಪಂಚವು ಅಂತ್ಯಗೊಳ್ಳುವಂತೆಯೇ ಅವರು ಅಳುವುದಕ್ಕೆ ಪ್ರಾರಂಭಿಸುತ್ತಾರೆ. ನೀವು ಹೆಚ್ಚಿನ ಹೆತ್ತವರಂತೆ ಇದ್ದರೆ - ಅವರು ಏಕೆ ಅಳುತ್ತಿದ್ದಾರೆಂಬುದನ್ನು ಲೆಕ್ಕಾಚಾರ ಮಾಡಲು ಸಾಧ್ಯವಿರುವ ಎಲ್ಲವನ್ನೂ ನೀವು ಪ್ರಯತ್ನಿಸಬಹುದು ಮತ್ತು ನಿಜವಾದ ಕಾರಣ ಏನೆಂಬುದನ್ನು ಕಂಡು ಹಿಡಿಯಲು ಯಾವಾಗಲೂ ನೀವು ಪ್ರಯತ್ನಿಸುವುದನ್ನು ಆಲೋಚಿಸುತ್ತೀರಿ.ನಿಮ್ಮ ಮಗುವನ್ನು ನೀವು ದೂಷಿಸಲು ಸಾಧ್ಯವಿಲ್ಲ, ಏಕೆಂದರೆ ಅಳುವುದು ಮತ್ತು  ಕೈಗಳು ,ಕಾಲುಗಳನ್ನು ಹೊಡೆದುಹಾಕುವುದು ಅವರಿಗೆ ಬೇಕಾದುದನ್ನು ಪಡೆಯಲು ಅವರು ತಿಳಿದಿರುವ ಏಕೈಕ ಮಾರ್ಗವಾಗಿದೆ.ಪುಟ್ಟ ಶಿಶುವನ್ನು  ಹೇಗೆ ಮಾತನಾಡಬೇಕೆಂಬುದು ನಿಮಗೆ ತಿಳಿದಿಲ್ಲದಿರುವುದರಿಂದ ನಿಮ್ಮನ್ನು ದೂಷಿಸಲೂ ಆಗುವುದಿಲ್ಲ .

೧.ನಿಮ್ಮ ಮಗುವು ಕೋಪಗೊಂಡಿರುವ ಚಿಹ್ನೆಗಳು

ಶಿಶುಗಳು ತುಂಬಾ ದಣಿದಾಗ ಅಥವಾ ಹಸಿದಾಗ ಮಾತ್ರ ಕೋಪಗೊಳ್ಳುತ್ತಾರೆ.ಅವರು ತಮ್ಮ ಕಣ್ಣುಗಳನ್ನು ತಿರುಗಿಸಿ ತಮ್ಮ ಮುಖ ಕೆಂಪು ಬಣ್ಣಕ್ಕೆ ಬರುವ ತನಕ ಅಳುತ್ತಾರೆ.ನೀವು ಮೆದು ಪೆಟ್ಟನ್ನು ನೀಡುವ ಮೂಲಕ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ ಅವರು ನಿಮ್ಮ ಕೈಯನ್ನು ತಳ್ಳುತ್ತಾರೆ. ನಿಮ್ಮ ತೋಳುಗಳಲ್ಲಿ ಅವರನ್ನು ತೂಗಿ ಮೃದುವಾಗಿ ಪಿಸುಗುಟ್ಟುವ ಮೂಲಕ ಅವರನ್ನು ಸುಮ್ಮನಿರಿಸುವುದು ಅತ್ಯುತ್ತಮವಾಗಿದೆ .ಅವರು ವಿಶ್ರಾಂತಿ ಬಯಸಿದರೆ, ಅವರ ಕಣ್ಣುಗಳು ಅವರನ್ನು ತೂಗಲು ಶುರು ಮಾಡುವಾಗಲೇ ಬಾಗಲು ಶುರು ಮಾಡುತ್ತವೆ .ಅವರು ಶಾಂತವಾಗದಿದ್ದರೆ, ನಿಮ್ಮ ಮಗುವಿಗೆ ಹಸಿವಾಗುತ್ತಿದೆ ಎಂದರ್ಥ.

೨.ನಿಮ್ಮ ಮಗುವು ಸಂತಸವಾಗಿರುವುದನ್ನು ಸೂಚಿಸುವ ಚಿಹ್ನೆಗಳು

ನಿಮ್ಮ ಮಗು ಸಂತೋಷಗೊಂಡಾಗ, ಅದು ಅವನ / ಅವಳ ಮುಖ, ದೇಹ ಮತ್ತು ಧ್ವನಿಗಳ ಮೇಲೆ ಕಾಣಬರುತ್ತದೆ .ಅವರು ಕಿರಿದಾದ ಕಣ್ಣುಗಳೊಂದಿಗೆ ದೊಡ್ಡದಾಗಿ ಹಲ್ಲು ರಹಿತವಾಗಿ ಹಲ್ಲು ಕಿರಿದು ನಗುವನ್ನು ನೀಡುತ್ತಾರೆ ಮತ್ತು ಅವರು ಹರ್ಷಚಿತ್ತದಿಂದ ಕಿಲಕಿಲವೆಂದು ನಗಲೂಬಹುದು .ಸಂತೋಷದ ಈ ಪ್ರದರ್ಶನವನ್ನು ಸಂಪೂರ್ಣವಾಗಿ  ಆಡುವ ಮೂಲಕ ಉತ್ತೇಜಿಸಿ.ಇದು ಸಂಭವಿಸಿದಾಗ, ನೀವು ಏನು ಮಾಡುತ್ತಿರುವಿರಿ ಎಂಬುದನ್ನು  ಪಕ್ಕಕ್ಕಿರಿಸಿ ಕ್ಷಣವನ್ನು ಆನಂದಿಸಿ - ನೀವು ತುಂಬಾ ಸಂತೋಷವಾಗಿರುವಿರಿ ಎಂದು ತಿಳಿಯುವಲ್ಲಿ ಅವರು ಖುಷಿ ಪಡುತ್ತಾರೆ .ಆದರೆ ಹುಷಾರಾಗಿರಿ ,ಮಕ್ಕಳು ತಮ್ಮನ್ನು ತಾವು ಬಿಡುಗಡೆ ಮಾಡಿದ ನಂತರ ನಿಜವಾದ ಸಂತೋಷವನ್ನು ಪಡೆಯುತ್ತಾರೆ.  ಇದರ ಅರ್ಥವೇನೆಂದು ನಿಮಗೆ ತಿಳಿದಿದೆ-ಇದು ಡಯಾಪರ್ ಬದಲಾವಣೆಯ ಸಮಯ!

೩.ನಿಮ್ಮ ಮಗುವು ಹೆದರಿರುವ ಚಿಹ್ನೆಗಳು

ನಾವು ಆಘಾತಕಾರಿ ವಿಷಯಗಳನ್ನು ಕೇಳಿದಾಗ ಯಾವ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆಯೋ ಅದೇ ರೀತಿಯ ಭಾವನೆಗಳನ್ನು ಮಗುವು ಹೆದರಿದಾಗ ವ್ಯಕ್ತಪಡಿಸುತ್ತದೆ .ಅವರು ಭಾಗಶಃ ತೆರೆದ ಬಾಯಿಯೊಂದಿಗೆ ತಮ್ಮ ಕಣ್ಣುಗಳನ್ನು ಅಗಲವಾಗಿ ತೆರೆದುಕೊಳ್ಳುತ್ತಾರೆ. ಅವರ ಕೈಗಳು ಕೂಡ ನಡುಗಬಹುದು. ಅವರು ಈ ಭಾವನೆಗಳನ್ನು ನಿಯಂತ್ರಿಸುವುದಿಲ್ಲ ಮತ್ತು ಸ್ವಲ್ಪ ಸಮಯದವರೆಗೆ ಸ್ತಾಂಭೀಭೂತವಾಗಬಹುದು ಅಥವಾ ಜೋರಾಗಿ ಅಳಲು ಪ್ರಾರಂಭಿಸಬಹುದು.ದೊಡ್ಡ ಶಬ್ದ ಕೇಳಿದಾಗ ಅಥವಾ ಅಸಾಮಾನ್ಯವಾದದನ್ನು ನೋಡಿದಾಗ ಮಕ್ಕಳು ಭಯಪಡಬಹುದು. ಉದಾಹರಣೆಗೆ,ಸ್ಟೀಲಿನ ತಟ್ಟೆಯು ಕೆಳಗೆ ಬಿದ್ದ ನಂತರ ಅವರು ಅಳುವುದು ಪ್ರಾರಂಭಿಸಿದರೆ,ಅವರನ್ನು ಎತ್ತಿಕೊಳ್ಳುವ ಮೂಲಕ ಮತ್ತು ಎಲ್ಲವೂ ಉತ್ತಮವಾಗಿವೆ ಎಂದು ಹೇಳುವ ಮೂಲಕ ಅವರನ್ನು ಶಮನಗೊಳಿಸಿ.

೪.ನಿಮ್ಮ ಮಗುವಿಗೆ ಹಸಿವಾಗುತ್ತಿದೆ ಎನ್ನುವ ಚಿಹ್ನೆಗಳು

ನಿಮ್ಮ ಮಗುವಿಗೆ ಹಸಿವಾಗುತ್ತಿದ್ದಲ್ಲಿ ಅವರು ತಮ್ಮ ತಲೆಯನ್ನು ಅಕ್ಕ ಪಕ್ಕ ಚಲಿಸುವ ಮೂಲಕ ಅದನ್ನು ತೋರಿಸುತ್ತಾರೆ.ನಂತರ ಅವರು ತಮ್ಮ ಬಳಿ ಕಂಡುಕೊಳ್ಳುವ ಯಾವುದನ್ನಾದರೂ - ಮೆತ್ತೆ, ಬೆಡ್ ಶೀಟ್ ಮುಂತಾದವುಗಳನ್ನು ಅವರು ಹೀರಲು ಪ್ರಾರಂಭಿಸಬಹುದು - ನಿಮ್ಮ ಬೆರಳನ್ನು ಅವರ ಬಾಯಿಯ ಬಳಿ ಇಟ್ಟುಕೊಂಡು ನೀವು ಪರಿಶೀಲಿಸಬಹುದು -ಅವರು ಅನೈಚ್ಛಿಕವಾಗಿ ನಿಮ್ಮ ಬೆರಳುಗಳ ಕಡೆ ತಮ್ಮ ಬಾಯಿಯನ್ನು ತರುತ್ತಾರೆ .ನೀವು ಅವರನ್ನು ಎತ್ತಿ ಹಿಡಿಯುವಾಗ , ಅವರು ತಮ್ಮ ದೇಹವನ್ನು ಬಗ್ಗಿಸಲು ಪ್ರಾರಂಭಿಸುತ್ತಾರೆ ಮತ್ತು ತಮ್ಮ ತಲೆಯನ್ನು ನಿಮ್ಮ ಮೊಲೆ ತೊಟ್ಟುಗಳೆಡೆ ತರಲು ಶುರು ಮಾಡುತ್ತಾರೆ .ನಿಮ್ಮ ಮಗು  ಈ ಮೇಲಿನ ಯಾವುದಾದರೂ ಚಿಹ್ನೆಗಳನ್ನು ತೋರಿಸುತ್ತಿದ್ದರೆ,ಅವರಿಗೆ ತಕ್ಷಣ ಆಹಾರ ನೀಡಿ ಮತ್ತು ಅವರನ್ನು  ಅಳಲು ಪ್ರಾರಂಭಿಸುವುದಕ್ಕಾಗಿ ನಿರೀಕ್ಷಿಸಬೇಡಿ.

೫.ನಿಮ್ಮ ಮಗುವಿಗೆ ಬೇಜಾರಾಗುತ್ತಿದೆ (ಬೋರ್ )ಎನ್ನುವುದಕ್ಕೆ ಚಿಹ್ನೆಗಳು

ಶಿಶುಗಳು ಯಾವುದೇ ರೀತಿಯಲ್ಲಿ ನಿಮ್ಮ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತವೆ.ಅವರು ಸ್ಪಷ್ಟವಾದ ಕಾರಣವಿಲ್ಲದೆ ಅಳಲು ಶುರು ಮಾಡಬಹುದು ,ನಿಮ್ಮ ಸುತ್ತಲೂ ವಸ್ತುಗಳನ್ನು ಎಸೆದು ಅಥವಾ ಚೀರುತ್ತಾ ಹೋಗುತ್ತಾರೆ.ನೀವು ಅವರ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದಾಗ ಅಥವಾ ಅವರನ್ನು ಎತ್ತಿಕೊಂಡಾಗ ಅವರು ಅಳುವುದನ್ನು ನಿಲ್ಲಿಸುತ್ತಾರೆ .ಇದು ನಿಮ್ಮ ಮಗುವು ನಿಮ್ಮೊಂದಿಗೆ ಸಂಪರ್ಕ ಹೊಂದಿರುವ ಖಚಿತವಾದ ಚಿಹ್ನೆ ಎಂದು ನೀವು ತೆಗೆದುಕೊಳ್ಳಬಹುದು ಮತ್ತು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತದೆ ಎಂದು ತಿಳಿದುಕೊಳ್ಳಬಹುದು .ನೀವು ಅವರನ್ನು ಮನರಂಜಿಸುವ ವಿಧಾನಗಳು ಕೆಲವು ತಿಂಗಳುಗಳ ಅವಧಿಯಲ್ಲಿ ಬದಲಾಯಿಸಬಹುದು.

೬.ನಿಮ್ಮ ಮಗುವಿಗೆ ವಿಸ್ಮೃತಿ ಇದೆ ಎನ್ನುವ ಸೂಚನೆಗಳು

ನಿಮ್ಮ ಮಗುವು ಯಾದೃಚ್ಛಿಕ ವಸ್ತುವಿನೆಡೆ ದಿಟ್ಟಿಸಿ ನೋಡುವುದನ್ನು ನೀವು ಗಮನಿಸಿದ್ದೀರಾ ?ಅದರ ಕಡೆಗೆ ಚಲಿಸುವುದು, ತೂಗಾಡುವುದು,ತೋರಿಸುತ್ತಿರುವುದು ಅಥವಾ ಅದರೆಡೆ ಚೀರುವುದು ?ಇದರ ಅರ್ಥ ಅವರಿಗೆ ತನ್ನ ಸುತ್ತಮುತ್ತಲಿನ ಬಗ್ಗೆ ತಿಳಿದಿರುತ್ತದೆ ಮತ್ತು ಕೇವಲ ಈ ಹೊಸ ಅದ್ಭುತ ವಸ್ತುವನ್ನು ಕಂಡುಹಿಡಿದಿದ್ದಾರೆ . ಆ ಪ್ಲಾಸ್ಟಿಕ್ ಚೊಂಬು ನಿಮಗೆ ಎಲ್ಲ ಆಕರ್ಷಣೀಯವಾಗಿ ಕಾಣಿಸದಿದ್ದರೂ, ನಿಮ್ಮ ಮಗುವಿಗೆ ಅದು ತನ್ನ ಪ್ರಪಂಚದಲ್ಲಿ ಅತ್ಯಂತ ಆಸಕ್ತಿದಾಯಕ ವಿಷಯವಾಗಿದೆ ಎಂದು ಕಾಣಬಹುದು.ಚೊಂಬಿನ ಬಗ್ಗೆ ಮಾತನಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಮತ್ತು ಅದು ಏನು ಮಾಡಬಹುದು ಎಂಬುದನ್ನು ತೋರಿಸಿ .

೭ .ನಿಮ್ಮ ಮಗುವು ಅನಿಲ ಬಾಧೆಗೊಳಪಟ್ಟಿದೆ ಎನ್ನುವ ಚಿಹ್ನೆಗಳು

ಶಿಶುಗಳು ಅಸ್ವಸ್ಥತೆಯನ್ನು ಅನುಭವಿಸಿದಾಗ, ಅವರು ಆರಂಭದಲ್ಲಿ ಸ್ವಲ್ಪ ಗೊಣಗಾಟಗಳೊಂದಿಗೆ ಅಳುವುದನ್ನು  ಪ್ರಾರಂಭಿಸುತ್ತಾರೆ.ಅವರು ತಮ್ಮ ಮುಖವನ್ನು ಮೇಲಕ್ಕೆತ್ತಿ ತಮ್ಮ ಎದೆಗೆ ತಮ್ಮ ಪಾದಗಳನ್ನು ತರುತ್ತಾರೆ.ಚಕ್ರದ ಚಲನೆಯಲ್ಲಿ ಅವರ ಕಾಲುಗಳನ್ನು ಚಲಾಯಿಸುವ ಮೂಲಕ ಅವರ ಹೊಟ್ಟೆಯನ್ನು ಮೇಲಿನಿಂದ ಕೆಳಕ್ಕೆ ಉಜ್ಜುವ ಮೂಲಕ ನೀವು ಶಮನಗೊಳಿಸಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon