Link copied!
Sign in / Sign up
19
Shares

ನಿಮ್ಮ ಮಗುವಿಗೆ ಸ್ನಾನ :ಹಂತ ಹಂತವಾಗಿ ಮಾರ್ಗದರ್ಶನ

ತಮ್ಮ ಮಗುವನ್ನು ಸ್ನಾನ ಮಾಡಿಸಲು ಬಂದಾಗ ಬಹಳಷ್ಟು ತಾಯಂದಿರು ಆತಂಕ ವ್ಯಕ್ತಪಡಿಸುತ್ತಾರೆ. ನಿಮ್ಮ ಮಗುವನ್ನು ನೀವು  ಸುರಕ್ಷಿತವಾಗಿ ಮತ್ತು ಸ್ನೇಹಶೀಲವಾಗಿ ಇಟ್ಟುಕೊಳ್ಳುವುದರ ಜೊತೆಗೆ ಅವರಿಗೆ ಹೇಗೆ ಖುಷಿಯನ್ನುಂಟು ಮಾಡುತ್ತೀರಿ ?ಚಿಂತೆಯನ್ನು ಬದಿಗಿಟ್ಟು ನಿಮ್ಮ ಪುಟ್ಟ ಮಗುವನ್ನು ಸ್ನಾನ ಮಾಡಿಸಲು ಇಲ್ಲಿ ಸರಳವಾಗಿ ಹಂತಹಂತವಾಗಿ ಮಾರ್ಗದರ್ಶನ ನೀಡಲಾಗಿದೆ .

ಹಂತ ೧ :ತಯಾರಿ

ನಿಮ್ಮ ಮಗುವನ್ನು ಸ್ನಾನ ಮಾಡುವುದಕ್ಕೆ ಮುಂಚಿತವಾಗಿ, ಅಗತ್ಯವಾದ ಸರಬರಾಜುಗಳನ್ನು ಸೇರಿಸಿಡಿ ಏಕೆಂದರೆ ಒಮ್ಮೆ ಸ್ನಾನ ಶುರುವಾದ ನಂತರ ಮಗುವಿನ ಮೇಲಿನಿಂದ ಗಮನವನ್ನು ವಿಚಲಿತಗೊಳಿಸಲಾಗುವುದಿಲ್ಲ .ಇವುಗಳಲ್ಲಿ   ಸ್ನಾನದ ನಂತರ ಸ್ವಚ್ಛಗೊಳಿಸಲು  ಮೃದುವಾದ  ಬಟ್ಟೆ ಅಥವಾ ಸ್ಪಂಜುಗಳು, ಮಗುವಿನ ಸಾಬೂನು , ಟವೆಲ್ಗಳು, ದ್ರವ ಲೇಪ (ಲೋಷನ್), ಪುಡಿ (ಪೌಡರ್) , ಡಯಾಪರ್ ಮತ್ತು ಬಟ್ಟೆಗಳನ್ನು ಒಳಗೊಂಡಿರುತ್ತವೆ .

ನೀವು ಕಿವಿ ಮತ್ತು ಕಣ್ಣುಗಳನ್ನು ಸ್ವಚ್ಛಗೊಳಿಸಲು ಹತ್ತಿಯ  ಚೆಂಡುಗಳನ್ನು ಉಪಯೋಗಿಸಬಹುದು .ನೀವು ಕಿವಿ ಮತ್ತು ಕಣ್ಣುಗಳನ್ನು ಸ್ವಚ್ಛಗೊಳಿಸಲು ಹತ್ತಿ ಚೆಂಡುಗಳನ್ನು ಹೊಂದಬಹುದು.

ಹಂತ ೨ :ಸರಿಯಾದ ಉಷ್ಣತೆ

ನಿಮ್ಮ ಮೊಣಕೈಗಳನ್ನು ಅಥವಾ ಥರ್ಮಾಮೀಟರ್ ಅನ್ನು ಬಳಸಿಕೊಂಡು ನೀರು ತಣ್ಣಗಿದೆಯೋ ಅಥವಾ ಬೆಚ್ಚಗಿದೆಯೋ ಎಂದು ಖಚಿತಪಡಿಸಿಕೊಳ್ಳಿ .ನಿಮ್ಮ ಮಗುವಿಗೆ ಆರಾಮದಾಯಕವಾಗಲು ಇರುವಷ್ಟು ಬೆಚ್ಚಗಿದ್ದರೆ ಸಾಕು .ಶಿಶುಗಳಿಗೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಸ್ನಾನದತೊಟ್ಟಿಯನ್ನು ನೀವು ಖರೀದಿಸಬಹುದು  ಮತ್ತು ಕೆಲವು ಇಂಚುಗಳಷ್ಟು ಬೆಚ್ಚಗಿನ ನೀರಿನಿಂದ ತುಂಬಿಕೊಳ್ಳಬಹುದು.ಸಾಮಾನ್ಯವಾಗಿ ಈ ತೊಟ್ಟಿಯು (ಟಬ್ ) ಮಗುವಿನ ತಲೆ ಮತ್ತು ಕುತ್ತಿಗೆಯನ್ನು ಬೆಂಬಲಿಸುವ ರೀತಿಯಲ್ಲಿ ಆಕಾರವನ್ನು ಹೊಂದಿರುತ್ತದೆ .

ನಿಮ್ಮ ಮಗುವನ್ನು ಇರಿಸಲು ನೀವು ಯಾವುದೇ ರೀತಿಯ ಸಮತಟ್ಟಾದ ಮೇಲ್ಮೈ ಯನ್ನು ಬಳಸಬಹುದು.ಮೇಲ್ಮೈಯನ್ನು ಹೊದಿಕೆಯಿಂದ ಮುಚ್ಚಿ ನಂತರ ಅದರ ಮೇಲೆ ನಿಮ್ಮ ಮಗುವನ್ನು ಇಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ .

ಹಂತ ೩ :ಇದು ಸ್ನಾನದ ಸಮಯ

ನಿಮ್ಮ ಮಗುವು ನವಜಾತವಾಗಿದ್ದರೆ ((ಒಂದು ವಾರಕ್ಕಿಂತಲೂ ಕಡಿಮೆ ವಯಸ್ಸಿನವರು) ಸ್ಪಾಂಜ್ ಸ್ನಾನವು ಸೂಕ್ತವಾಗಿದೆ.ನಿಮ್ಮ ಒಂದು ಕೈಯಲ್ಲಿ ಅವವನನ್ನು ಹಿಡಿದುಕೊಂಡು ಸಮತಲವಾದ ಮೇಲ್ಮೈ ಯ ಮೇಲೆ ಇರಿಸಿ ನಂತರ ಸ್ಪಾಂಜ್ವನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಮತ್ತೆ ಅವನ  ಚರ್ಮದ ಮೇಲೆ ನಿಧಾನವಾಗಿ ಒರೆಸಿ ..

ನಿಮ್ಮ ಮಗುವು ಸ್ವಲ್ಪ ದೊಡ್ಡದಿದ್ದರೆ ಅದನ್ನು ತೊಟ್ಟಿಯಲ್ಲಿ ಇರಿಸಿ ಸಂಪೂರ್ಣವಾಗಿ ಮುಳುಗದಂತೆ ಕಾಲಿರಿಸಿ .ಮಗು ತೇವವಾಗಿ ಜಾರುವ ಕಾರಣ ಯಾವಾಗಲೂ ಅದರ ಮೇಲೆ ಒಂದು ಕೈಯಿರಿಸಿ .ಜಾರುವ ಕಾರಣ ಯಾವಾಗಲೂ ಅದರ ಮೇಲೆ ಒಂದು ಕೈಯಿರಿಸಿ .

ಹಂತ ೪ :ಗುಳ್ಳೆಗಳನ್ನೆಬ್ಬಿಸಿ

ನಿಮ್ಮ ಮಗುವನ್ನು ತೇವಗೊಳಿಸಲು ನಿಮ್ಮ ಕೈ ಅಥವಾ ಸಣ್ಣ ಮಗ್ ಅನ್ನು ಬಳಸಿ.ಮುಖ, ತೋಳು ಮತ್ತು ಕಾಲುಗಳಿಗಾಗಿ, ನೀವು ಆರ್ದ್ರವಾದ ಬಟ್ಟೆ ಬಳಸಬಹುದು.ನಿಧಾನವಾಗಿ ಚರ್ಮದ ಮೇಲೆ ಸಾಬೂನನ್ನು ಹಚ್ಚಿ ನೊರೆ ಬರಿಸಿ.ಕಣ್ಣೀರು ಬರದ ಮತ್ತು ನೈಸರ್ಗಿಕವಾದ ಸಾಬೂನು ಮತ್ತು ಶ್ಯಾಂಪೂಗಳನ್ನು  ಆಯ್ಕೆಮಾಡಿ.ಎಲ್ಲಾ ಸಣ್ಣ ಮಡಿಕೆಗಳು,ಕುತ್ತಿಗೆಯ ಕೆಳಭಾಗದಲ್ಲಿ ಮತ್ತು ಸಾಮಾನ್ಯವಾಗಿ ಮರೆತು ಹೋಗುವ ಕಿವಿಯ ಹಿಂದೆ ಇರುವ ಸ್ಥಳಗಳನ್ನು ಸ್ವಚ್ಛಗೊಳಿಸಿ.

ಹಂತ ೫:ಸ್ನಾನದ ನಂತರದ ರೂಢಿ

ಅವನನ್ನು ಸ್ನಾನ ಮಾಡಿಸಿದ ನಂತರ ತೊಟ್ಟಿಯಿಂದ ಅವನನ್ನು ಎತ್ತಿಕೊಳ್ಳಿ ಮತ್ತು ಟವೆಲ್ ನಿಂದ ಅವನನ್ನು ಕಟ್ಟಿಕೊಳ್ಳಿ .ತಲೆಯಿಂದ ಕಾಲಿನ ತನಕ ಒರೆಸಿ ಒಣಗಿಸಿ .ಅವನಿಗೆ ಅನ್ವಯಿಸುವ  ಅಗತ್ಯವಿರುವ ಯಾವುದೇ ಶಿಫಾರಸು ಉಳ್ಳ ಮುಲಾಮುಗಳು ಇದ್ದಲ್ಲಿ, ಈಗ ಸಮಯ ಬಂದಿದೆ ,ಅದನ್ನು ಹಚ್ಚಿ .ನೀವು ಲೋಷನ್ ಮತ್ತು ಪುಡಿಗಳನ್ನು(ಪೌಡರ್ ) ಸಹ ಬಳಸಬಹುದು ಆದರೆ ಅವು ಕಡ್ಡಾಯವಾಗಿಲ್ಲ.ಅವನಿಗೆ ಡಯಾಪರ್ ತೊಡಿಸಿದ ನಂತರ ನೀವು ಹೋಗುವುದೊಳ್ಳೆಯದು .

ನಿಮ್ಮ ಮಗುವಿಗೆ ಪ್ರತಿದಿನ ಸ್ನಾನ ಅಗತ್ಯವಿಲ್ಲದ ಎಂದು ನೆನಪಿನಲ್ಲಿಡಿ .ವಾಸ್ತವವಾಗಿ, ಇದು ನಿಮ್ಮ ಮಗುವಿನ ತೇವಾಂಶದ ಚರ್ಮವನ್ನು ಮಾತ್ರ ತೆಗೆದುಹಾಕುತ್ತದೆ. ನೀವು ವಾರಕ್ಕೆ ಮೂರು ಬಾರಿ ಅವನಿಗೆ  / ಅವಳಿಗೆ ಸ್ನಾನವನ್ನು ನೀಡಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon