Link copied!
Sign in / Sign up
11
Shares

ಮಗುವಿಗೆ ರಾಗಿ: ಯಾವಾಗ ಪರಿಚಯಿಸಬೇಕು? (Ragi For Babies: When To Introduce? in Kannada)

ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದ ಮತ್ತು ಮಾನವ ದೇಹಕ್ಕೆ ಅಗತ್ಯವಿರುವ ಎಲ್ಲ ಪೌಷ್ಠಿಕತೆಗಳನ್ನು ನೀಡುವ ಕಾರಣದಿಂದ, ಆರೋಗ್ಯಕರ ಆಹಾರ ಸೇವಿಸುವವರಲ್ಲಿ ರಾಗಿ ಪ್ರಖ್ಯಾತಿ ಪಡೆದಿದೆ. ಆದರೆ ಪ್ರತಿಯೊಬ್ಬ ತಾಯಿ ತನ್ನ ಮಗುವಿಗೆ ಏನು ತಿನ್ನಿಸುತ್ತಾಳೆ ಎನ್ನುವುದರ ಬಗ್ಗೆ ಎಚ್ಚರಿಕೆಯನ್ನು ವಹಿಸುತ್ತಾಳೆ. 

"ಮಕ್ಕಳಿಗೆ ರಾಗಿ ತಿನ್ನಿಸುವುದು ಸುರಕ್ಷಿತವೇ?", "ಯಾವಾಗ ಮತ್ತು ಹೇಗೆ ರಾಗಿಯನ್ನು ಶಿಶುವಿಗೆ ನೀಡಬೇಕು?", "ಮಗು ರಾಗಿಯ ಲಾಭಗಳನ್ನು ಹೇಗೆ ಅನುಭವಿಸುತ್ತದೆ?", "ಮಗುವಿನ ಮೇಲೆ ರಾಗಿ ಅಡ್ಡಪರಿಣಾಮ ಬೀರಬಹುದೇ?" - ಇವುಗಳ ಸಾಮಾನ್ಯವಾಗಿ ಹೊಸ ಬಗೆಯ ಆಹಾರವನ್ನು ಮಗುವಿಗೆ ಪರಿಚಯಿಸುವಾಗ ಪ್ರತಿಯೊಬ್ಬ ತಾಯಿಗೆ ಕಾಡುವ ಪ್ರಶ್ನೆ. ರಾಗಿ ಕೂಡಾ ಇದರಿಂದ ಹೊರತಾಗಿಲ್ಲ. ರಾಗಿಯ ಬಗ್ಗೆ ಮತ್ತು ಅದರ ಕುರಿತಾಗಿ ನಿಮಗಿರುವ ಪ್ರಶ್ನೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ. 

ಪರಿವಿಡಿ:

೧. ರಾಗಿ ಎಂದರೇನು? (What is Ragi? in Kannada)

೨. ರಾಗಿಯ ಪೌಷ್ಟಿಕಾಂಶದ ಮೌಲ್ಯ (Ragi Nutritional Value in Kannada)

೩. ರಾಗಿಯನ್ನು ನಿಮ್ಮ ಮಗುವಿಗೆ ಹೇಗೆ ಪರಿಚಯಿಸಬೇಕು? (When and How to Introduce Ragi for Babies? in Kannada)

೪. ನಿಮ್ಮ ಮಗುವಿಗೆ ಸುಲಭವಾಗಿ ಮಾಡಬಹುದಾದ ರಾಗಿ ಗಂಜಿಯ ವಿಧಾನ (Easy Ragi Porridge Recipe For Your Baby in Kannada)

೫. ನಿಮ್ಮ ಮಗುವಿಗೆ ರಾಗಿಯ ಅರೋಗ್ಯ ಲಾಭಗಳು (Ragi Health Benefits For Your Little One in Kannada)

೬. ರಾಗಿಯ ಸಂಭವನೀಯ ಅಡ್ಡಪರಿಣಾಮಗಳು (Possible Side Effects of Ragi in Kannada)

೧. ರಾಗಿ ಎಂದರೇನು? (What is Ragi? in Kannada)

ರಾಗಿ (ಫಿಂಗರ್ ಮಿಲ್ಲೆಟ್ ಅಥವಾ ನಾಚ್ನಿ ಎಂದು ಸಹ ಕರೆಯಲ್ಪಡುವ) ಪ್ರೋಟೀನ್, ಐರನ್, ಕ್ಯಾಲ್ಸಿಯಂಗಳಿಂದ ತುಂಬಿರುವ ಆರೋಗ್ಯ್ಕರ ಧಾನ್ಯ. ಇದರ ವೈಜ್ಞಾನಿಕ ಹೆಸರು ಎಲ್ಯುಸೈನ್ ಕೊರಕಾನ. ಇದು ವಾರ್ಷಿಕ ಮೂಲಿಕೆಯ ಸಸ್ಯಗಳಲ್ಲಿ ಒಂದಾಗಿದ್ದು, ಶುಷ್ಕ ಮತ್ತು ಅರೆಶುಷ್ಕ ಸ್ಥಳಗಳಲ್ಲಿ ಬೆಳೆಯಲಾಗುತ್ತದೆ. ಇದು ಬರಗಾಲಭರಿತವಾದ ಸ್ಥಳಗಳಲ್ಲಿ ಸಹ ಬೆಳೆಯಬಹುದು. 

ರಾಗಿಯ ಅರೋಗ್ಯ ಪ್ರಯೋಜನಗಳು ಅಸಂಖ್ಯಾತ. ಆದರೆ ನಮ್ಮಲ್ಲಿ ಹಲವರಿಗೆ ಅದು ಹೇಗೆ ನಮ್ಮ ದೇಹಕ್ಕೆ ಆರೋಗ್ಯಕರ ಎನ್ನುವುದು ತಿಳಿದಿರುವುದಿಲ್ಲ. ಶಿಶುವಿಗೆ ರಾಗಿಯ ಅರೋಗ್ಯ ಪ್ರಯೋಜನಗಳ ವಿಷಯ ಬಂದಾಗ, ರಾಗಿಯ ಪೌಷ್ಟಿಕ ಮೌಲ್ಯ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ರಾಗಿಯನ್ನು ಹಲವು ರೀತಿಯಲ್ಲಿ ಸೇವಿಸಬಹುದು - ರಾಗಿ ರೊಟ್ಟಿ (ರಾಗಿ ಹಿಟ್ಟಿನಿಂದ ಮಾಡಿರುವಂತದ್ದು), ರಾಗಿ ದೋಸಾ, ರಾಗಿ ಬಜ್ಜಿ. 

[Back To Top]

೨. ರಾಗಿಯ ಪೌಷ್ಟಿಕಾಂಶದ ಮೌಲ್ಯ (Ragi Nutritional Value in Kannada):

ರಾಗಿಯ ಪೌಷ್ಟಿಕದ ಮೌಲ್ಯದಿಂದಾಗಿ ಮಗುವಿಗೆ ರಾಗಿಯ ಪ್ರಯೋಜನಗಳು ಹಲವಾರು. ರಾಗಿಯಲ್ಲಿ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ಸ್, ಕಾರ್ಬೋಹೈಡ್ರೇಟ್ಸ್, ನಾಯಿನಾಂಶ ಮತ್ತು ಇನ್ನಿತರ ಪೌಷ್ಟಿಯೇಟುಗಳಿವೆ. ಅದರ ಪೌಷ್ಟಿಕತೆಯ ಬದಿಚಿತ್ರ ಇಲ್ಲಿದೆ:

 

೩. ರಾಗಿಯನ್ನು ನಿಮ್ಮ ಮಗುವಿಗೆ ಹೇಗೆ ಪರಿಚಯಿಸಬೇಕು? (When and How to Introduce Ragi for Babies? in Kannada)

ಹಲವಾರು ಮಕ್ಕಳಿಗೆ ತೂಕ ಗಳಿಸಲು, ಅರೋಗ್ಯ ಮತ್ತು ರೋಗನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಮೊದಲ ಆರು ತಿಂಗಳು ಕೇವಲ ತಾಯಿಯ ಎದೆಹಾಲು ಬೇಕು. ಆದರೆ ಪ್ರತಿಯೊಂದು ಶಿಶುವಿನ ಪೌಷ್ಟಿಕ ಅಗತ್ಯತೆಗಳು ಬದಲಾಗುತ್ತವೆ. ಕಳವು ಮಕ್ಕಳಿಗೆ ವೈದ್ಯರೇ ೩ ತಿಂಗಳ ನಂತರ ರಾಗಿ ತಿನ್ನಿಸಲು ಹೇಳಬಹುದು. ಆದರೆ ನಿಮ್ಮ ಮಗುವಿಗೆ ರಾಗಿಯನ್ನು ಹೇಗೆ ನೀಡಬೇಕು? ಇಲ್ಲಿದೆ ಅದಕ್ಕೆ ಉತ್ತರ. 

ನಿಮ್ಮ ಮಗುವಿಗೆ ಯಾವೂದೆಯೂ ಒಳ್ಳೆಯದು ಎನ್ನುವುದರ ಅರಿವು ನಿಮ್ಮ ವೈದ್ಯರಿಗಿರುತ್ತದೆ. ಹಾಗಾಗಿ, ರಾಗಿಯನ್ನು ನಿಮ್ಮ ಮಗುವಿಗೆ ಪರಿಚಯಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡಿಯಿರಿ. ಅನೇಕ ವೈದ್ಯರು ರಾಗಿಯನ್ನು ನಿಮ್ಮ ಮಗುವಿಗೆ ಪರಿಶಯಿಸಲು ಒಪ್ಪಿಗೆ ನೀಡುತ್ತಾರೆ. ಏಕೆಂದರೆ ಈ ಆಹಾರ ಪದಾರ್ಥ ಗ್ಲುಟೆನ್ ಮುಕ್ತವಾಗಿದ್ದು, ಅಲ್ಲೆರ್ಜಿಗಳನ್ನೂ ಉಂಟು ಮಾಡುವುದಿಲ್ಲ. ಆದರೆ ರಾಗಿ ಹಿಟ್ಟು ಗೋಧಿಹಿಟ್ಟು ಅಥವಾ ಇನ್ನಿತರ ಹಿಟ್ಟಿನೊಂದಿಗೆ ಯಾವುದೇ ಕಲಬೆರಿಕೆಯಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ರಾಗಿ ಕಲುಷಿತ ಸ್ಥಿತಿಯಲ್ಲಿದ್ದರೆ, ನಿಮ್ಮ ಮಗು ಅರೋಗ್ಯ ಸಮಸ್ಯೆಗಳಿಂದ ಬಳಲಬಹುದು. ಉದಾಹರಣೆಗೆ ಅಲ್ಲೆರ್ಜಿ, ದದ್ದುಗಳು, ಭೇದಿ, ಇತ್ಯಾದಿ. ಈ ರೀತಿಯ ರಾಗಿಯ ಕಲಬೆರಿಕೆಯನ್ನು ರಾಗಿ ಹಿಟ್ಟು ಮನೆಯಲ್ಲಿಯೇ ತಯಾರಿಸುವುದರಿಂದ ತಪ್ಪಿಸಬಹುದು. 

ನಿಮ್ಮ ಮಗುವಿಗೆ ರಾಗಿಯನ್ನು ಪರಿಚಯಿಸಿದ ನಂತರ, ೩-ದಿನದ ಕಾಯುವಿಕೆಯ ನಿಯಮ ಪಾಲಿಸುವುದು ಸೂಕ್ತ. ರಾಗಿ ಮೊದಲ ಬಾರಿಗೆ ನಿಮ್ಮ ಮಗುವಿಗೆ ತಿನ್ನಿಸಿದ ನಂತರ, ೩-೪ ದಿನಗಳ ಕಾಲ ಯಾವುದೇ ಹೊಸ ಬಗೆಯ ಆಹಾರವನ್ನು ನೀಡಬೇಡಿ. ಇದರಿಂದ ನಿಮ್ಮ ಮಗು ರಾಗಿಗೆ ಅಲ್ಲೆರ್ಜಿ ಹೊಂದಿದೆಯೇ ಎಂದು ತಿಳಿದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಮಗು ರಾಗಿಗೆ ಒಗ್ಗಿಕೊಳ್ಳಲು ಕಷ್ಟಪಡುತ್ತಿದ್ದರೆ, ದದ್ದು, ಅಜೀರ್ಣತೆ, ಚಡಪಡಿಸುವುದು, ಭೇದಿಯಂತಹ ಸಮಸ್ಯೆಯಿಂದ ಬಳಲುತ್ತಿರಬಹುಸು. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ, ನಿಮ್ಮ ಮಗುವಿಗೆ ರಾಗಿ ಅಥವಾ ರಾಗಿ ಗಂಜಿ ನೀಡುವುದನ್ನು ನಿಲ್ಲಿಸಿ, ನಿಮ್ಮ ವೈದ್ಯರ ಸಲಹೆ ಪಡಿಯಿರಿ. 

೬ ತಿಂಗಳಿಗಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ, ರಾಗಿ ಗಂಜಿಯನ್ನು ರಾಗಿಯಿಂದ ಪಡೆದ ರಾಗಿ ಹಾಲು ಅಥವಾ ಮನೆಯಲ್ಲಿಯೇ ಮಾಡಿದ ರಾಗಿ ಹಿಟ್ಟಿನಿಂದ ತಯಾರಿಸುವುದು ಸೂಕ್ತ. 

ರಾಗಿಯನ್ನು ಹಾಲು ಅಥವಾ ಮೊಸರಿನ ಜೊತೆ ಬೆರೆಸಿ ರಾಗಿ ಗಂಜಿ ಮಾಡದಿರುವುದು ಒಳಿತು. ಹಾಲು ಅಥವಾ ಮೊಸರು, ಮಗುವಿನ ದೇಹ ರಾಗಿಯಿಂದ ಐರನ್ ಅಂಶವನ್ನು ಹೀರಿಕೊಳ್ಳುವುದಕ್ಕೆ ಅಡಚಣೆಯುಂಟು ಮಾಡುತ್ತದೆ. ಇದನ್ನು ವಿಟಮಿನ್ ಸಿ ಹೊಂದಿರುವ ಹಣ್ಣುಗಳೊಂದಿಗೆ ನೀಡುವುದು ಆರೋಗ್ಯಕರ. 

[Back To Top]

೪. ನಿಮ್ಮ ಮಗುವಿಗೆ ಸುಲಭವಾಗಿ ಮಾಡಬಹುದಾದ ರಾಗಿ ಗಂಜಿಯ ವಿಧಾನ (Easy Ragi Porridge Recipe For Your Baby in Kannada):

೧೦ ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ, ಎರಡು ಬಗೆಗಳಲ್ಲಿ ರಾಗಿ ಗಂಜಿಯನ್ನು ತಯಾರಿಸಬಹುದು.

ಬೆರೆಸಿದ ಮಿಶ್ರಣದಿಂದ:

೧. ರಾಗಿಯನ್ನು ತೊಳೆದು, ೮-೧೦ ಗಂಟೆಗಳ ಕಾಲ ನೆನೆಸಿಡಿ. 

೨. ಮಿಕ್ಸರ್ ನಲ್ಲಿ ಈ ರಾಗಿಯನ್ನು ನೀರಿನೊಂದಿಗೆ ಅರೆಯಿರಿ.

೩. ಒಂದು ಬಟ್ಟೆಯ ಸಹಾಯದಿಂದ ಈ ಮಿಶ್ರಣದಿಂದ ಬಂದ ಹಾಲನ್ನು ಶೇಖರಿಸಿಕೊಳ್ಳಿ. 

೪. ಈ ದ್ರವ್ಯವನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ. ಈ ಮಿಶ್ರಣ ದಟ್ಟವಾದ ನಂತರ, ನಿಮ್ಮ ಮಗುವಿಗೆ ಉಣಬಡಿಸಿ. ಬಿಸಿ ಊಟ ಮಗುವಿನ ಹೊಟ್ಟೆಗೆ ಹಿತಕರ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. 

ರಾಗಿ ಹಿಟ್ಟಿನಿಂದ:

೧. ೫ ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ, ರಾಗಿ ಹಿಟ್ಟನ್ನು ಮನೆಯಲ್ಲಿಯೇ ತಯಾರಿಸಿ, ಮುಸ್ಲಿನ್ ಬಟ್ಟೆಯ ಮೂಲಕ ಶೋಧಿಸುವುದು ಒಳಿತು. ಏಕೆಂದರೆ, ಆ ಚಿಕ್ಕ ವಯಸ್ಸಿನಲ್ಲಿ ನಿಮ್ಮ ಮಗು ಯಾವುದೇ ಉರುಟು ಮದಾರ್ಥವನ್ನು ನುಂಗುವುದು ಕಷ್ಟ. 

೨. ಈ ಹಿಟ್ಟನ್ನು ನೀರಿನಲ್ಲಿ ಬೆರೆಸಿ. 

೩. ಯಾವುದೇ ಗಂಟುಗಳಿಲ್ಲದೇ ಹಿಟ್ಟನ್ನು ಸರಿಯಾಗಿ ಬೆರೆಸಿ. ಬೆಲ್ಲವನ್ನು ಉಪಯೋಗಿಸುವುದಿದ್ದರೆ, ಅದನ್ನು ಕರಗಿಸಿ, ಅದನ್ನು ಸೋಸಿ, ರಾಗಿ ಹಿಟ್ಟಿನ ಮಿಶ್ರಣಕ್ಕೆ ಬೆರೆಸಿ. 

೪. ಈ ಮಿಶ್ರಣವನ್ನು ಅರೆ-ದಟ್ಟವಾಗುವ ವರೆಗೆ ಬಿಸಿ ಮಾಡಿ. 

೫. ಅದು ಬಿಸಿಯಾದ ನಂತರ ನಿಮ್ಮ ಮಗುವಿಗೆ ಉಣಬಡಿಸಿ. 

೧೦ ತಿಂಗಳಿಗಿಂತ ದೊಡ್ಡ ಮಕ್ಕಳಿಗೆ:

ನಿಮ್ಮ ಮಗು ಹತ್ತು ತಿಂಗಳನ್ನು ದಾಟಿದ್ದರೆ, ೨-೩ ಬಾದಾಮ್ ಗಳನ್ನೂ ಈ ಮಿಶ್ರಣಕ್ಕೆ ಸೇರಿಸುವುದರಿಂದ ಅದರ ಪೌಷ್ಟಿಕ ಮೌಲ್ಯ ಹೆಚ್ಚಿಸಬಹುದು. 

೧. ಬಾದಾಮ್ ನನ್ನು ೪-೬ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. 

೨. ಅದರ ಸಿಪ್ಪೆಗಳನ್ನು ತೆಗೆದು, ರಾಗಿ ಮತ್ತು ನೀರಿನೊಂದಿಗೆ ಒಂದಾಗಿಸಿ. 

೩. ಮೇಲೆ ನೀಡಿರುವ ಯಾವುದಾದರೂ ಪದ್ಧತಿಯನ್ನು ಬಳಸಿಕೊಂಡು ರಾಗಿ ಗಂಜಿಯನ್ನು ತಯಾರಿಸಿ. 

೪. ಬಾದಾಮ್ ಅನ್ನು ನೀರಿಂದ ನೆನಿಸಿಟ್ಟು, ನಿಮ್ಮ ಮಗುವಿಗೆ ನೀಡುವುದು ಸೂಕ್ತ. ಏಕೆಂದರೆ ಈ ಬಗೆಯಲ್ಲಿ ನಿಮ್ಮ ಮಗುವಿಗೆ ಈ ಮಿಶ್ರಣವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. 

[Back To Top]

೫. ನಿಮ್ಮ ಮಗುವಿಗೆ ರಾಗಿಯ ಅರೋಗ್ಯ ಲಾಭಗಳು (Ragi Health Benefits For Your Little One in Kannada):

ಮಕ್ಕಳಿಗೆ ಮತ್ತು ವಯಸ್ಕರಿಗೆ ರಾಗಿಯ ಆರೋಗ್ಯ ಪ್ರಯೋಜನಗಳು ಹಲವಾರು. ರಾಗಿ ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕತೆಗಳನ್ನು ನೀಡುವುದರೊಂದಿಗೆ, ತೂಕ ಹೆಚ್ಚಿಸಲು, ನಿದ್ದೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮಗು ರಾಗಿ ಸೇವಿಸುವುದರಿಂದ ಅನುಭವಿಸಬಹುದಾದ ಲಾಭಗಳ ಪಟ್ಟಿ ಇಲ್ಲಿದೆ:

೧. ರಾಗಿಯ ಪೌಷ್ಟಿಕ ಮೌಲ್ಯ: ರಾಗಿ ಅಥವಾ ರಾಗಿ ಹಿಟ್ಟು ಪೌಷಹಿಕಾಂಶಗಳಿಂದ ತುಂಬಿದೆ. ಆದ್ದರಿಂದ ನಿಮ್ಮ ಮಗುವಿಗೆ ರಾಗಿಯನ್ನು ನೀಡುವುದರಿಂದ ನ್ಯೂನಪೋಷಣೆಯನ್ನು ತಪ್ಪಿಸಬಹುದು. ಅದರೊಂದಿಗೆ ನಿಮ್ಮ ಮಗುವಿಗೆ ತ್ವರಿತವಾಗಿ ಶಕ್ತಿ ದೊರಕುತ್ತದೆ. 

೨. ವಿರೇಚಕ: ರಾಗಿಯಲ್ಲಿ ಆಮ್ಲೀಯತೆ ಮತ್ತು ಗ್ಲುಟೆನ್ ಕಡಿಮೆಯಿದ್ದು, ಅತ್ಯುನ್ನತ ವಿವೆಚಕವಾಗಿದೆ. ಇದನ್ನು ಸೇವಿಸುವುದರಿಂದ ನಿಮ್ಮ ಮಗು ಮಲಬದ್ಧತೆ ಅಥವಾ ಈ ತರಹದ ಅರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ತಪ್ಪಿಸಬಹುದು. 

೩. ಹಸಿವನ್ನು ನೀಗಿಸುತ್ತದೆ: ನಿಮ್ಮ ಮಗುವಿಗೆ ಆರೋಗ್ಯಕರವಷ್ಟೇ ಅಲ್ಲದೇ, ಇದರಲ್ಲಿರುವ ಟ್ರಿಪ್ಟಾಫಾನ್ ಅಮೈನೊ ಆಮ್ಲ ಹಸಿವನ್ನು ನೀಗಿಸುತ್ತದೆ. 

೪. ನಿಮ್ಮ ಮಗುವ ಹೊಟ್ಟೆ ತುಂಬಿಸುತ್ತದೆ: ರಾಗಿಯಲ್ಲಿರುವ ಕಾರ್ಬೋಹೈಡ್ರೇಟ್ಸ್ ನಿಮ್ಮ ಮಗುವಿನ ದೇಹದಲ್ಲಿ ಗ್ಲುಕೋಸ್ ನಿಧಾನವಾಗಿ ಬಿಡುಗಡೆಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ, ರಾಗಿ ನಿಮ್ಮ ಮಗುವನ್ನು ಹೆಚ್ಚಿನ ಸಮಯದವರೆಗೆ ಸಂತೃಪ್ತವಾಗಿರಿಸುತ್ತದೆ. 

೫. ಒಳ್ಳೆಯ ನಿದ್ದೆ: ರಾಗಿ ನಿಮ್ಮ ಮಗು ಸಂತೃಪ್ತ ನಿದ್ದೆ ಪಡೆಯುವಂತೆ ಮಾಡುತ್ತದೆ. ಮಗುವಿನ ಹೊಟ್ಟೆ ತುಂಬಿದ್ದಲ್ಲಿ, ನಿಮ್ಮ ಮಗು ದೀರ್ಘ ನಿದ್ದೆ ಮಾಡುತ್ತದೆ. 

೬. ಐರನ್ ಮತ್ತು ಕ್ಯಾಲ್ಸಿಯಂ ಕೊರತೆಗಳನ್ನು ತಡೆಗಟ್ಟುತ್ತದೆ: ರಾಗಿಯಲ್ಲಿರುವ ಐರನ್ ಮತ್ತು ಕ್ಯಾಲ್ಸಿಯಂ ಹೆಚ್ಚಿನ ಮಟ್ಟದಲ್ಲಿದ್ದು, ಅದು ಯಾವುದೇ ಬಗೆಯ ಕೊರತೆಗಳನ್ನು ತಡೆಗಟ್ಟಿ, ರಕ್ತ ಸಂಚಲನವನ್ನು ಸುಧಾರಿಸುತ್ತದೆ. 

೭. ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ: ರಾಗಿಯ ಉತ್ತಮ ಪೌಷ್ಟಿಕ ಮೌಲ್ಯದ ಕಾರಣ ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. 

[Back To Top]

೬. ರಾಗಿಯ ಸಂಭವನೀಯ ಅಡ್ಡಪರಿಣಾಮಗಳು (Possible Side Effects of Ragi in Kannada):

ರಾಗಿ ಅರೋಗ್ಯ ಲಾಭಗಳೊಂದಿಗೆ, ಅಡ್ಡಪರಿಣಾಮಗಳು ಇವೆ. ಆದರೆ ಅದು ನೀವು ಎಷ್ಟು ಪ್ರಮಾಣದ ರಾಗಿಯನ್ನು ಸೇವಿಸುತ್ತೀರಿ ಎನ್ನವುದರ ಮೇಲೆ ಅವಲಂಬಿತವಾಗಿದೆ. ರಾಗಿಯನ್ನು ಮಿತವಾಗಿ ಸೇವಿಸುವುದರಿಂದ ನೀವು ಸುರಕ್ಷಿತವಾಗಿರಬಹುದು. 

ರಾಗಿಯ ತಣ್ಣಗಾಗಿಸುವ ಗುಣದಿಂದ ಚಳಿಗಾಲದಲ್ಲಿ ನಿಮ್ಮ ಮಗು ಶೀತದಿಂದ ಬಳಲುವಂತಾಗಬಹುದು. ಹಾಗಾಗಿ, ಚಳಿಗಾಲದಲ್ಲಿ ರಾಗಿ ನಿಮ್ಮ ಮಗುವಿಗೆ ನೀಡದಿರುವುದು ಉತ್ತಮ. 

ರಾಗಿಯನ್ನು ಅಧಿಕವಾಗಿ ಸೇವಿಸಿದರೆ, ಅದು ನಿಮ್ಮ ದೇಹದಲ್ಲಿ ಒಕ್ಸಾಲಿಕ್ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸಬಹುದು. ಆದ ಕಾರಣ ಅದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಉಂಟುಮಾಡಬಹುದು. ಹಾಗಾಗಿ ರಾಗಿ ಸೇವನೆ ಮಿತವಾಗಿರಲಿ. 

ಕೊನೆಯದಾಗಿ, ನಿಮಗೆ ರಾಗಿ ಸೇವನೆಯ ಬಗ್ಗೆ ಯಾವುದೇ ಬಗೆಯ ಅನುಮಾನವಿದ್ದರೂ, ಯಾವುದೇ ಊಹೆಗಳನ್ನು ಮಾಡದೇ, ನಿಮ್ಮ ಮಗುವಿನ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon