Link copied!
Sign in / Sign up
4
Shares

ಮಗುವನ್ನು ಶಾಲೆಗೆ ಸೇರಿಸುವ ಮೊದಲು ಯೋಚಿಸಲೇಬೇಕಾದ ಟಾಪ್ ೧೦ ವಿಷಯಗಳು

ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಮೊದಲು ನೀವು ಹುಡುಕುವುದನ್ನು ಪ್ರಾರಂಭಿಸಿ, ಯಾವ ಶಾಲೆ/ಶಿಶು ವಿಹಾರ ನಮ್ಮ ಮಗು ಕಲಿಯಲು ಸರಿಯಾದ ಸ್ಥಳ ಎಂದು.

ಇತ್ತೀಚಿನ ದಿನಗಳಲ್ಲಿ, ಶಾಲೆಗಳು ಮಗುವಿಗೆ ಪೋಷಣೆ ಮತ್ತು ಸರಿಯಾದ ಶಿಕ್ಷಣ ನೀಡುವ ಬದಲು ಹಣವನ್ನು ಮಾಡಲು ವಾಣಿಜ್ಯ ವ್ಯಾಪಾರಗಳಂತೆ ವ್ಯವಹರಿಸುತ್ತಿವೆ.

ಹಾಗಿದ್ದರೆ, ಮಗುವನ್ನು ಸೇರಿಸಲು ಸರಿಯಾದ ಶಾಲೆ ಯಾವುದು? ಅದನ್ನು ನಾವು ಹೇಗೆ ಹುಡುಕುವುದು? ಎಂಬ ಪ್ರಶ್ನೆ ಬರುವುದು ಸಹಜ, ಅದಕ್ಕೆ ನಾವು ನಿಮಗಾಗಿ ಈ ಲೇಖನವನ್ನು ಬರೆದಿರುವೆವು.

ಸ್ವತಂತ್ರವಾಗಿರಲು ಮಗುವು ಇಡುವ ಮೊದಲ ಹೆಜ್ಜೆ ಶಾಲೆ.

೧.ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಶಾಲೆಯನ್ನು ಆಯ್ಕೆಮಾಡಿ

ನಿಮ್ಮ ಮನೆಗೆ ಹತ್ತಿರವಿರುವ ಶಾಲೆ ಅಥವಾ ಶಿಶು ವಿಹಾರವನ್ನು ಆರಿಸಿಕೊಳ್ಳಲ್ಲು ನಾವು ಸಲಹೆ ನೀಡುತ್ತೇವೆ, ಏಕೆಂದರೆ ತುಂಬಾ ದೂರ ಪ್ರಯಾಣ ಮಾಡುವುದು ಪುಟ್ಟ ಮಕ್ಕಳಿಗೆ ಆಯಾಸ ಅಥವಾ ತೊಂದರೆ ಎನ್ನಿಸಬಹುದು.

ಜೊತೆಗೆ ನಿಮ್ಮ ಮಗು ಅಸಮಾಧಾನವಾಗಿದ್ದರೆ, ಅಥವಾ ಯಾವುದಾದರು ಕಾರಣಕ್ಕೆ ನೀವು ಶಾಲೆಗೆ ಭೇಟಿ ನೀಡಬಹುದು ಮತ್ತು ಮಗುವಿನ ಪ್ರಗತಿಯ ಮತ್ತು ಶಾಲೆಯಲ್ಲಿ ಅವನ/ಳ ಚಟುವಟಿಕೆಯ ಬಗ್ಗೆ ವಿಚಾರಿಸಿಕೊಳ್ಳಬಹುದು.

೨.ಗುಣಮಟ್ಟದ ಶಿಕ್ಷಣವನ್ನು ನೀಡುವ ಶಾಲೆಗಳನ್ನು ಆರಿಸಿ

ಈಗಾಗಲೇ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿರುವ ಪೋಷಕರನ್ನು ಭೇಟಿ ಮಾಡಿ, ಶಾಲೆಯ ಬಗ್ಗೆ ಕೇಳಿ ಉತ್ತಮ ಗುಣಮಟ್ಟವುಳ್ಳ ಶಾಲೆಗಳನ್ನು ಪಟ್ಟಿ ಮಾಡಿ.

ಅವರಿಂದ ಶಾಲೆಯ ಬಗ್ಗೆ ಪ್ರತಿಕ್ರಿಯೆಯನ್ನು ಪಡೆಯಿರಿ. ಅಲ್ಲಿ ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ, ಹೇಗೆ ಶಿಕ್ಷಣ ನೀಡುತ್ತಾರೆ ಎಂಬ ಮಾಹಿತಿಯನ್ನು ಪಡೆಯಿರಿ.

೩.ಶುಚಿತ್ವ/ಸ್ವಚ್ಛತೆ ಅಥವಾ ನೈರ್ಮಲ್ಯ

ಶಾಲೆಯಲ್ಲಿ ನಿಮ್ಮ ಪುಟ್ಟ ಮಗುವು ಸಂಪೂರ್ಣವಾಗಿ ಅಲ್ಲಿನ ಸಿಬ್ಬಂದಿಗಳ ಮೇಲೆ ಅವಲಂಭಿತವಾಗಿರುತ್ತಾರೆ. ನಿಮ್ಮ ಮಗುವಿನ ಎಲ್ಲಾ ವಿಷಯಗಳಲ್ಲೂ ಅವರ ಸಹಾಯದ ಅಗತ್ಯವಿರುತ್ತದೆ.

ಶಾಲೆಯಲ್ಲಿ ಸ್ವಚ್ಛತೆಯ ಬಗ್ಗೆ ನೀವು ಖಂಡಿತವಾಗಿ ನೋಡಬೇಕು, ಇದು ನಿಮ್ಮ ಮಗುವಿನ ಆರೋಗ್ಯದ ಜೊತೆಗೆ ಅವನ ದಿನ ನಿತ್ಯದ ಅವ್ಯಾಸದ ಮೇಲು ಪ್ರಭಾವ ಬೀರಬಹುದು.

೪.ಸೌಲಭ್ಯಗಳು

ನಿಮ್ಮ ಮಗುವನ್ನು ಸೇರಿಸಬೇಕೆಂದಿರುವ ಶಾಲೆಯಲ್ಲಿ/ಶಿಶು ವಿಹಾರದಲ್ಲಿ ನೀವು ಖಂಡಿತವಾಗಿ ಪರಿಶೀಲಿಸಬೇಕಾದ ವಿಷಯ ಅಲ್ಲಿ ಮೂಲ ಸೌಕರ್ಯಗಳಿವೆಯೇ? ಎಂಬುದು. ಮತ್ತು ಅದರಿಂದ ಮಗುವು ಯಾವುದೇ ಸೋಂಕುಗಳಿಗೆ ಒಳಗಾಗುವುದಿಲ್ಲ ಎಂಬುದನ್ನು.

೫.ವಿದ್ಯಾರ್ಥಿ - ಶಿಕ್ಷಕರ ಅನುಪಾತ

ಸರಿಯಾದ ಅನುಪಾತವೆಂದರೆ ೨೫ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು. ೩೦ ವಿದ್ಯಾರ್ಥಿಗಳ ತನಕ ಇರಬಹುದು.

೬.ಸಮಯ

ಕೆಲಸಕ್ಕೆ ಹೋಗುವ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಸಮಯ ಹೊಂದಿರುವ ಶಾಲೆಗೆ ಸೇರಿಸಲು ಬಯಸುತ್ತಾರೆ. ಆದರೆ, ಶಾಲೆಯಲ್ಲಿ ಮಕ್ಕಳಿಗೆ ದಿನಕ್ಕೆ ಕನಿಷ್ಠ ೧ ಗಂಟೆ ಹೊರಾಂಗಣದಲ್ಲಿ ಸುರಕ್ಷಿತ ಆಟವಾಡಲು ಬಿಡುವುದು ತುಂಬಾ ಅಗತ್ಯ. ಮತ್ತು ಜೊತೆಗೆ ಹಲವು ಚಟುವಟಿಕೆಗಳನ್ನು ಮಾಡಿಸುವುದು ಅವರ ಪ್ರತಿಭೆಯನ್ನು ಗುರುತಿಸುವಲ್ಲಿ ಮತ್ತು ಬೆಳೆಸುವುದಕ್ಕೆ ಸಹಾಯವಾಗುತ್ತದೆ.

ಹೆಚ್ಚು ಸಮಯ ಬರಿ ಪುಸ್ತಕದ ಕಲಿಕೆಯಲ್ಲಿ ಇರುವುದು ಅವರ ಮನಸ್ಸಿನ ಮೇಲೆ ಒತ್ತಡ ಉಂಟುಮಾಡಬಹುದು ಮತ್ತು ಏಕಾಗ್ರತೆಯನ್ನು ಕಳೆದುಕೊಳ್ಳುವರು.

೭.ಹೊರಾಂಗಣ ಕ್ರೀಡೆ

ಶಾಲೆಯು ಮಕ್ಕಳು ಆಟವಾಡಲು ಸರಿಯಾದ ಸುರಕ್ಷಿತ ಸ್ಥಳವನ್ನು ಒದಗಿಸುತ್ತದೆಯೇ ಎಂಬುದು ಮುಖ್ಯ ವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಶಾಲೆಗಳು ಹೆಚ್ಚಾಗುತ್ತಿವೆ ಆದರೆ, ಸುರಕ್ಷಿತ ಮತ್ತು ಗುಣಮಟ್ಟದ ಶಿಕ್ಷಣ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ಕ್ರೀಡಾ ಚಟುವಟಿಕೆಗಳು ಬಂದಾಗ ಮಕ್ಕಳನ್ನು ಆಟವಾಡಲು ಅಸುರಕ್ಷಿತ ಸ್ಥಳವನ್ನು ಬಳಸಿಕೊಳ್ಳಬಹುದು, ಆದ್ದರಿಂದ ಇದರ ಬಗ್ಗೆ ಯೋಚಿಸುವುದು ಒಳಿತು.

೮.ಸೌಹಾರ್ದ ಮತ್ತು ಬೆಂಬಲಿಸುವ

ಸ್ನೇಹಿ ಪರಿಸರ ಇರುವ ಶಾಲೆಯನ್ನು ನೀವು ನೋಡಬೇಕು. ಅಲ್ಲಿನ ಸಿಬ್ಬಂದಿ ಮತ್ತು ಶಿಕ್ಷಕರು ಮಗುವನ್ನು ಅರ್ಥ ಮಾಡಿಕೊಂಡು ಅವನ/ಳ ಪ್ರತಿಭೆಯನ್ನು ಹೆಚ್ಚಿಸುವಂತೆ ಅಥವಾ ಮಗುವು ಅವರನ್ನು ಯಾವುದೇ ಸಂಶಯ ಅಥವಾ ವಿಷಯಗಳನ್ನು ಕೇಳುವುದನ್ನು ಅವರು ಸ್ವಾಗತಿಸುವಂತಿರಬೇಕು.

ಕಠಿಣ ನಿಯಮಗಳನ್ನು ಒಳಗೊಂಡಿರುವ ಶಾಲೆಯಲ್ಲಿ ಶಿಕ್ಷಕರು ಮಗುವನ್ನು ಬೆದರಿಸಬಹುದು ಅಥವಾ ಅವರು ಹೇಳಿದಂತೆ ಮಾತ್ರ ಕೇಳಬೇಕಾಗಬಹುದು ಇದರಿಂದ ನಿಮ್ಮ ಮಗುವಿನಲ್ಲಿರುವ ಕೆಲವು ಪ್ರತಿಭೆಗಳು ಅವರ ಚಿಕ್ಕ ವಯಸ್ಸಿನಲ್ಲೇ ಬೆಳಕಿಗೆ ಬಾರದೆ ಕೊನೆಯಾಗಬಹದು.

೯.ಸುರಕ್ಷಿತ

ಎಲ್ಲಾ ಸಮಯದಲ್ಲೂ ಚೆನ್ನಾಗಿ ಕಾವಲಿನಲ್ಲಿರುವ ಮತ್ತು ಉತ್ತಮವಾದ ಸುರಕ್ಷಿತವನ್ನು ಒದಗಿಸುವ ಶಾಲೆಯನ್ನು ಆರಿಸಿಕೊಳ್ಳಿ. ಯಾವುದೇ ಮಗು ಶಾಲೆಯಲ್ಲಿರುವ ಸಿಬ್ಬಂದಿಗೆ ತಿಳಿಯದಂತೆ ಶಾಲೆಯಿಂದ ಹೊರಹೋಗಲು ಸಾಧ್ಯವಾಗಬಾರದು. ಅಥವಾ ಹೊಸದಾಗಿ ನಿರ್ಮಾಣವಾಗುತ್ತಿರುವ ಶಾಲೆಯ ಮತ್ತೊಂದು ಕಟ್ಟಡ ಅಥವಾ ಯಾವುದೇ ರೀತಿಯ ವಸ್ತುಗಳಿಂದ ಮಕ್ಕಳಿಗೆ ಅಪಾಯವಾಗಬಾರದು.

೧೦.ಸಾರಿಗೆ

ಪ್ರತಿ ದಿನ ನೀವೇ ನಿಮ್ಮ ಮಗುವನ್ನು ಕರೆದುಕೊಂಡು ಶಾಲೆಗೆ ಬಿಡುವುದು ಮತ್ತು ಶಾಲೆಯಿಂದ ಕರೆದುಕೊಂಡು ಬರುವುದು ಮಾಡಿದರೆ ಯಾವುದೇ ತೊಂದರೆ ಇಲ್ಲ, ಒಂದು ವೇಳೆ ನೀವು ಹೋಗಲು ಸಾಧ್ಯವಾಗುವುದಿಲ್ಲ ಎಂದರೆ ಶಾಲೆಯ ಸಾರಿಗೆ ವ್ಯವಸ್ಥೆಯ ಬಗ್ಗೆ ವಿಚಾರಿಸಿಕೊಳ್ಳಬೇಕಾಗುತ್ತದೆ.

ಈ ಮೇಲಿನ ಸಲಹೆಗಳು ನಿಮಗೆ ಉಪಯುಕ್ತವಾಗಿವೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಮಗುವಿನ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣದ ಅಗತ್ಯ ತುಂಬಾ ಇರುವುದರಿಂದ ನಿಮ್ಮ ಮಗುವನ್ನು ಸರಿಯಾದ ಶಾಲೆಗೆ ಸೇರಿಸುವುದು ಒಳ್ಳೆಯದು.

ನಿಮ್ಮ ಮಕ್ಕಳ ಶಿಕ್ಷಣ ಮತ್ತು ಭವಿಷ್ಯ ಉತ್ತಮವಾಗಿರಲಿ ಎಂದು ಆಶಿಸುತ್ತೇವೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon