Link copied!
Sign in / Sign up
0
Shares

ಒಂದು ತಾಯಿ ತನ್ನ ಮಗುವನ್ನೇ ಮಣ್ಣಿನೊಳಗೆ ಹೂತು ಬಿಟ್ಟಳು, ಆದರೆ ಕಥೆ ಅಷ್ಟಕ್ಕೇ ಮುಗಿದಿಲ್ಲ!

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುತ್ತಾರೆ. ಏಕೆಂದರೆ, ಜಗತ್ತಿನಲ್ಲಿ ತಮಗಿಂತ ತಾವು  ಇನ್ನೊಬ್ಬರನ್ನು ಹೆಚ್ಚು ಪ್ರೀತಿಸುವ ಮಾನವರು ಇದ್ದಾರೆ ಎಂದರೆ, ಅದು ಅಮ್ಮಂದಿರು ಮಾತ್ರ. ಹೀಗಾಗಿ ನಾವು ನಮ್ಮ ಜೀವನದಲ್ಲಿ ಆಕೆಗೆ ಉತ್ತುಂಗದ ಸ್ಥಾನ ನೀಡಿದ್ದೇವೆ. ಎಂತಹ ಪರಿಸ್ಥಿತಿಯಲ್ಲೂ ತಾಯಿ ತನ್ನ ಮಗುವಿಗೆ ಕೆಟ್ಟದ್ದನ್ನ ಬಯಸುವುದಿಲ್ಲ. ಆದರೆ ತಾಯಿಯನ್ನೂ ಕೆಟ್ಟವಳನ್ನಾಗಿ ಮಾಡುವ ಪರಿಸ್ಥಿತಿಗಳು ಇವೆಯೇ? ಹೌದು, ಇವುಗಳು ಇವೆ ಹಾಗು ಇವುಗಳು ಇರುವುದಕ್ಕೆ ನಾವೆಲ್ಲರು ನಾಚಿಕೆ ಪಟ್ಟುಕೊಳ್ಳಬೇಕು. ಇಲ್ಲಿ ಒಬ್ಬಳು ತಾಯಿ ತನಗೆ ತನ್ನ ಮಗುವು ಬೇಡವೆಂದು ಒಂದು ಗುಂಡಿ ಅಗೆದು, ಅದರೊಳಗೆ ಮಗುವನಿಟ್ಟು, ಜೀವಂತ ಸಮಾಧಿ ಮಾಡಿಬಿಟ್ಟಳು! ಆದರೆ, ಕಥೆ ಅಷ್ಟಕ್ಕೇ ಮುಗಿದಿಲ್ಲ!


ಆ ಮಗುವು ಒಂದು ಅನೈತಿಕ ಕಾರ್ಯದ ಫಲವಾಗಿತ್ತು. ಆ ಮಗುವಿನ ವಯಸ್ಸು ಕೇವಲ 10 ದಿನಗಳಾಗಿತ್ತು! ತಾಯಿಯು ತನ್ನ ಮನೆಯಿಂದ ಹತ್ತು ಕಿಲೋಮೀಟರು ದೂರವಿರುವ ಒಂದು ಊರಿನಲ್ಲಿ ಒಂದು ಸಣ್ಣ ಗುಂಡಿಯನ್ನ ತೋಡಿ, ಅದರಲ್ಲಿ ಮಗುವನ್ನ ಮಣ್ಣು ಮಾಡಿದಳು!

ಆ ಜಾಗದಲ್ಲಿ ಗುಡ್ಡಗಾಡು ಜನರು ಎಂದಿನಂತೆ ಓಡಾಡುತ್ತಿದ್ದರು. ಆಗ ಅವರ ಕಿವಿಗೆ ಎಲ್ಲೋ ಒಂದು ಮಗುವು ಅಳುತ್ತಿರುವ ಶಬ್ದ ಕೇಳಿಸಿತು. ಆ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಹುಡುಕುತ್ತಾ ಹೋದಾಗ, ಆ ಮಗುವಿನ ಆಕ್ರಂದನವು ನೆಲದ ಕೆಳಗಿನಿಂದ ಬರುತ್ತಿರುವುದನ್ನ ಗಮನಿಸಿ ಅವರು ಗಾಬರಿಗೊಂಡರು. ನೆಲವನ್ನು ಅಗೆದು ನೋಡಿದರೆ, ಅಲ್ಲಿ ಕೇವಲ ಹತ್ತು ದಿನಗಳ ಒಂದು ಮುದ್ದಾದ ಗಂಡು ಮಗು ಇತ್ತು. ಮಣ್ಣು ಮಾಡಿದ ತಾಯಿಯು ಅಗೆದ ಗುಂಡಿಯು ಅಷ್ಟು ಆಳವಾಗಿಲ್ಲದ ಕಾರಣ ಆ ಮಗುವಿನ ಅಳು ಹೊರಗಡೆ ಕೇಳಿಸಿದ್ದು.


ಆನಂತರ ಅಲ್ಲಿಗೆ ಪೊಲೀಸ್ ಬಂದು ತನಿಖೆ ನಡೆಸಿದಾಗ ಅವರಿಗೆ ಗೊತ್ತಾಗಿದ್ದು ತಾಯಿಯು ಇನ್ನೂ 18 ವರ್ಷಗಳು ಕೂಡ ಆಗಿರದ ಅಪ್ರಾಪ್ತೆ ಎಂದು. ಆಕೆಯನ್ನ ವಿಚಾರಿಸಿದಾಗ, ಆಕೆಯು ಒಂದು ವರ್ಷದ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದಳು ಎಂಬುದು. ಇದರಿಂದ ಆಕೆ ಗರ್ಭವನ್ನ ಕೂಡ ಧರಿಸಿದಳು. ಈ ವಿಷಯವನ್ನ ಆ ಸಮಯದಲ್ಲಿ ಆಕೆ ಅವಳ ಪೋಷಕರಿಗೆ ತಿಳಿಸಿದಾಗ, ಅವರು ವಿಚಿಲಿತರಾಗಿ ಆಕೆಯನ್ನು ಗಡಿಬಿಡಿಯಲ್ಲಿ ಇನ್ನೊಬ್ಬ ಅಪ್ರಾಪ್ತ ಹುಡುಗನೊಂದಿಗೆ ಮದುವೆ ಮಾಡಿಸಿದರು. ಆದರೆ ಈ ವಿಷಯ ತಿಳಿದ ನಂತರ, ಆ ತಾಯಿಯ ಗಂಡನು ಕೂಡ ಮಗುವನ್ನ ತನ್ನ ಮನೆಯಲ್ಲಿ ಬಿಟ್ಟುಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಆಗ, ಈ ತಾಯಿಯು ತನ್ನ ತವರು ಮನೆಗೆ ಬಂದು, ನಂತರ ಅಲ್ಲಿಂದ ಹತ್ತು ಕಿಲೋಮೀಟರು ದೂರದಲ್ಲಿರುವ ಊರಿನಲ್ಲಿ ಈಕೆ ಹೋಗಿ ಮಣ್ಣು ಮಾಡಿ ಬಂದಿದ್ದಾಳೆ.


ಆಕೆಯನ್ನ ಕೇಳಿದಾಗ ಆಕೆ “ನನಗೆ ನನ್ನ ಮಗುವನ್ನ ದೂರ ಮಾಡಲು ಒಂದಿಷ್ಟೂ ಇಷ್ಟವಿರಲಿಲ್ಲ. ನಾನು ಎಲ್ಲರ ಹತ್ತಿರ ಹೋಗಿ ಬೇಡಿಕೊಂಡೆ, ಆದರೆ ಯಾರು ನನಗೆ ಬೆಂಬಲ ಕೊಡುವುದಿರಲಿ, ನನ್ನನ್ನ ಕನಿಷ್ಠಪಕ್ಷ ಒಪ್ಪಿಕೊಳ್ಳಲೂ ಇಲ್ಲ. ಹೀಗಾಗಿ ಒಲ್ಲದ ಮನಸಿನಿಂದ, ಆಳವಿಲ್ಲದ ಗುಂಡಿ ಅಗೆದು, ಮಗುವನ್ನ ಮುಚ್ಚಿಬಿಟ್ಟೆ” ಎಂದಳು. ಪೊಲೀಸ್ ಹೇಳುವ ಪ್ರಕಾರ ಆ ಪ್ರದೇಶದಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುವ ಹೆಂಗಸರು ಯಾರು ಮುಂದೆ ಬಂದು ಬಾಯ್ಬಿಟ್ಟು ಹೇಳುವುದಿಲ್ಲ, ಏಕೆಂದರೆ ಊರಿನ ಜನ ಆಕೆಯ ಗುಣದ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ ಅಥವಾ ಆಕೆಯನ್ನ ಕೀಳಾಗಿ ನೋಡುತ್ತಾರೆ. ಹೀಗಾಗಿ ಆಕೆ ಇದನ್ನ ಹೇಗೆ ಬಗೆಹರಿಸಬೇಕು ಎಂದು ತಿಳಿಯದೆ ಈ ಕೃತ್ಯ ಮಾಡಿದ್ದಾಳೆ.


ರೇಪ್ ಮಾಡಿದ ಆ ವ್ಯಕ್ತಿಯ ಮೇಲೆ ಮಾತ್ರ ಪೊಲೀಸ್ ಕೇಸ್ ಹಾಕದೆ, ಮಗುವಿಗೆ ಅಪಾಯವನ್ನ ತಂದು ಒಡ್ಡಿದ ತಾಯಿಯ ಮೇಲೆಯೂ ಕೇಸ್ ಅನ್ನು ದಾಖಲಿಸಲಾಗಿದೆ. ಆ ಮಗುವನ್ನು ಪೊಲೀಸರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ವಿಪರ್ಯಾಸ ಎಂದರೆ ಇದಲ್ಲದೆ ಮತ್ತೇನು?!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon