Link copied!
Sign in / Sign up
43
Shares

ಮಗುವಾದ ಮೇಲೆ ನಿಮ್ಮ ಜೀವನದಲ್ಲಿ ಊಹಿಸಿಯೇ ಇರದ 6 ಬದಲಾವಣೆಗಳು

ಬದಲಾವಣೆಯು ಅನಿವಾರ್ಯವಾಗಿದೆ,ಇದು ಪ್ರಕೃತಿ ನಿಯಮ.ನೀವು ನಿಮ್ಮ ಕುಟುಂಬಕ್ಕೆ ಮಗು ಎಂಬ ಸಂತೋಷದ ಚಿಲುಮೆಯನ್ನು ಸ್ವಾಗತಿಸುವಾಗ ಹಲವಾರು ಬದಲಾವಣೆಗಳನ್ನು ಅಪೇಕ್ಷಿಸಬೇಕಾಗುತ್ತದೆ .ಮಗುವಾದ ಮೇಲೆ  ಪ್ರತಿ ಹೆಣ್ಣು   ಅವಳ ದೇಹವು ಮುಂದಿನಂತೆ ಇರುವುದಿಲ್ಲ ಎಂದು ತಿಳಿದಿದ್ದಾಳೆ , ಆದರೆ ಅವಳ  ಜೀವನದ ಪ್ರತಿಯೊಂದು ವಿಭಾಗದಲ್ಲಿಯೂ ಆಗುವ ಬದಲಾವಣೆಗಳನ್ನು ನಿರೀಕ್ಷಿಸಿರುವುದಿಲ್ಲ .ಆದ್ದರಿಂದ ಪ್ರೀತಿಯ ಸ್ತ್ರೀ ಪುರುಷರೇ ,ನಿಮ್ಮ ಜೀವನದಲ್ಲಿ ಮುಂಬರುವ ಹಿಮಪಾತವನ್ನು ಎದುರಿಸಲು ಸನ್ನದ್ಧರಾಗಿರಿ .ಮಗುವನ್ನು ಹೊಂದಿರುವಾಗ ಜನರು ನಿರೀಕ್ಷಿಸದ ಕೆಲವು ಬದಲಾವಣೆಗಳು ಇಲ್ಲಿವೆ:

೧.ಲೈಂಗಿಕಾಸಕ್ತಿಯು ಕಡಿಮೆಯಾಗುತ್ತದೆ .

ಪ್ರಸವದ ನಂತರ ಮಹಿಳೆಯು ೬ ವಾರಗಳ ತನಕ ಸಂಯೋಗ ಹೊಂದಲು ಆಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ .ಅಷ್ಟೇ ಅಲ್ಲ ,೬ ವಾರಗಳ ನಂತರವೂ ಬಿಡುವಿಲ್ಲದೆ ಕೆಲಸದಲ್ಲಿ ತೊಡಗುವ ಕಾರಣ ಅಥವಾ ಸಂಯೋಗದಲ್ಲಿ ಆಸಕ್ತಿ ಇಲ್ಲದ ಕಾರಣ ಇದರಲ್ಲಿ ತೊಡಗಿಕೊಳ್ಳಲು ಆಗುವುದಿಲ್ಲ ಎಂಬ ಕಡು ಸತ್ಯವನ್ನು ನಿಮಗೆ ಯಾರೂ ಹೇಳುವುದಿಲ್ಲ . ಕಾರಣಗಳು ಯಾವುದೇ ಇರಬಹುದು ,ಕೆಲ ತಿಂಗಳ ನಡುವೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಏನೂ ನಡೆಯುವುದಿಲ್ಲ ..ಇದನ್ನು ಮುಂದೆಯೇ ಅರಿತುಕೊಳ್ಳುವುದು ಒಳ್ಳೆಯದು .

೨.ನಿಮ್ಮ ಸಂಬಂಧವು ಬದಲಾಗುತ್ತದೆ

ಮಗುವನ್ನು ಹೊಂದಿದ ನಂತರ,ನಿಮ್ಮ ಮೊದಲ ಆದ್ಯತೆ ನಿಮ್ಮ ಮಗುವೇ ಆಗುತ್ತದೆ ,ಇದಕ್ಕೆ ನಿಮ್ಮ ಸಂಗಾತಿಯೂ ಹೊರತಲ್ಲ .ನಿಮ್ಮ ಇಬ್ಬರ ನಡುವಿನ ಸಂಬಂಧವು ನಿಮ್ಮ ಮಗುವಿನೊಂದಿಗಿನ  ಸಂಪರ್ಕದ ಮೂಲಕ ಆಗುತ್ತದೆ .ಆದರೆ ಇದು ಒಳ್ಳೆಯದೇ ಆಗಿದೆ .ಇದು ಸಂಬಂಧದ ಒಂದು ಆಯಾಮ ಅಷ್ಟೇ .ಒಂದು ರಾತ್ರಿ ನಿಮ್ಮ ಪತಿಯು ಮಗುವು ನಿದ್ರಿಸಲೆಂದು ಹಾಡುತ್ತಿರುವಾಗ ನಿಮಗೆ ಮತ್ತೊಮ್ಮೆ  ಅವರ ಮೇಲೆ ಪ್ರೀತಿಯುಂಟಾಗುತ್ತದೆ .

೩.ಜಗಳವು  ಜಾಸ್ತಿಯಾಗುತ್ತದೆ

ಈ ಸಮಯದಲ್ಲಿ ಮಹಿಳೆಯರು ಪ್ರತಿಯೊಂದು ಸಣ್ಣ ವಿಷಯವನ್ನು ದೊಡ್ಡದು ಮಾಡುತ್ತಾರೆ .ಇದರ  ಒಂದು ಕಾರಣವೆಂದರೆ ಹಾರ್ಮೋನುಗಳು ಹಾಗೂ ನಿಮ್ಮ ತಾಳ್ಮೆಯ ಮಿತಿಯು ಅಂತಿಮಗೊಳ್ಳುತ್ತಿರುವುದಾಗಿದೆ .ನೀವು ದಿನವಿಡೀ ಮಗುವನ್ನು ನೋಡಿಕೊಳ್ಳಬೇಕು (ಇದು ಮಾಡಲೇಬೇಕಾದ ಕೆಲಸ )ಮತ್ತು ಇದರೊಂದಿಗೆ ಇತರ ಕೆಲಸಗಳ ಭಾರವೂ ನಿಮ್ಮ ಮೇಲಿರುತ್ತದೆ .ಶಾಂತವಾಗಿರಿ , ಎಲ್ಲವೂ ಸಾಮಾನ್ಯ ಸ್ಥಿತಿಗೆ  ಹಿಂತಿರುಗುತ್ತವೆ.

೪.ಸಂಬಂಧವು ದೂರವಾಗುತ್ತದೆ

ಇದು ದುಃಖಕರವಾಗಿದ ದುರದೃಷ್ಟಕರ ಸತ್ಯ, ನಿಮ್ಮ ಮಗುವು  ನಿಮ್ಮ ಪ್ರಪಂಚದ ಕೇಂದ್ರವಾಗಿರುವುದರಿಂದ  ನಿಮ್ಮ ಸಂಗಾತಿಯ ಅಸ್ತಿತ್ವದ ಬಗ್ಗೆ ನೀವು ಮರೆತುಬಿಡುತ್ತೀರಿ.ನಿಮ್ಮ ಮದುವೆಯು ಎಲ್ಲೋ ಕಳೆದುಹೋಗುತ್ತಿದೆ ಎಂಬ ಅಂಶವನ್ನು ಸರಿಪಡಿಸಲು ಹಲವಾರು ವಿಚಾರಗಳ ಬಗ್ಗೆ ನಿಮ್ಮ ಗಮನ ಅಗತ್ಯ .ನೀವು ಜೊತೆಯಾಗಿ ಕಳೆಯಲು ರಾತ್ರಿಯನ್ನು ನಿಗದಿಪಡಿಸಬಹುದು ಆದರೆ ನಿಮ್ಮ ಮನಸ್ಸು ಮತ್ತೆ ಮತ್ತೆ ಮಗುವಿನ ಕಡೆ ವಾಲುವುದರಿಂದ ಮೊದಲಿನಂತಿರಲು ಸಾಧ್ಯವಾಗುವುದಿಲ್ಲ .

೫.ನಿಮ್ಮ ಮಗುವನ್ನು ಹೆಚ್ಚು ಪ್ರೀತಿಸಲು ನೀವು ಪ್ರಾರಂಭಿಸುತ್ತೀರಿ

ಪ್ರತಿಯೊಬ್ಬರೂ ತಮ್ಮ ಮಗುವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ, ಕೆಲವೊಮ್ಮೆ ತಮ್ಮ ಸಂಗಾತಿಗಳಿಗಿಂತಲೂ ಹೆಚ್ಚು .ಇದು ನಿಮ್ಮ ಮದುವೆಯ  ಒಡಕಿಗೆ ಕಾರಣವಾಗಲೂಬಹುದು.ನೀವು ನಿಮ್ಮ ಮಗುವಿನ ಮೇಲೆ ಮಾತ್ರ ಕೇಂದ್ರೀಕರಿಸಲು ಪ್ರಾರಂಭಿಸಿದಾಗ, ಅದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

೬.ಅವಿಶ್ರಾಂತ ಜೀವನ

ನಿಮಗೆ ಕೆಲಸಗಳ ಪಟ್ಟಿ ಮಾಡಲು ಸಮಯವಿದ್ದರೆ ನಿಮಗೆ ಅಚ್ಚರಿಯಾಗಬಹುದು .ಮಗುವನ್ನು ಹೊಂದಿರುವ ಕೆಲಸ ಪೂರ್ಣ ಸಮಯದ ಕೆಲಸವಾಗಿದ್ದು  ಮತ್ತು ನಿಜವಾದ ಸಾಂಸ್ಥಿಕ ಉದ್ಯೋಗಿಗಳಂತೆ  ನೀವು ಊಟದ ವಿರಾಮವನ್ನು ಪಡೆಯುವುದಿಲ್ಲ .ವಸ್ತುಗಳ ಖರೀದಿಗೆ  ಹೋಗುವಾಗ  ಹೆಗಲಿನಲ್ಲಿ ಚೀಲಗಳನ್ನು ನೇತು ಹಾಕಿ ,ಅಲ್ಲಿ ಇಲ್ಲಿ ಓಡಾಡುವ ,ಎಲ್ಲ ಕಡೆ ಕೈ ಹಾಕಿ ವಸ್ತುಗಳನ್ನು ಹಿಡಿದುಕೊಳ್ಳುವ ಮ್ಹಗುವನ್ನು ತಡೆಯಲು ನೀವು ಹರಸಾಹಸ ಪಡುತ್ತೀರಿ .ಇದಕ್ಕಾಗಿ ನಿಮಗೆ ಶುಭಾಕಾಂಕ್ಷೆಗಳು.ಆದರೆ ದೃಢವಾಗಿರಿ ,ಕಷ್ಟದ ಸಮಯಗಳು ಹಾದು ಹೋಗುತ್ತವೆ ಮತ್ತು ನೀವು ನಿಮ್ಮ ಮಗುವಿನೊಂದಿಗೆ ಅವನ ಅಥವಾ ಅವಳ ಬಾಲ್ಯದ ಬಗ್ಗೆ ಮಾತಾಡುತ್ತಿರುವಾಗ, ನೀವು ನೆನಪಿಸಿಕೊಳ್ಳುವೆಲ್ಲವೂ ಸಂತೋಷದಾಯಕ ಮತ್ತು ತಮಾಷೆಯ ಕ್ಷಣಗಳಾಗಿವೆ

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon