Link copied!
Sign in / Sign up
9
Shares

ತೃಪ್ತಿಕರ ಲೈಂಗಿಕ ಜೀವನ ಬೇಕಾಗಿದ್ದು, ಮಗು ಬೇಡವಾಗಿದ್ದರೆ ನಿಮಗೆ ಇಲ್ಲಿವೆ ಸೂಕ್ತ ದಾರಿಗಳು

ಹಲವು ಕಾರಣಗಳಿಗೆ, ಅವು ಭಾವನಾತ್ಮಕ ಆಗಿರಬಹುದು, ಹಣಕಾಸಿನದ್ದು ಅಥವಾ ವೈದ್ಯಕೀಯ ಆಗಿರಬಹುದು, ತಾಯಂದಿರು ಅಥವಾ ಪೋಷಕರಿಬ್ಬರು ಒಂದು ಮಗುವಾದ ಮೇಲೆ ಮತ್ತೊಂದು ಬೇಡವೆಂದು ನಿರ್ಧರಿಸುತ್ತಾರೆ. ಇದು ತಮ್ಮ ಹಿಡಿತದಲ್ಲಿ ಇದೆ ಎಂದು ಖಚಿತಪಡಿಸಿಕೊಳ್ಳಲಿಕ್ಕೆ ಜನನ ನಿಯಂತ್ರಣ ತಂತ್ರಗಳನ್ನ ಉಪಯೋಗಿಸುವರು. ಆದರೆ ಬಹಳಷ್ಟು ಮಹಿಳೆಯರು ಜನನ ನಿಯಂತ್ರಣವನ್ನು ಉಪಯೋಗಿಸಲು ಹಿಂಜರಿಯುತ್ತಾರೆ, ಏಕೆಂದರೆ ಅವರಿಗೆಲ್ಲ ಒಂದು ಸಾಮಾನ್ಯ ಪ್ರಶ್ನೆ ಕಾಡುತ್ತದೆ. ಅದೇನೆಂದರೆ:

“ಆದರೆ ನನಗೆ ಈಗಾಗಲೇ ಒಂದು ಮಗುವಾಗಿದ್ದರೆ? ನನ್ನ ದೇಹದ ಮೇಲೆ ಇದು ಯಾವ ರೀತಿ ಪರಿಣಾಮ ಬೀರಬಹುದು?”

ಈ ಗೊಂದಲ ಏಕೆ ಇರುತ್ತದೆ ಅಂದರೆ, ಜನನ ನಿಯಂತ್ರಣವು ನಿಮ್ಮ ದೇಹದ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ. ಈ ಕಾರಣಕ್ಕಾಗಿ ನೀವು ಏನಾದರು ನಿರ್ಧಾರ ತೆಗೆದುಕೊಳ್ಳುವ ಮುನ್ನ ಇದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ಕೆಲವು ಜನನ ನಿಯಂತ್ರಣ ತಂತ್ರಗಳು ಈಗಾಗಲೇ ಮಗುವಾಗಿರುವ ಹೆಂಗಸರಿಗೆ ಸೂಕ್ತವಾಗಿದ್ದರೆ, ಇನ್ನು ಕೆಲವು ಸೂಕ್ತವಲ್ಲ.

ಹೀಗಾಗಿ, ನೀವು ಆಗಲೇ ಒಂದು ಮಗುವಿಗೆ ಜನ್ಮ ನೀಡಿರುವ ತಾಯಿ ಆಗಿರುವ ಕಾರಣ ನಿಮಗೆ ಅತ್ಯುತ್ತಮವಾದ ದಾರಿ ಯಾವುದು? ಇಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ ನಿಮಗೆ ಅತ್ಯುತ್ತಮವಾದ ವಿಧಾನ ಯಾವುದು ಎಂದು.

೧. ಹಾರ್ಮೋನ್ ಗಳು

ತಾಯಂದಿರು ಉಪಯೋಗಿಸಬೇಕೆಂದರೆ ಹಲವಾರು ಹಾರ್ಮೋನಲ್ ಜನನ ನಿಯಂತ್ರಣ ವಿಧಾನಗಳು ಲಭ್ಯವಿದೆ. ಆದರೆ, ನೀವು ಇತ್ತೀಚಿಗಷ್ಟೇ ಮಗುವಿಗೆ ಜನನ ನೀಡಿದ್ದರೆ, ಇವುಗಳನ್ನು ಉಪಯೋಗಿಸುವ ಮುನ್ನ ಎಷ್ಟು ದಿನಗಳವರೆಗೆ ಕಾಯಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಏಕೆಂದರೆ ನಿಮ್ಮ ಮಗು ತನ್ನ ಪೋಷಕಾಂಶಗಳಿಗೆ ನಿಮ್ಮ ಎದೆಹಾಲಿನ ಮೇಲೆ ಅವಲಂಬಿತ ಆಗಿರುತ್ತದೆ ಹಾಗು ನಿಮ್ಮ  ಹಾರ್ಮೋನ್ ಬದಲಾವಣೆ ನಿಮ್ಮ ಎದೆಹಾಲಿನ ಹರಿವಿನ ಮೇಲೆ ಪರಿಣಾಮ ಬೀರಬಹುದು.

ಲಭ್ಯವಿರುವ ಹಾರ್ಮೋನಲ್ ಜನನ ನಿಯಂತ್ರಣ ವಿಧಾನಗಳು ಎಂದರೆ ಅವು ಸಂತಾನ ನಿರೋಧಕ ಗುಳಿಗೆಗಳು, ಪ್ಯಾಚ್ ಗಳು, ಗುಟುಕು(ಶಾಟ್ಸ್) ಹಾಗು ರಿಂಗ್ ಗಳು. ರಿಂಗ್, ಗುಳಿಗೆ ಹಾಗು ಪ್ಯಾಚ್ ಗಳು ಮದಜನಕ(oestrogen) ಹಾಗು ಪ್ರೊಜೆಸ್ಟರಾನ್ ಅನ್ನು ಕಮ್ಮಿ ಪ್ರಮಾಣದಲ್ಲಿ ಬಿಡುಗಡೆ ಮಾಡುವುದರಿಂದ ಅಂಡಾಶಯವು ಅಂಡು(egg) ಅನ್ನು ಬಿಡುಗಡೆ ಮಾಡುವುದನ್ನು ತಡೆಯುತ್ತವೆ. ನಿಮ್ಮ ಎದೆಯಲ್ಲಿ ಆರೋಗ್ಯಕರ ಹಾಲಿನ ಉತ್ಪನ್ನವಿದ್ದರೆ,  ನಿಮಗೆ ಹೆರಿಗೆಯಾಗಿ ಕನಿಷ್ಠ ೬ ತಿಂಗಳು ಆದಮೇಲೆ ಈ ವಿಧಾನಗಳನ್ನು ಉಪಯೋಗಿಸಲು ಶುರು ಮಾಡಬಹುದು. ಹಾಲಿನ ಉತ್ಪನ್ನ ಆರೋಗ್ಯಕರವಾಗಿ ಇರದಿದ್ದರೆ, ನೀವು ಈ ವಿಧಾನಗಳನ್ನ ಉಪಯೋಗಿಸುವುದು ಸೂಕ್ತವಲ್ಲ. ಶಾಟ್ ಗಳನ್ನ ೩ ತಿಂಗಳಿಗೆ ಒಮ್ಮೆ ನೀಡುತ್ತಾರೆ. ಶಾಟ್ ತೆಗೆದುಕೊಳ್ಳುವುದು ನಿಲ್ಲಿಸಿದ ಮೇಲೆ ನಿಮ್ಮ ಫಲವತ್ತತೆ ವಾಪಸ್ ಆಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಈ ವಿಧಾನವನ್ನು ಉಪಯೋಗಿಸುವ ಮುನ್ನ ಎಚ್ಚರವಿರಲಿ.

೨. ಕಾಂಡೋಮ್

ದೈಹಿಕ ಜನನ ನಿಯಂತ್ರಣ ವಿಧಾನಗಳಾಗಿ ಉಪಯೋಗಿಸಲು ಗಂಡಸರಿಗೆ ಹಾಗು ಹೆಂಗಸರಿಗೆ ಇಬ್ಬರಿಗೂ ಕಾಂಡೋಮ್ ಲಭ್ಯವಿದೆ. ಇವುಗಳು ವೀರ್ಯವು ಅಂಡು(egg) ಜೊತೆ ಸೇರುವುದನ್ನು ತಡೆಯುತ್ತವೆ ಹಾಗು ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ನಿಮಗೆ ರಕ್ಷಣೆ ಒದಗಿಸುತ್ತವೆ. ಇವುಗಳನ್ನು ನಿಮ್ಮ ಗರ್ಭಧಾರಣೆ ಮುಗಿದು ಎಷ್ಟು ಬೇಗ ಬೇಕಾದರೂ ಉಪಯೋಗಿಸಬಹುದು.

೩. ಪದರ (diaphragm/ ಡಯಾಫ್ರಮ್)

ಇದು ಒಂದು ಗುಮ್ಮಟ ಆಕಾರದ ಸಾಧನವಾಗಿದ್ದು, ಇದರಲ್ಲಿ ವೀರ್ಯನಾಶಕ ಪದಾರ್ಥ ಇರುತ್ತದೆ. ಇದನ್ನು ಸಂಭೋಗ ನಡೆಸುವ ಮುನ್ನ ಯೋನಿಯೊಳಗೆ ಅಳವಡಿಸಲಾಗುತ್ತದೆ. ಇದು ವೀರ್ಯವನ್ನು ಅಂಡಗೆ ಸೇರುವುದನ್ನು ತಡೆಯುತ್ತದೆ ಹಾಗು ನಿಮ್ಮ ಯೋನಿಗೆ ಪ್ರವೇಶ ಮಾಡಿದ ಅಷ್ಟೂ ವಿರ್ಯವನ್ನು ನಾಶ ಮಾಡುತ್ತದೆ. ನಿಮ್ಮ ಯೋನಿಯ ಗಾತ್ರಕ್ಕೆ ಅನುಗುಣವಾಗಿ ಡಯಾಫ್ರಮ್ ಅನ್ನು ಅಳವಡಿಸಲಾಗುತ್ತದೆ. ಈ ಗಾತ್ರವು ನಿಮ್ಮ ಹೆರಿಗೆಯ ಕಾಲದಲ್ಲಿ ಆದ ಸ್ನಾಯು ಹಿಗ್ಗುವಿಕೆಯಿಂದ ಹೆಚ್ಚಾಗುತ್ತದೆ. ಇದರ ಅಳವಡಿಕೆಯನ್ನು ನೀವು ಪ್ರಸವನಂತರ ಮೊದಲ ಬಾರಿಗೆ ವೈದ್ಯರ ಬಳಿ ಹೋದಾಗ, ಅಂದರೆ ಮಗುವಾಗಿ ೬ ವಾರಗಳ ನಂತರ ಅಳವಡಿಸಿಕೊಳ್ಳಬಹುದು. ಇದು ಶೇಕಡಾ 80ರಷ್ಟು ಪರಿಣಾಮಕಾರಿ ಆಗಿರುತ್ತವೆ.

೪. ಗರ್ಭಕಂಠದ ಕ್ಯಾಪ್ (cervical cap)

ಇವುಗಳು ಕಾಣಲಿಕ್ಕೆ ಹಾಗು ಕಾರ್ಯ ನಿರ್ವಹಣೆಯಲ್ಲಿ ಡಯಾಫ್ರಮ್ ಅನ್ನೇ ಹೋಲುತ್ತವೆ. ಇವುಗಳನ್ನು ನೀವು ಅಳವಡಿಸಿಕೊಳ್ಳಲು ನೀವು ಮಗುವಾದ ಮೇಲೆ ಕನಿಷ್ಠ ೧೦ ವಾರಗಳ ವರೆಗೆ ಕಾಯಬೇಕು.

೫. ಐ.ಯು.ಡಿ (IUD)

ಇದು ನಿಮ್ಮ ಗರ್ಭಾಶಯದ ಒಳಗಡೆ ಅಳವಡಿಸುವ ಸಾಧನ ಆಗಿದ್ದು, T-ಆಕಾರದಲ್ಲಿ ಇರುತ್ತದೆ. ಇವುಗಳು ನಿಮ್ಮ ಗರ್ಭಧಾರಣೆ ಮುಗಿದೊಡನೆ ಅಳವಡಿಸಿಕೊಳ್ಳಬಹುದು ಹಾಗು ಹೆಚ್ಚಿನ ಸಮಯದ ವರೆಗೂ (೩-೮ ವರ್ಷಗಳ ವರೆಗೆ) ಜನನ ನಿಯಂತ್ರಣ ಮಾಡಬಹುದು. ಇವುಗಳಲ್ಲಿ ಎರೆಡು ವಿಧಗಳು- ಒಂದು ಕಾಪರ್ (ತಾಮ್ರ)ದ್ದು ಹಾಗು ಇನ್ನೊಂದು ಬೆಳಗಿನ(progestin) ಬಿಡುಗಡೆ ಮಾಡುವಂತದ್ದು. ಇವುಗಳು ವೀರ್ಯವನ್ನು ಸಾಯಿಸಲು ಕಾರ್ಯ ನಡೆಸುತ್ತವೆ. ತಾಮ್ರವು ಎದೆಹಾಲು ಉಣಿಸುವ ತಾಯಂದಿರಿಗೆ ತೊಂದರೆ ಉಂಟು ಮಾಡುವುದಿಲ್ಲ.

ನಾವು ಇಲ್ಲಿ ಕಾಣುವ ಹಾಗೆ ಮಗುವಾಗಿರುವ ತಾಯಂದಿರು ಲಭ್ಯವಿರುವ ಬಹುತೇಕ ಎಲ್ಲಾ ಜನನ ನಿಯಂತ್ರಣ ವಿಧಾನಗಳನ್ನ ಉಪಯೋಗಿಸಬಹುದು. ಇಲ್ಲಿ ತಿಳಿದುಕೊಳ್ಳಬೇಕಾಗಿರುವುದು ಇವುಗಳನ್ನ ಹೇಗೆ ಹಾಗು ಯಾವಾಗ ಉಪಯೋಗಿಸಬೇಕೆಂದು ಅಷ್ಟೇ. ನೀವು ಈ ವಿಧಾನಗಳನ್ನ ಉಪಯೋಗಿಸುವ ಮುನ್ನ ನಿಮ್ಮ ತಜ್ಞರ ಬಳಿ ಚರ್ಚಿಸುವುದು ಒಳಿತು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon