Link copied!
Sign in / Sign up
8
Shares

ಈ 20 ಚಿಹ್ನೆಗಳನ್ನ ನಿಮ್ಮ ಮಗುವಿನಲ್ಲಿ ಗುರುತಿಸಿದ್ದರೆ, ನಿಮ್ಮ ಮಗುವಿಗೆ "ವಿಶೇಷ ಶಕ್ತಿ" ಇದೆ ಎಂದರ್ಥ!

“ನನ್ನ ಮಗುವಿಗೆ ವಿಶಿಷ್ಟ ಶಕ್ತಿ ಇದೆಯಾ?” ಪೋಷಕರು ಒಂದಲ್ಲಾ ಒಂದು ಬಾರಿ ಆದರೂ ಈ ಪ್ರಶ್ನೆಯನ್ನು ತಮ್ಮಲ್ಲೇ ತಾವು ಕೇಳಿಕೊಂಡಿರುತ್ತಾರೆ. ನಿಮ್ಮ ಮಗುವಿನಲ್ಲಿ ನಿಜಕ್ಕೂ ವಿಶೇಷತೆಯೊಂದು ಅಡಗಿದೆಯೇ ಎಂದು ತಿಳಿದುಕೊಳ್ಳಲು ಕೆಲವೊಂದು ಮೂಲಭೂತ ಚಿಹ್ನೆಗಳನ್ನು ನೀವು ಗಮನಿಸಬೇಕು. ನೀವು ಗಮನಿಸಬೇಕಾದ ಅಂತಹ ಚಿಹ್ನೆಗಳು ಯಾವುದೆಂದು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿ.

“ವಿಶೇಷತೆ/ ವಿಶೇಷ ಶಕ್ತಿ” ಎಂದರೆ ಏನರ್ಥ?

“ವಿಶೇಷತೆ/ ವಿಶೇಷ ಶಕ್ತಿ” ಎನ್ನುವ ಪದ/ಗಳನ್ನ ಬೇರೆ ಬೇರೆ ಶಾಲೆಗಳು, ಸಂಸ್ಥೆಗಳು, ಸಂಸ್ಕೃತಿಗಳು ಬೇರೆ ಬೇರೆ ರೀತಿಯಲ್ಲೇ ಬಳಸುತ್ತವೆ. ಆದರೆ ಅರ್ಥ ಮಾತ್ರ, ಇತರೆ ವ್ಯಕ್ತಿಗಳಿಗಿಂತ ಅಂದರೆ ಸರಾಸರಿ IQಗಿಂತ ಹೆಚ್ಚು IQ ಅನ್ನು ಹೊಂದಿರುವವರು ಅಥವಾ ಇನ್ನ್ಯಾವುದೋ ಅಳತೆಯಲ್ಲಿ ಸರಾಸರಿಗಿಂತ ಹೆಚ್ಚಿನದ್ದನ್ನು ಹೊಂದಿರುವ ವ್ಯಕ್ತಿಗಳಿಗೆ ವಿಶೇಷತೆ/ ವಿಶಿಷ್ಟ ಶಕ್ತಿ ಇದೆ ಎಂಬುದೇ ಆಗಿರುತ್ತದೆ.

ಶಾಲೆಗೆ ಹೋಗುವ ಮಕ್ಕಳಲ್ಲಿ IQ ಟೆಸ್ಟ್ ಮತ್ತು ಇತರೆ ಪರೀಕ್ಷೆಗಳ ಮೂಲಕ ವಿಶಿಷ್ಟ ಶಕ್ತಿ ಹೊಂದಿರುವ ಮಕ್ಕಳನ್ನ ಗುರುತಿಸಿದರೆ, ಸಾಮಾನ್ಯವಾಗಿ ಕುಟುಂಬಗಳು, ಶಿಕ್ಷಕರು ಮತ್ತು ಸ್ನೇಹಿತರು ಕೂಡ ಮಕ್ಕಳ ಚಟುವಟಿಕೆಗಳನ್ನ ಗಮನಿಸಿ ಅವರಲ್ಲಿ ವಿಶೇಷತೆ ಇಂದು ಎಂದು ಗುರುತಿಸುವರು. ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಹೊಂದಾಣಿಕೆ ಮತ್ತು ಇಂತಹ ಇತರೆ ಮಾಪನಗಳಿಂದ ನಾವು ಮಗುವಿನ ಶಕ್ತಿಯನ್ನು ಗುರುತಿಸಬಹುದು. ಹಾಗಿದ್ದರೆ ಅಂತಹ ಮಾಪನಗಳು ಯಾವು ಎಂದು ಇಲ್ಲಿ ತಿಳಿಸುತ್ತೇವೆ ಓದಿ.

 

೧. ತುಂಬಾ ವೇಗವಾಗಿ, ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ವಿಷಯಗಳನ್ನ ಕಲಿತುಕೊಳ್ಳುವುದು.

೨. ತಮ್ಮ ವಯಸ್ಸಿಗೆ ಮೀರಿದ್ದಕಿಂತ ಶಬ್ದಕೋಶವನ್ನ ಹೊಂದಿರುವುದು.

೩. ಅಸಾಮಾನ್ಯ ತಾರ್ಕಿಕ ವಾದಗಳನ್ನ ಮಾಡುವುದು.

೪. ತುಂಬಾನೇ ಒಳ್ಳೆಯ ನೆನಪಿನ ಶಕ್ತಿ ಇರುತ್ತದೆ, ಆದರೆ ಬಾಯಿಪಾಠ ಮಾಡುವುದೆಂದರೆ ಇಷ್ಟಪಡುವುದಿಲ್ಲ.

೫. ಬೇರೆಯವರ ನಿಯಂತ್ರಣ ಅಷ್ಟಾಗಿ ಬೇಕಿಲ್ಲ - ಸ್ವಂತ ವಿನಯತೆ ಇರುತ್ತದೆ.

೬. ರಚನೆ, ವ್ಯವಸ್ಥೆ ಮತ್ತು ಸ್ಥಿರತೆ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಪ್ರೀತಿ ಹೊಂದಿರುತ್ತಾರೆ.

೭. ತಮ್ಮ ಯೋಚನಾಲಹರಿಯಲ್ಲಿ ಮೆತುವಾದ ಹೊಂದಿರುತ್ತಾರೆ; ಎರಡು ದೂರದ ವಿಷಯಗಳ ನಡುವೆ ಸಂಬಂಧ ಬೆಸೆಯುತ್ತಾರೆ.

೮. ವಸ್ತುಗಳು, ಸನ್ನಿವೇಶಗಳು ಅಥವಾ ಘಟನೆಗಳ ಬಗ್ಗೆ ಕುತೂಹಲ ವ್ಯಕ್ತಪಡಿಸುವುದು ಮತ್ತು ಚರ್ಚಾಸ್ಪದ ಪ್ರಶ್ನೆಗಳನ್ನ ಕೇಳುವುದು.

೯. ಬಹುತೇಕ ವಿಷಯಗಳಲ್ಲಿ ಒಳ್ಳೆಯ ಅಂಕಗಳನ್ನ ಗಳಿಸುವುದು.

೧೦. ಏಕಾಗ್ರತೆ ತುಂಬಾ ಇರುತ್ತದೆ, ಎಲ್ಲವನ್ನೂ ಬದಿಗೊತ್ತಿಸಿ ಒಂದರ ಮೇಲೆಯೇ ಗಮನವಿಡುವಷ್ಟು ಏಕಾಗ್ರತೆ.

೧೧. ತುಂಬಾ ಚುರುಕಾಗಿ ಮತ್ತು ವೇಗವಾಗಿ ಪ್ರತ್ಯುತ್ತರಗಳನ್ನ ಕೊಡುತ್ತಾರೆ.

೧೨. ಉತ್ಪನ್ನದಾಯಕ ಆಗಿರುತ್ತಾರೆ. ತಮಗೆ ಎಟುಕುವ ವಿಷಯಗಳು,ವಸ್ತುಗಳನ್ನೇ ಬಳಸಿಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಾರೆ.

೧೩. ವಿಜ್ಞಾನ ಅಥವಾ ಸಾಹಿತ್ಯದ ಬಗ್ಗೆ ಅತಿಯಾದ ಆಸಕ್ತಿ ಇರುತ್ತದೆ.

೧೪. ಮೌಖಿಕ ಮತ್ತು ಬರಹ ಅಭಿವ್ಯಕ್ತಿಯಲ್ಲಿ ತಮ್ಮದೇ ಶೈಲಿ ಹೊಂದಿರುತ್ತಾರೆ. ಅವರ ಮಾತಿನಲ್ಲಿ ಮತ್ತು ಬರಹದಲ್ಲಿ ಸ್ವಂತಿಕೆ ಇರುತ್ತದೆ.

೧೫. ಇವರಿಗೆ ಅಮೂರ್ತತೆ, ಪರಿಕಲ್ಪನೆ ಮತ್ತು ಸಂಶ್ಲೇಷಣೆ ಮಾಡುವ ಸಾಮರ್ಥ್ಯ ಇರುತ್ತವೆ.

೧೬. ಮಾನಸಿಕವಾಗಿ ಭದ್ರರಾಗಿರುತ್ತಾರೆ.

೧೭. ಸ್ನೇಹಿತರು ಮತ್ತು ಸನ್ನಿವೇಶಗಳು ಮೇಲೆ ಪ್ರಾಬಲ್ಯ ಹೊಂದಲು ಇಚ್ಛಿಸುತ್ತಾರೆ.

೧೮. ಬಹಳಷ್ಟು ಸಾಮಾನ್ಯ ಪ್ರಜ್ಞೆ ಉಪಯೋಗಿಸುತ್ತಾರೆ.

೧೯. ಸಂಕೀರ್ಣತೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುತ್ತದೆ.

೨೦. ತಮ್ಮ ಆಸುಪಾಸಿನಲ್ಲಿ ನಡೆಯುತ್ತಿರುವ ಪ್ರತಿಯೊಂದರ ಬಗ್ಗೆಯೂ ಗ್ರಹಿಸುತ್ತಿರುತ್ತಾರೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon