Link copied!
Sign in / Sign up
48
Shares

ಮಗು ಹೊಟ್ಟೆಯಲ್ಲಿ ಏನೆಲ್ಲಾ ವಿಚಿತ್ರ ಕೆಲಸಗಳು ಮಾಡುತ್ತದೆ ಗೊತ್ತಾ? ಈ ಚಿತ್ರಗಳನ್ನ ನೋಡಿ !

ಶಿಶುವು ಗರ್ಭದೊಳಗೆ ಇರುತ್ತದೆ. ಅದು ಅಲ್ಲೇ ಒಂಬತ್ತು ತಿಂಗಳುವರೆಗೆ ಇದ್ದು, ಬೆಳೆದು, ದೊಡ್ಡದಾಗುತ್ತದೆ. ಆದರೆ ಗರ್ಭದಲ್ಲಿ ಮಗುವು ಏನು ಮಾಡುತ್ತಿರುತ್ತದೆ? ಅವು ಹೊರಗಡೆ ಬರುವವೆಗೂ ಹಾಗೆ ಮಲಗಿರುತ್ತವೆಯೇ? ನಮಗೆಲ್ಲರಿಗೂ ಸಾಮಾನ್ಯವಾಗಿ ಗೊತ್ತಿರೋದು ಮಗು ಹೊಟ್ಟೆಯಲ್ಲಿ ಬೆಳೆಯುತ್ತದೆ, ಕೈ ಹಾಗು ಕಾಲಿನ ಬೆರಳುಗಳ ಚಲನೆಯ ಬಗ್ಗೆ ತಿಳಿಯುತ್ತದೆ ಹಾಗು ಕೆಲವೊಂದು ಬಾರಿ ಬೆರಳು ಚೀಪುತ್ತದೆ ಎಂದು. ಆದರೆ, ಮಗುವು ಹೊಟ್ಟೆಯಲ್ಲಿ ಮಾಡುವ ಇನ್ನು ಅನೇಕ ಕೆಲಸಗಳ ಪಟ್ಟಿಯನ್ನು ಇಲ್ಲಿ ನಾವು ಮಾಡಿದ್ದೇವೆ. ಇವುಗಳು ನಿಮಗೆ ಆಶ್ಚರ್ಯ ತಂದರೂ ತಂದವು! ಮುಂದೆ ಓದಿ :

೧. ಬೆಚ್ಚಿ ಬೀಳುವುದು

ಮಗುವು ತಾಯಿ ಅಥವಾ ತಾಯಿಯ ಸಮೀಪದಲ್ಲಿ ಯಾರಾದರು ಸೀನಿದರೆ, ಯಾವುದೋ ಜೋರು, ಕ್ಷಿಪ್ರ ಸದ್ದು ಆದರೆ ಮಗುವು ಬೆಚ್ಚಿ ಬೀಳುತ್ತದೆ.

೨. ಬಿಕ್ಕಳಿಸುವುದು

ಗರ್ಭದಲ್ಲಿ ಇರುವಾಗ ಮಗುವು ಬಿಕ್ಕಳಿಸಬಹುದು. ಹೀಗೆ ಮಗುವು ಮಾಡಿದಾಗ, ತಾಯಿಯ ಉದರದ ಒಳಗೆ ಯಾರೋ ಕುಣಿಯುತ್ತಿರುವಂತೆ ಮೇಲ್ಮೈ ಕುಣಿಯುತ್ತದೆ. ಈ ರೀತಿ ಅದು ತಾಯಿಗೆ ಗೊತ್ತಾಗುತ್ತದೆ.

೩. ಅಮ್ಮನ ಊಟದ ರುಚಿ ನೋಡುವುದು

ನಿಜಾವಗಿಯು! ಮಕ್ಕಳು ಹೊಟ್ಟೆಯಲ್ಲಿ ನೀವು ಸೇವಿಸುವ ಆಹಾರದ ರುಚಿಯನ್ನ ನೋಡಬಹುದು. ಆಹಾರವು ಸೀದಾ ಅವರಿಗೆ ಹೋಗದೆ ಇದ್ದರೂ, ಜರಾಯುನಿಂದ ಹೋಗುವ ಆಹಾರವನ್ನ ಮಗುವು ರುಚಿಸಬಹುದು.

೪. ಮೂತ್ರ ಮಾಡುವುದು

ಇದು ಕೇಳಲಿಕ್ಕೆ ಒಂಥರಾ ಅನಿಸಬಹುದು. ಆದರೆ ವಾಸ್ತವದಲ್ಲಿ ಮಕ್ಕಳು ತಮ್ಮ ಅಮ್ಮಂದಿರ ಗರ್ಭದಲ್ಲಿ ಇದ್ದಾಗ ಮೂತ್ರ ವಿಸರ್ಜನೆ ಮಾಡಬಹುದು. ಇನ್ನೂ ವಿಚಿತ್ರವಾದ ವಿಷಯ ಏನಪಾ ಅಂದರೆ, ಮಕ್ಕಳು ಅದನ್ನೇ ಕುಡಿಯಬಹುದು.

೫. ಅಳುವುದು

ಇದನ್ನು ಮಕ್ಕಳು ಹೊರಗಡೆ ಬಂದಾಗ ಆಳುವುದಕ್ಕೆ ಈಗಲೇ ಮಾಡುವ ತಾಲೀಮು ಎಂದುಕೊಳ್ಳಿ. ಶಿಶುವು ಗರ್ಭದಲ್ಲಿಯೂ ಅಳುವುದು, ಆದರೆ ನಿಮಗೆ ಅದು ಕೇಳಿಸುವುದಿಲ್ಲ ಅಷ್ಟೇ. ಏಕೆಂದರೆ ಕೇಳಿಸಿಕೊಳ್ಳಲು ಯಾವುದೇ ದಾರಿ ಇಲ್ಲ.

೬. ಆಲಿಸುವುದು

ಹೌದು ಮಕ್ಕಳು ಗರ್ಭದಲ್ಲಿ ಇರುವಾಗಲೇ ಕೇಳಿಸಿಕೊಳ್ಳಬಹುದು. ಅದು ಕೂಡ ಇನ್ನೂ ಪೂರ್ತಿ ಬೆಳವಣಿಗೆ ಆಗದ ಕಿವಿಗಳಿಂದ. ಹಾಗಾಗಿ ನಿಮ್ಮ ಮಗುವು ನೀವು ನಡೆದಾಡಿದಾಗ ಅಥವಾ ಸುಸ್ತಾದಾಗ ನಿಮ್ಮ ಹೃದಯಬಡಿತವನ್ನ ಕೇಳಿಸಿಕೊಳ್ಳಬಹುದು.

೭. ನೋಡುವುದು

ಗರ್ಭದ ಒಳಗೆ ಮಗುವು ತನ್ನ ಕಣ್ಣುಗಳನ್ನ ಬಿಡಬಹುದು ಹಾಗು ಹೊರಗಡೆ ಇಂದ ಬಂದ ಬೆಳಕನ್ನ ಕಾಣಬಹುದು. ಅವರ ಕಣ್ಣುಗಳು ಗರ್ಭಧಾರಣೆಯ 26-28 ತಿಂಗಳ ಸಮಯದಲ್ಲಿ ಮೊದಲ ಬಾರಿಗೆ ತೆರೆದುಕೊಳ್ಳುತ್ತವೆ. ಅವರ ದೃಷ್ಟಿ ತುಂಬಾ ತೀಕ್ಷ್ಣ ಇರದೇ ಇರಬಹುದು, ಆದರೆ ಅವರ ಮೇಲೆ ಬೀಳುವ ಸೂರ್ಯನ ಬೆಳಕಿನ ಕಿರಣಗಳನ್ನ ಅಥವಾ ಟಾರ್ಚ್ ಅಲ್ಲಿ ಬಿಟ್ಟ ಪ್ರಕಾಶಮಾನವಾದ ಬೆಳಕನ್ನ ಅವರು ಖಂಡಿತ ಗುರುತಿಸಬಲ್ಲರು.

೮. ಮಲವನ್ನ ತಡೆ ಹಿಡಿಯುವುದು

ಹೌದು! ಮಕ್ಕಳು ಮೊದಲ ಬಾರಿಗೆ ಮಲವಿಸರ್ಜನೆ ಮಾಡುವುದು ಗರ್ಭದ ಆಚೆ ಬಂದಮೇಲೆಯೇ.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon