Link copied!
Sign in / Sign up
1
Shares

ಮಗು ಸತ್ತಿದೆ ಎಂದು ಕವರ್ ಅಲ್ಲಿ ಸುತ್ತಿಕೊಟ್ಟರು ವೈದ್ಯರು,ಮಣ್ಣು ಮಾಡಲು ಹೊರಟಾಗ ಏನಾಯಿತೆಂದರೆ..

ದೇಶದ ರಾಜಧಾನಿ ದೆಹಲಿಯಲ್ಲಿ ಆ ಒಂದು ದಿನದಂದು ಒಂದು ಹೆಂಗಸು ಮತ್ತು ಆಕೆಯ ಪತಿ ಒಂದು ಪ್ರತಿಷ್ಠಿತ ಆಸ್ಪತ್ರೆಗೆ ಬರುತ್ತಾರೆ. ಆಗ ಆ ಹೆಂಗಸು ಕೇವಲ 22 ವಾರಗಳ ಗರ್ಭಿಣಿ ಇದ್ದಳು. ಆದರೆ, ಅನಾನುಕೂಲಕರ ಪರಿಸ್ಥಿತಿ ಎದುರಾಗಿದ್ದ ಕಾರಣ ಆಕೆಗೆ ಆಗಲೇ ಹೆರಿಗೆ ಮಾಡಲೇ ಬೇಕಾಯಿತು. ಆಕೆಯ ಹೊಟ್ಟೆಯಲ್ಲಿ ಇದ್ದದ್ದು ಒಂದು ಮಗುವಲ್ಲ! ಅವಳಿ-ಜವಳಿ ಮಕ್ಕಳು!


ಆದರೆ ಅಕಾಲಿಕ ಹೆರಿಗೆ ಎಂದರೆ, ಅಪಾಯ ಕಟ್ಟಿಟ್ಟ ಬುತ್ತಿ. ಹೆರಿಗೆಯಲ್ಲಿ ಅಮ್ಮನ ಹೊಟ್ಟೆಯಿಂದ ವೈದ್ಯರು ಹೊರತೆಗೆದದ್ದು ಎರಡು ಮಕ್ಕಳು. ಒಂದು ಹೆಣ್ಣು ಮಗು ಮತ್ತು ಇನ್ನೊಂದು ಗಂಡು ಮಗು. ಅದರಲ್ಲಿ ಹೆಣ್ಣು ಮಗುವು ಹುಟ್ಟುತ್ತಲೇ ಸಾವನ್ನಪ್ಪಿತ್ತು. ಆದರೆ ಗಂಡು ಮಗುವಿನ ಸ್ಥಿತಿಯು ಗಂಭೀರವಾಗಿದ್ದ ಕಾರಣ, ಅದನ್ನ ಕೃತಕ ಉಸಿರಾಟದ ವ್ಯವಸ್ಥೆಯ ಸಹಾಯದಿಂದ ಜೀವಂತವಾಗಿ ಇಡಲಾಯಿತು. ಆದರೆ ಕೆಲವೇ ಕ್ಷಣಗಳ ನಂತರ ಆ ಮಗುವು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದರು. ವೈದ್ಯರು ಹೇಳುವ ಪ್ರಕಾರ ಆ ಗಂಡು ಮಗುವಿಗೆ ಬಹಳಷ್ಟು ಸೋಂಕುಗಳು ತಾಗಿದ್ದ ಕಾರಣ ಅವನನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.


ನಂತರ, ಆಸ್ಪತ್ರೆ ಸಿಬ್ಬಂದಿ ಎರಡೂ ಮಕ್ಕಳ ದೇಹವನ್ನು ಬೇರೆ ಬೇರೆ ಪ್ಲಾಸ್ಟಿಕ್ ಕವರ್ ಅಲ್ಲಿ ಒಳ್ಳೆ ಕೊರಿಯರ್ ರೀತಿಯಲ್ಲಿ ಸುತ್ತಿ, ಹಿಂದಿನ ದ್ವಾರದಿಂದ ಆ ದಂಪತಿಗೆ ಒಪ್ಪಿಸಿದರು. ಈ ಕಡೆ ಈ ದಂಪತಿಯ ಆಕ್ರಂದನ ಮುಗಿಲು ಮುಟ್ಟಿತು. ಆ ಮಕ್ಕಳ ದೇಹಗಳನ್ನ ಹೊತ್ತು ತಮ್ಮ ಮನೆ ಕಡೆಗೆ ನಡೆದರು. ಇನ್ನೊಂದೆಡೆ ಮಗುವಿನ ತಾತ ಮತ್ತು ಇತರೆ ಸಂಬಂಧಿಕರು ಆ ಮಕ್ಕಳ ಅಂತ್ಯಕ್ರಿಯೆಗೆ ಸಿದ್ಧತೆಗಳನ್ನ ನಡೆಸುತ್ತಿದ್ದರು.


ಆಸ್ಪತ್ರೆಯಿಂದ ಮೂರು ಕಿಲೋಮೀಟರು ದೂರದಲ್ಲಿ ಇದ್ದಾಗ, ಮಗುವಿನ ದೇಹವಿದ್ದ ಒಂದು ಕವರ್ ಅಲುಗಾಡಲು ಶುರು ಆಯಿತು! ಆಗ ಮಗುವಿನ ಸಂಬಂಧಿಕರು ಒಬ್ಬರು ಆ ಕವರ್ ಅನ್ನು ಹರಿದು ನೋಡಿದರೆ, ಅದರಲ್ಲಿ ಕೆಲವು ಪ್ಲಾಸ್ಟಿಕ್ ತುಂಡುಗಳು ಮತ್ತು ಮಗುವಿನ ದೇಹವಿತ್ತು. ಆದರೆ, ಮಗುವಿನ ಕೈ ಮತ್ತು ಕಾಲುಗಳು ಇನ್ನೂ ಅಲುಗಾಡುತ್ತಿದ್ದವು, ಮಗು ಉಸಿರಾಡುತ್ತಿತ್ತು!


ತಕ್ಷಣವೇ ಆ ಮಗುವನ್ನ ಹೊತ್ತು ಆಸ್ಪತ್ರೆಗೆ ಓಡಿದರು ಪೋಷಕರು. ಈಗ ಆ ಮಗು ಇನ್ನೂ ಬದುಕುಳಿದಿದ್ದು, ಆ ಮಗುವನ್ನು ಕೃತಕ ಉಸಿರಾಟದ ವ್ಯವಸ್ಥೆಯ ಸಹಾಯದೊಂದಿಗೆ ಪೋಷಿಸಲಾಗುತ್ತಿದೆ. ಇಂತಹ ಘೋರ ಸಂದರ್ಭ ಉಂಟುಮಾಡಿದ, ನಿರ್ಲಕ್ಷ್ಯ ಮೆರೆದ ವೈದ್ಯರಿಬ್ಬರನ್ನು ಆಸ್ಪತ್ರೆ ಕೂಡಲೇ ಕೆಲಸದಿಂದ ಕಿತ್ತು ಹಾಕಿತು. ಆದರೆ ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಅವರು ಈ ಪ್ರಕರಣದ ಬಗ್ಗೆ ಅರಿತು ಕೆಂಡಾಮಂಡಲವಾಗಿ, ಇಡೀ ಆಸ್ಪತ್ರೆಯ ಲೈಸೆನ್ಸ್ ಅನ್ನೇ ಕಿತ್ತುಕೊಂಡು ಜನರ ಮನಸ್ಸಲ್ಲಿ ಭರವಸೆ ಮೂಡಿಸಿದರು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon