Link copied!
Sign in / Sign up
17
Shares

ಮಗು ನಿರೀಕ್ಷಿಸುತ್ತಿರುವವರು ಖರೀದಿ ಮಾಡಲೇ ಬೇಕಾದ ೭ ವಸ್ತುಗಳು

ಗರ್ಭಧಾರಣೆಯು ಹಲಸಿನ ಹಣ್ಣಿನ ಥರ. ಕೊನೆಯಲ್ಲಿ ಸಿಹಿಯಾದ ಫಲ ಒಳಗೊಂಡಿದ್ದರೂ ನಾವು ಮೊದಲು ಮುಳ್ಳುಗಳನ್ನು ದಾಟಬೇಕು. ಗರ್ಭಧಾರಣೆಯು ಅದ್ಬುತವಾಗಿ ಇದ್ದರು, ನಿಮ್ಮ ದೇಹದಲ್ಲಿ ಆಗುವ ಹಲವಾರು ಬದಲಾವಣೆಗಳನ್ನು ಎದುರಿಸಲು ನಿಮಗೆ ಕಷ್ಟವಾಗಬಹುದು. ಇದರರ್ಥ ನೀವು ಬೇಗನೆ ಪರಿಸ್ಥಿತಿಗಳಿಗೆ ಒಗ್ಗಿಕೊಂಡರೆ, ಈ ಸಮಯವನ್ನು ಹೆಚ್ಚು ತೊಂದರೆಗಳು ಇಲ್ಲದೆ ಕಳೆಯಬಹುದು. ಹುಟ್ಟು ಮರೆತು ತೆಪ್ಪ ಹತ್ತಿ ಪೇಚಾಡುವಂತೆ ಬದಲು, ಬೇಕಿರೋ ವಸ್ತುಗಳನ್ನು ಮೊದಲೇ ಇರಿಸಿಕೊಂಡರೆ ನಿಮ್ಮ ಗರ್ಭಧಾರಣೆ ಎಂಬ ಪ್ರಯಾಣ ಸುಗಮವಾಗಿರುತ್ತದೆ. ನಿಮ್ಮ ಈ ಪ್ರಯಾಣ ಸುಗಮವಾಗಲು ನಾವು ಹೇಳಿರುವ ಈ ೭ ವಸ್ತಗಳು ಕಡ್ಡಾಯವಾಗಿ ನಿಮ್ಮಲ್ಲಿ ಇರಿಸಿಕೊಳ್ಳಿ.

 ೧. ದ್ವವೌಶಧ (ಲೋಷನ್)

ನೀವು ಗರ್ಭಿಣಿಯಾದಾಗ ಗೋಚರಿಸುವ ಬದಲಾವಣೆ ಎಂದರೆ ಅದು ನಿಮ್ಮ ಉದರದ ಗಾತ್ರ ಹೆಚ್ಚುವುದು. ಉದರದ ಗಾತ್ರ ಹೆಚ್ಚಿದಂತೆ ಅದರ ಮೇಲಿನ ಚರ್ಮ ಹಿಗ್ಗುತ್ತದೆ. ಹೀಗೆ ಹಿಗ್ಗಿದ ಚರ್ಮವು ಒಣಗಬಹುದು, ಒಡೆಯಬಹುದು ಹಾಗು ನವೆ ಉಂಟು ಮಾಡಬಹುದು. ಇದರ ಜೊತೆಗೆ ಎಲ್ಲಾ ತಾಯಂದಿರ ಅತಿಮುಖ್ಯ ಭಯ ಅಂದರೆ ಚರ್ಮದ ಮೇಲಿನ ಹಿಗ್ಗಿದ ಗುರುತುಗಳು (Stretch marks) ಕೂಡ ಇದರಿಂದ ಉಂಟಾಗಬಹುದು. ಆದರಿಂದ ನೀವು ನಿಮ್ಮ ಚರ್ಮವನ್ನು ಯಾವಾಗಲು ತೇವಾಂಶ ಕೂಡಿರುವಂತೆ ಕಾಪಾಡಿಕೊಳ್ಳಬೇಕು.ಈ ನಿಟ್ಟಿನಲ್ಲಿ ತೈಲಗಳು ಹಾಗು ಲೋಷನ್ ಗಳನ್ನು ನೀವು ಕಡ್ಡಾಯವಾಗಿ ಬಳಸಲೇಬೇಕು. ಇಂತಹ ಉತ್ಪನ್ನಗಳ ಆಯ್ಕೆಯಲ್ಲಿ ಬಹಳಷ್ಟು ತಾಯಂದಿರು ನಂಬಿರುವ ಕಂಪನಿ ಅಂದರೆ ಅದು “ಬಯೋ-ಆಯಿಲ್” (Bio-oil). ಬಹಳಷ್ಟು ಅಮ್ಮಂದಿರು ನಿಮಗೆ ಇದನ್ನೇ ಶಿಫಾರಸು ಮಾಡುತ್ತಾರೆ. ಬಯೋ-ಆಯಿಲ್ ಉತ್ಪನ್ನಗಳನ್ನು ಖರೀದಿಸಲು, ಇಲ್ಲಿ ಕ್ಲಿಕ್ ಮಾಡಿ.

೨. ಗರ್ಭಧಾರಣೆಯ ಪ್ಯಾಂಟ್ ಗಳು

 

ಉದರ ದೊಡ್ದದಾಗುವುದರಿಂದ ನಿಮ್ಮ ಪ್ಯಾಂಟ್ ಗಳು ಅಳತೆ ಇವಾಗ ನಿಮಗೆ ಸರಿ ಹೊಂದುವುದಿಲ್ಲ್ಲ. ನೀವು ನಿಮ್ಮ ಯಾವುದೇ ಹಳೆ ಪ್ಯಾಂಟ್ ಗಳು ನಿಮಗೆ ಆಗುತ್ತಿಲ್ಲ ಅಂತ ಗೋಳಿಡುವ ಮುನ್ನ, ನಾವ್ ಹೇಳೋದು ನೀವು ಕೂಡಲೇ ಹೋಗಿ ಕೆಲವು ಪ್ಯಾಂಟ್ಗಳನ್ನು ಖರೀದಿ ಮಾಡಿ ಅಂತ. ಅಂದರೆ ಲೆಗ್ಗಿಂಗ್ ಗಳು, ತಾಯ್ತನದ ಪ್ಯಾಂಟ್ಗಳು, ತಾಯ್ತನದ ಜೀನ್ಸ್ ಗಳು. ಲೆಗ್ಗಿಂಗ್ ಗಳು ನೀವು ಯಾವ ಸಂದರ್ಭದಲ್ಲೂ ಹಾಗು ಯಾವ ಬಟ್ಟೆಯೊಂದಿಗು ಧರಿಸಬಹುದು. ಈ ತಾಯ್ತನದ ಪ್ಯಾಂಟ್ಗಳನ್ನು ನೀವು ಲೆಗ್ಗಿಂಗ್ ಹಾಕುವುದು ಎಲ್ಲಿ ತುಂಬಾ ಪ್ರಾಸಂಗಿಕ ಅನಿಸುವುದೋ, ಅಲ್ಲಿ ಧರಿಸಬಹುದು. ಇವುಗಳನ್ನು ಖರಿದೀಸಿಲು ನೀವು ಪರಿಗಣಿಸಬೇಕಾದ ಬ್ರ್ಯಾಂಡ್ಗಳು ಅಂದರೆ ಅವು ಜಾಕಿ, ಲಿರ, ನೈನ್ ಹಾಗು ಮಾಮ್-ಟು-ಬಿ. ಇವುಗಳನ್ನು ಪಡೆಯಲು ಇಲ್ಲಿ ಒತ್ತಿ.

೩. ಉದರ ಹೊರುವ ಬ್ಯಾಂಡು ಗಳು
 

ಮಗುವಿನ ಹೆಚ್ಚಳ ತೂಕ ಹಾಗು ಶಾರೀರಿಕ ಬದಲಾವಣೆಗಳ ಕಾರಣ ಬಹಳಷ್ಟು ಗರ್ಭಿಣಿಯರು ಬೆನ್ನು ನೋವು ಹಾಗು ಸೊಂಟ ನೋವು ಅನುಭವಿಸುತ್ತಾರೆ. ಈ ಬ್ಯಾಂಡ್ ಗಳು ನಿಮ್ಮ ಮಗುವಿನ ಭಾರ ಹೊರುವದಕ್ಕೆ ಸಹಾಯ ಮಾಡುವುದಲ್ಲದೆ, ನಿಮ್ಮ ಉದರಕ್ಕೆ ಆಕರವನ್ನು ನೀಡುತ್ತವೆ. ನಿಮ್ಮ ಮಗುವು ನಿಮ್ಮ ಆಂತರಿಕ ಅಂಗಗಳ ಮೇಲೆ ಹೇರುವ ಒತ್ತಡವನ್ನು ಇದು ಕಮ್ಮಿ ಮಾಡುತ್ತವೆ. ಬಹಳಷ್ಟು ತಾಯಂದಿರು ಉಪಯೋಗಿಸಿ ಒಳ್ಳೆ ವಿಮರ್ಶೆಗಳನ್ನು ನೀಡಿದ ಬ್ಯಾಂಡ್ ಅಂದರೆ, ಅದು “ಆರಾಮ್” ನದ್ದು. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

೪. ಪೂರಕ ಪದಾರ್ಥಗಳು (ಸಪ್ಲಿಮೆಂಟ್ ಗಳು)
 

ನೀವು ಗರ್ಭಿಣಿ ಆದಾಗ, ನಿಮ್ಮ ಆಹಾರ ಪದ್ಧತಿ ಬಹಳಷ್ಟು ಬದಲಾವಣೆ ಕಾಣುತ್ತದೆ. ನೀವು ಎಂದಿನಂತೆ ಸೇವಿಸುತ್ತಿದ್ದ ಹಲವಾರು ಆಹಾರ ಪದಾರ್ಥಗಳು, ನಿಮ್ಮ ಮಗುವಿಗೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ಸೇವಿಸುದು ನಿಲ್ಲಿಸುವಿರಿ. ಅಥವಾ, ನಿಮಗೆ ಆಗುವ ವಾಕರಿಕೆ ಅಂತ ಅನುಭವದಿಂದ ನೀವು ಮುಂಚೆ ಸೇವಿಸುತ್ತಿದ್ದ ಆಹಾರ ಈಗ ಸೇವಿಸಲು ಆಗುತ್ತಿಲ್ಲ. ಇದರಿಂದಾಗುವ ತೊಂದರೆ ಅಂದರೆ ನಿಮ್ಮ ಹಾಗು ಮಗುವಿನ ಆರೋಗ್ಯ ಹಾಗು ಬೆಳವಣಿಗೆಗೆ ಬೇಕಾದ ಅವಶ್ಯಕ ಪೌಷ್ಟಿಕಾಂಶಗಳು ನಿಮಗೆ ಸಿಗದೇ ಹೋಗುವುದು. ನಿಮಗೆ ಅಗತ್ಯ ಪೌಷ್ಟಿಕಾಂಶಗಳ ಲಭ್ಯತೆಗೆ ನಾವು ನೀಡುವ ಸಲಹೆ ಅಂದರೆ ಅದು ಪೂರಕ ಪದಾರ್ಥಗಳು ಅಥವಾ ಸಪ್ಲಿಮೆಂಟ್ ಗಳನ್ನು ಸೇವಿಸುದು. ಇವುಗಳನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಬಳಿ ಸಲಹೆ ಪಡೆಯಿರಿ. ನಾವು ಶಿಫಾರಸ್ಸು ಮಾಡುವ ಸಪ್ಲಿಮೆಂಟ್ ಗಳು ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಡಿ, ಮೇದಾಮ್ಲ ಹಾಗು ಇನ್ನಿತರೆಗಳಿಗೆ. “ನೇಚರ್ ಮೇಡ್” ಬ್ರ್ಯಾಂಡ್ ನ ಸಪ್ಲಿಮೆಂಟ್ ಗಳ ಮೇಲೆ ಬಹಳಷ್ಟು ಮಂದಿ ಭರವಸೆ ಇಟ್ಟಿದ್ದಾರೆ. ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

೫. ಹಿತಕರ ಶೂಗಳನ್ನು ಖರೀದಿಸಿ
 

ನೀವು ಕುಂತಲ್ಲೇ ಕಾಲ ಕಳೆಯುವ ಸೋಮರಿಯಲ್ಲದೆ, ಹೊರಗೆ ಓಡಾಡುವ ವ್ಯಕ್ತಿ ಆಗಿದ್ದರೆ, ನೀವು ನಿಮ್ಮ ಹಣವನ್ನು ಹೊಸ ಜೊತೆ ಆರಾಮದಾಯಕ ಶೂಗಳನ್ನು ಖರೀದಿಸುವದರ ಮೇಲೆ ಹಾಕಿ. ಹೆಚ್ಚಿದ ತೂಕದೊಂದಿಗೆ ನೀವು ನಡೆದಾಡುವುದರಿಂದ, ನಿಮ್ಮ ಪಾದಗಳ ಮೇಲೆ ತುಂಬಾನೇ ಹೊರೆ ಬೀಳುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಪಾದಗಳಿಗೆ ಬೇಕಾಗಿರುವ ಬೆಂಬಲ ಸಿಗಲು ನೀವು ಆರಾಮದಾಯಕ ಅಂದರೆ ಕಾಮ್ಫಿ ಶೂಗಳನ್ನು ಖರೀದಿಸಬಹುದು. ಇವುಗಳು ನೋಡಲು ಚೆನ್ನಾಗಿಯೇ ಇರಬೇಕೆಂದಿಲ್ಲ.ಹಾಗಂದ ಮಾತ್ರಕ್ಕೆ ಚೆನ್ನಾಗಿ ಕಾಣುವ ಆರಾಮದಾಯಕ ಶೂಗಳು ಸಿಗುವುದಿಲ್ಲ ಅಂತೇನಿಲ್ಲ. ಅಥವಾ ನೀವು ಮನೇಲೆ ಕೂತುಕೊಂಡು ವಿಶ್ರಾಂತಿ ತೆಗೆದುಕೊಳ್ಳುವವರಂತೆ ಆದರೆ, ನೀವು ಆರಾಮದಾಯಕ ಚಪ್ಪಲಿಗಳನ್ನು ಖರೀದಿ ಮಾಡಬಹುದು. ನಾವು ನಿಮಗೆ ಶಿಫಾರಸ್ಸು ಮಾಡುವ ಬ್ರ್ಯಾಂಡ್ ಗಳು ಎಂದರೆ ಅವು “ಡಾ. ಸೋಲ್” ಹಾಗು “ಎಷಿಯನ್”. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

೬. ದೇಹ ದಿಂಬು (ಬಾಡಿ ಪಿಲ್ಲೋ)
 

ಈ ಬಾಡಿ ಪಿಲ್ಲೋಗಳ ಹಿಂದಿನ ವಾಸ್ತವತೆ ನಿಮಗೆ ನಾವು ಹೇಳುತ್ತೇವೆ. ನೀವು ಮಲಗುವಾಗ ಹೆಚ್ಚಿಗೆ ಪಕ್ಕಕ್ಕೆ ಮುಖ ಮಾಡಿ ಮಲಗುವಿರಿ ಅಥವಾ ನಿಮ್ಮ ಬೆನ್ನು ಮೇಲೆ ಮಾಡಿ ಮಲಗುತ್ತೀರಿ. ಆದರೆ ನೀವು ಗರ್ಭಿಣಿ ಆದಾಗ, ಪಕ್ಕಕ್ಕೆ ಮುಖ ಮಾಡಿ ಮಲಗುವುದು ಆರಾಮದಯಕ ಅನಿಸುವುದಿಲ್ಲ ಹಾಗು ಹೊಟ್ಟೆಯ ಮೇಲೆ ಅಂತೂ ಮಲಗುವಂತೆಯೇ ಇಲ್ಲ. ಹಾಗೆ ಮಾಡಿದ್ದಲ್ಲಿ ನಿಮ್ಮ ಮಗುವಿಗೆ ತೊಂದರೆ ಆಗಬಹುದು. ನಮ್ಮಲ್ಲಿ ಬಹಳಷ್ಟು ಮಂದಿಯಲ್ಲಿ ಹೊಟ್ಟೆ ಮೇಲೆ ಮಾಡಿ ಮಲಗುವ ಅಭ್ಯಾಸ ಇಲ್ಲ ಹಾಗು ಎದೆಯ ಮೇಲೆ ಬೀಳುವ ಒತ್ತಡವನ್ನು ತಡೆಯಲು ಆಗುವುದಿಲ್ಲ. ಈ ಬಾಡಿ ಪಿಲ್ಲೋ ಅಥವಾ ದೇಹ ದಿಂಬುಗಳು ಹೇಗೆ ತಯಾರು ಮಾಡಿರುತ್ತಾರೆ ಅಂದರೆ, ಅವು ಬೇಕಾಗಿರುವ ಅಂಗಗಳನ್ನೆಲ್ಲ ಮೇಲೆ ಇರುವಂತೆ ನೋಡಿಕೊಳ್ಳುತ್ತವೆ. ಇದರರ್ಥ ನೀವು ದೇಹ ದಿಂಬುಗಳೊಂದಿಗೆ ಮಲಗಿದರೆ, ನೀವು ನಿಮ್ಮ ಹೊಟ್ಟೆಯ ಮೇಲೆಯೇ ಮಲಗಬಹುದು! ಮತ್ತೆ ಸುಖಕರ ನಿದ್ರೆ ನಿಮ್ಮದಾಗಿಸಿಕೊಳ್ಳಿ ! ನಾವು ಶಿಫಾರಸ್ಸು ಮಾಡುವ ಬ್ರ್ಯಾಂಡ್ ಗಳು ಅಂದರೆ “ಲುಲಾ” , “ಮಾಮ್-ಟು-ಬಿ” ಹಾಗು “ಕೂಜ್ಲಿ”. ಇವುಗಳೆಲ್ಲವೂ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿವೆ. ಇಲ್ಲಿ ಕ್ಲಿಕ್ಕ್ ಮಾಡಿ.

೭. ಹೊಸ ಒಳರವಿಕೆಗಳು

ನಿಮ್ಮ ದೇಹದ ಪ್ರಮಾಣ ಬದಲಾಗುತ್ತಿದ್ದಂತೆ, ನಿಮ್ಮ ಸ್ತನಗಳ ಪ್ರಮಾಣ ಅದಕ್ಕೆ ತಕ್ಕಂತೆ ಬದಲಾಗುವುದು ನಿಮಗೆ ಸಮಾಧಾನ ತಂದು ಕೊಡಬಹುದು. ಆದರೆ ಕೆಲವರಲ್ಲಿ ಸ್ತನಗಳು ಗಾತ್ರದಲ್ಲಿ ಬೆಳೆದರೆ, ಇನ್ನು ಕೆಲವರಲ್ಲಿ ಕ್ಷೀಣಿಸುತ್ತವೆ. ಈ ಎಲ್ಲಾ ತಲೆನೋವು ನಿವಾರಿಸಲು ನಾವು ಸೂಚಿಸುವುದು ಏನೆಂದರೆ ಅದು ನಿಮ್ಮ ಬದಲಾದ ಗಾತ್ರಕ್ಕೆ ಸರಿ ಹೊಂದುವ ಹೊಸ ಒಳರವಿಕೆಗಳನ್ನು ಖರೀದಿಸುವುದು. ನಿಮ್ಮ ಸ್ತನಗಳು ಮುಂದಿನ ದಿನಗಳಲ್ಲಿ ಅನೇಕ ಕಾರ್ಯಗಳು ಮಾಡಬೇಕು, ಹಾಗಾಗಿ ಅವುಗಳನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಇವುಗಳನ್ನು ಖರೀದಿಸುವ ಒಳ್ಳೆ ವಿಧಾನ ಎಂದರೆ, ನೀವು ಖುದ್ದಾಗಿ ಅಂಗಡಿಗೆ ಧಾವಿಸಿ ನಿಮ್ಮ ಅಳತೆಯನ್ನು ತಿಳಿದುಕೊಂಡು, ನಂತರ ಆನ್ಲೈನ್ ಖಾರೆಡಿ ಮಾಡುವುದು. ನಾವು ನಿಮಗೆ ಶಿಫಾರಸ್ಸು ಮಾಡುವ ಬ್ರ್ಯಾಂಡ್ ಗಳು ಎಂದರೆ, ಅವು ಜಾಕಿ, ಜಿವಾಮೆ, ಅಮಂಟೆ ಹಾಗು ಟ್ರೈಯಂಫ್. ಇದನ್ನು ನೀವು ಇಲ್ಲಿ ಖರೀದಿಸಬಹುದು.

ಈ ಕೆಲವು ವಸ್ತುಗಳು ನಿಮ್ಮ ಗರ್ಭಧಾರಣೆಯ ಸಮಯವನ್ನು ಕಳೆಯಲು ತುಂಬಾ ಸಹಾಯ ಮಾಡುತ್ತವೆ. ಇವುಗಳು ಕೇವಲ್ ನಿಮಗೆ ಸಹಾಯಕಾರಿ ಆಗುವುದಲ್ಲದೆ, ನಿಮ್ಮನ್ನು ನೋಡಿಕೊಳ್ಳುವವರಿಗೂ ಸಹಕಾರಿ ಆಗಲಿದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
100%
What?
scroll up icon