Link copied!
Sign in / Sign up
1
Shares

ಮನೆಯಲ್ಲಿ ಮಗು ಇದ್ದಾಗ ಆಗುವ ೪ ಬದಲಾವಣೆಗಳು

ಸಿದ್ಧತೆ ಮತ್ತು ದೀರ್ಘಾವಧಿಯ ಕಾಯುವಿಕೆಯ ನಂತರ ನಿಮ್ಮ ಚಿಕ್ಕ ಮಗುವು ಮನೆಯೊಳಗೆ ಪ್ರವೇಶಿಸಿದಾಗ,ನೀವು ಈ ದಿನಕ್ಕಾಗಿ ಕಳೆದೆಷ್ಟೋ ತಿಂಗಳುಗಳಿಂದ ನೀವು ಮಾಡಿದ ಎಲ್ಲ ಯೋಜನೆಗಳಿಂದ ಎಲ್ಲವೂ  ನಿಯಂತ್ರಣದಲ್ಲಿದೆ ಎಂದು ನೀವು ಭಾವಿಸುತ್ತೀರಿ. ನೀವು ಸಿದ್ಧರಾಗಿರುವಿರಿ ಎಂದು ನೀವು ಭಾವಿಸಿದರೂ, ಕೆಲವು ವಿಷಯಗಳು ನಿಮ್ಮನ್ನು ಇನ್ನೂ ಚಕಿತಗೊಳಿಸಬಹುದು ,ಆದರೆ ನೀವು ನಿಮ್ಮ ಜೀವನದಲ್ಲಿ ಬದಲಾಗಬಹುದೆಂದು ಭಾವಿಸುವ ಎಲ್ಲವನ್ನೂ ನೀವು ಇನ್ನೂ ಪ್ರಯತ್ನಿಸಬೇಕು ಮತ್ತು ನಿರೀಕ್ಷಿಸಬಹುದು.

೧.ದಿನನಿತ್ಯದ ಕೆಲಸ

ನಿಮ್ಮ ಪ್ರಸವದ ನಂತರ ನೀವು ಕೆಲಸಕ್ಕೆ ಹಿಂತಿರುಗಲು ನಿರ್ಧರಿಸಿದಲ್ಲಿ, ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ನಿಮಗೆ  ತುಂಬಾ ಕಷ್ಟವಾಗಬಹುದು ಏಕೆಂದರೆ ಬೇರೊಬ್ಬರ ಕೈಯಲ್ಲಿ ನಿಮ್ಮ ಚಿಕ್ಕ ಮಗುವನ್ನು  ಬಿಡಲು ನಿಮಗೆ ತುಂಬಾ ಅಸಹನೀಯವಾಗಬಹುದು.ನಿಮ್ಮ ಸಂಗತಿ ಇಲ್ಲವೇ ನೀವು ಇಬ್ಬರಲ್ಲಿ ಒಬ್ಬರಾದರೂ ನಿಮ್ಮ ಮಗುವಿನೊಂದಿಗೆ  ಮನೆಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ಕೆಲಸದ ಸಮಯವನ್ನು ನಿಮ್ಮ ಸಂಗಾತಿಯೊಂದಿಗೆ  ಸಂಯೋಜಿಸಲು ನೀವು ಪರಿಗಣಿಸಬಹುದು. ಪಾಲನೆ ಮಾಡುವವರನ್ನು ನೇಮಿಸುವ ಅಥವಾ ನಿಮ್ಮ ಮಗುವನ್ನು ದಿನದಲ್ಲಿ ಪ್ರೀತಿಪಾತ್ರರ ಜೊತೆಗೆ  ಬಿಟ್ಟುಬಿಡುವ ಕಲ್ಪನೆಗೆ ನೀವು ಮುಕ್ತರಾಗಿದ್ದರೆ, ಅದು ನಿಮಗೆ ವಿಷಯಗಳನ್ನು ಸುಲಭಗೊಳಿಸುತ್ತದೆ. ನಿಮ್ಮ ಮಗುವು  ನಿಮ್ಮ ಕೆಲಸದ ಕಾರಣದಿಂದಾಗಿ ಆಹಾರ ಸೇವಿಸುವ ಸಮಯ ಕಳೆದುಕೊಳ್ಳುವುದಿಲ್ಲ.

೨.ಕುಟುಂಬದೊಂದಿಗೆ ಸಹ ಭೋಜನ

ಒಮ್ಮೆ ನೀವು ಎಲ್ಲರೂ ಒಟ್ಟಿಗೆ ಮನೆಯಲ್ಲಿದ್ದರೆ ಮತ್ತು ಊಟದ ಮೇಜಿನ ಮೇಲೆ ಶಾಂತಿಯಾಗಿ ಊಟ ಮಾಡುವುದು ಸಹ ನಿಮಗೆ ಕಷ್ಟಕರವಾಗಬಹುದು. ನಿಮ್ಮ ಮಗು ನಿಮ್ಮ ಊಟದ ಮಧ್ಯದಲ್ಲಿ ಎಚ್ಚರಗೊಳ್ಳಬಹುದು ಮತ್ತು ತಕ್ಷಣ ಗಮನ  ಹರಿಸಬೇಕಾಗುತ್ತದೆ. ಮೇಜಿನ ಮೇಲೆ ಬಿಸಿ ಆಹಾರದಿಂದ ತುಂಬಿದ ತಟ್ಟೆಗಳು ಮತ್ತು ಸೂಕ್ಷ್ಮವಾದ ಪಿಂಗಾಣಿ ತಟ್ಟೆಗಳು ಇರುವುದರಿಂದ ಅವರನ್ನು ಮೇಜಿನ ಬಳಿಗೆ ತರುವುದು  ಅಪಾಯಕಾರಿ ಆಗಬಹುದು.

೩.ನಿದ್ರೆಯ ವೇಳಾಪಟ್ಟಿಗಳು

ತಮ್ಮ ಹೆತ್ತವರ ಸಮೀಪದಲ್ಲಿರುವಾಗ ಕೆಲವು ಶಿಶುಗಳು ವೇಗವಾಗಿ ನಿದ್ರಿಸುತ್ತಾರೆ. ಇದರ ಅರ್ಥ ನೀವು ನಿಮ್ಮ ಹಾಸಿಗೆಯ ಜಾಗವನ್ನು ಇನ್ನೊಬ್ಬ  ಬಹಳ ಸೂಕ್ಷ್ಮವಾದ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ.ಎಲ್ಲಾ ಸಮಯದಲ್ಲೂ ನಿಮ್ಮ ಸುಪ್ತ ಪ್ರಜ್ಞೆಯಲ್ಲಿಯೂ ಸಹ ನಿಮ್ಮ ಮಗುವಿಗೆ ನೋವಾಗದಂತೆ ನಿಮ್ಮ ಚಲನೆಗಳ ಬಗ್ಗೆ ನೀವು ಉಪೇಕ್ಷೆಯಿಂದ ಇರಬೇಕಾಗುತ್ತದೆ.ಅವರೋ ತೊಟ್ಟಿಲಿನಲ್ಲಿ ನಿದ್ರಿಸಿದರೆ ಅವರಿಗೆ ತಿನ್ನಿಸಲು ಅಥವಾ ನಿಶ್ಯಬ್ದವಾಗಿಡಲು ನೀವು ನಿಯಮಿತವಾಗಿ ಎದ್ದೇಳಬೇಕು, ಅದು ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ಮಾತ್ರವಲ್ಲದೆ ನಿಮ್ಮ  ಸಂಗಾತಿಯ  ವೇಳಾಪಟ್ಟಿಯನ್ನೂ ಸಹ ಹಾಳುಮಾಡುತ್ತದೆ.

೪.ಜವಾಬ್ದಾರಿಗಳನ್ನು ವಿತರಿಸುವುದು

ಇದು ನೀವು ಮತ್ತು ನಿಮ್ಮ ಸಂಗಾತಿಗೆ ಮಾತ್ರ ಸೀಮಿತವಾಗಿಲ್ಲ. ನೀವು ಈಗಾಗಲೇ ದೊಡ್ಡ  ಮಕ್ಕಳನ್ನು ಹೊಂದಿದ್ದರೆ, ಇದು ಅವರಿಗೆ ಮನೆಗೆಲಸದಲ್ಲಿ ಜವಾಬ್ದಾರಿಯನ್ನು ಹೊರಲು ಅವಕಾಶವಿರುತ್ತದೆ. ನೀವು ಅವರಿಗೆ ವಿಷಯವನ್ನು ಸರಿಯಾಗಿ ತಿಳಿಸಬೇಕು ಮತ್ತು ಒಮ್ಮೆಹೊಸ ಸದಸ್ಯರು  ಬಂದಾಗ  ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ಅವರು ಖಚಿತವಾಗಿರುತ್ತಾರೆ. ನವಜಾತ ಶಿಶುವಿಗೆ ಸಂಬಂಧಿಸಿದಂತೆ ಅವರಿಗೆ ಜವಾಬ್ದಾರಿಗಳನ್ನು ಕೊಡುವುದು ಸಹೋದರ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಮತ್ತು ಅವರಿಗೆ  ಪ್ರಾಮುಖ್ಯತೆಯನ್ನು ನೀಡಿದಂತೆ ಅವರು ಭಾವಿಸುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಅವರು ನಿಮ್ಮಿಂದ ನಿರ್ಲಕ್ಷ್ಯಕ್ಕೊಳಪಟ್ಟಂತೆ ಭಾವಿಸದೆ  ಇರುವುದು ಅವಶ್ಯಕವಾಗಿದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon