Link copied!
Sign in / Sign up
17
Shares

ನಿಮ್ಮ ಮಗುವು ಕೆಳಗೆ ಬಿದ್ದೊಡನೆ ನೀವು ಈ 6 ಎಚ್ಚರಿಕೆಯ ಗಂಟೆಗಳನ್ನ ಗುರುತಿಸಲೇಬೇಕು!

ಮಗುವು ಬಿದ್ದು, ತನ್ನ ದೇಹಕ್ಕೆ ಪೆಟ್ಟು ಮಾಡಿಕೊಳ್ಳುವುದನ್ನ ನೋಡುವುದಕ್ಕಿಂತ ಪೋಷಕರಿಗೆ ಮತ್ತೊಂದು ಕರುಳು ಕಿವುಚುವ ದೃಶ್ಯ ಮತ್ತೊಂದಿಲ್ಲ. ಹೌದು, ನೀವು ಇದರ ಬಗ್ಗೆ ಯಾವಾಗಲೂ ಯೋಚಿಸುತ್ತಾ ಕೂರಬಾರದು. ಏಕೆಂದರೆ, ನಡೆಯಲು, ಆಡಲು ಕಲಿತಿರುವ ಮಗುವು ಒಂದಲ್ಲಾ ಒಂದು ದಿನ ಬಿದ್ದೇ ಬೀಳುತ್ತದೆ. ಅಂತಹ ಸಮಯದಲ್ಲಿ ನೀವು ದೃತಿಗೆಡದೆ ಕೆಲವೊಂದು ಅಪಾಯ ಸೂಚಿಸುವ ಲಕ್ಷಣಗಳನ್ನ ಗುರುತಿಸಬೇಕು. 10 ರಲ್ಲಿ 9 ಬಾರಿ ನಿಮ್ಮ ಮಗುವು ಬಿದ್ದಾಗ, ಅದಕ್ಕೆ ಗಂಭೀರವಾದದ್ದು ಏನು ಆಗುವುದಿಲ್ಲ. ಆದರೆ ನಿಮ್ಮ ಮಗುವಿನ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದರೆ ಕೆಲವೊಂದು ಎಚ್ಚರಿಕೆಯ ಸೂಚನೆಗಳನ್ನ ನೀವು ನೆನಪಲ್ಲಿ ಇಟ್ಟುಕೊಳ್ಳಲೇ ಬೇಕು. ಅಂತಹ ಸೂಚನೆಗಳು ಯಾವುದೆಂದು ಇಲ್ಲಿ ನಾವು ತಿಳಿಸುತ್ತೇವೆ ಓದಿ.


೧. ಅಸಹಜ ಕಣ್ಣಿನ ಚಲನೆ


ಮಕ್ಕಳು ಒಂದೇ ಕಡೆ ಬಹಳ ಹೊತ್ತು ಗಮನವಹಿಸುವುದಿಲ್ಲ ಎಂಬುದು ಗೊತ್ತು, ಆದರೂ ನೀವು ಅವರು ಸಿಕ್ಕಾಪಟ್ಟೆ ವಿಚಲಿತರಾದಂತೆ ಕಂಡರೆ ಎಚ್ಚರ ವಹಿಸಬೇಕು. ತಡೆಯಲಾಗದಷ್ಟು ಅಳುವುದು ಮತ್ತು ಹೇಗೆ ಬೇಕೋ ಹಾಗೆ ಕಣ್ಣಿನ ಚಲನೆ ಮಾಡುವುದು ಕೆಲವೊಂದು ಎಚ್ಚರಿಕೆಯ ಗಂಟೆಗಳು ಆಗಿವೆ. ಹೀಗಾಗಿ, ಒಂದು ವೇಳೆ ನಿಮ್ಮ ಮಗುವಿನ ಕಣ್ಣು ಗುಡ್ಡೆ ಆ ಬದಿಯಿಂದ ಈ ಬದಿಯವರೆಗೆ ಸುತ್ತುತ್ತಿದ್ದರೆ ಅಥವಾ ಅತಿಯಾಗಿ ಅಳುತ್ತಿದ್ದರೆ, ನಿಮ್ಮ ಮಗುವಿಗೆ ಬಿದ್ದದ್ದರಿಂದ ನರವೈಜ್ಞಾನಿಕ ಹಾನಿ ಆಗಿರಬಹುದು.


೨. ಕೈ-ಕಾಲುಗಳನ್ನ ಅಲ್ಲಾಡಿಸಲು ಆಗದೆ ಇರುವುದು


ಮೂಳೆ ಮುರಿತಕ್ಕೆ ಒಳಗಾಗಿದೆ ಎಂಬುದನ್ನ ಸೂಚಿಸುವ ಎಚ್ಚರಿಕೆಯ ಗಂಟೆ ಎಂದರೆ ಅದು ಕೈ-ಕಾಲುಗಳನ್ನ ಅಲ್ಲಾಡಿಸಲು ಆಗದೇ ಇರುವುದು ಅಥವಾ ಆಗುತ್ತಿಲ್ಲ ಎಂದು ಮಗುವಿಗೆ ಅನಿಸುವುದು. ಒಂದು ವೇಳೆ ಅವರು ಆ ಭಾಗಗಳನ್ನ ಚಲಿಸುತ್ತಿದ್ದರು, ಆ ಭಾಗದಲ್ಲಿ ಮೂಳೆ ಮುರಿದಿರುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ನಿಮ್ಮ ಮಗುವು ಕೈ-ಕಾಲು ಆಡಿಸುವಂತೆ ಹೇಳಿದರೂ ಕೇಳಲಿಲ್ಲ ಎಂದರೆ ಅಥವಾ ಮಾಡಲಿಲ್ಲ ಎಂದರೆ, ಒಂದೇ ಸಲಕ್ಕೆ ಸುಮ್ಮನಾಗಬೇಡಿ.


೩. ಕಣ್ಣು ಗುಡ್ಡೆಗಳು ಏರುಪೇರು


ನೀವು ವೈದ್ಯರ ಬಳಿ ಹೋದಾಗ, ಅವರು ಯಾವಾಗಲೂ ನಿಮ್ಮ ಕಣ್ಣಿಗೆ ಟಾರ್ಚ್ ಬೆಳಕು ಬಿಟ್ಟು ನಿಮ್ಮ ಕಣ್ಣು ಗುಡ್ಡೆಗಳನ್ನ ನೋಡುವುದು ಏಕೆ ಗೊತ್ತೇ? ಏಕೆಂದರೆ ಈ ಕಣ್ಣು ಗುಡ್ಡೆಗಳು ಬಹಳಷ್ಟನ್ನು ತಿಳಿಸುತ್ತವೆ. ಒಂದು ವೇಳೆ ನಿಮ್ಮ ಮಗುವಿನ ಒಂದು ಕಣ್ಣು ಗುಡ್ಡೆಯು ಇನ್ನೊಂದು ಕಣ್ಣು ಗುಡ್ಡೆಗಿಂತ ದೊಡ್ಡದಿದ್ದರೆ, ಒಂದು ಗುಡ್ಡೆಯು ನೋಡಲು ಇನ್ನೊಂದು ಗುಡ್ಡೆಗಿಂತ ವಿಭಿನ್ನವಾಗಿದ್ದರೆ ನೀವು ಅವರನ್ನ ಕೂಡಲೇ ವೈದ್ಯರ ಬಳಿ ಕರೆದೊಯ್ಯಬೇಕು. ಏಕೆಂದರೆ ಇದು ಮೆದುಳಿಗೆ ಹಾನಿಯಾಗಿರುವುದನ್ನ ಸೂಚಿಸುತ್ತಿರುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಕಣ್ಣು ಗುಡ್ಡೆಗಳ ಗಾತ್ರದಲ್ಲಿ ಸ್ವಲ್ಪವೇ ವ್ಯತ್ಯಾಸ ಕಾಣಿಸಿಕೊಂಡರೆ, ನೀವು ಎಚ್ಚೆತ್ತುಕೊಳ್ಳಬೇಕು.


೪. ನಿಷ್ಕ್ರಿಯವಾಗಿರುವುದು


ಬಿದ್ದ ಮೇಲೆ ನಿಮ್ಮ ಮಗುವು ಜ್ಞಾನ ತಪ್ಪಿದರೆ ಅಥವಾ ಏನಕ್ಕೂ ಸ್ಪಂದಿಸದೆ ನಿಷ್ಕ್ರಿಯವಾದರೆ, ನೀವು ಅದನ್ನ ತುಂಬಾ ಗಂಭೀರವಾದ ಎಚ್ಚರಿಕೆ ಎಂದು ಪರಿಗಣಿಸಬೇಕು. ಒಂದು ವೇಳೆ ನಿಮ್ಮ ಮಗು ಏನಾದರು ಬೀಳುವಾಗ ತಲೆ ಮುಂದೆ ಮಾಡಿ ಬಿದ್ದರೆ, ಕತ್ತು ಅಥವಾ ಬೆನ್ನಿನ ಮೂಳೆಗೆ ಪೆಟ್ಟು ಮಾಡಿಕೊಂಡರೆ, ನೀವು ವೈದ್ಯಕೀಯ ನೆರವು ಪಡೆದರೆ ಒಳ್ಳೆಯದು. ಮಗುವು ಜ್ಞಾನ ತಪ್ಪಿದೊಡನೆ ವೈದ್ಯರ ನೆರವು ಪಡೆಯಲೇ ಬೇಕು ಎಂಬ ನಿಯಮ ಅನುಸರಿಸುವುದು ನಿಮಗೇ ಒಳ್ಳೆಯದು.


೫. ವಾಂತಿ ಮಾಡುವುದು


ಒಂದೇ ಸಮನೆ ವಾಂತಿ ಮಾಡುತ್ತಲೇ ಇರುವುದು ಬಿದ್ದ ಕಾರಣದಿಂದ ಕನ್ಕ್ಯುಶನ್ (ಮೆದುಳಿನ ಸಂಘರ್ಷಣೆ) ಆಗಿರುವುದನ್ನ ಸೂಚಿಸುತ್ತದೆ. ತಜ್ಞರ ಪ್ರಕಾರ ಈ ರೀತಿ ಕನ್ಕ್ಯುಶನ್ ಆದರೆ ಆಗಬಹುದು ಅಥವಾ ಆಗುವುದಿಲ್ಲ. ಹೀಗಾಗಿ ನಿಮ್ಮ ಮಗುವು ಇತರೆ ಬಾಹ್ಯ ಲಕ್ಷಣಗಳನ್ನ ತೋರಿಸುತ್ತಿಲ್ಲ ಎಂದರೂ, ನಿರಂತರವಾಗಿ ವಾಂತಿ ಮಾಡುತ್ತಲೇ ಇದ್ದರೆ, ಮಗುವನ್ನ ವೈದ್ಯರ ಬಳಿ ಕರೆದೊಯ್ಯಿರಿ.


೬. ಯಾವುದೇ ರೀತಿಯ ದೈಹಿಕ ದ್ರವ್ಯಗಳು ವಿಸರ್ಜನೆ ಆದರೆ


ಇದು ನಿಮಗೆ ಒಂದು ರೀತಿ ಅಸಹ್ಯ ಎಣಿಸಬಹುದು, ಆದರೆ ನಿಮ್ಮ ಮಗುವಿನ ದೇಹದಿಂದ ಯಾವುದೇ ರೀತಿಯ ದ್ರವ್ಯ ವಿಸರ್ಜನೆ ಆಗುತ್ತಿದ್ದರೆ, ಅದು ಕೂಡ ಒಂದು ಗಂಭೀರವಾದ ಎಚ್ಚರಿಕೆಯ ಗಂಟೆ. ನಿಮ್ಮ ಮಗುವಿನ ಯಾವುದೇ ರಂಧ್ರದಿಂದ ರಕ್ತಸ್ರಾವ ಅಥವಾ ಯಾವುದೇ ಬೇರೆ ದ್ರವ್ಯ ಹೊರಬರುತ್ತಿದ್ದರೆ, ಅದು ಆಂತರಿಕವಾಗಿ ಪೆಟ್ಟು ಬಿದ್ದಿರುವುದನ್ನ ಸೂಚಿಸುತ್ತದೆ. ಹೀಗಾಗಿ ಅದು ಮೂಗಿನಿಂದ ಅಥವಾ ಕಿವಿಗಳಿಂದ ಗಲೀಜು ಹೊರಬರುತ್ತಿದ್ದರೂ, ರಕ್ತಸ್ರಾವ ಆಗುತ್ತಿದ್ದರೂ ಅಥವಾ ಇನ್ನ್ಯಾವುದೇ ರೀತಿಯ ದ್ರವ್ಯ ಹೊರಬರುತ್ತಿದ್ದರೆ, ನೀವು ಕೂಡಲೇ ವೈದ್ಯರನ್ನ ಭೇಟಿ ಮಾಡಬೇಕು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon