Link copied!
Sign in / Sign up
35
Shares

ನಿಮ್ಮ ಮಗು ಮೊದಲ ವರ್ಷದಲ್ಲಿ ಈ 10 ಮೈಲಿಗಲ್ಲುಗಳನ್ನು ದಾಟಿರಲೇಬೇಕು

ಮಗು ಹೊಂದುವುದು ಪ್ರತಿಯೊಬ್ಬ ಪೋಷಕರಿಗೂ ಸಾಹಸಮಯ. ನಿಮ್ಮ ಮುದ್ದು ಮಗುವಿನ ಖುಷಿಯ ಕಂತೆಗಳನ್ನು ನೋಡುವುದು, ಅದರ ತುಂಟಾಟಗಳನ್ನು ನೋಡುವುದು ನಿಮಗೆ ರೋಮಾಂಚನವನ್ನು ಉಂಟುಮಾಡುತ್ತದೆ. ಮೊದಲ ಒಂದು ವರ್ಷ ಆಯಾಸದ ಕ್ಷಣಗಳು, ಮತ್ತು ಆಗಲೇ ಅವರ ಅತ್ಯಗತ್ಯಗಳನ್ನು ನೆರವೇರಿಸುವುದು ಉತ್ತಮ. ನೀವು ಮಗುವಿನ ಮೂಲಕ ಹೋಗಿ ನಿಮ್ಮ ಮಗುವಿನೊಂದಿಗೆ ಎಲ್ಲವನ್ನೂ ಅನುಭವಿಸುವ ತನಕ, ನಿಜವಾದ ಸಂತೋಷವು ನಿಮಗೆ ತಿಳಿಯುವುದಿಲ್ಲ! ನಿಮ್ಮ ಮಗುವಿನ ಮೊದಲ ವರ್ಷದಲ್ಲಿ ನೀವು ಏನನ್ನು ಎದುರುನೋಡಬಹುದೆಂದು ತಿಳಿದುಕೊಳ್ಳಿ.

ಮೈಲಿಗಲ್ಲು ೧: ನಗುತ್ತಿರುವ (೮ ವಾರಗಳು)

 

ಯಾರು ತಿಳಿದ್ದಿದ್ದರು, ಮಗು ಹಗಲು ರಾತ್ರಿ ಅಳುತ್ತಿರುತ್ತದೆಂದು, ನಿಮ್ಮ ಮಗು ಮಾನವನೆಂದು ನೀವು ನಿಜವಾಗಿ ಕಂಡುಕೊಳ್ಳುವ ೨ ತಿಂಗಳ ಆ ನಿಮ್ಮ ಖುಷಿಯನ್ನು ಯಾರು ಬಣ್ಣಿಸಲಾಗದು. ಮಗುವು ತನ್ನ ಮೊದಲ ಸಾಮಾಜಿಕ ಕೌಶಲ್ಯವನ್ನು ಅಭಿವೃದ್ದಿಮಾಡಿಕೊಳ್ಳಲು ಆರಂಬಿಸುತ್ತದೆ, ಅದು ನಗುವುದು ಅಥವಾ ನಿಮ್ಮ ಮುಖವನ್ನು ಗುರುತಿಸುವುದು ಆಗಿರಬಹುದು. ಮಗು ಈ ಸಮಯದಲ್ಲಿ ನಿಮ್ಮನ್ನು ನೋಡಿದರೆ ಹೆಚ್ಚು ಸಂತೋಷವನ್ನು ಪಡುತ್ತದೆ.

ಮೈಲಿಗಲ್ಲು ೨: ಹಿಡಿದುಕೊಳ್ಳುತ್ತದೆ (೧೦ ರಿಂದ ೧೨ ವಾರಗಳು)

 

ಒಂದು ಮಗು ತಾನು ನಿಯಂತ್ರಿಸಬಹುದಾದ ವಿಷಯಗಳನ್ನು ನಿರ್ಧರಿಸಲು ಪ್ರಾರಂಭಿಸಬಹುದು ಮತ್ತು ನಿಮ್ಮ ಕೂದಲನ್ನು ಎಳೆಯುವ ಮೂಲಕ ಅಥವಾ ಏನನ್ನಾದರೂ ಎಸೆಯುವ ಮೂಲಕ ಅವುಗಳನ್ನು ಸ್ಪಷ್ಟಪಡಿಸುತ್ತದೆ. ಮಗುವು ವಿಷಯಗಳ ಕಾರಣ ಮತ್ತು ಪರಿಣಾಮವನ್ನು ಕಲಿಯಲು ಪ್ರಾರಂಬಿಸುತ್ತದೆ. ಈ ಮನುಷ್ಯ(ಚಿತ್ರದಲ್ಲಿ) ಮಾಡುವಂತೆ ಹೋಲಿಕೆಯಾಗುವುದನ್ನು ನಿಮ್ಮ ಮಗುವು ಮಾಡುತ್ತಿರುವುದೇ?

ಮೈಲಿಗಲ್ಲು ೩: ನಗುವುದು (೧೬ ವಾರಗಳು)

ಅಳುವುದು ಎಲ್ಲಾ ಮುಗಿದ ನಂತರ, ಇದು ಪ್ರಾಯಶಃ ಅಸಾಧ್ಯವೆಂದು ನೀವು ಭಾವಿಸಿರಬಹುದು, ಆದರೆ ಸುಮಾರು ೪-ತಿಂಗಳ ನಂತರ ನಿಮ್ಮ ಮಗು ನಗುವುದು ಮತ್ತು ಇದನ್ನು ಮುಂದುವರೆಸುವುದನ್ನು ಪ್ರಾರಂಬಿಸುತ್ತದೆ. ಮಗುವಿನ ನಗು ಇಡೀ ಕುಟುಂಬಕ್ಕೆ ಹರಡುತ್ತದೆ ಮತ್ತು ಇದು ನಿಮ್ಮ ಜೀವನದ ಪ್ರಯಾಣದಲ್ಲಿ ಅತ್ಯಂತ ಸುಂದರವಾದ ಕ್ಷಣವನ್ನಾಗಿ ಮಾಡುತ್ತದೆ.

ಮೈಲಿಗಲ್ಲು ೪: ರಾತ್ರಿಯಿಡಿ ಮಲಗಿರುವುದು, ಬಹುಶಃ ಇದೊಂದು ಅತ್ಯುತ್ತಮ ಮೈಲಿಗಲ್ಲು (೧೬ ರಿಂದ ೨೪ ವಾರಗಳು)

ಈಗ ನಿಮ್ಮನ್ನು ರಾತ್ರಿಯಲ್ಲಿ ಎಚ್ಚರ ಮಾಡುವ ವಿಷಯವೆಂದರೆ ಅದು ನಿಮ್ಮ ದೂರವಾಣಿ(ಜಂಗಮ ವಾಣಿ) ಮಾತ್ರ. ೬ ನೇ ತಿಂಗಳಿನ ಹೊತ್ತಿಗೆ ನಿಮ್ಮ ಮಗು

ರಾತ್ರಿಯಿಡೀ ನಿದ್ರಿಸಲು ಬೇಕಾದಷ್ಟು ಪ್ರಬುದ್ಧತೆಯನ್ನು ಹೊಂದುತ್ತದೆ. ಇದೀಗ ನೀವು ಸ್ವಲ್ಪಕಾಲ ನಿಮ್ಮ ಜೀವನಕ್ಕೆ ಹಿಂತಿರುಗಲು ಸಾಧ್ಯವಾಗಬಹುದು. ಈಗ ನಿಮ್ಮ ಮಗುವಿನ ನಿದ್ರಾ ವೆಳಾಪಟ್ಟಿ ಪ್ರಕಾರ ನಿಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಬಹುದು.

ಮೈಲಿಗಲ್ಲು ೫: ಅಪ್ಪಿಕೊಳ್ಳುವುದು (೨೦ ವಾರಗಳು)

ಮಗುವು ತಾನು ನೋಡುತ್ತಿರುವುದರಿಂದ ಮತ್ತು ಅನುಕರಣೆಯಿಂದ ಕಲಿಯುತ್ತದೆ. ಮಗುವು ತಾನು ನೋಡಿರುವುದನ್ನು ನಕಲು ಮಾಡುವ ಜ್ಞಾನವನ್ನು ಪಡೆಯುತ್ತದೆ. ಈಗ ಮಗುವು ಬೇರೆಯವರು ಅಪ್ಪಿಕೊಳ್ಳುವುದನ್ನು ನೋಡಿ ಅಥವಾ ತನ್ನನ್ನು ಅಪ್ಪಿಕೊಳ್ಳುವುವವರನ್ನು ತಾನು ಅಪ್ಪಿಕೊಳ್ಳಲು ಪ್ರಯತ್ನಿಸುತ್ತದೆ. ಈಗ ಮಗುವು ತನ್ನ ತಂದೆ, ತಾಯಿ ಅಥವಾ ತನ್ನ ಬೊಂಬೆಯನ್ನು ಅಪ್ಪಿಕೊಳ್ಳುತ್ತದೆ.

ಮೈಲಿಗಲ್ಲು ೬: ಕುಳಿತುಕೊಳ್ಳುತ್ತದೆ (೨೪ ರಿಂದ ೩೬ ವಾರಗಳು)

ಬಹುಶಃ ತಮ್ಮಷ್ಟಕ್ಕೇ ತಾವೇ ಕುಳಿತುಕೊಳ್ಳುವುದಿಲ್ಲ, ಆದರೆ ಬೇರೆಯವರ ಸಹಾಯದಿಂದ ಸ್ವಲ್ಪ ಸಮಯದವರೆಗೂ ಕುಳಿತುಕೊಳ್ಳಬಹುದು. ಹಾಗಾಗಿ ಮಗುವಿಗೆ ಸ್ವಲ್ಪ ನಿಮ್ಮ ಸಹಾಯ ಬೇಕು. ಆದರೆ ಕೆಲವು ವಾರಗಳ ನಂತರ ನಿಮ್ಮ ಮಗು ತನ್ನಷ್ಟಕ್ಕೆ ತಾನೇ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಇದು ನಿಜವಾದ ಸಂತೋಷದ ವಿಷಯ.

ಮೈಲಿಗಲ್ಲು ೭: ಅಂಬೆಗಾಲಿಡುತ್ತದೆ (೩೨ ರಿಂದ ೩೬ ವಾರಗಳು)

ನೀವು ಅದನ್ನು ಯೋಚಿಸುವ ಮೊದಲು, ನಿಮ್ಮ ಮಗುವು ತಾನಾಗಿಯೇ ತೆವಳಲು ಶುರು ಮಾಡುತ್ತದೆ. ಈಗ ನೀವು ಎಲ್ಲಾ ಸಮಯದಲ್ಲೂ ಮಗುವನ್ನು ನೋಡಿಕೊಳ್ಳುವ ತೊಂದರೆ ಅಥವಾ ನೋವು ಉಂಟಾಗಬಹುದು. ಮಗುವು ಸುರಕ್ಷಿತವಾಗಿದೆ ಎಂದು ಖಚಿತಪದಿಸಿಕೊಳ್ಳುತ್ತಿರಿ. ನಿಮ್ಮ ಮಗುವು ಅಂಬೆಗಾಲಿಡುವುದು ಸಂತೋಷದ ವಿಷಯ, ಆದರೆ ತೆವಳುವಾಗ ಯಾವುದೇ ಅಪಾಯ ಜರಗದಂತೆ ಎಚ್ಚರವಹಿಸುವುದು ಒಳ್ಳೆಯದು.

ಮೈಲಿಗಲ್ಲು ೮: ಕೈಯಿಂದ ಆಹಾರ ಸೇವಿಸುವುದು (೩೬ ರಿಂದ ೫೨ ವಾರಗಳು)

ಸುಮಾರು ೯ ತಿಂಗಳುಗಳ ನಂತರ, ಮಗುವು ತನ್ನ ಕೈಗೆ ಸಿಕ್ಕ ವಸ್ತು ಅಥವಾ ಪದಾರ್ಥಗಳನ್ನು ಬಾಯಿಗೆ ಹಾಕಿಕೊಳ್ಳುವುದನ್ನು ನೀವು ಗಮನಿಸಬಹುದು, ಅತಿ ಬೇಗನೆ ಮಕ್ಕಳು ತಮಗೆ ಪೋಷಕರು ತಿನ್ನಿಸುವುದನ್ನು ಬೇಡ ಎಂದು ಹೇಳಲು ಬಯಸುತ್ತವೆ, ಮತ್ತು ಅವು ತಮ್ಮ ಕೈಯಿಂದ ತಿನ್ನುವುದನ್ನು ಬಯಸುತ್ತವೆ. ಮಕ್ಕಳು ಚತುರರಾಗಿದ್ದು, ಬೇಗನೇ ಗುರುತ್ವಾಕರ್ಷಣೆಯ ಅಸ್ತಿತ್ವವನ್ನು ಅವರ ನೋಟದಿಂದ ಅರಿತುಕೊಳ್ಳುತ್ತಾರೆ.

ಮೈಲಿಗಲ್ಲು ೯: ನಿಲ್ಲುವುದು (೫೨ ವಾರಗಳು)

ಮಗುವು ತಾನಾಗಿಯೇ ಎದ್ದು ನಿಂತುಕೊಳ್ಳುವುದು ಅದರ ಬೆಳವಣಿಗೆಯ ಮೊದಲ ವರ್ಷದ ಒಂದು ದೊಡ್ಡ ಮೈಲಿಗಲ್ಲು. ಅವರು ಈಗ ಮಾಡಬೇಕಾಗಿರುವುದು ಒಂದು ಸ್ಥಳದಿಂದ ಮತ್ತೊಂದು ಸ್ತಳಕ್ಕೆ ನಡೆದಾಡುವುದು.

ಮೈಲಿಗಲ್ಲು ೧೦: ಮೊದಲ ಹೆಜ್ಜೆ (೩೬ ರಿಂದ ೬೮ ವಾರಗಳು)

ಬಹುಶಃ ಇದು ಅತ್ಯಂತ ವಿಶೇಷವಾದ ಮೈಲಿಗಲ್ಲಾಗಿದೆ. ನಿಮ್ಮ ಮಗುವಿನ ಮೊದಲ ಹೆಜ್ಜೆಯನ್ನು ಕಾಣಲು ನೀವು ತುಂಬಾ ಕುತೂಹಲದಿಂದ ಕಾಯುತಿರುತ್ತಿರಿ. ನಡೆದಾಡಲು ಸಮನ್ವಯ, ಗಮನ, ಮತ್ತು ವಿಶ್ವಾಸದ ಅಗತ್ಯವಿದೆ. ಮನೆಯಲ್ಲಿರುವ ಪೀಠೋಪಕರಣಗಳ ಸಹಾಯದಿಂದ ಮಕ್ಕಳು ಸ್ವಲ್ಪ ದೂರ ನಡೆಯುತ್ತಾರೆ ಮತ್ತು ಈ ಸಮಯದಲ್ಲಿ ಅವರಿಗೆ ಮುಂದೆ ಏನಿದೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ, ನಡೆದಾಡುವುದು ಅವರಿಗೆ ಈಗ ಖುಷಿ ನೀಡುತ್ತದೆ. ಅವರು ನಡೆದಾಡುವ ಸಮಯದಲ್ಲಿ ಅವರನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon