Link copied!
Sign in / Sign up
4
Shares

ಮದುವೆಯಾಗಿ ಹಲವು ವರ್ಷ ಕಳೆದರು ಮಗುವಾಗದಿರಲು ಕಾರಣ?

ಹಿಂದಿನ ಕಾಲದಲ್ಲಿ ಬಂಜೆತನದ ಸಮಸ್ಯೆ ಇತ್ತಾದರೂ ಅದು ತುಂಬಾ ಕಡಿಮೆ. ನೂರರಲ್ಲಿ ಐದು ಮಂದಿಗೆ ಇಂತಹ ಸಮಸ್ಯೆ ಇದ್ದಿರಬಹುದು. ಹಿಂದೆ ಮಹಿಳೆಯರು ಬೇಗನೆ ಗರ್ಭಧರಿಸುತ್ತಾ ಇದ್ದರು, ಜೊತೆಗೆ ಯಾವುದೇ ತೊಂದರೆಯಿಲ್ಲದೆ ಮಕ್ಕಳಿಗೆ ಆರಾಮದಾಯಕವಾಗಿ ಜನ್ಮ ನೀಡುತ್ತಿದ್ದರು.

ಆದರೆ ಈಗಿನ ದಿನಗಳಲ್ಲಿ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಫಲವತ್ತತೆಯ ಪ್ರಮಾಣವು ಕಡಿಮೆಯಾಗುತ್ತಿದೆ. ಆಧುನಿಕ ಜೀವನಶೈಲಿ, ಒತ್ತಡ, ಹವಾಮಾನ ಮತ್ತು ಸರಿಯಾದ ಆಹಾರ ಕ್ರಮ ಇಲ್ಲದಿರುವುದು ಇತ್ಯಾದಿ ವಿಷಯಗಳು ಇದಕ್ಕೆ ಕಾರಣವಾಗಬಹುದು. ಮಹಿಳೆಯರಲ್ಲಿ ಫಲವತ್ತತೆಯ ಪ್ರಮಾಣ ಕಡಿಮೆಯಾಗುತ್ತಿರುವಂತೆ, ಪುರುಷರಲ್ಲೂ ವೀರ್ಯ ಪ್ರಮಾಣವು ಕಡಿಮೆಯಾಗುತ್ತಾ ಇದೆ ಎಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ.

ಗರ್ಭ ನಿಲ್ಲದಿರಲು ಕೆಲವು ಕಾರಣಗಳನ್ನು ಇಲ್ಲಿ ನೀಡಲಾಗಿದೆ.

೧.ಗರ್ಭಕಂಠ

ಗರ್ಭಾಶಯ ಮತ್ತು ಯೋನಿಯ ನಡುವಿನ ಹಾದಿಯಂತೆ ಗರ್ಭಕಂಠವು ಕೆಲಸ ಮಾಡುತ್ತದೆ. ಗರ್ಭಕಂಠದ ಮೂಲಕವಾಗಿ ವೀರ್ಯವು ಗರ್ಭಾಶಯವನ್ನು ತಲುಪುತ್ತದೆ. ಗರ್ಭಕಂಠದಲ್ಲಿ ಯಾವುದೇ ರೀತಿಯ ಸಮಸ್ಯೆಯಿದ್ದರೂ ಮಹಿಳೆಯರಲ್ಲಿ ಗರ್ಭಧಾರಣೆಯಾಗಲು ಹೆಚ್ಚಿನ ಸಮಯ ಬೇಕಾಗಬಹುದು. ಇದರ ಬಗ್ಗೆ ಯಾವುದೇ ಅನುಮಾನ ಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ/ಸಂಪರ್ಕಿಸಿ.

೨.ಪಿಎಚ್ ಸಮತೋಲನ

ವೀರ್ಯವು ಸುಗಮವಾಗಿ ಹೋಗಿ ಗರ್ಭದಲ್ಲಿ ಅಂಡಾಣು ಉತ್ಪತ್ತಿಯಾಗಲು ಯೋನಿಯ ವಾತಾವರಣವು ಚೆನ್ನಾಗಿರಬೇಕು ಮತ್ತು ಅದಕ್ಕೆ ಸಹಕರಿಸಬೇಕು. ಪಿಎಚ್ ಮಟ್ಟವು ಹೆಚ್ಚು ಅಥವಾ ತುಂಬಾ ಕಡಿಮೆ ಇದ್ದರೆ ಅದರಿಂದ ಫಲವತ್ತತೆಯ ಅಂಡಾಣು ಉತ್ಪತ್ತಿಯಾಗಲು ಕಷ್ಟವಾಗುತ್ತದೆ.

೩.ಹಾನಿ

ಗರ್ಭಾಶಯದ ತಂತುರೂಪಗಳು, ಗಾಯದ ಅಂಗಾಂಶ, ಸೋಂಕುಗಳು, ಫಾಲೋಪಿಯನ್ ಟ್ಯೂಬ್ ಸಮಸ್ಯೆಗಳು, ಎಂಡೊಮೆಟ್ರಿಯೊಸಿಸ್, ಪಾಲಿಪ್ಸ್ ಮತ್ತು ಇತರ ಕೆಲವೊಂದು ವೈದ್ಯಕೀಯ ಸಮಸ್ಯೆಗಳು ಫಲವತ್ತತೆ ಮೇಲೆ ಪರಿಣಾಮ ಉಂಟುಮಾಡಬಹುದು. ವೀರ್ಯ ಮತ್ತು ಅಂಡಾಣು ಸೇರುವ ನಡುವೆ ಯಾವುದೇ ರೀತಿಯ ಸಮಸ್ಯೆಯಿದ್ದರೂ ಅದು ಗರ್ಭಧರಿಸಲು ತೊಂದರೆಮಾಡುತ್ತದೆ. ಗರ್ಭಾಶಯಕ್ಕೆ ಅಂಡಾಣುಗಳನ್ನು ನಿಧಾನವಾಗಿ ಸಾಗಿಸುವಂತ ಪ್ರಕ್ರಿಯೆಯು ಗರ್ಭಧಾರಣೆಯನ್ನು ವಿಳಂಬವಾಗಿ ಮಾಡುವಂತೆ ಮಾಡಬಹುದು.

೪.ಪಿಸಿಓಎಸ್

ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್(ಇದೊಂದು ಹಾರ್ಮೋನಿನ ಅಸ್ವಸ್ಥತೆ ಇದು ಅಂಡಾಶಯವನ್ನು ಹಿಗ್ಗಿಸುತ್ತದೆ ಮತ್ತು ಕೋಶದ ಹೊರ ಅಂಚನ್ನು ಸಣ್ಣದಾಗಿಸುತ್ತದೆ.) ಅಂಡಾಣು ಉತ್ಪತ್ತಿಯ ಪ್ರಕ್ರಿಯೆಗೆ ತೊಂದರೆ ಉಂಟು ಮಾಡಬಹುದು ಮತ್ತು ಇದರಿಂದ ಗರ್ಭಧಾರಣೆ ನಿಧಾನವಾಗುತ್ತದೆ.

೫.ವಯಸ್ಸು

೩೫ವರ್ಷ ತುಂಬಿದ ಬಳಿಕ ಗರ್ಭಧರಿಸಲು ಪ್ರಯತ್ನಿಸುವ ಮಹಿಳೆಯರಿಗೆ ಗರ್ಭಧಾರಣೆಯಾಗುವುದು ಕಷ್ಟವಾಗಬಹುದು. ವಯಸ್ಸಿನೊಂದಿಗೆ ಕೆಲವೊಂದು ಸಮಸ್ಯೆಗಳು ಕಾಡಬಹುದು. ಈ ವಯಸ್ಸಿನಲ್ಲಿ ಗುಣಮಟ್ಟದ ಅಂಡಾಣು ಸಂಖ್ಯೆಯು ಕಡಿಮೆಯಾಗುವುದು ಮತ್ತು ಅಂಡಾಣುವಿನ ಸಂಖ್ಯೆಯು ಕಡಿಮೆಯಾಗಬಹುದು. ಗರ್ಭಾಶಯವು ಅಂಡಾಣು ಬಿಡುಗಡೆಯ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.

೬.ಇತರ ಸಮಸ್ಯೆಗಳು

ಅತಿಯಾಗಿ ಆಲ್ಕೋಹಾಲ್ ಸೇವನೆ, ಬೊಜ್ಜು, ಅನಿಯಮಿತ ಋತುಚಕ್ರ ಮತ್ತು ಸ್ರಾವವು ಗರ್ಭಧಾರಣೆಗೆ ಸಮಸ್ಯೆ ಉಂಟು ಮಾಡಬಹುದು. ದೇಹದಲ್ಲಿ ಕೊಬ್ಬಿನಾಂಶವು ತುಂಬಾ ಕಡಿಮೆ ಇರುವ ಮಹಿಳೆಯರು ಕೂಡ ಗರ್ಭ ಧರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಲೈಂಗಿಕವಾಗಿ ಹರಡುವಂತಹ ರೋಗಗಳಾದ ಗೊನೋರಿಯಾ, ಕ್ಲಮೈಡಿಯಾ ಮತ್ತು ಪೆಲ್ವಿಕ್ ಉರಿಯೂತದಿಂದಲೂ ಬಂಜೆತನ ಉಂಟಾಗಬಹುದು. ಥೈರಾಯಿಡ್ ಸಮಸ್ಯೆ ಇದ್ದರು ಗರ್ಭಧರಿಸುವುದು ಕಷ್ಟ.

ನಿಮಗೆ ಇದರಲ್ಲಿ ಯಾವುದೇ ಅನುಮಾನವಿದ್ದರೂ ಅಥವಾ ನಿಮ್ಮ ದೇಹದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಭಾವಿಸದರು, ಕೆಲವೊಂದು ಸಮಸ್ಯೆಗಳು ಇರುವುದು ನಿಮಗೆ ಗೋಚರಿಸುವುದಿಲ್ಲ ಆದ್ದರಿಂದ ಮದುವೆಯಾಗಿ ಹಲವು ವರ್ಷ ಕಳೆದರು ಗರ್ಭಧಾರಣೆಯಾಗಿಲ್ಲ ಎಂದರೆ ವೈದ್ಯರನ್ನು ಭೇಟಿಯಾಗಿ ಮೇಲಿನ ಯಾವುದಾದರೂ ಸಮಸ್ಯೆ ಇದೆಯೇ ಅಥವಾ ಬೇರೆ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಿರಿ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon