Link copied!
Sign in / Sign up
2
Shares

ಹೆರಿಗೆಗೆ ಮುನ್ನ ಮಾಡಲೇಬೇಕಾದ 10 ಕೆಲಸಗಳು

ಒಂಬತ್ತು ತಿಂಗಳು ಬಹಳ ದೀರ್ಘವಾದ ಅವಧಿ ಎಂದು ನೀವು ಭಾವಿಸಿರಬಹುದು. ಗರ್ಭಿಣಿಯ ಆರೈಕೆ ,ವೈದ್ಯರ ತಪಾಸಣೆ, ವ್ಯಾಯಾಮ ಇವುಗಳೆಲ್ಲದರ ಓಡಾಟದ ನಡುವೆ ಒಂಬತ್ತು ತಿಂಗಳು ಹೇಗೆ ಕಳೆದು ಹೋಯಿತೆಂದು ನಿಮಗೆ ಅರಿಯುವ ಮುನ್ನವೇ,ನೀವು ಮಗುವಿಗೆ ಜನ್ಮ ನೀಡಿರಬಹುದು. ಆ ಮಾಯಾ ಒಂಭತ್ತು ತಿಂಗಳುಗಳು ಕೈಜಾರುವ ಮುನ್ನವೇ ನೀವು ಮಾಡಬೇಕಾದ ಕೆಲವು ವಿಷಯಗಳನ್ನು ತಿಳಿಯಿರಿ

೧.ಹಾಸಿಗೆಯಲ್ಲೇ ಉಪಹಾರ

ನಿಮಗೆ ಯಾವುದೇ ಕಾರ್ಯಗಳನ್ನು ಮಾಡಲು ಸಿಕ್ಕ ಸುವರ್ಣಾವಕಾಶವೇ, ನಿಮ್ಮ ಗರ್ಭ ಕಾಲ. ನಿಮ್ಮ ಗಂಡನು ನೀವು ಬಯಸಿದ ಆಹಾರಗಳನ್ನು ಹಾಸಿಗೆಯಲ್ಲಿ ತಂದು ತಿನ್ನಿಸುವುದಾದರೆ, ಅದಕ್ಕೂ ಅಡ್ಡಿಯಿಲ್ಲ. “ನೀನಿನ್ನೂ ಹಲ್ಲುಜ್ಜಿಲ್ಲ” ವೆಂದು ಮೆದುಳು ಕೆಂಪು ಸಿಗ್ನಲ್ ನೀಡುತ್ತಿದ್ದರೂ, ಅದನ್ನು ಅವಗಣಿಸಿದೆ ಕ್ರಮೇಣ ಇದು ಅಭ್ಯಾಸವಾಗಬಹುದು.

೨.ಗುಂಪಿನೊಂದಿಗೆ ನುಗ್ಗಿರಿ

ಗೆಳೆತಿಯರೊಂದಿಗೆ ಸೇರಿ ನೀವು ಬಯಸುವ ಯಾವುದೇ ಕಾರ್ಯವನ್ನಾದರೂ ಮನಸ್ಸೋ ಇಚ್ಛೆ ನಿರ್ವಹಿಸಿರಿ. ಚಲನಚಿತ್ರ ನೋಡುವುದು, ಮಲಗುವುದು ಅಥವಾ ಮಗುವಿಗೆ ಸ್ವೆಟರ್ ಹೊಲಿಯುವುದು ಹೀಗೆ ನಿಮ್ಮ ಮನಸ್ಸು ಆಹ್ಲಾದಿಸುವ ಯಾವುದಾದರೊಂದು ಕಾರ್ಯಗಳಲ್ಲಿ ನಿರತರಾಗಿರುವುದು, ನಿಮ್ಮ ಗರ್ಭಕಾಲವನ್ನು ಆಸ್ವಾದಿಸುವಂತೆ ಮಾಡುವುದಲ್ಲದೇ,ನೀವು ಅರ್ಹತೆ ಪಡೆದ ಸಂತೋಷವನ್ನು ಪಡೆಯಬಹುದು.

೩.ಮಗುವಿಗೊಂದು ಪತ್ರ

ಯಾವುದೇ ತಾಯಿಯರು ಈ ರೀತಿ ಮಾಡುವುದಿಲ್ಲ. ಆದರೆ ಗರ್ಭಿಣಿಯರಾದ ನಿಮ್ಮ ಭಾವನೆಯನ್ನು ಹೊರಹಾಕುವ ಅತ್ಯುತ್ತಮ ವಿಧಾನವೇ ‘ತೋಚಿದ್ದನ್ನು ಗೀಚುವುದು.’ ಮಗುವು ದೊಡ್ಡದಾದ ಮೇಲೆ ಈ ಪತ್ರವನ್ನು ಓದುವುದು ಕೂಡ ಅವರ್ಚನೀಯವಾದ ಭಾವನೆಯನ್ನು ನೀಡುತ್ತದೆ.

೪.ಸೀಮಂತ

ಗರ್ಭಿಣಿಯರನ್ನು ಗೌರವಿಸುವ ಆಚರಣೆಯೇ ಈ ಸೀಮಂತ. ನೀವು ಗರ್ಭಿಣಿಯರಾದರೆ ಮಾತ್ರವೇ ಲಭಿಸುವ ಪ್ರೀತಿಯ ದ್ಯೋತಕವಿದು. ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ(ಥೀಮ್) ಇಟ್ಟಕೊಂಡರೆ, ಈ ಆಚರಣೆಯು ಇನ್ನೂ ಮನಮುಟ್ಟುವಂತೆ ಆಚರಿಸಬಹುದು.

೫.ಮಾತೃತ್ವದ ಉಡುಪುಗಳ ಧಾರಣೆ

ಇಂತಹ ಬಟ್ಟೆಗಳು ಅತ್ಯಂತ ಆಕರ್ಷಣೀಯವಾಗಿರುತ್ತದೆ. ಮೆಟರ್ನಿಟಿ ಉಡುಪುಗಳನ್ನು ಧರಿಸಿದ ನಿಮ್ಮತ್ತ ಆಕರ್ಷಿತನಾದ ಪತಿಯು ,ನೀವು ಏನನ್ನು ಬಯಸಿದರೂ ಅದನ್ನು ನೀಡುವರು.

೬.ಫ್ಲಿಪ್ ಬುಕ್‍ನ ತಯಾರಿ

ನಿಮ್ಮ ಒಂಭತ್ತು ತಿಂಗಳ ಅವಧಿಯ ಯಾವುದೇ ಛಾಯಾಚಿತ್ರಗಳು, ಆಲ್ಟ್ರಾ ಸೌಂಡ್ ಫೋಟೋ ಅಥವಾ ವೈದ್ಯರ ನಿರ್ದೇಶನಗಳು – ಹೀಗೆ ನಿಮ್ಮ ಗರ್ಭ ಕಾಲದ ನೆನಪಿನ ಚಿತ್ರಗಳಿಂದ ಅಲಂಕರಿಸಿದ ಫ್ಲಿಪ್ ಬುಕ್ ಒಂದನ್ನು ತಯಾರಿಸಿ

೭.ಉಬ್ಬಿದ ಹೊಟ್ಟೆಯು ಕಾನ್ವಾಸ್ ಆಗಲಿ

ನಿಮ್ಮ ಉಬ್ಬಿದ ಉದರದ ಮೇಲೆ ಚಿತ್ರ ಬಿಡಿಸುವುದು ಅತ್ಯಂತ ಸುಂದರ ಹಾಗೂ ಅತ್ಯಪೂರ್ವವಾಗಿರುವುದು. ಚರ್ಮಕ್ಕೆ ಯಾವುದೇ ಹಾನಿಯನ್ನುಂಟು ಮಾಡದ ಬಣ್ಣವನ್ನು ಉಪಯೋಗಿಸುವಂತೆ ಹಾಗೂ ಕೆಲವು ಗಂಟೆಗಳಿಗಿಂತ ಹೆಚ್ಚಾಗಿ ಹೊಟ್ಟೆಯ ಮೇಲೆ ಉಳಿಸದಂತೆ ಗಮನಿಸಿರಿ.

೮.ರಜಾ ಮಜಾ

ನೀವು ತುಂಬ ಕಾಲದಿಂದ ಪ್ರಯಾಣಿಸಬೇಕೆಂದು ಆಗ್ರಹಿಸಿದ ಜಾಗಕ್ಕೆ ಒಮ್ಮೆ ಭೇಟಿ ಮಾಡಿ ಬನ್ನಿರಿ.ಯಾಕೆಂದರೆ ಮಗುವಿನ ಜನನದ ಬಳಿಕ ನಿಮಗೆ ಯಾತ್ರೆ ಮಾಡಲು ಅಷ್ಟು ಸುಲಭ ಸಾಧ್ಯವೆಂದು ಗೋಚರಿಸುವುದಿಲ್ಲ.

೮.ಕಂದಮ್ಮನಿಗಾಗಿ ಕಥಾವಾಚನ

ನಿಮ್ಮ ಮಗುವು ಗರ್ಭದಲ್ಲಿರುವಾಗಲೇ ಎಲ್ಲವನ್ನೂ ಗ್ರಹಿಸಲು ತೊಡಗುತ್ತದೆ.ನೀವು ಮಾತನಾಡುವುದನ್ನು ಆಲಿಸುತ್ತದೆ. ಆದ ಕಾರಣ ನಿಮ್ಮ ಅತ್ಯಂತ ಅಚ್ಚುಮೆಚ್ಚಿನ ಕಥೆಯನ್ನು, ಕವಿತೆಯನ್ನು ಮಗುವಿಗಾಗಿ ವಾಚಿಸಿ. ಕೆಲವೊಮ್ಮೆ ಅವರ ಅಚ್ಚುಮೆಚ್ಚಿನ ಕತೆಯನ್ನು ನೀವು ಓದುವಾಗ ಉದರದಲ್ಲಿ ಪುಟ್ಟ ಚಲನೆಯನ್ನು ನೀವು ಅನುಭವಿಸಬಹುದು.

೧೦.ಪ್ರಸವಕ್ಕೆ ಪೂರ್ವ ಸಿದ್ಧತೆ

ಕೊನೆಯ ಹಂತವಾಗಿದ್ದರೂ, ಮೊಟ್ಟ ಮೊದಲನೆಯದಾಗಿ ನೀವು ಸಿದ್ಧ ಮಾಡಿಟ್ಟು ಕೊಳ್ಳಬೇಕಾದ ಪ್ರಕಿೃಯೇ ಇದು. ನಿಮ್ಮ ಪ್ರಸೂತಿ ತಜ್ಞರಲ್ಲಿ ಮಾತನಾಡಿ, ನೀವು ಯಾವ ರೀತಿಯ ಪ್ರಸವಕ್ಕೆ ಒಳಗಾಗುತ್ತಿದ್ದೀರಿ ಎಂದು ತೀರ್ಮಾನಿಸಿ. ನಿಮಗೆ ವಾಟರ್ ಪ್ರಸವ ಬೇಕೇ ಅಥವಾ ನೈಸರ್ಗಿಕ ಪ್ರಸವವಾಗಬಹುದೇ...? ಯಾವುದೇ ರೀತಿಯ ಪ್ರಸವವಾಗಿದ್ದರೂ, ಮೊದಲೇ ಯೋಜನೆ ಮಾಡಿಟ್ಟುಕೊಳ್ಳಿ ಹಾಗೂ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕಾದ ಸಾಮಗ್ರಿಗಳ ಪಟ್ಟಿ ಮಾಡಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon