Link copied!
Sign in / Sign up
1
Shares

ಗರ್ಭ ಧರಿಸಲೆಂದೇ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ಮಾಡಬಾರದ 3 ತಪ್ಪುಗಳು

ಒಂದು ವೇಳೆ ನೀವು ಗರ್ಭಧರಿಸಲು ಕಷ್ಟಪಡುತ್ತಿದ್ದರೆ, ನೀವು ಒಬ್ಬಂಟಿ ಅಲ್ಲ. ನಿಮಗೆ ಗೊತ್ತಿರುವವರೇ ಯಾರಾದರೂ ಈ ಸಮಸ್ಯೆಯಿಂದ ಬಳಲುತ್ತಿರುವ ಸಾಧ್ಯತೆಗಳಿವೆ. ಸುಮಾರು 30% ಅಷ್ಟು ಬಂಜೆತನದ ಪ್ರಕರಣಗಳು ಹೆಂಗಸ್ರಲ್ಲಿನ ತೊಂದರೆಗಳಾದ ಎಂಡೋಮೆಟ್ರಿಯೋಸಿಸ್, ಅಂಡೋತ್ಪತ್ತಿ ಅಸಫಲತೆ ಮತ್ತು ಇನ್ನೂ ಮುಂತಾದವುಗಳಿಂದ ಆದರೆ, 30% ಅಷ್ಟು ಪ್ರಕರಣಗಳಲ್ಲಿ ಗಂಡಸರಲ್ಲಿನ ತೊಂದರೆಗಳು ಕಾರಣ ಆಗಿರುತ್ತವೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಇಂತದ್ದೇ ಸಮಸ್ಯೆ ಎಂದು ವೈದ್ಯರಿಗೂ ಕಂಡು ಹಿಡಿಯಲು ಆಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಬಹಳಷ್ಟು ಬಾರಿ ದಂಪತಿಯಲ್ಲಿ ಯಾವುದೇ ಬಂಜೆತನದ ಸಮಸ್ಯೆ ಇರುವುದೇ ಇಲ್ಲ. ಬಹಳಷ್ಟು ಬಾರಿ ವೈದ್ಯರ ಕಳಪೆ ಶಿಫಾರಸ್ಸು ಮತ್ತು ಹೆಣ್ಣಿನ ಬಂಜೆತನದ ಬಗ್ಗೆ ಜನರಲ್ಲಿರುವ ತಪ್ಪು ನಂಬಿಕೆಗಳು ಕಾರಣ ಆಗಿರುತ್ತವೆ. ಹೀಗಾಗಿ ನೀವು ಕೂಡ ಮಗುವನ್ನು ಪಡೆಯಲು ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ಈ 3 ತಪ್ಪುಗಳನ್ನು ದೂರವಿಡಬೇಕು.

೧. ಕ್ಯಾಲೆಂಡರ್ ವಿಧಾನ ಬಳಸುವುದು

ವೈದ್ಯರು ಸಾಮಾನ್ಯವಾಗಿ ಕ್ಯಾಲೆಂಡರ್ ವಿಧಾನ, ಅಂದರೆ ತಿಂಗಳಿನ ಅಂಡೋತ್ಪತ್ತಿಯ ದಿನದಂದು ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಲು ಶಿಫಾರಸು ಮಾಡುವವರು. ಕ್ಯಾಲೆಂಡರ್ ವಿಧಾನವು ಅಂಕಿ ಅಂಶಗಳ ಸರಾಸರಿ ಮೇಲೆ ಅವಲಂಬಿತ ಆಗಿರುತ್ತದೆ. ಹೀಗಾಗಿ ಹೆಂಗಸರು ತಮ್ಮ ಋತುಚಕ್ರದ 14 ನೇ ದಿನದಂದೇ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೇಳಿಸಿಕೊಂಡು, ಅದನ್ನೇ ಪಾಲಿಸುವರು.

ಆದರೆ ವಾಸ್ತವದಲ್ಲಿ ಕೇವಲ ಕೆಲವಷ್ಟು ಹೆಂಗಸರು ಮಾತ್ರ ನಿರ್ದಿಷ್ಟವಾಗಿ 14ನೇ ದಿನದಂದೇ ಅಂಡೋತ್ಪತ್ತಿ ಮಾಡುತ್ತಾರೆ. ಹೆಂಗಸರ ಋತುಚಕ್ರವು ಭಿನ್ನವಾಗಿರಬಹುದು. ಕೆಲವರು 8ನೇ ದಿನದಂದೇ ಅಂಡೋತ್ಪತ್ತಿ ಮಾಡಿದರೆ, ಇನ್ನೂ ಕೆಲವರು 22ನೇ ದಿನದಂದು ಮಾಡಬಹುದು. ಹೀಗಾಗಿ ನೀವು ನಿಮ್ಮ ಋತುಚಕ್ರದ ಬಗ್ಗೆ ತಿಳಿದುಕೊಳ್ಳಿರಿ. ಒಂದು ವೇಳೆ ನಿಮ್ಮ ಋತುಚಕ್ರವು ನಿಯಮಿತವಾಗಿಯೇ ಇದ್ದರೆ, ಕೇವಲ 14ನೇ ದಿನದಂದೇ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವ ಬದಲು, ಆ ದಿನದ ಹಿಂದಿನ ಮತ್ತು ಮುಂದಿನ ಎರಡು ದಿನಗಳಲ್ಲಿಯೂ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಿ.


೨. ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದು

ಹೌದು ನೀವು ಕೇವಲ ಆ ದಿನದಂದು ಮಾತ್ರ ಸೆಕ್ಸ್ ಅಲ್ಲಿ ತೊಡಗಿಸಿಕೊಂಡರೆ ನಿಮ್ಮ ಪತಿಯ ವೀರ್ಯ ಉಳಿಸಬಹುದು ಎಂದು ಅಂದುಕೊಂಡಿದ್ದರೆ, ಅದು ತಪ್ಪು ಗ್ರಹಿಕೆ. ಮೊದಲೇ ಹೇಳಿದಂತೆ ನೀವು ನಿಮ್ಮ ಫಲವತ್ತಾದ ದಿನಗಳನ್ನ ಕಳೆದುಕೊಳ್ಳಬಹುದು. ಇದೇ ರೀತಿ ನೀವು ಪದೇ ಪದೇ ಸೆಕ್ಸ್ ಅಲ್ಲಿ ತೊಡಗಿಸಿಕೊಂಡರೂ ತೊಂದರೆಯೇ. ಇದು ಇಬ್ಬರಿಗೂ ಆಯಾಸ ಉಂಟು ಮಾಡಿ, ಫಲವತ್ತಾದ ಅವಧಿಯಲ್ಲಿ ಇಬ್ಬರಲ್ಲಿ ಒಬ್ಬರಿಗೆ ನಿರಾಸಕ್ತಿ ಉಂಟಾಗಿ ಆ ಸಮಯವನ್ನು ಕಳೆದುಕೊಳ್ಳಬಹುದು.


೩. ಲ್ಯೂಬ್ರಿಕ್ಯಾಂಟ್ಸ್  (ನಯವಾಗಿಸುವ ತೈಲ)

ಒಂದು ವೇಳೆ ನೀವು ನಿಮ್ಮ ಲೈಂಗಿಕ ಕ್ರಿಯೆಯಲ್ಲಿ ಲ್ಯೂಬ್ರಿಕ್ಯಾಂಟ್ಸ್ ಅನ್ನು ಬಳಸುತ್ತಿದ್ದರೆ, ಇನ್ನೊಮ್ಮೆ ಯೋಚಿಸಿ. ವ್ಯಾವಹಾರಿಕ ಲ್ಯೂಬ್ರಿಕ್ಯಾಂಟ್ಸ್ ವೀರ್ಯದ ಚಲನೆಯನ್ನು ಕುಂದಿಸುತ್ತವೆ. ಇದರಿಂದ ವೀರ್ಯಕ್ಕೆ ಅಂಡಾಣುವಿಗೆ ತಲುಪಲು ಮತ್ತಷ್ಟು ಕಷ್ಟವಾಗುತ್ತದೆ. ಹೀಗಾಗಿ ನೀವು ಲ್ಯೂಬ್ರಿಕ್ಯಾಂಟ್ ಬಳಸಿದರು, ಅದು ವೀರ್ಯ-ಸ್ನೇಹಿ ಆದ ಲ್ಯೂಬ್ರಿಕ್ಯಾಂಟ್ ಅನ್ನು ಬಳಸಿ. ಇಲ್ಲವಾದಲ್ಲಿ ನೈಸರ್ಗಿಕವಾದ ಆಲಿವ್ ಆಯಿಲ್, ಬೇಬಿ ಆಯಿಲ್ ಬಳಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon