Link copied!
Sign in / Sign up
9
Shares

ಹೆರಿಗೆ ನಂತರ ನೀವು ಈ 6 ಕೆಲಸ ಮಾಡದಿದ್ದರೆ, ಜೀವನ ಕಷ್ಟವಾಗುತ್ತದೆ!

ನೀವು ನಿಮ್ಮ ಮಗುವನ್ನು ಪಡೆದುಕೊಳ್ಳಲು ಎರಡು ದಾರಿಗಳಿವೆ - ಒಂದು ಸಿಸೇರಿಯನ್ ಹಾಗು ಇನ್ನೊಂದು ಸ್ವಾಭಾವಿಕ ಹೆರಿಗೆ. ಎರಡು ವಿಧಾನಗಳಿಗೂ ಅವುಗಳದ್ದೇ ಆದ ಉಪಯೋಗಗಳು ಮತ್ತು ಪ್ರತಿಕೂಲತೆಗಳು ಇರುತ್ತವೆ. ಆದರೆ ಸ್ವಾಭಾವಿಕ ಹೆರಿಗೆಯು ಸ್ವಲ್ಪ ಹೆಚ್ಚಿನ ಬದಲಾವಣೆಗಳನ್ನ ಹೊತ್ತು ತರುತ್ತದೆ. ಸ್ವಾಭಾವಿಕ ಹೆರಿಗೆಯ ನಂತರ ನೀವು ಹೆರಿಗೆಯ ಗಾಯಗಳ ಕಡೆ, ನಿಮ್ಮ ದೇಹದ ಬಗ್ಗೆ ಮತ್ತು ಮಗುವಿನ ಪೋಷಣೆಯ ಕಡೆ ಗಮನ ಹರಿಸಬೇಕು. ಸ್ವಾಭಾವಿಕ ಹೆರಿಗೆಯ ನಂತರ ನೀವು ಪಾಲಿಸಬೇಕಾದ ಕೆಲವೊಂದು ವಿಚಾರಗಳು ಯಾವೆಂದು ನಾವು ಪಟ್ಟಿ ಮಾಡಿದ್ದೇವೆ. ಓದಿ.

೧. ನಿಮ್ಮ ಭಾವನೆಗಳ ಮೇಲೆ ಹಿಡಿತ ಇರಲಿ

ಮಗುವಿಗೆ ಜನ್ಮ ನೀಡಿದ ಮೇಲೆ, ಹೆಂಗಸರು ಭಾವುಕರಾಗುತ್ತಾರೆ. ಕೆಲವೊಮ್ಮೆ ಈ ಭಾವನೆಗಳು ಒಳ್ಳೆಯದು ಕೂಡ ಆಗಿರುವುದಿಲ್ಲ. ನಿಮ್ಮ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ ನಿಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ. ಅದರ ಹೊರತಾಗಿ, ನವಜಾತ ಶಿಶುವಿನ ಜವಾಬ್ದಾರಿಯು ನಿಮ್ಮನ್ನು ಮತ್ತಷ್ಟು ಕುಗ್ಗಿಸಬಹುದು ಮತ್ತು ಖಿನ್ನತೆ ಹೊಂದುವಂತೆ ಮಾಡಬಹುದು. ಆದರೆ ಈ ಲಕ್ಷಣಗಳು ಬಹುಕಾಲವಾದರೂ ಹಾಗೆಯೇ ಉಳಿದುಕೊಂಡರೆ, ನಿಮ್ಮ ವೈದ್ಯರ ಬಳಿ ಮಾತನಾಡಿ.


೨. ಐಸ್ ಪ್ಯಾಕ್ ಬಳಸಿ

ಐಸ್ ಪ್ಯಾಕ್ - ಅಂದರೆ ಐಸ್ ತುಂಡುಗಳನ್ನು ಒಂದು ಬಟ್ಟೆಯಲ್ಲಿ ಬುತ್ತಿ ಕಟ್ಟುವುದು. ಐಸ್ ಪ್ಯಾಕ್ ನಿಮ್ಮ ಯೋನಿಯ ಸುತ್ತಲಿನ ಜಾಗದಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡಲು ಇದು ತುಂಬಾನೇ ಸಹಕಾರಿ. ಮುಖ್ಯವಾಗಿ, ಇದರ ಶೀತಲತೆಯು ನರಗಳನ್ನ ಜಡ ಹಿಡಿಸಿ, ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ನೀವು ಇದನ್ನು ಐಸ್ ಬ್ಯಾಗ್ ಅನ್ನು ಮೆಡಿಕಲ್ ಸ್ಟೋರ್ ಇಂದ ತಂದು ಮಾಡಿಕೊಳ್ಳಬಹುದು. ಅಥವಾ ಇದಕ್ಕೆ ಇನ್ನೊಂದು ದಾರಿ ಇದೆ.


ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದ್ದರೆ, ಅದರಲ್ಲಿ ನಿಮ್ಮ ಸ್ಯಾನಿಟರಿ ಪ್ಯಾಡ್ ಅನ್ನು ನೀರಿನಲ್ಲಿ ನೆನೆಸಿ ಫ್ರೀಜರ್ ಒಳಗೆ ಇಡಿ. ಅದು ಗಟ್ಟಿಯಾದ ನಂತರ ಹೊರತೆಗೆದು, ಕೆಲವು ಕ್ಷಣಗಳ ಕಾಲ ಗಾಳಿಗೆ ಇಡಿ. ನಂತರ ಅದರ ಮೇಲೊಂದು ಬಟ್ಟೆಯನ್ನು ಸುತ್ತಿ. ನೀವು ವಯಸ್ಕರರ ಡೈಪರ್ ಅನ್ನು ಧರಿಸಿಕೊಂಡು, ಅದರೊಳಗೆ ಈ ಪ್ಯಾಡ್ ಅನ್ನು ಇಟ್ಟುಕೊಳ್ಳಿ. ವಯಸ್ಕರರ ಡೈಪರ್ ಅನಾವಶ್ಯಕ ಸೋರಿಕೆಯನ್ನು ತಡೆಯುತ್ತದೆ.


೩. ಟಾಂಪಾನ್ ಬದಲು ಪ್ಯಾಡ್ ಅನ್ನೇ ಬಳಸಿ

ಪ್ರಸವ ನಂತರದ ರಕ್ತಸ್ರಾವವನ್ನು ಲೊಚಿಯಾ ಎಂದು ಕರೆಯುವರು ಮತ್ತು ಇದು ಹೆರಿಗೆಯ ನಂತರದ 2-6 ವಾರಗಳವರೆಗೆ ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ಟಾಂಪಾನ್ ಅನ್ನು ಬಳಸುವುದು ಸೋಂಕಿಗೆ ದಾರಿ ಮಾಡಿ ಕೊಡುವ ಸಾಧ್ಯತೆಗಳಿದ್ದು, ಇದನ್ನ ಬಳಸುವುದು ಸೂಕ್ತವಲ್ಲ. ಈ ಸಮಯದಲ್ಲಿ ಹೆಚ್ಚಿನ ರಕ್ಷಣೆ ಬೇಕಾಗುತ್ತದೆ. ಹೀಗಾಗಿ ನೀವು ಇದನ್ನ ಧರಿಸಬೇಕು.


೪. ಸಾಕಷ್ಟು ನಿದ್ದೆ ಮತ್ತು ವಿಶ್ರಾಂತಿ ಪಡೆದುಕೊಳ್ಳಿ

ಮಗುವಾದ ನಂತರ, ಅಮ್ಮಂದಿರು ತಮಗೆ ತಾವು ಹೆಚ್ಚಿನ ವಿಶ್ರಾಂತಿ ಮತ್ತು ನಿದ್ದೆಯ ಸಮಯವನ್ನು ಮೀಸಲಿಡುವುದಿಲ್ಲ. ನಿಮ್ಮ ಚೇತರಿಕೆಯ ಪ್ರಕ್ರಿಯೆಗೆ ಉತ್ತೇಜನ ನೀಡಲು ಬೇಕಾದಷ್ಟು ನಿದ್ದೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಅಲ್ಲದೆ ಸರಿಯಾದ ಪ್ರಮಾಣದ ನಿದ್ದೆಯು ನಿಮ್ಮ ಒಟ್ಟಾರೆ ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಕ್ಕೂ ತುಂಬಾನೇ ಮುಖ್ಯವಾದದ್ದು. ಸರಿಯಾಗಿ ವಿಶ್ರಾಂತಿ ಸಿಗದೇ ಇದ್ದರೆ, ಅದು ಖಿನ್ನತೆ ಮತ್ತು ಆತಂಕವನ್ನ ಹುಟ್ಟು ಹಾಕಬಹುದು.


೫. ಹೊಲಿಗೆಗಳ (ಇದ್ದರೆ) ಕಾಳಜಿ

ಸ್ವಾಭಾವಿಕ ಹೆರಿಗೆಯ ನಂತರ ಎಲ್ಲಾ ಹೆಂಗಸರಿಗೂ ಹೊಲಿಗೆಗಳು ಹಾಕಲಾಗುತ್ತದೆ ಎಂದಲ್ಲ. ಆದರೆ ಕೆಲವು ಹೆಂಗಸರಿಗೆ ಅದರ ಅಗತ್ಯವಿರುತ್ತದೆ. ನೀವು ಈ ಹೊಲಿಗೆಗಳನ್ನ ಸೋಂಕಿನಿಂದ ದೂರವಿಡಲು ಸ್ವಚ್ಛವಾಗಿ ಇಡಬೇಕು. ಸಾಕಷ್ಟು ನೀರನ್ನು ಕೂಡ ಕುಡಿಬೇಕು. ಹೊಲಿಗೆಗಳ ಬಳಿ ತುಂಬಾ ನೋವು ಮತ್ತು ಅವುಗಳಿಂದ ಹಳದಿ ಅಥವಾ ಗಾಢ ಹಸಿರು ಬಣ್ಣದ ದ್ರವ್ಯ ಬರುತ್ತಿದ್ದರೆ, ಅದು ಹೊಲಿಗೆಗಳ ಸೋಂಕಿನ ಮೊದಲ ಲಕ್ಷಣ. ಯೋನಿಯಿಂದ ಹೊರಬರುವ ರಕ್ತವು ಕೆಟ್ಟ ವಾಸನೆ ಬೀರುತ್ತಿದ್ದರೆ, ಅದು ಗರ್ಭಕೋಶದ ಸೋಂಕಿನ ಗುಣಲಕ್ಷಣ.


೬. ಥೈರಾಯಿಡ್ ಮೇಲೆ ಗಮನವಿಡಿ

ತೂಕದಲ್ಲಿ ಏರುಪೇರು, ಆಯಾಸ, ನಿಶಕ್ತಿ - ಇವೆಲ್ಲವೂ ಹೊಸ ತಾಯಂದಿರಿಗೆ ಸಾಮಾನ್ಯವಾಗಿ ಕಾಡುವ ತೊಂದರೆಗಳು. ಆದರೆ ಇವುಗಳು ಥೈರಾಯಿಡ್ ಸಮಸ್ಯೆಯ ತೊಂದರೆಯೂ ಆಗಿರಬಹುದು. ಹೆರಿಗೆಯ ನಂತರದ ಒಂದು ವರ್ಷದಲ್ಲಿ, ಕೆಲವು ಹೆಂಗಸರು ಈ ಥೈರಾಯಿಡ್ ಸಮಸ್ಯೆಗೆ ಒಳಗಾಗುವರು. ಆದರೆ ಈ ಬದಲಾವಣೆಗಳು ನಮಗೆ ಗೋಚರವಾಗುವುದೇ ಇಲ್ಲ. ಅದೃಷ್ಟವಶಾತ್, ಅದು ಸಹಜವಾಗಿಯೇ ತಾವಾಗಿಯೇ ನಿಯಂತ್ರಣಕ್ಕೆ ಬರುತ್ತವೆ. ಮೇಲೆ ತಿಳಿಸಿದ ಲಕ್ಷಣಗಳಲ್ಲಿ ನಿಮಗೆ ಯಾವುದಾದರೂ ಬಿಡದಂತೆ ಕಾಡಿದರೆ, ನಿಮ್ಮ ವೈದ್ಯರ ಬಳಿ ಅವುಗಳನ್ನ ಚರ್ಚಿಸಿ.

Click here for the best in baby advice
What do you think?
0%
Wow!
0%
Like
100%
Not bad
0%
What?
scroll up icon