Link copied!
Sign in / Sign up
12
Shares

ಹೆರಿಗೆ ನಂತರ ಲೂಸ್ ಆಗಿರುವ ಚರ್ಮವನ್ನು ಸರಿಪಡಿಸಲು ಮನೆ ಔಷಧಿಗಳು!

ನಿಮ್ಮ ಮುದ್ದು ಮಗುವಿಗೆ ಜನ್ಮ ನೀಡಿರುವಿರಿ,ಅಭಿನಂದನೆಗಳು. ನಿಮ್ಮ 9 ತಿಂಗಳ ಪ್ರಯಾಸ ಎಲ್ಲವೂ ನಿಮ್ಮ ಮಗುವಿನ ಮುಖ ಕಂಡ ತಕ್ಷಣ ಮರೆತಿರುವಿರಿ. ನಿಮ್ಮ ಕನಸು ನಿಮ್ಮ ಜೀವನ ಈಗ ನಿಮ್ಮ ತೋಳಿನಲ್ಲಿ ಮಲಗಿದೆ. ಇಡೀ ಪ್ರಪಂಚವನ್ನೇ ನೀವು ನಿಮ್ಮ ತೋಳಿನಲ್ಲಿ ಕಾಣುತ್ತಿರುವಿರಿ. ನಿಮ್ಮ ಜೀವನವನ್ನು ಬದಲಿಸಿರುವ ನಿಮ್ಮ ಕಂದನನ್ನು ಪೋಷಣೆ ಮಾಡುವುದರಲ್ಲಿ ನೀವು ಹೆಚ್ಚಿನ ಸಮಯ ಕಳೆಯುವಿರಿ,ಕೆಲವು ದಿನಗಳ ನಂತರ ನೋಡಿದರೆ ನಿಮ್ಮ ತ್ವಚೆಯು ನಿಮಗೆ ಲೂಸ್ ಆಗಿರುವ ಹಾಗೆ ಕಾಣಿಸುವುದು ಮತ್ತು ಅದನ್ನು ನೀವು ಇಷ್ಟಪಡದೆ ಇರಬಹುದು. ಮಗುವು ನಿಮ್ಮ ಹೊಟ್ಟೆಯನ್ನು ಹಿಗ್ಗಿಸಿರುವುದರಿಂದ ನಿಮಗೆ ಚರ್ಮ ಲೂಸ್ ಆಗಿರುವಹಾಗೆ ಅನಿಸುತ್ತದೆ, ಚಿಂತಿಸದಿರಿ ಇದಕ್ಕೆ ನಿಮ್ಮ ಮನೆಯಲ್ಲೇ ಪರಿಹಾರವಿದೆ. ಅದನ್ನು ತಿಳಿಯಲು ಮುಂದೆ ಓದಿ.


೧.ನಿಧಾನವಾಗಿ ತೂಕ ಕಡಿಮೆ ಮಾಡಿಕೊಳ್ಳಿ

ನಿಧಾನವಾಗಿ ತೂಕ ಕಳೆದುಕೊಳ್ಳುವುದು ನೀವು ಚರ್ಮಕ್ಕೆ ಮಾಡುವ ಮೊದಲ ಕಾಳಜಿ. ಚರ್ಮವು ನಿಧಾನವಾಗಿ ತನ್ನ ಮೊದಲಿನ ಸ್ಥಿತಿಗೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ನೀವು ಆರೋಗ್ಯಕರ ರೀತಿಯಲ್ಲಿ ಮಾಡಿಕೊಳ್ಳುವುದು ಉತ್ತಮ. ನೀವು ವೇಗವಾಗಿ ತೂಕ ಕಳೆದುಕೊಳ್ಳುವಿರಿ ಎಂದರೆ ನೀವು ಕೊಬ್ಬು ಮತ್ತು ಸ್ನಾಯು ಎರಡನ್ನು ಕಳೆದುಕೊಳ್ಳುತ್ತಿರುವಿರಿ ಎಂದರ್ಥ. ಸ್ನಾಯುವನ್ನು ಕಳೆಸುಕೊಳ್ಳುವುದು ನಿಮ್ಮ ಚರ್ಮ ಮತ್ತಷ್ಟು ಹದಗೆಡಲು ಮತ್ತು ಇನ್ನಷ್ಟು ಲೂಸ್ ಆಗಲು ಕಾರಣವಾಗುತ್ತದೆ.


೨.ದಿನ ಎಣ್ಣೆ ಮಸಾಜ್ ಮಾಡಿ

ಪ್ರತಿದಿನ ಪೋಷಣೆ ಗುಣಯುಳ್ಳ ಎಣ್ಣೆಯಿಂದ ಲೂಸ್ ಆಗಿರುವ ಚರ್ಮದ ಜಾಗದಲ್ಲಿ ಮಸಾಜ್ ಮಾಡಿ, ಇದರಿಂದ ರಕ್ತ ಸಂಚಲನ ಸರಾಗವಾಗಿ ಆಗಲು ಸಹಾಯವಾಗುತ್ತದೆ. ಉತ್ತಮ ರಕ್ತ ಸಂಚಲನ ಆದರೆ, ಅದರಿಂದ ಚರ್ಮ ಆರೋಗ್ಯವಾಗಿರುತ್ತದೆ ಮತ್ತು ಮೃದುವಾಗುತ್ತದೆ. ಉತ್ತಮ ಫಲಿತಾಂಶ ಕಾಣಲು ನೀವು ಸ್ನಾನದ ಮೊದಲು ಎಣ್ಣೆಯಿಂದ ಮಸಾಜ್ ಮಾಡಿ, ನಂತರ ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ.

ನೀವು ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಚರ್ಮಕ್ಕೆ ಹಚ್ಚುವುದು ಚರ್ಮ ಮೃದುವಾಗಲು, ಸುಂದರವಾಗಿ ಕಾಣಲು, ಹೊಳಪನ್ನು ಪಡೆಯಲು ಮತ್ತು ಉತ್ತಮ ರಚನೆ ಪಡೆಯಲು ಇದು ಸಹಾಯ ಮಾಡುತ್ತದೆ.


೩.ಲೋಗಸರ

ನೈಸರ್ಗಿಕವಾಗಿ ಚರ್ಮವನ್ನು ಬಿಗಿಯಾಗಿರಿಸುವ ಗುಣ ಇರುವುದು ಲೋಗಸರಕೆ ಮಾತ್ರ. ಇದು ಚರ್ಮದ ಹೊಂದಿಕೊಳ್ಳುವ ಗುಣವನ್ನು ಹೆಚ್ಚಿಸುತ್ತದೆ ಮತ್ತು ಚರ್ಮ ದೇಹಕ್ಕೆ ಅಂಟಿಕೊಂಡಿರುವಂತೆ ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ.

ಲೋಗಸರದ ಲೋಳೆಯನ್ನು ನೆರವಾಗಿ  ಚರ್ಮದ ಮೇಲೆ ಅನ್ವಯಿಸಿ.

ಇದನ್ನು ೧೫-೨೦ನಿಮಿಷಗಳ ಕಾಲ ಅಲ್ಲಿಯೇ ಹಾಗೆಯೇ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಉತ್ತಮ ಮತ್ತು ತ್ವರಿತ ಫಲಿತಾಂಶ ಕಾಣಲು ಇದನ್ನು ಪ್ರತಿದಿನ ಮಾಡಿ.


೪.ಎದೆಹಾಲುಣಿಸಿ

ನಿಮ್ಮ ಮಗುವಿಗೆ ಎದೆಹಾಲುಣಿಸುವ ಕೆಲಸ ಮಾಡುವುದು ನಿಮಗೆ ಮತ್ತು ಮಗುವಿಗೆ ತುಂಬಾ ಒಳ್ಳೆಯದು. ಇದು ಇಬ್ಬರ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದು ನಿಮ್ಮ ದೇಹದಲ್ಲಿ ಕ್ಯಾಲೊರಿಯನ್ನು ಕಳೆದುಕೊಂಡು ಸಣ್ಣಗೆ ಆಗಲು ಸಹಾಯ ಮಾಡುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
33%
Wow!
67%
Like
0%
Not bad
0%
What?
scroll up icon