Link copied!
Sign in / Sign up
12
Shares

ಸೆಕ್ಸ್ ಇಂದ ಇಷ್ಟೊಂದು ಪ್ರಯೋಜನಗಳಿವೆ ಎಂದು ನೀವು ತಿಳಿದರೆ, ದಿನ ಇದರಲ್ಲಿ ತೊಡಗುವಿರಿ!

ಬೇರೆಯ ವಿಷಯಕ್ಕಿಂತ ಭಿನ್ನವಾಗಿ ಮಾನವನ ಮೆದುಳನ್ನು ಆಕ್ರಮಿಸಿಕೊಂಡಿರುವ ಲೈಂಗಿಕ ಕ್ರಿಯೆ, ಹೆಚ್ಚು ಜನರು ಇದು ತಮ್ಮ ಆಸೆ ಮತ್ತು ಜನನಾಂಗದ ಬಯಕೆಯನ್ನು ಪೂರೈಸುವುದು ಮಾತ್ರ ಎಂದು ಅಂದುಕೊಂಡಿದ್ದಾರೆ. ಲೈಂಗಿಕತೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿವೆ. ವಾಸ್ತವವಾಗಿ, ಲೈಂಗಿಕ ದೃಷ್ಟಿಕೋನವು ಆರೋಗ್ಯ ದೃಷ್ಟಿಕೋನದಿಂದ ಪಾಲ್ಗೊಳ್ಳುವ ಅತ್ಯಂತ ವಿಸ್ತಾರವಾದ ಮತ್ತು ಪರಿಣಾಮಕಾರಿ ಚಟುವಟಿಕೆಗಳಲ್ಲಿ ಒಂದಾಗಿದೆ. ಲೈಂಗಿಕ ಕ್ರಿಯೆಯಿಂದ, ದಾಖಲಿತ ಮತ್ತು ಸಾಬೀತಾದ ಆರೋಗ್ಯ ಪ್ರಯೋಜನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

೧.ಲೈಂಗಿಕತೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿಮ್ಮ ಮನಸ್ಸಿನ ತತ್ವ ಮತ್ತು ದೇಹದ ಆರೋಗ್ಯ ಪರಸ್ಪರ ಸಂಬಂಧ ಹೊಂದಿದ್ದು ಲೈಂಗಿಕತೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಮೊದಲ ಬಾರಿ ಲೈಂಗಿಕತೆಯಲ್ಲಿ ಪಾಲ್ಗೊಳ್ಳುವವರಲ್ಲಿ ಇಮ್ಯೂನೋಗ್ಲೋಬಿನ್ ಸಂಶ್ಲೇಷಣೆ ಹೆಚ್ಚಾಗುತ್ತದೆ. ಇವು ನಮ್ಮ ದೇಹದ ಪ್ರತಿಕಾಯಕಗಳಾಗಿದ್ದು, ನಮ್ಮ ದೇಹವು ಸೋಂಕಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತವೆ. ಹೆಚ್ಚು ಸಂಭೋಗದಲ್ಲಿ ತೊಡಗುವವರಲ್ಲಿ ರೋಗನಿರೋಧಕಗಳು ಹೆಚ್ಚಾಗಿ ನಮ್ಮ ದೇಹವು ಬೇಗನೆ ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ.

೨.ಲೈಂಗಿಕ ಕ್ರಿಯೆ ಸಾಮಾನ್ಯ ಬಂಜೆತನ ಸಮಸ್ಯೆಯನ್ನು ನಿವಾರಿಸುತ್ತದೆ

ಆಧುನಿಕ ಜೀವನಶೈಲಿಯಲ್ಲಿ ಸಿಲುಕಿ ಹಲವು ಪುರುಷರು ತಮ್ಮ ವೀರ್ಯದ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿರುತ್ತಾರೆ ಅಥವಾ ಅದರ ಗುಣಮಟ್ಟ ಕಡಿಮೆಯಾಗಿರುತ್ತದೆ. ಮಗುವಿಗಾಗಿ ನಿರೀಕ್ಷಿಸುತ್ತಿರುವವರಿಗೆ ಇದು ಗಂಭೀರ ಸಮಸ್ಯೆ. ಅಧ್ಯಯನದ ಪ್ರಕಾರ ನಿರಂತರ ಮತ್ತು ಖುಷಿಯ ಸಂಭೋಗದಲ್ಲಿ ತೊಡಗುವುದರಿಂದ ಪುರುಷರು ಈ ಸಮಸ್ಯೆಯಿಂದ ಹೊರಬರಬಹುದು. ಸಂಭೋಗದಲ್ಲಿ ತೊಡಗುವುದರಿಂದ ದೇಹದ ಎಲ್ಲಾ ಭಾಗಗಳಲ್ಲೂ ರಕ್ತ ಸರಾಗವಾಗಿ ಹರಿಯಲು ಸಹಾಯವಾಗುತ್ತದೆ, ಮತ್ತು ಇದರಿಂದ ದೇಹದ ಎಲ್ಲಾ ಭಾಗಕ್ಕೂ ಪೌಷ್ಟಿಕಾಂಶಗಳ ಪೂರೈಕೆ ಆಗುತ್ತದೆ.

೩.ಲೈಂಗಿಕ ಕ್ರಿಯೆ ಒತ್ತಡವನ್ನು ಕಡಿಮೆ ಮಾಡುತ್ತದೆ

ಒತ್ತಡವನ್ನು ಬಹುಪಾಲು ಕಡಿಮೆ ಮಾಡುವುದು ಬಹುಶಃ ಎಲ್ಲರು ಒಪ್ಪಿಕೊಳ್ಳಬಹುದಾದ ಸಂಭೋಗದ ಒಂದು ಅತಿ ದೊಡ್ಡ ಪ್ರಯೋಜನವಾಗಿದೆ. ಹೆಚ್ಚಿನ ಆತಂಕ ಮತ್ತು ಒತ್ತಡ ಮನುಷ್ಯನಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ತರುತ್ತದೆ ಎಂದು ವಿಜ್ಞಾನ ಹೇಳುತ್ತದೆ. ನಿರಂತರ ಸಂಭೋಗದಿಂದ, ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು, ಅದರಲ್ಲೂ ವಿಶೇಷವಾಗಿ, ಮನಸ್ಥಿತಿ ಏರುಪೇರು, ಖಿನ್ನತೆ ಮತ್ತು ನಿದ್ರೆ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು. ಸಂಭೋಗ ಮಾಡುವಾಗ ಬಿಡುಗಡೆಯಾಗುವ ಹಾರ್ಮೋನು ಒತ್ತಡವನ್ನು ಕಡಿಮೆಮಾಡುತ್ತದೆ.

೪.ಸಂಭೋಗ ನಿಮ್ಮ ದೈಹಿಕ ಸ್ಥಿತಿಯನ್ನು ಉತ್ತಮವಾಗಿರಿಸುತ್ತದೆ

ಸಂಭೋಗ ನಡೆಸುವುದರಿಂದ, ಸಾಮಾನ್ಯವಾಗಿ ಹೆಚ್ಚುವರಿ ತೂಕವನ್ನು ಪಡೆಯುವ ಮನುಷ್ಯನ ಹೊಟ್ಟೆ, ತೊಡೆ ಮತ್ತು ಸೊಂಟದ ಭಾಗಗಳಿಗೆ ವ್ಯಾಯಾಮವನ್ನು ಮಾಡಿದಂತೆ ಆಗುತ್ತದೆ. ಸಂಭೋಗ ಮಾಡುವುದು ದೇಹದ ಎಲ್ಲಾ ಭಾಗಗಳಿಗೂ ವ್ಯಾಯಾಮವನ್ನು ಮಾಡಿದ ಅನುಭವವನ್ನು ನೀಡುತ್ತದೆ. ಇದು ನಿಮಗೆ ದೈಹಿಕ ನೋಟವನ್ನು ನೀಡಿದ್ದರು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಲೈಂಗಿಕ ಹಾರ್ಮೋನುಗಳು ದೇಹದ ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಇವು ಹೃದಯ ತೊಂದರೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

೫.ಲೈಂಗಿಕ ಕ್ರಿಯೆ ತ್ವರಿತ ನೋವು ನಿವಾರಕ

ಎಂಡೋರಫಿನ್ಸ್ ಸ್ರವಿಸುವಿಕೆಯ ಹೆಚ್ಚಳದಿಂದಾಗಿ ಸಂಭೋಗದೊಂದಿಗೆ ಸಂತೋಷದ ಭಾವನೆ ಉಂಟಾಗುತ್ತದೆ. ಇವು ಮನಸ್ಸನ್ನು ಶಾಂತವಾಗಿಸಲು ತುಂಬಾ ಸಹಾಯಕಾರಿ. ಎಂಡೋರಫಿನ್ಸ್ ನ ಜೊತೆಗೆ ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡಿ ದೇಹದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದರ ಜೊತೆಗೆ ಸಂಭೋಗವು ನಿಮಗೆ ವಿಶಿಷ್ಟ ಪ್ರಕಾಶಮಾನದ ತ್ವಚೆ/ಚರ್ಮವನ್ನು ನೀಡುತ್ತದೆ. ದೇಹದ ಎಲ್ಲಾ ಭಾಗಗಳಿಗೆ ರಕ್ತವು ಸರಾಗವಾಗಿ ಸಂಚಾರ ಮಾಡಿ ದೇಹದ ಎಲ್ಲಾ ಭಾಗಗಳಿಗೆ ಅಗತ್ಯ ಆಮ್ಲಜನಕವನ್ನು ಪೂರೈಸಿ, ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಲೈಂಗಿಕತೆಯು ಮಾನವ ದೇಹಕ್ಕೆ ಮಾನಸಿಕ ಮತ್ತು ದೈಹಿಕ ವರ್ಧಕದಂತೆ ಕಾರ್ಯನಿರ್ವಹಿಸುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon