Link copied!
Sign in / Sign up
6
Shares

ಸೆಕ್ಸ್ ಇಂದ ನೀವು ಇಷ್ಟೊಂದು ಕ್ಯಾಲೊರಿಗಳನ್ನುಕರಗಿಸುತ್ತೀರಾ ಎಂದರೆ ಜಿಮ್ ಬದಲು ಇದರಲ್ಲೇ ತೊಡಗುತ್ತೀರಾ

ಒಂದು ಬಿಸಿ ಬಿಸಿಯಾದ, ಬೆವರಿಳಿಸುವ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಮೂಲಕ ನಾವು ಎಷ್ಟು ಕ್ಯಾಲೋರಿಸ್ ಕರಗಿಸುತ್ತೇವೆ ಎಂಬ ಯೋಚನೆ ಕೆಲವರ ತಲೆಗೆ ಈಗಾಗಲೇ ಬಂದಿರಬಹುದು. ಅಲ್ಲಿ ಬೆವರು, ಚಲನೆ ಮತ್ತು ಏರಿದ ಹೃದಯ ಬಡಿತ ಇದ್ದರೆ, ಅಂತಹ ಕೆಲಸವನ್ನ ವ್ಯಾಯಾಮ ಅಂತ ಹೇಳದೆ ಇರಲಾಗದು. ಇದು ಕೂಡ ಒಂದು ರೀತಿಯ ವರ್ಕ್ಔಟ್ ಆಗಿರುವುದರಿಂದ, ಇದರ ಫಲಿತಾಂಶದ ಬಗ್ಗೇನೂ ನಾವು ಯೋಚಿಸಬೇಕಲ್ಲವ?

ಈ ಪ್ರಶ್ನೆಗೆ ಉತ್ತರ ತಿಳಿಯಲು ನಾವು ಈ ಪ್ರಶ್ನೆಯನ್ನ ತಜ್ಞರ ಮುಂದಿಟ್ಟೆವು. ಆದರೆ ಒಂದು ವಿಷಯ ನೆನಪಲ್ಲಿ ಇಟ್ಟುಕೊಳ್ಳಬೇಕು - ಅದೇನೆಂದರೆ, ಎಲ್ಲರ ಮಂಚದ ಮೇಲಿನ ರಸದಾಟ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವೊಬ್ಬರದು ಹೆಚ್ಚಿನ ಅವಧಿಯವರೆಗೂ ಮಾಡುತ್ತಾರೆ, ಕೆಲವರು ಇತರರಿಗಿಂತ ಹೆಚ್ಚು ಸಕ್ರಿಯವಗಿರುತ್ತಾರೆ, ಹೀಗಾಗಿ ಈ ಸಂಶೋಧನೆಯನ್ನು ಸರಾಸರಿ ಲೈಂಗಿಕ ಕ್ರಿಯೆಯ ಆಧಾರದ ಮೇಲೆ ನಡೆಸಲಾಯಿತು. ಹೇಗೆ ವರ್ಕೌಟ್ ಇಂದ ತೂಕ ಇಳಿಕೆ, ಶಕ್ತಿ ಹೆಚ್ಚಳ, ರೋಗ ನಿವಾರಣೆ, ಹೆಚ್ಚಿದ ಗುಣಮಟ್ಟದ ನಿದ್ದೆ ಹಾಗು ಇನ್ನೂ ಅನೇಕ ಆರೋಗ್ಯದ ಉಪಯೋಗಗಳಿವೆಯೋ, ಸೆಕ್ಸ್ ಇಂದಲೂ ಅಷ್ಟೇ ವಿಭಿನ್ನ ಉಪಯೋಗಗಳಿವೆ. ಹೀಗಾಗಿ ನೀವು ಇವೆರಡನ್ನೂ ನಿಯಮಿತವಾಗಿ ಮಾಡುವುದು ಒಳ್ಳೆಯದೇ!

ಯೂನಿವರ್ಸಿಟಿ ಆಫ್ ಮಾಂಟ್ರಿಯಲ್ ಅಲ್ಲಿನ ತಜ್ಞರ ಸಂಶೋಧನೆಯ ಪ್ರಕಾರ 30 ನಿಮಿಷಗಳ ಲೈಂಗಿಕ ಕ್ರಿಯೆಯಲ್ಲಿ (ಮೌಖಿಕ ಲೈಂಗಿಕತೆಯನ್ನು ಕೂಡಿ) ಭಾಗಿಯಾದರೆ ಗಂಡಸು 100 ಕ್ಯಾಲೊರಿಗಳನ್ನುಕರಗಿಸುತ್ತಾನೆ ಎಂದು ಮತ್ತು ಹೆಂಗಸು 69 ಕ್ಯಾಲೊರಿಗಳನ್ನು ಕರಗಿಸುತ್ತಾಳೆ ಎಂಬುದು ತಿಳಿದು ಬಂದಿದೆ. ಗಂಡಸರು ಮತ್ತು ಹೆಂಗಸರು ಕರಗಿಸುವ ಕ್ಯಾಲೊರಿಗಳಲ್ಲಿ ವ್ಯತ್ಯಾಸ ಇರುವುದಕ್ಕೂ ಕಾರಣ ಇದೆ. ಅದು ಏನೆಂದರೆ, ಗಂಡಸರು ಸಾಮಾನ್ಯವಾಗಿ ಹೆಂಗಸರಿಗಿಂತ ಹೆಚ್ಚು ತೂಕ ಹೊಂದಿರುತ್ತಾರೆ, ಹೀಗಾಗಿ ಗಂಡಸರು ಆ ಕಾರ್ಯದ ವೇಳೆ ಹೆಚ್ಚು ಶಕ್ತಿಯನ್ನು ಖರ್ಚು ಮಾಡಬೇಕಾಗುತ್ತದೆ.

ಒಂದು ವೇಳೆ ನೀವು ಸೆಕ್ಸ್ ಮೂಲಕ ಎಷ್ಟು ಕ್ಯಾಲೊರಿಗಳನ್ನುಕರಗಿಸುತ್ತಿರ ಎಂದು ತಿಳಿಯಬೇಕು ಎಂದರೆ, ಈ ಕೆಳಗೆ ನೀಡಿರುವ ಫಾರ್ಮುಲಾ ಬಳಸಿ ಲೆಕ್ಕ ಹಾಕಿ  :

ಹೆಂಗಸರಿಗೆ = ಸೆಕ್ಸ್ ಅಲ್ಲಿ ಎಷ್ಟು ನಿಮಿಷಗಳು ತೊಡಗಿದ್ದು  ×  3.1

ಗಂಡಸರಿಗೆ =  ಸೆಕ್ಸ್ ಅಲ್ಲಿ ಎಷ್ಟು ನಿಮಿಷಗಳು ತೊಡಗಿದ್ದು × 4.2
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon