Link copied!
Sign in / Sign up
4
Shares

ನಿಮ್ಮ ಕಣ್ಣಲ್ಲಿ ಸೆಕ್ಸ್ ಏನು? ನಿಮ್ಮ ಲೈಂಗಿಕ ವ್ಯಕ್ತಿತ್ವ ಯಾವುದೆಂದು ಇಲ್ಲಿ ಪರೀಕ್ಷಿಸಿಕೊಳ್ಳಿ!

ನೀವು ಯಾವ ರೀತಿಯ ಲೈಂಗಿಕ ವ್ಯಕ್ತಿ? ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ ನೀವು ಲೈಂಗಿಕ ಕ್ರಿಯೆಯನ್ನ ಏಕೆ ಇಷ್ಟ ಪಡುತ್ತೀರ?

ಇತ್ತೀಚಿಗಷ್ಟೇ ಪ್ರಕಟಗೊಂಡ ಒಂದು ಅಧ್ಯಯನದಲ್ಲಿ ಒಟ್ಟು 18 ಜನರಿಂದ ಕಲೆಹಾಕಿದ ಮಾಹಿತಿಯ ಪ್ರಕಾರ, ಜನರು ಸೆಕ್ಸ್ ಅನ್ನು ಅನುಭವಿಸುವ ರೀತಿಯಲ್ಲಿ ಬಹಳಷ್ಟು ವ್ಯತ್ಯಾಸಗಳು, ವಿಭಿನ್ನತೆಗಳು ಇವೆ ಹಾಗು ಇವು “ಲೈಂಗಿಕ ವರ್ತನೆಯ ವ್ಯವಸ್ಥೆ”ಯ ಮೇಲೆ ಆಧಾರಿತ ಆಗಿರುತ್ತವೆ. ಮೂಲಭೂತವಾಗಿ ಇದು ನೀವು ನಿಮ್ಮ ಲೈಂಗಿಕ ಇಚ್ಛೆಗಳು, ಭಾವನೆಗಳು ಮತ್ತು ವರ್ತನೆಗಳಲ್ಲಿ ಸಂಚರಿಸಲಿಕ್ಕೆ ನಿಮ್ಮ ಮನಸ್ಸು ನಿರ್ಮಿಸಿರುವ ವ್ಯವಸ್ತೆ. ಈ ಅಧ್ಯಯನದ ಫಲಿತಾಂಶದಿಂದ ದೊರೆತ ಮಾಹಿತಿ ಪ್ರಕಾರ ಲೈಂಗಿಕ ವರ್ತನೆಯ ವ್ಯವಸ್ತೆಯು ಕಾರ್ಯದಲ್ಲಿ ಎರೆಡು ವಿಧಗಳಿವೆ ಎಂದು.

ಬಹಳಷ್ಟು ಜನರು ಸೆಕ್ಸ್ ಅನ್ನು ಒಂದು ಖುಷಿಯ, ಉಲ್ಲಾಸದಾಯಕ ಅನುಭವವಾಗಿ ಸ್ವೀಕರಿಸುತ್ತಾರೆ ಹಾಗು ಅವರು ಯಾವಾಗಲು ಹಿತವಾದ ಲೈಂಗಿಕ ಅನುಭವಗಳಿಗೆ ಕಾಯುತ್ತಿರುತ್ತಾರೆ. ಇನ್ನೂ ಕೆಲವರಿಗೆ ಸೆಕ್ಸ್ ಅನ್ನುವುದು ಆತಂಕ ಮೂಡಿಸುತ್ತದೆ ಹಾಗು ಅದರಿಂದ ದೂರ ಇರಬೇಕೆನುವಂತೆ ಮಾಡಿಸುತ್ತದೆ.

ಹೈಪರ್ ಆಕ್ಟಿವೇಷನ್

ಕೆಲವರು ತಮ್ಮ ಲೈಂಗಿಕ ವರ್ತನೆಯ ವ್ಯವಸ್ತೆಯ ಹೈಪರ್ ಆಕ್ಟಿವೇಷನ್ ಅಂದರೆ ಹೆಚ್ಚಿದ ಸಕ್ರಿಯತೆ ಪ್ರದರ್ಶಿಸುತ್ತಾರೆ. ಅಂದರೆ ಇವರು ತಮ್ಮ ಕಾರ್ಯ ಸಾಮರ್ಥ್ಯದ ಬಗೆಗಿನ ಆತಂಕ ಅಥವಾ ಇನ್ನೊಬ್ಬರಿಂದ ತಿರಸ್ಕಾರಕ್ಕೆ ಒಳಗಾಗುವ ಭಯವನ್ನ ಮುಚ್ಚಿಡಲು ಸೆಕ್ಸ್ ಗೆ ಹಪಹಪಿಸುತ್ತಾರೆ. ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಈ ಹೈಪರ್ ಆಕ್ಟಿವ್ ಅನ್ನುವುದು ಎಂತ ಮಾತುಗಳಿಂದ ಸೂಚಕವಾಗುತ್ತದೆ ಅಂದರೆ “ನಾನು ಅವಳಿಗೆ ತೃಪ್ತಿ ಪಡಿಸಲು ಆಯಿತೋ ಇಲ್ಲವೋ ಎಂದೇ ಯೋಚಿಸುತ್ತಿರುತ್ತೇನೆ ಹಾಗು ನನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ತಿರಸ್ಕರಿಸಿದಾಗ ತುಂಬಾ ಸಿಟ್ಟು ಮತ್ತು ಹತಾಶೆಗೆ ಒಳಗಾಗುತ್ತೇನೆ”.

ಇವರು ತಾವು ಸೆಕ್ಸಿಯಾಗಿಲ್ಲ ಎಂಬ ಯೋಚನೆಯಲ್ಲೇ ಮುಳುಗಿರುತ್ತಾರೆ, ಹಾಗಾಗಿ ಇವರು ಸಮಾಜದಲ್ಲಿ ಸಂಬಂಧಗಳನ್ನ ಬೆಳೆಸಿಕೊಳ್ಳಲು ಸೆಕ್ಸ್ ಗೆ ಕೊದಬೇಕಾದ್ದಕಿಂತ ಹೆಚ್ಚಿನ ಮಹತ್ವ ಕೊಡುತ್ತಾರೆ. ಹಾಗಾಗಿ ಇವರಿಗೆ ತೋಚುವ ದಾರಿ ಏನೆಂದರೆ, ತರಾತುರಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ಹೇಗಾದರೂ ಮಾಡಿ ತೊಡಗುವುದು, ಅದೂ ಕೂಡ ಕೆಲವೊಮ್ಮೆ ತಮ್ಮ ಸಂಗಾತಿಯ ಅಭಿಪ್ರಾಯಗಳನ್ನ ಕೇಳದೆ.

ಈ ರೀತಿಯ ಜನರು ಆಗಾಗ್ಗೆ ಸಂಭೋಗ ನಡೆಸಲು ಮತ್ತು ಅದನ್ನ ಪಡೆಯಲು ಸಮಯ, ಹಣ ಖರ್ಚು ಮಾಡಲು(ಸಂಗಾತಿಯನ್ನ ಓಲೈಸಲು) ಯೋಚಿಸುವರು. ವ್ಯಕ್ತಿತ್ವದಲ್ಲಿ ಇವರು ತಮ್ಮ ಸಂಬಂಧಗಳಿಗೆ ತುಂಬಾ ಅಭದ್ರತೆಯ ಭಾವನೆಯಿಂದ ಅಂಟಿಕೊಂಡು ಇರುತ್ತಾರೆ. ಅಲ್ಲದೆ, ಇವರು ಜನರನ್ನ ಬೇಗ ನಂಬುವುದಿಲ್ಲ ಮತ್ತು ಅಷ್ಟು ಸಲೀಸಾಗಿ ಮಾತುಗಳನ್ನ ಒಪ್ಪುವುದಿಲ್ಲ.

ಹೈಪರ್ ಡಿಯಾಕ್ಟಿವೇಷನ್

ಹೈಪರ್ ಡಿಯಾಕ್ಟಿವೇಷನ್ ಪ್ರದರ್ಶಿಸುವ ವ್ಯಕ್ತಿಗಳು ತಮ್ಮ ಲೈಂಗಿಕ ಇಚ್ಛೆಗಳನ್ನ ಹಿಡಿದಿಟ್ಟುಕೊಳ್ಳಲು ಅಥವಾ ಅವುಗಳ ಬಗ್ಗೆ ಮುಕ್ತವಾಗಿ ಇರದೇ ಇರಲು ಪ್ರಯತ್ನಿಸುವರು. ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ ಈ ಹೈಪರ್ ಅನ್ನುವುದು ಎಂತ ಮಾತುಗಳಿಂದ ಸೂಚಕವಾಗುತ್ತದೆ ಅಂದರೆ “ಯಾಕೋ ಗೊತ್ತಿಲ್ಲ, ನನಗೆ ಲೈಂಗಿಕ ಕ್ರಿಯೆಯಲ್ಲಿ ಖುಷಿ ಅಥವಾ ಸುಖ ಸಿಗುವುದಿಲ್ಲ” , “ಒಮ್ಮೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ನನ್ನನ್ನ ತೊಡಗಿಸಿಕೊಳ್ಳಲು ಆಗುವುದಿಲ್ಲ”, “ನನ್ನ ಸಂಗಾತಿ ಒತ್ತಾಯ ಮಾಡಿದಾಗ ಮಾತ್ರ ನಾನು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸುತ್ತೇನೆ”.

ಇವರು ಲೈಂಗಿಕ ಕ್ರಿಯೆಯನ್ನ ಒಂದು ಹಿತಕರ ಅನುಭವ ಎನ್ನುವ ಬದಲು ನೋವಿನ ಅನುಭವ ಎಂದುಕೊಳ್ಳುವರು. ಇದಕ್ಕೆ ಕಾರಣ ಹಿಂದೆ ಯಾವಾಗಲೋ ಅವರಿಗೆ ಆದ ಕೆಟ್ಟ ಅನುಭವ ಇರಬಹುದು. ಆ ಅನುಭವವು ಅವರ ಮೇಲೆ ಅಳಿಸಲಾಗದ ಕಳೆಯನ್ನ ಮಾಡಿರುವ ಕಾರಣ ಅವರು ಭವಿಷ್ಯದಲ್ಲೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಬೇಡ ಎಂದುಕೊಳ್ಳುವರು.

ಈ ರೀತಿಯ ಜನರು ಸಂಭೋಗ ನಡೆಸಲು ಆಗಲಿ ಅಥವಾ ತಮ್ಮ ಸಂಗಾತಿಯನ್ನ ಅದಕ್ಕಾಗಿ ಓಲೈಸುವ ಪ್ರಯತ್ನವಾಗಲಿ ಮಾಡುವುದಿಲ್ಲ. ಅಲ್ಲದೆ ಇವರು ತಮ್ಮ ಸಂಗಾತಿಯೊಡನೆ ಕೂಡ ಸೆಕ್ಸ್ ಬಗ್ಗೆ ಮಾತಾಡುವುದಿಲ್ಲ. ಸಂಬಂಧ ಗಟ್ಟಿ ಮಾಡುವುದಕ್ಕೆ ಸೆಕ್ಸ್ ಒಂದು ಮುಖ್ಯ ಅಂಶ ಅಲ್ಲವೇ ಅಲ್ಲ ಎಂದು ಭಾವಿಸುವರು. ಇವರು ಕೂಡ ಹೈಪರ್ ಆಕ್ಟಿವ್ ಜನರ ರೀತಿಯಲ್ಲೇ ತಮ್ಮ ಸಂಬಂಧಗಳಿಗೆ ಅಭದ್ರತೆಯ ಭಾವನೆಯಿಂದ ಅಂಟಿಕೊಂಡಿರುತ್ತಾರೆ ಹಾಗು ಜನರನ್ನ ಬೇಗ ನಂಬುವುದಿಲ್ಲ. ಆದರೆ ಅವುಗಳೊಂದಿಗೆ ಇವರು ಹೊಸ ಅನುಭವಗಳಿಗೂ ತೆರೆದುಕೊಳ್ಳುವುದಿಲ್ಲ.

ಈ ಅಧ್ಯಯನ ನಡೆಸಿದವರು, ಅವರು ಪರಿಗಣನೆಗೆ ತೆಗೆದುಕೊಂಡಿದ್ದ ಸ್ಯಾಂಪಲ್ ಜನರ ಲಿಂಗ ಯಾವುದು ಎಂದು ಹೇಳಲಿಲ್ಲ. ಇದರಿಂದ ನಮಗೆ ತಿಳಿಯುವುದು ಏನೆಂದರೆ ಈ ವ್ಯಕ್ತಿತ್ವವು ಒಬ್ಬ ವ್ಯಕ್ತಿಯು ತಾನು ತನ್ನ ಜೀವನದಲ್ಲಿ ಹಿಂದೆ ಅನುಭವಿಸಿದ ಘಟನೆಗಳು, ಅನುಭವಗಳ ಆಧಾರದ ಮೇಲೆ ಬೆಳೆಸಿಕೊಳ್ಳುವಂತದ್ದು ಹಾಗು ಇದು ಗಂಡಸರು ಹಾಗು ಹೆಂಗಸರು ಇಬ್ಬರಿಗೂ ಅನ್ವಯಿಸುತ್ತದೆ ಎಂಬುದು. ಇದಕ್ಕೂ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ.

ನೀವು ಈ ಎರೆಡು ರೀತಿಯ ವ್ಯಕ್ತಿತ್ವವನ್ನು ಪೂರ್ತಿ ಹೊಂದಿರದೆ ಇದ್ದರೆ ಅಥವಾ ಎರೆಡು ರೀತಿಯ ವ್ಯಕ್ತಿತ್ವದ ಕೆಲವು ಅಂಶಗಳನ್ನ ಹೊಂದಿದ್ದರೆ, ನಿಮಗೆ ಅಭಿನಂದನೆಗಳು! ನೀವು ನಿಮ್ಮ ಲೈಂಗಿಕ ಜೀವನದಲ್ಲಿ ವಿಶ್ವಾಸ ಹೊಂದಿದ್ದೀರ ಹಾಗು ನಿಮ್ಮಲ್ಲಿ ಯಾವುದೇ ಅಭದ್ರತೆ ಇಲ್ಲವೆಂದು ಅದು ತೋರಿಸುತ್ತದೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon