Link copied!
Sign in / Sign up
2
Shares

ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವವಾಗಲು ಕಾರಣ!

ನೀವು ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವಿರಿ, ನಿಮ್ಮ ಸಂಪೂರ್ಣ ಆನಂದವನ್ನು ಅನುಭವಿಸುತ್ತಿರುವಿರಿ, ಲೈಂಗಿಕ ಕ್ರಿಯೆ ಮುಗಿದ ನಂತರ ಕೆಳಗೆ ನೋಡಿದರೆ, ರಕ್ತ!  ಇದು ನಿಮ್ಮ ಮುಟ್ಟಿನ ಸಮಯವಲ್ಲ, ಅಥವಾ ನಿಮ್ಮ ಋತುಚಕ್ರದ ಹತ್ತಿರದ ದಿನವೂ ಅಲ್ಲ. ನಿಮಗೆ ಇಂತಹ ಸಮಯದಲ್ಲಿ ಆಶ್ಚರ್ಯ, ಗಾಬರಿ ಮತ್ತು ಭಯವಾಗುವುದು ಸಹಜ. ಚಿಂತಿಸಬೇಡಿ, ಇದಕ್ಕೆ ಕಾರಣ ತಿಳಿಯಲು ಮುಂದೆ ಓದಿ.

ಸಂಭೋಗದ ನಂತರ ಯೋನಿಯಲ್ಲಿ ರಕ್ತಸ್ರಾವ ನಿಮ್ಮನ್ನು ಗಾಬರಿಯಾಗುವಂತೆ ಮಾಡಬಹುದು, ಮುಟ್ಟಿನ ಆಸುಪಾಸು ದಿನಗಳನ್ನು ಹೊಂದಿರುವ ೯% ಮಹಿಳೆಯರಲ್ಲಿ ಇದು ಸಾಮಾನ್ಯ. ಆದರೆ ಇದು ಕೆಲವೊಮ್ಮೆ ಸೋಂಕಿನಿಂದ ಕೂಡ ಆಗಬಹುದು ಮತ್ತು ಕೆಲವು ಅಪರೂಪದ ಪ್ರಕರಣಗಳಲ್ಲಿ ಇದು ಗರ್ಭಕಂಠದ ಕ್ಯಾನ್ಸರ್ ನ ಚಿಹ್ನೆಯಾಗಿರಬಹುದು.

ಇದು ಏಕೆ ಆಗುತ್ತದೆ?

ಲೈಂಗಿಕತೆಯ ನಂತರ ಯೋನಿ ರಕ್ತಸ್ರಾವಕ್ಕೆ ಸಾಮಾನ್ಯ ಕಾರಣಗಳು, ಇವೆರಡು ಗರ್ಭಕಂಠದಲ್ಲಿ ಆರಂಭಗೊಳ್ಳುವುದು, ಅದು ಯೋನಿಯನ್ನು ತೆರಯುವ ಗರ್ಭಾಶಯದ ಕೊನೆಯಲ್ಲಿರುವ ಕಿರಿದಾದ, ಟ್ಯೂಬ್-ರೀತಿಯ ಅಂಗ.

ಆ ಕಾರಣಗಳಲ್ಲಿ ಒಂದು ಗರ್ಭಕಂಠದ ಉರಿಯೂತ, ಅಥವಾ ಸರ್ವಿಕೈಟಿಸ್ ಆಗಿದೆ. ಇದು ನಡೆಯುತ್ತಿರುವ ಮತ್ತು ಸಂಪೂರ್ಣವಾಗಿ ನಿರುಪದ್ರವವಾಗಬಹುದು, ಅಥವಾ ಕ್ಲಮೈಡಿಯ ಅಥವಾ ಗೊನೊರಿಯಾದಂತಹ ನೀವು ಚಿಕಿತ್ಸೆ ಪಡೆಯಬೇಕಾದ ಲೈಂಗಿಕವಾಗಿ ಹರಡುವ ಸೋಂಕಿನಿಂದಾಗಿ ಇದು ಸಂಭವಿಸಬಹುದು. ಎರಡೂ ರೀತಿಯ ಗರ್ಭಕಂಠದ ಉರಿಯೂತವು ಲೈಂಗಿಕತೆಯ ನಂತರ ರಕ್ತಸ್ರಾವಕ್ಕೆ ಕಾರಣವಾಗಬಹುದು.

ಲೈಂಗಿಕತೆಯ ನಂತರ ರಕ್ತಸ್ರಾವಕ್ಕೆ ಎರಡನೇ ಸಾಮಾನ್ಯ ಕಾರಣವೆಂದರೆ ಗರ್ಭಕಂಠದ ಸಂಯುಕ್ತಗಳು(cervical polyps). ಅವು ಸಾಮಾನ್ಯವಾಗಿ ಚಿಕ್ಕದಾಗಿರುವ ಬೆಳವಣಿಗೆಗಳಾಗಿದ್ದು 1 ರಿಂದ 2 ಸೆಂಟಿಮೀಟರ್ಗಳಷ್ಟು ಉದ್ದ ಬೆಳೆಯುತ್ತವೆ, ಇದು ಯೋನಿಯೊಂದಿಗೆ ಸಂಪರ್ಕಗೊಳ್ಳುವ ಗರ್ಭಕಂಠದ ಮೇಲೆ ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯರಲ್ಲಿ ಪರೀಕ್ಷೆ ಮಾಡಿಸಿದರೆ ಅವರು ಅದನ್ನು ಅವರು ತೆಗೆದುಹಾಕುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon