Link copied!
Sign in / Sign up
9
Shares

ಈ 8 ವಿಷಯಗಳು ಹೆರಿಗೆ ಸಮಯದಲ್ಲಿ ಆಗುತ್ತದೆ ಎಂದು ನಿಮಗೆ ಯಾರೂ ಹೇಳುವುದಿಲ್ಲ!

ನೀವೀಗ ನಲವತ್ತು ವಾರಗಳ ಕಾಲದ ಗರ್ಭಧಾರಣೆ ಮುಗಿಸಿದ್ದೀರಾ. ಈಗೇನು? ನೀವು ಪ್ರೆಗ್ನನ್ಸಿ, ಹೆರಿಗೆ ಬಗ್ಗೆ ಬಹಳಷ್ಟು ಓದಿರುತ್ತೀರಾ, ಹೆರಿಗೆ ಸಮಯದಲ್ಲಿ ಬೇಕಾಗಬಹುದಾದ ಎಲ್ಲದರ ವ್ಯವಸ್ಥೆಯನ್ನ ಮಾಡಿಕೊಂಡಿರುತ್ತೀರ. ಇವೆಲ್ಲವೂ ಇದ್ದರೂ ನಿಮಗೆ ಮೊದಲ ಬಾರಿಗೆ ಕಾಂಟ್ರಕ್ಷನ್ ಕಾಣಿಸಿಕೊಂಡೊಡನೆ, ಬಹಳಷ್ಟು ಅಚ್ಚರಿಗಳು ನಿಮಗೆ ಎದುರಾಗುತ್ತವೆ.

ಏಕೆಂದರೆ ನಿಮಗೆ ಯಾವ ಕ್ಲಾಸ್ ಅಲ್ಲೂ ಕೆಲವೊಂದು ವಿಷಯಗಳನ್ನ ಹೇಳಿರುವುದಿಲ್ಲ. ಆದರೆ ನೀವು ಇಂತಹ ಪರಿಸ್ಥಿತಿಯನ್ನು ಎದುರಿಸಬಾರದು ಎಂದು ಆ ವಿಷಯಗಳು ಯಾವುದು ಎಂಬುದನ್ನು ಅನುಭವಿಸಿರುವ ಮಹಿಳೆಯರಿಂದಲೇ ತಿಳಿದುಕೊಂಡು ಪಟ್ಟಿ ಮಾಡಿದ್ದೇವೆ ಓದಿ.

 

೧. ನೀವು ಇಂತದ್ದೆ ರೀತಿಯಲ್ಲಿ ಹೆರಿಗೆ ಆಗಲಿ ಎಂದು ಯೋಚಿಸಿರುತ್ತೀರಿ. ಆದರೆ ಹೆರಿಗೆಯು ಸಂಪೂರ್ಣವಾಗಿ ನಿಮ್ಮ ಮಗುವಿನ ಮೇಲೆ ಆಧಾರಿತ ಆಗಿರುತ್ತದೆ. ಮಗುವಿನ ಭಂಗಿ, ಸ್ಥಿತಿ, ಹೆರಿಗೆ ನೋವು ಮತ್ತು ಇತರೆ ಆರೋಗ್ಯದ ಸಂಗತಿಗಳ ಮೇಲೆ ಅವಲಂಬಿಸಿರುತ್ತದೆ. ನೀವು ನಾರ್ಮಲ್ ಡೆಲಿವರಿನೇ ಆಗಬೇಕು ಅಂದುಕೊಂಡಿದ್ದರೆ, ಅಲ್ಲಿ ಸಿಸೇರಿಯನ್ ಆಗಬಹುದು ಅಥವಾ ಇದರ ಉಲ್ಟಾ ಆಗಬಹುದು.

 

೨. ವಾಂತಿ ಮಾಡುವುದೆಲ್ಲಾ ಕೇವಲ ಪ್ರೆಗ್ನನ್ಸಿಯ ಸ್ವಲ್ಪ ಸಮಯಕ್ಕೆ ಸೀಮಿತ ಎಂದುಕೊಂಡರೆ ತಪ್ಪು. ನೀವು ಹೆರಿಗೆ ನೋವಿನಲ್ಲಿ ಇದ್ದಾಗಲೂ ವಾಂತಿ ಮಾಡಬಹುದು. ನಿಮಗೆ ವಾಕರಿಕೆಯು ನೋವು, ಅನಸ್ತೇಶಿಯಾ ಅಥವಾ ತಿಂದಿರುವ ಆಹಾರ ಜೀರ್ಣವಾಗಿರದ ಕಾರಣ ಹೆರಿಗೆ ನೋವಿನ ಸಮಯದಲ್ಲಿ ವಾಂತಿ ಉಂಟಾಗಬಹುದು.

 

೩. ನೀವು ಹಲ್ಲು ಕಡಿಯಬಹುದು. ಇದು ಚಳಿಯಿದ್ದಾಗ ಹಲ್ಲು ಕಡಿಯುವಂತೆಯೇ ಆದರೆ ಚಳಿ ಇಂದ ಅಲ್ಲ. ಇದು ನಿಮ್ಮ ದೇಹಕ್ಕೆ ಸರಿ ಹೊಂದದ ನಿಮ್ಮ ಮಗುವಿನ ದೇಹದ ರಕ್ತವು ನಿಮ್ಮೊಳಗೆ ಹರಿದಾಗ ಉಂಟಾಗುವುದು.

೪. ನೀವು ಗ್ಯಾಸ್ ಬಿಡುಗಡೆ ಮಾಡಬಹುದು. ಇದಕ್ಕೆ ಕಾರಣ ಜನ್ಮ ನಾಳದ ಮೇಲೆ ಬೀಳುವ ಒತ್ತಡ. ಕೆಲವೊಮ್ಮೆ ನಿಮ್ಮ ನಿಯಂತ್ರಣ ತಪ್ಪಿ ಮಲವಿಸರ್ಜನೆ ಮಾಡುವ ಸಾಧ್ಯತೆಯೂ ಇದೆ. ಆದರೆ ವೈದ್ಯರು, ನರ್ಸ್ಗಳು ಇವೆಲ್ಲವನ್ನೂ ಬಹಳ ಬಾರಿ ನೋಡಿರುತ್ತಾರೆ, ಹೀಗಾಗಿ ನೀವು ಮುಜುಗರ ಪಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

 

೫. ನಿಮ್ಮ ಬಟ್ಟೆಯನ್ನು ನೀವು ಹರಿದುಕೊಳ್ಳಬಹುದು. ಹೌದು ನಿಮ್ಮ ದೇಹದಲ್ಲಿ ಹಾರ್ಮೋನುಗಳ ಉತ್ಪಾದನೆ ಮಿತಿ ಮೀರಿ ಹೆಚ್ಚಾಗಿರುತ್ತದೆ. ಇದರಿಂದ ನೀವು ಕೂಗಾಡಬಹುದು, ಬೈಯ್ಯಬಹುದು ಅಥವಾ ಇದ್ದಕ್ಕಿದ್ದಂತೆ ನಿಮಗೆ  ಸೆಕೆ, ಇರಿಸುಮುರಿಸು ಉಂಟಾಗಿ ನಿಮ್ಮ ಬಟ್ಟೆಯನ್ನೇ ಹರಿದು ಕಿತ್ತು ಬಿಸಾಕಬಹುದು.

 

೬. ನಿಮ್ಮ ಮಗುವನ್ನು ನೋಡಿದೊಡನೆ ನಿಮಗೆ ಖುಷಿ ಆಗಲೇ ಬೇಕೆಂದೇನಿಲ್ಲ. ನೀವು ಈಗಷ್ಟೇ ಅತ್ಯಂತ ನೋವು ತುಂಬಿದ ಅನುಭವವನ್ನು ಮುಗಿಸಿ, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೀರಿ. ಹೀಗಾಗಿ ನಿಮಗೆ ಸ್ವಲ್ಪ ಸಮಯ ಬೇಕು. ಮಗು ಕಂಡೊಡನೆ ನಿಮಗೆ ಖುಷಿ ಉಕ್ಕಿ ಹರಿಯಲಿಲ್ಲ ಎಂದರೆ ತೊಂದರೆ ಇಲ್ಲ. ಖುಷಿಯು ಮೆಲ್ಲನೆ ನಿಮ್ಮನ್ನು ಆವರಿಸುತ್ತದೆ.

೭. ನಿಮ್ಮ ಪತಿಯು ಗಾಬರಿ ಆಗಬಹುದು.ಯಾರಿಗೇ ಆಗಲಿ ತಮ್ಮ ಪ್ರೀತಿ ಪಾತ್ರರು ಅಮಾನುಷ ನೋವನ್ನು ಎದುರಿಸುತ್ತಾ ಕಿರುಚುವುದನ್ನು ನೋಡಲು ಸಾಧ್ಯವಾಗುವುದಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ಆಪರೇಷನ್ ರೂಮಿನಲ್ಲಿ ಹೆರಿಗೆಯನ್ನು ಮೊದಲೇ ನೋಡಿರುವ ಕುಟುಂಬ ಸದಸ್ಯರಾಗಲಿ ಅಥವಾ ಕುಟುಂಬದಲ್ಲಿನ ಯಾರಾದರೂ ವೈದ್ಯರಿದ್ದಾರೆ ಒಳ್ಳೆಯದು.

 

೮. ಮಗು ಹೊರಬಂದೊಡನೆ ಮುಗಿಯಿತು ಎಂದಲ್ಲ. ನೀವು ನಿಮ್ಮ ಮಗುವನ್ನು ಹೊರಗಡೆ ತಂದ ಮೇಲೆಯೂ, ನೀವು ನಿಮ್ಮ ಗರ್ಭಕೋಶವನ್ನು ಹೊರಹಾಕಬೇಕು. ಅಲ್ಲದೆ ನಿಮಗೆ ಹೊಲಿಗೆಗಳು ಕೂಡ ಬೇಕಾಗಿರಬಹುದು. ಅಲ್ಲದೆ ಹೆರಿಗೆಯ ನಂತರದ ಒಂದು ಗಂಟೆಯವರೆಗೆ ನೀವು ರಕ್ತದ ಗಂಟುಗಳನ್ನ ಹೊರಹಾಕುತ್ತೀರ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon