Link copied!
Sign in / Sign up
0
Shares

ಲೇಬರ್ ಮತ್ತು ಡೆಲಿವೆರಿ ನಡುವಿನ ವ್ಯತ್ಯಾಸ : ಪ್ರತಿ ಹೆಂಗಸು ತಿಳಿದಿರಲೇ ಬೇಕಾಗಿರುವ ಮಾಹಿತಿ

ಒಂದು ವೇಳೆ ನೀವು ಗರ್ಭಿಣಿ ಆಗಿದ್ದು ಮಗುವನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ನಿಮ್ಮ ಆಸ್ಪತ್ರೆಯ ಹೆರಿಗೆ ವಾರ್ಡ್ ಒಳಗೆ ಒಮ್ಮೆ ಭೇಟಿ ಕೊಟ್ಟು ಆ ಮಹತ್ವದ ದಿನದಂದು ಏನೆಲ್ಲಾ ನಡೆಯುತ್ತದೆ ಎಂದು ವಿಚಾರಿಸಿ, ನೋಡಿಕೊಂಡು ಬರುವುದು ಒಳ್ಳೆಯದು. ಆ ವಾರ್ಡ್ ಕೊಠಡಿಯ ಮೇಲೆ “ಲೇಬರ್ ಅಂಡ್ ಡೆಲಿವರಿ ವಾರ್ಡ್” ಎಂದು ಬರೆದಿರುತ್ತಾರೆ. ನೀವು ಅರ್ಥ ಮಾಡಿಕೊಳ್ಳಬೇಕು ಲೇಬರ್ ಮತ್ತು ಡೆಲಿವರಿ ಒಂದೇ ಅಲ್ಲ ಎಂದು. ಬಹಳ ಜನರು ಲೇಬರ್ (ನೋವು) ಮತ್ತು ಡೆಲಿವರಿ ಅನ್ನು ಒಂದೇ ಎಂದುಕೊಂಡು ಬಿಡುತ್ತಾರೆ.

ಮಗುವು ಹೊರಬರಲು ನಿಮ್ಮ ದೇಹವು ಮಾಡಿಕೊಳ್ಳುವ ಸುದೀರ್ಘ ಸಿದ್ದತೆಗೆ ಲೇಬರ್ ಎನ್ನುತ್ತಾರೆ. ಈ ಸಮಯದಲ್ಲಿ ನಿಮ್ಮ ಗರ್ಭಕೋಶವು ಕಾಂಟ್ರಕ್ಷನ್ ಹೊಂದುತ್ತದೆ ಮತ್ತು ನಿಮ್ಮ ಗರ್ಭಕಂಠವು ತೆಳುವಾಗಲು, ಹಿಗ್ಗಿಕೊಳ್ಳುವಂತೆ ಮಾಡಲು ನಿಮ್ಮ ಮೆದುಳು ನಿಮ್ಮ ದೇಹದೊಳಗೆ ಹಾರ್ಮೋನ್ಸ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಮುಗಿದು ನಿಮ್ಮ ದೇಹವು ಕೊನೆಗೂ ಮಗು ಹೊರತಳ್ಳಲು ಸಿದ್ಧಗೊಳ್ಳಲು ದಿನಗಳ ಕಾಲ ಆಗಬಹುದು, ವಾರಗಳ ಕಾಲ ಆಗಬಹುದು.

ಡೆಲಿವೆರ್ ಎನ್ನುವುದು ಹೆರಿಗೆ ಪ್ರಕ್ರಿಯೆಯ ಎರಡನೇ ಹಂತ ಆಗಿರುತ್ತದೆ. ಇದು ಜನ್ಮನಾಳದ ಮೂಲಕ ಮಗುವನ್ನು ನಿಮ್ಮ ಗರ್ಭಕೋಶದಿಂದ ಹೊರತಳ್ಳುವುದನ್ನು ಒಳಗೊಂಡಿರುತ್ತದೆ (ನಿಮಗೆ ನಾರ್ಮಲ್ ಡೆಲಿವರಿ ಆದರೆ).

ಇವೆಲ್ಲವನ್ನೂ ನಿಮ್ಮ ಗಮನದಲ್ಲಿ ಇಟ್ಟುಕೊಂಡು, ಲೇಬರ್ ಮತ್ತು ಡೆಲಿವರಿ ನಡುವಿನ ವ್ಯತ್ಯಾಸಗಳು ಏನು ಎಂಬ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತೇವೆ ಓದಿ :

 

೧. ಲೇಬರ್ ಮತ್ತು ಡೆಲಿವರಿ - ಇವೆರೆಡೂ ಹೆರಿಗೆ ಪ್ರಕ್ರಿಯೆಯ ಎರಡು ಬೇರೆ ಬೇರೆ ಹಂತಗಳು

ಲೇಬರ್ (ನೋವು) ಎನ್ನುವುದು ಹೆರಿಗೆ ಪ್ರಕ್ರಿಯೆಯ ಮೊದಲ ಹಂತ. ಇದರಲ್ಲಿ ಮತ್ತ್ತೆ 3 ಹಂತಗಳು ಇರುತ್ತವೆ - ಮುಂಚಿನ ಲೇಬರ್ (early labor), ಸಕ್ರಿಯ ಲೇಬರ್(active labor) ಮತ್ತು ಪರಿವರ್ತನಾ ಲೇಬರ್ (transitional labor). ಮುಂಚಿನ ಲೇಬರ್ ಅಲ್ಲಿ ನಿಮ್ಮ ಮೆದುಳು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ದೇಹದಲ್ಲಿ ಬಿಡುಗಡೆ ಮಾಡಿ, ನಿಮ್ಮ ಗರ್ಭಕೋಶವು ಕಾಂಟ್ರಕ್ಷನ್ ಹೊಂದುವಂತೆ ಮತ್ತು ನಿಮ್ಮ ಗರ್ಭಕಂಠವು ಹಿಗ್ಗಿಕೊಳ್ಳುವಂತೆ ಆಗುತ್ತದೆ. ಸಕ್ರಿಯ ಲೇಬರ್ ನಿಜವಾದ ಲೇಬರ್. ಈ ಸಮಯದಲ್ಲಿ ನಿಮ್ಮ ಗರ್ಭಕಂಠವು ಸುಮಾರು 7 ಸೆಂಟಿಮೀಟರ್ ಅಷ್ಟು ಹಿಗ್ಗುತ್ತದೆ ಮತ್ತು ಸಾಮಾನ್ಯವಾಗಿ ನಿಮ್ಮ ಸಂಕೋಚನಗಳು ಹೆಚ್ಚು ನೋವು ಉಂಟು ಮಾಡಲು ಶುರು ಮಾಡುತ್ತವೆ. ಪರಿವರ್ತನಾ ಲೇಬರ್ ಎಂದರೆ ಇದು ಡೆಲಿವರಿ ಮುಂಚಿನ ಕೊನೆಯ ತಳ್ಳುವಿಕೆ ಆಗಿರುತ್ತದೆ. ಇದು ಸಾಮಾನ್ಯವಾಗಿ ಗರ್ಭಿಣಿಗೆ ಅತ್ಯಂತ ಹೆಚ್ಚು ನೋವಿನಿಂದ ಮತ್ತು ಭಾವನೆಗಳಿಂದ ಕೂಡಿದ ಹಂತವಾಗಿರುತ್ತದೆ. ಈ ಸಮಯದಲ್ಲಿ ಕಾಂಟ್ರಕ್ಷನ್ಸ್ ಹೆಚ್ಚಾಗಿ, ದೀರ್ಘವಾಗಿ, ತೀವ್ರವಾಗಿ ಬದಲಾಗುತ್ತವೆ. ಈ ಸಮಯದಲ್ಲಿ ನಿಮ್ಮ ಗರ್ಭಕಂಠವು 10 ಸೆಂಟಿಮೀಟರ್ ವರೆಗೂ ಹಿಗ್ಗುತ್ತದೆ.

ಡೆಲಿವರಿ ಎನ್ನುವುದು ಹೆರಿಗೆ ಪ್ರಕ್ರಿಯೆಯ ಮೊದಲ ಹಂತ. ಇದು ನಿಜವಾಗಿಯೂ ನೀವು ನಿಮ್ಮ ಮಗುವನ್ನು ನಿಮ್ಮ ಯೋನಿಯಿಂದ ಹೊರತಳ್ಳುವ ಹಂತ (ನಾರ್ಮಲ್ ಡೆಲಿವರಿ ಅಲ್ಲಿ).

 

೨. ಸಾಮಾನ್ಯವಾಗಿ ಡೆಲಿವರಿಗಿಂತ ಲೇಬರ್ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ

ಹೆರಿಗೆ ಪ್ರಕ್ರಿಯೆಯಲ್ಲಿ ಲೇಬರ್ ಹಂತವೇ ಅತ್ಯಂತ ಸುದೀರ್ಘವಾದ ಹಂತ. ಕೆಲವು ಹೆಂಗಸರಲ್ಲಿ, ಮುಂಚಿನ ಲೇಬರ್ (early labor) ತಮಗೆ ಲೇಬರ್ ಉಂಟಾಗುತ್ತಿದೆ ಎಂದು ಅವರಿಗೆ ತಿಳಿಯುವ ಮುಂಚಿನ ಕೆಲವು ವಾರಗಳ ಹಿಂದಿನಿಂದಲೇ ಶುರುವಾಗಿರುತ್ತದೆ. ಸಕ್ರಿಯ ಲೇಬರ್ (active labor) ಕೆಲವು ಗಂಟೆಗಳಿಂದ ಹಿಡಿದು ಕೆಲವು ದಿನಗಳವರೆಗೂ ಇರಬಹುದು. ಆದರೆ ಸಾಮಾನ್ಯವಾಗಿ ಇದು ಮೊದಲನೇ ಬಾರಿ ತಾಯಿ ಆಗುತ್ತಿರುವವರಿಗೆ ಸರಾಸರಿ 8 ಗಂಟೆಗಳ ಕಾಲ ಇದ್ದರೆ ಉಳಿದವರಲ್ಲಿ ಅದಕ್ಕಿಂತ ಕಡಿಮೆ ಸಮಯ ಇರುತ್ತದೆ.

ಇದಕ್ಕೆ ವಿರುದ್ಧವೆನ್ನುವಂತೆ, ಡೆಲಿವರಿಯು ತೀವ್ರವಾಗಿರುತ್ತದೆ ಮತ್ತು ಸ್ವಲ್ಪ ಸಮಯದಲ್ಲೇ ಮುಗಿದು ಹೋಗಿಬಿಡುತ್ತದೆ. ಇದು ಸಾಮಾನ್ಯವಾಗಿ ಕೆಲವೇ ನಿಮಿಷಗಳಿಂದ ಹಿಡಿದು ಕೆಲವು ಗಂಟೆಗಳ ಕಾಲ ಆಗುವಂತಹ ಪ್ರಕ್ರಿಯೆ. ಇಲ್ಲಿ ತಿಳಿಸಿರುವ ಎಲ್ಲಾ ಪ್ರಕ್ರಿಯೆಗಳು ತೆಗೆದುಕೊಳ್ಳುವ ಸಮಯವು ಒಬ್ಬರಿಂದ ಒಬ್ಬರಿಗೆ ಬೇರೆ ಆಗಿರುತ್ತದೆ. ಆದರೆ ಒಂದಂತೂ ನಿಖರ, ಲೇಬರ್ ಹಂತವು ಹೆರಿಗೆ ಪ್ರಕ್ರಿಯೆಯ ಸುದೀರ್ಘ ಹಂತ, ಡೆಲಿವೆರಿಯು ತ್ವರಿತವಾಗಿ ನಡೆದು ಹೋಗುವಂತಹ ಪ್ರಕ್ರಿಯೆ.

 

೩. ಕೆಲವು ಹೆಂಗಸರು ಲೇಬರ್ ಅನುಭವಿಸಿದರೂ ಡೆಲಿವರಿಗೆ ಒಳಗಾಗುವುದಿಲ್ಲ

ಕೆಲವೊಂದು ಗರ್ಭಿಣಿ ಹೆಂಗಸರು ಲೇಬರ್ ಅನ್ನು ಅನುಭವಿಸಿದರೂ, ಡೆಲಿವೆರಿಗೆ ಒಳಗಾಗುವುದೇ ಇಲ್ಲ. ಇದನ್ನು ಹುಸಿ ಲೇಬರ್ (false labor) ಎನ್ನುತ್ತಾರೆ. ಇದು ನಿಮಗೆ ನಿಜವಾದ ಲೇಬರ್ ಎಂದು ಅನಿಸಿದರೂ, ಇದು ವಾರಗಳ ಕಾಲ ಉಂಟಾಗುತ್ತಿದ್ದರೂ, ಇದಕ್ಕೆ ನಿಮ್ಮ ಮಗು ಹೊರಬರವಷ್ಟು ನಿಮ್ಮ ಗರ್ಭಕಂಠವನ್ನು ಬದಲಿಸಲು ಆಗುವುದಿಲ್ಲ.

ಇನ್ನು ಕೆಲವು ಹೆಂಗಸರಲ್ಲಿ ಲೇಬರ್ ಉಂಟಾದರೂ, ಅದು ಮುಂದುವರೆಯುವುದಿಲ್ಲ ಅಥವಾ ಮುಂದಿನ ಹಂತಗಳಿಗೆ ಬೇಗನೆ ಹೋಗುವುದಿಲ್ಲ ಅಥವಾ ಕೆಲವೊಮ್ಮೆ  ಪ್ರಕ್ರಿಯೆಯೇ ನಿಂತು ಬಿಡಬಹುದು.

 

೪. ಕೆಲವು ಹೆಂಗಸರು ಲೇಬರ್ ಅನ್ನು ಅನುಭವಿಸುವುದೇ ಇಲ್ಲ!

ನಾವೆಲ್ಲರೂ ಸಾಮಾನ್ಯವಾಗಿ ನಂಬುವುದು, ಮಗುವು ಹೊರಬರಬೇಕು ಎನ್ನುವಾಗ, ದೇಹಕ್ಕೆ ತಾನು ಏನು ಮಾಡಬೇಕು ಎಂಬುದು ತಾನೇ ತಿಳಿದುಕೊಂಡು ಮಾಡುತ್ತದೆ ಎಂಬುದು. ಆದರೆ ಇದು ಯಾವಾಗಲೂ ನಿಜವಾಗಬೇಕು ಎಂದೇನಲ್ಲ. ಅಂತಹ ಸಮಯದಲ್ಲಿ ಬೇರೆ ವಿಧಿಯಿಲ್ಲದೇ ಕೃತಕವಾಗಿ ಲೇಬರ್ ಅನ್ನು ದೇಹದಲ್ಲಿ ಪ್ರೇರೇಪಿಸಲಾಗುತ್ತದೆ. ಇತ್ತೀಚಿಗೆ ಇದು ಹೆಚ್ಚು ಸಾಮಾನ್ಯವವಾಗಿ ಕಾಣಿಸಿಕೊಳ್ಳುತ್ತಿದೆ.




Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon