Link copied!
Sign in / Sign up
4
Shares

ಕುಂದನ್ ರಂಗೋಲಿ ಮಾಡುವುದು : ನಮ್ಮ ತಜ್ಞರಿಂದ ಸ್ಟೆಪ್ ಬೈ ಸ್ಟೆಪ್ ಸೂಪರ್ ಸರಳ ಮಾರ್ಗದರ್ಶನ

 
ರಂಗೋಲಿ ಭಾರತದ ಆಧ್ಯಾತ್ಮಿಕ ಕಲೆಯ ಮೂಲವಾಗಿದೆ ,ಹಾಗೂ ಸಾಂಪ್ರದಾಯಿಕ ಭಾರತೀಯ ಕಲೆಯಾಗಿದೆ . ರಂಗೋಲಿಯ ಉದ್ದೇಶವು ಅಲಂಕಾರವಾಗಿದೆ , ಮತ್ತು ಅದೃಷ್ಟವನ್ನು ತರುವುದೆಂದು ಭಾವಿಸಲಾಗಿದೆ . ರಂಗೋಲಿ ಸಂಸ್ಕೃತ ಪದದಿಂದ ಬಂದಿದೆ . ರಂಗೋಲಿ ಎಂಬ ಪದವು " ರಂಗ್ " ಎಂಬ  ಎರಡು ಪದಗಳಿಂದ ಹುಟ್ಟಿಕೊಂಡಿರುತ್ತದೆ . ಅಂದರೆ ಬಣ್ಣಗಳ ಆಚರಣೆ ಮತ್ತು ಹೋಳಿ ಎಂದರ್ಥ . ಆದ್ದರಿಂದ ರಂಗೋಲಿ ಬಣ್ಣಗಳ ಕಲಾತ್ಮಕ ಆಚರಣೆಯಾಗಿದೆ . ರಂಗೋಲಿ ಕಲೆ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳನ್ನು ಹೊಂದಿರುವ ಅಲಂಕರಣ ಅಥವಾ ಅಲಂಕಾರವಾಗಿದೆ . ರಂಗೋಲಿ ಭಾರತೀಯ ಉಪಖಂಡದಲ್ಲಿ ಹುಟ್ಟಿದ ಒಂದು ಕಲಾ ಪ್ರಕಾರವಾಗಿದೆ .
 
ಕುಂದನ್ ರಂಗೋಲಿ ಪೂಜಾ ಕರಕುಶಲ ಭಾರತೀಯ ಸಾಂಪ್ರದಾಯಿಕ ಕುಂದನ್ ಐಟಂಗಳ ರೂಪದಲ್ಲಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ಥಾಪಿತವಾಗಿದೆ , ಇದು ಹಬ್ಬದ ಸೆಳೆವು ಸೃಷ್ಟಿಸುತ್ತದೆ . ಈ ದಿನಗಳಲ್ಲಿ  ಯಾವುದೇ ಹಬ್ಬ ಅಥವಾ ಉತ್ಸವಗಳು ಬಂದಾಗ ರೆಡಿಮೇಡ್ ಕುಂದನ್ ರಂಗೋಲಿಗಳು ಮುಖ್ಯವಾದವು .
 
ವಾಸ್ತವವಾಗಿ , ನಾವು ಎಲ್ಲಾ ಪ್ರಕಾಶಮಾನವಾದ ಬಣ್ಣಗಳೊಂದಿಗೆ ವಿಶಾಲವಾದ ರಂಗೋಲಿ ವಿನ್ಯಾಸಗಳನ್ನು ಹಾಕಲು ಸಮಯವಿಲ್ಲ , ಅಥವಾ ಎಲ್ಲಾ ನೆಲದ ಅಲಂಕಾರಗಳಿಗಾಗಿ ನಮ್ಮ ಅರ್ಪಾಟ್ಮಂಟ್ ಗಳಲ್ಲಿ ನಮಗೆ  ಸ್ಥಳವಾಕಶವಿರುವುದಿಲ್ಲ . ರೆಡಿಮೇಡ್ ಕುಂದನ್
ರಂಗೋಲಿ  ಸಿಧ್ಧವಾದ ರಂಗೋಲಿಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ . ಏಕೆಂದರೆ  ನಿಜವಾದ ಹಬ್ಬದ ಚಿತ್ತವನ್ನು  ತೆರೆದಿರುವ ಎಲ್ಲಾ ಬ್ಲಿಂಗ್ ಮತ್ತು ಮಿನುಗು ಕಾರಣ . ಕುಂದನ್ ರಂಗೋಲಿ ಇದು ರೀ ಅರೇಂಜಬಲ್ , ಇದನ್ನು ಬೇಕಾದಗ ಉಪಯೋಗಿಸಿ ಮತ್ತೆ ತೆಗೆದಿಡಬಹುದು . ನಿಮಗೆ ಇಷ್ಟವಾದ ಡಿಜೈನ್ ಗಳಲ್ಲಿ ಅರೇಂಜ್ ಮಾಡಬಹುದು .
 
ಇದನ್ನು  ಓ . ಹೆಚ್ . ಪಿ  ಶೀಟ್ , ಹಳೆಯ ಸಿಡಿಗಳು , ಕಾಡ್ಬೋರ್ಡ್ , ಫೋಮ್ ಶೀಟ್ ಮುಂತಾದವುಗಳಲ್ಲಿ ಮಾಡಬಹುದು . 【 ಇವೆಲ್ಲಾ ನಿಮಗೆ ಸ್ಟೇಶನರಿ ಅಂಗಡಿಗಳಲ್ಲಿ ದೂರೆಯುತ್ತದೆ .】 
 
 

ಈಗ ಸರಳವಾಗಿ ಒ .ಹೆಚ್ ಪಿ  . ಶೀಟ್ ಬಳಸಿ ಕುಂದನ್ ರಂಗೋಲಿ ಹೇಗೆ ಮಾಡುವುದು ಎಂದು ನೋಡೋಣ 

 
● :- ಇದಕ್ಕೆ ಬೇಕಾಗಿರುವ ಮೆಟಿರಿಯಲ್ಸ್ :- 
 
ಒ. ಹೆಚ್. ಪಿ. ಶೀಟ್ , ಗೋಲ್ಡನ್ ಬೀಡ್ಸ್ ಬಾಲ್ ಚೈನ್ ,ಕುಂದನ್ಸ್ , ಮುತ್ತು ,ಫಾಭ್ರಿಕ್  ಗ್ಲೂ  ಮತ್ತು ಕತ್ತರಿ .
 
 
 
● :-  ಮಾಡುವ ವಿಧಾನ:- 
 
ಮೊದಲಿಗೆ ಬಿಳಿಯ ಹಾಳೆಯಲ್ಲಿ  ನಿಮಗೆ ಇಷ್ಟವಾದ ಡಿಸೈನ್ ಅಥವಾ ಶೇಪ್ ಬರೆದುಕೊಂಡು ನಂತರ ಆ ಹಾಳೆಯ ಮೇಲೆ ಒ. ಹೆಚ್. ಪಿ . ಶೀಟ್ ಇಟ್ಟುಕೊಂಡು ಮಾರ್ಕರ್ ಪೆನ್ ನಿಂದ  ಶೇಪ್ ಟ್ರೇಸ್ ಮಾಡಬೇಕು , ನಂತರ  ಆ ಶೇಪನ್ನು ಕತ್ತರಿಯಿಂದ ಕಟ್ ಮಾಡಿಕೊಳ್ಳಬೇಕು (ಇದನ್ನು ಕುಂದನ್ ವರ್ಕ್ ಆದ ಮೇಲೂ ಕಟ್ ಮಾಡಬಹುದು). 
 
ಈಗ ಒಂದು ಸರಳವಾದ ಕುಂದನ್ ಡಿಸೈನ್ ಹೇಗೆ ಮಾಡುವುದೆಂದು ನೋಡೋಣ . ಮೊದಲಿಗೆ ಹಾರ್ಟ್ ಶೇಪಿನ ಡಿಸೈನ್ ಕಟ್ ಮಾಡಿಕೊಳ್ಳಬೇಕು ಅದಕ್ಕೆ  ಆ ಶೇಪಿನ ಹಾಗೆ ಸುತ್ತಲೂ ಗೋಲ್ಡನ್ ಬೀಡ್ಸ್ ಬಾಲ್ ಚೈನ್ ಫಾಭ್ರಿಕ್ ಗ್ಲೂ ಬಳಸಿ ಅಂಟಿಸಬೇಕು .ನಂತರ ಎರಡನೆಯ ಲೈನ್ ನಿಮಗಿಷ್ಟವಾದ ಬಣ್ಣದ ಕುಂದನ್ ಸ್ಟೋನ್ಸ್  ಅಂಟಿಸಬೇಕು . ನಂತರ ಪರ್ಲ್ಸ್ ( ಮುತ್ತು) ಸುತ್ತಲೂ ಅಂಟಿಸಬೇಕು . ನಂತರ ಗೋಲ್ಡನ್ ಬೀಡ್ಸ್ ಬಾಲ್ ಚೈನ್ ಅಂಟಿಸಬೇಕು . ಹೀಗೆ ನಾಲ್ಕು , ಐದು ,ಅಥವಾ ಆರು ಪೀಸ್ಗಳನ್ನು ಮಾಡಿಕೊಂಡು ನಿಮಗೆ ಇಷ್ಟವಾದ ರೀತಿಯಲ್ಲಿ ಅರೇಂಜ್ ಮಾಡಿಕೊಳ್ಳಬಹುದು . ಇದರಲ್ಲಿ ಅನೇಕ ರೀತಿಯ ಡಿಸೈನ್ ಗಳನ್ನು ಮಾಡಬಹುದು.
 
 
ಸುತ್ತಲೂ ಕುಂದನ್ ರಂಗೋಲಿ ಜೋಡಿಸಿ ಮಧ್ಯದಲ್ಲಿ ದೀಪವನ್ನು ಇಡಬಹುದು . ಅಥವಾ ಮಧ್ಯದಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ನಂತರ ಹೂವನ್ನು ಅದರಲ್ಲಿ ಜೋಡಿಸಿ ಸುತ್ತಲೂ ಕುಂದನ್ ರಂಗೋಲಿಯನ್ನು ಜೋಡಿಸಬಹುದು .ಹೀಗೆ ಅರೇಂಜ್ ಮಾಡಿದ
ರಂಗೋಲಿ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ . ನಾವು ಇದನ್ನು ಗಿಫ್ಟಾಗಿ ಕೊಡಬಹುದು ಮತ್ತೆ ಚಿಕ್ಕ ಉಧ್ಯಮವಾಗಿ ಮಾಡಬಹುದು .
 
Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon