Link copied!
Sign in / Sign up
10
Shares

ಹಾನಿಗೊಳಗಾದ ಕೂದಲಿಗೆ ಪುರಾತನ ಮನೆ ಔಷದಗಳು

ಮಹಿಳೆಯರ ಆಸೆ ಅದು, ರೇಷ್ಮೆಯಂತಹ ಹೊಳಪಿನ ಕೂದಲನ್ನು ಹೊಂದಿರುವುದು, ಅದಕ್ಕಾಗಿ ಅವರು ಹಲವು ಪ್ರಯೋಗಗಳನ್ನು ಮಾಡುವರು. ಆದರೆ ರಾಸಾಯನಿಕ ಪದಾರ್ಥಗಳನ್ನು ಬಳಸುವುದರಿಂದ ನಿಮ್ಮ ಕೂದಲು ಮತ್ತಷ್ಟು ಹಾನಿಗೆ ಒಳಗಾಗಬಹುದು.

ಆರೋಗ್ಯಕರ ತೆಳ್ಳನೆ ಉದ್ದನೆಯ ಹಾನಿಯಿಲ್ಲದ ಹೊಳಪಿನ ಕೂದಲನ್ನು ಪಡೆಯಲು ಅಥವಾ ಹಾನಿಯಾಗಿರುವ ನಿಮ್ಮ ಕೂದಲನ್ನು ಸರಿಪಡಿಸಿಕೊಳ್ಳಲು ನಮ್ಮ ಪೂರ್ವಜರ ಕೆಲವು ಸಲಹೆಗಳು ಇಲ್ಲಿ ನಿಮಗೆ ಸಹಾಯ ಮಾಡಲಿವೆ.

ಇಲ್ಲಿ ಕೂದಲು ಹಾನಿಗೆ ಒಳಗಾಗಲು ಏನು ಕಾರಣ ಮತ್ತು ಅದನ್ನು ಸರಿಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಕೂದಲು ಹಾನಿಗೊಳಗಾಗಲು ಕಾರಣ

ನಮ್ಮ ಕೂದಲು ನಾವು ಮಾಡುವ ಕ್ರಿಯೆ ಅಥವಾ ಕ್ರಮಗಳಿಗೆ ನೇರವಾಗಿ ಪ್ರತಿಕ್ರಿಯೆ ನೀಡುತ್ತದೆ, ಅಂದರೆ ನಮ್ಮ ಜೀವನ ಶೈಲಿ ಮೇಲೆ ಇದು ನೇರವಾಗಿ ಅವಲಂಬಿತವಾಗಿದೆ. ನಮಗೆ ಆರೋಗ್ಯಕರ ಮತ್ತು ಹೊಳಪಿನ ಕೂದಲು ಬೇಕೆಂದರೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇದರ ಅರ್ಥ ನಾವು ಕೇಶ ವಿನ್ಯಾಸ ಮಾಡುವುದು ಕೂದಲ ಆರೋಗ್ಯಕ್ಕೆ ಹಾನಿ ಆಗಬಾರದು. ಇದರ ಜೊತೆಗೆ ನಾವು ಸೇವಿಸುವ ಆಹಾರ ಕೂಡ ಕೂದಲ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಕೂದಲ ಬೆಳವಣಿಗೆಗೆ ಸರಿಯಾದ ಪೌಷ್ಟಿಕಾಂಶಗಳ ಅಗತ್ಯವಿದೆ ಇದರ ಕೊರತೆ ಉಂಟಾದರೆ ಕೂದಲು ಹಾನಿಗೊಳಗಾಗುತ್ತದೆ.

ಕೂದಲು ಹಾನಿಗೊಳಗಾಗಲು ಇವು ಕಾರಣ

೧.ಕೂದಲನ್ನು ಅತಿ ಬಿಗಿಯಾಗಿ ಕಟ್ಟುವುದು

೨.ಗಡುಸಾದ ವಸ್ತು ಮೇಲೆ ಮಲಗುವುದು

೩.ಕೂದಲನ್ನು ನೆರವಾಗಿಸಲು ಅಥವಾ ಕೂದಲನ್ನು ಒಣಗಿಸಲು ಶಾಖ ನೀಡುವುದು

೪.ಪದೇ-ಪದೇ ಕೂದಲನ್ನು ತೊಳೆಯುವುದು ಅಥವಾ ಕೂದಲನ್ನು ತೊಳೆಯದೆ ಇರುವುದು

೫.ತಪ್ಪಾದ ಶ್ಯಾಂಪೂ ಬಳಕೆ

೬.ರಾಸಾಯನಿಕ ಕೂದಲು ರಕ್ಷಣೆ ಪದಾರ್ಥಗಳ ಅತಿಯಾದ ಬಳಕೆ

೭.ಕೂದಲಿಗೆ ಬಣ್ಣ ಹಾಕುವುದು

೮.ಎಣ್ಣೆ ಹಾಕದೆ ಇರುವುದು

೯.ಸರಿಯಾಗಿ ನೀರನ್ನು ಕುಡಿಯದೆ ಇರುವುದು

೧೦.ಒತ್ತಡ

೧೧.ವೈದ್ಯಕೀಯ ಸ್ಥಿತಿ ಅದರಲ್ಲೂ ವಿಶೇಷವಾಗಿ ಥೈರಾಯಿಡ್

ಕೂದಲು ಹಾನಿಗೆ ಒಳಗಾದ ಲಕ್ಷಣಗಳು ಮತ್ತು ಚಿಹ್ನೆಗಳು

ಆರೋಗ್ಯಕರ ಕೂದಲು, ಹೊಳಪನ್ನು, ಮಂದವಾಗಿ, ಮತ್ತು ಗಂಟು ಅಥವಾ ಸಿಕ್ಕನ್ನು ಸುಲಭವಾಗಿ ಬಿಡಿಸಬಹುದಾಗಿದೆ. ಹಾನಿಯಾದ ಕೂದಲ ಲಕ್ಷಣಗಳನ್ನು ಇಲ್ಲಿ ತಿಳಿಯಿರಿ.

೧.ಸಿಕ್ಕು ಸಿಕ್ಕಾದ ತೇವದಿಂದ ಕೂಡಿದ ಕೂದಲು

೨.ಗಡುಸಾದ ಕೂದಲು

೩.ಮಸುಕಿನ ಬಣ್ಣ ಪಡೆಯುವ ಕೂದಲು

೪.ಒರಟಾದ ರಚನೆ

೫.ಒಣಗುವಿಕೆ

೬.ಸುಲಭವಾಗಿ ಕೂದಲನ್ನು ಕೀಳಬಹುದು

೭.ಸೀಳಿದ ಕೂದಲು

೮.ಕೂದಲಿನ ತುದಿಯಲ್ಲಿ ಬಿರುಕು, ಅಥವಾ ಒಡೆದ ಕೂದಲು

೯.ತಲೆಬುರುಡೆಯಲ್ಲಿ ನವೆ ಅಥವಾ ತುರಿಕೆ

೧೦.ಕೂದಲು ಉದುರುವುದು

ಹಾನಿಗೊಳಗಾದ ಕೂದಲಿಗೆ ಮನೆ ಚಿಕಿತ್ಸೆ ಇಲ್ಲಿದೆ,

೧.ಕೂದಲ ಪೋಷಣೆ ಮತ್ತು ರಕ್ಷಣೆಗೆ ಮೊಟ್ಟೆ

ಕೂದಲ ಪೋಷಣೆಗೆ ಮೊಟ್ಟೆ ಅಮೂಲ್ಯವಾದದ್ದು ಎಂಬುದು ನಿಮಗೆ ತಿಳಿದಿದೆ.

ಪ್ರೊಟೀನ್ ಅನ್ನು ತನ್ನಲ್ಲಿ ಇರಿಸಿಕೊಂಡಿದೆ, ಇದು ಬಲಿಷ್ಠವಾದ ಮತ್ತು ಆರೋಗ್ಯಕರ ಕೂದಲಿಗೆ ಅವಶ್ಯಕ

ಕೂದಲ ಎಳೆಗಳನ್ನು ಪೋಷಿಸುತ್ತದೆ ಮತ್ತು ಅವುಗಳ ಆರೋಗ್ಯವನ್ನು ಕಾಪಾಡುತ್ತದೆ

ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ

ಪುನಃ ಅಥವಾ ಹೊಸ ಕೂದಲು ಬೆಳೆಯುವಂತೆ ಮಾಡುತ್ತದೆ ಅಥವಾ ಬೆಳೆಯಲು ಸಹಾಯ ಮಾಡುತ್ತದೆ

ತಲೆಬುರುಡೆಯಲ್ಲಿ ರಕ್ತಸಂಚಲನ ಸರಾಗವಾಗಿ ಆಗುವಂತೆ ಮಾಡುತ್ತದೆ

ತಲೆಹೊಟ್ಟನ್ನು ತೆಗೆಯುತ್ತದೆ.

ನಿಮಗೆ ಬೇಕಾಗಿರುವುದು

ಮೊಟ್ಟೆ

ಶ್ಯಾಂಪೂ

ಉಗುರು ಬೆಚ್ಚಗಿನ ನೀರು

ಮಾಡಬೇಕಿರುವುದು

ಒಂದು ಬಟ್ಟಲಿಗೆ ಮೊಟ್ಟೆಯ ದ್ರವವನ್ನು ಹಾಕಿ ಚೆನ್ನಾಗಿ ಕಲಸಿ. ಚೆನ್ನಾಗಿ ಕಲಸಿದ ನಂತರ ಇದನ್ನು ತಲೆಬುರುಡೆ ಸೇರಿದಂತೆ ಕೂದಲ ಎಳೆಗಳಿಗೆ ಸಂಪೂರ್ಣವಾಗಿ ಹಚ್ಚಿರಿ.

ನಂತರ ಒಂದು ಗಂಟೆಗಳ ತನಕ ಕಾಯಿರಿ.

ನಂತರ ಕೂದಲನ್ನು ಮತ್ತು ತಲೆಯನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೨.ಲೋಗಸರ

ಲೋಗಸರವನ್ನು ಹಲವು ತ್ವಚೆಯ ಸಮಸ್ಯೆಗೆ ಬಳಸುವುದು ನಿಮಗೆ ತಿಳಿದಿದೆ, ಆದರೆ ಇದು ಕೂದಲ ಆರೋಗ್ಯವನ್ನು ಕಾಪಾಡುವುದು ಸತ್ಯ.

ನಿಮಗೆ ಬೇಕಾಗಿರುವದು

ಲೋಗಸರದ ಲೋಳೆ

ಕೊಬ್ಬರಿ ಎಣ್ಣೆ

ಮೊಸರು

ಮಾಡಬೇಕಿರುವುದು

ಎರಡು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ, ೪ ಚಮಚ ಲೋಗಸರದ ಲೋಳೆಯನ್ನು ಇದಕ್ಕೆ ಹಾಕಿ, ಮಿಶ್ರಿಸಿ.

ಇದಕ್ಕೆ ೩ ಚಮಚದಷ್ಟು ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಿಸಿ.ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಕೂದಲಿಗೆ ಹಚ್ಚಿರಿ.

೩೦ ನಿಮಿಷಗಳ ನಂತರ ಇದನ್ನು ತೊಳೆಯಿರಿ ಮತ್ತು ಉಗುರು  ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

೩.ಬಾಳೆಹಣ್ಣು

ಯಾರು ಬೇಕಾದರೂ ಸೇವಿಸಬಹುದಾದ ರುಚಿಕರ ಬಾಳೆಹಣ್ಣು ತನ್ನಲ್ಲಿ ಹಲವು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ ಎಂದು ನಿಮಗೆ ತಿಳಿದಿದೆ. ಆದರೆ ಇದು ನಿಮ್ಮ ಕೂದಲ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಿಮಗೆ ಗೊತ್ತೇ? ಬಾಳೆಹಣ್ಣನ್ನು ಸೇವಿಸುವುದು ನಿಮ್ಮ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ತ್ವರಿತ ಫಲಿತಾಂಶ ಬೇಕು ಎಂದರೆ ಇದನ್ನು ಮಾಡಿ,

ನಿಮಗೆ ಬೇಕಾಗಿರುವುದು

ಹಾಲು

ಬಾಳೆಹಣ್ಣು

ನೀರು

ಮಾಡಬೇಕಾಗಿರುವುದು

ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು, ಹಣ್ಣನ್ನು ಸಣ್ಣಗೆ ಕತ್ತರಿಸಿಕೊಳ್ಳಿ.

ಇದನ್ನು ಮಿಕ್ಸಿಯಲ್ಲಿ ಹಾಕಿ ಎರಡು ಚಮಚ ಹಾಲಿನ ಜೊತೆ ರುಬ್ಬಿಕೊಳ್ಳಿ.

ಈ ಮಿಶ್ರಣವನ್ನು ತಲೆಬುರುಡೆಗೆ ಸೇರಿದಂತೆ ಕೂದಲಿಗೆ ಸಂಪೂರ್ಣವಾಗಿ ಹಚ್ಚಿರಿ.

ಒಂದು ಗಂಟೆಯ ನಂತರ ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಿ.

ವಾರದಲ್ಲಿ ನಾಲ್ಕು ಬಾರಿ ಇದನ್ನು ಮಾಡಿ.

ಕೂದಲನ್ನು ಹಾನಿಗೊಳಗಾಗದಂತೆ ತಡೆಯುವುದು ಹೇಗೆ?

೧.ಮೃದುವಾದ ದಿಂಬಿನ ಮೇಲೆ ಮಲಗಿ, ಚೆನ್ನಾಗಿ ನಿದ್ರೆ ಮಾಡಿ.

೨.ಹೆಚ್ಚು ನೀರನ್ನು ಕುಡಿಯಿರಿ.

೩.ಸಮತೋಲನ ಆಹಾರ ಸೇವಿಸಿ.

೪.ಕೂದಲಿಗೆ ಬಣ್ಣವನ್ನು ಹೆಚ್ಚು ಹಾಕಬೇಡಿ.

೫.ಶಾಖವನ್ನು ನೀಡಬೇಡಿ.

೬.ಕೂದಲು ತೇವ ಇರುವಾಗ ತಲೆಕೂದಲನ್ನು ಬಾಚಬೇಡಿ.

೭.ಪ್ರೊಟೀನ್ ಇರುವ ಆಹಾರ ಸೇವಿಸಿ.

೮.ನಿಯಮಿತವಾಗಿ ಕೂದಲನ್ನು ತೊಳೆಯಿರಿ(ಹೆಚ್ಚು ಬಾರಿ ಅಥವಾ ಕಡಿಮೆ ಬಾರಿ ಬೇಡ).

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon