Link copied!
Sign in / Sign up
1
Shares

ಕೃಷ್ಣ ಮತ್ತು ಗರ್ಭಿಣಿ

ಕೃಷ್ಣನು ಹೇಳುತ್ತಾನೆ “ಅರ್ಜುನನ ಮಗ ಅಭಿಮನ್ಯುವು ಈ ಯುಗಪರಿವರ್ತನೆಯ ಪ್ರಮುಖ ಕಾರಣನಾಗುತ್ತಾನೆ ಹಾಗು ಅವನ ಮಗನು ಭರತವರ್ಷದ ವಿಲೀನಗೊಂಡ ಎಲ್ಲಾ ಪ್ರಾಂತ್ಯಗಳ ಮೊದಲ ಸಾಮ್ರಾಟ ಚಕ್ರವರ್ತಿಯಾಗುತ್ತಾನೆ” ಎಂದು. ಎಲ್ಲವನ್ನೂ ಅರಿತಿದ್ದ ಕೃಷ್ಣ ಪರಮಾತ್ಮನಿಗೆ ತಿಳಿದಿದ್ದು ಏನು ಅಂದರೆ, ಅಭಿಮನ್ಯು ಹಾಗು ಇತರೆ ಉಪಪಾಂಡವರು ಅಳಿದ ಮೇಲೆ, ಭರತವರ್ಷವನ್ನ ಆಳಲಿಕ್ಕೆ ಒಬ್ಬ ಮಹಾನ್ ನಾಯಕನೇ ಬೇಕು ಎಂದು.

ಅಭಿಮನ್ಯು ಹಾಗು ಉತ್ತರಳ ಮಗನೇ ಪರೀಕ್ಷಿತ. ಪಾಂಡವರ ವಶದ ಕೋಣೆಯ ಕುಡಿಯೇ ಇದು. ಏಕೆಂದರೆ ಉಳಿದ ಅಷ್ಟೂ ಪಾಂಡವರ ಪುತ್ರರು(ಉಪಪಾಂಡವರು) ಅಶ್ವತ್ಥಾಮನ ಸೇಡಿನ ಹೀನ ಕೃತ್ಯಕ್ಕೆ ನಿದ್ದೆಯಲ್ಲೇ ಬಲಿಯಾಗಿರುತ್ತಾರೆ.

ಈ ಅಶ್ವತ್ಥಾಮನು ಪರೀಕ್ಷಿತ ರಾಜನು ತನ್ನ ತಾಯಿ ಉತ್ತರೆಯ ಹೊಟ್ಟೆಯಲ್ಲಿ ಇರುವಾಗಲೇ ಕೊಲ್ಲಬೇಕೆಂದು ಬ್ರಹ್ಮಾಸ್ತ್ರ ಪ್ರಯೋಗಿಸುವನು. ಬ್ರಹ್ಮನಿಗೆ ಅಪಮಾನ ಮಾಡಬಾರದೆಂದು ಶ್ರೀ ಕೃಷ್ಣನು ಬ್ರಹ್ಮಾಸ್ತ್ರಕ್ಕೆ ವಿರುದ್ದವಾಗಿ ಯಾವುದೇ ಅಸ್ತ್ರ ಪ್ರಯೋಗಿಸಲು ಅಥವಾ ಯಾರು ನಿಲ್ಲಿಸಲು ಆಗದ ಬ್ರಹ್ಮಾಸ್ತ್ರವನ್ನ ನಿಲ್ಲಿಸಲು ಮುಂದಾಗುವುದಿಲ್ಲ. ಆಗ ಶ್ರೀ ಕೃಷ್ಣ ಪರಮಾತ್ಮನು ಆ ಬ್ರಹ್ಮಾಸ್ತ್ರವು ಪರೀಕ್ಷಿತನನ್ನು ಕೊಲ್ಲಲು ಬಿಡುವನು. ಅದಾದ ನಂತರ ಶ್ರೀ ಕೃಷ್ಣ ಪರಮಾತ್ಮನು ತನ್ನ ದಿವ್ಯಶಕ್ತಿ ಇಂದ ಕೇವಲ ತನ್ನ ಕೈಗಳನ್ನ ಬೀಸಿ ಹೊಟ್ಟೆಯಲ್ಲಿನ ಶಿಶುವಿಗೆ ಜೀವ ತುಂಬುತ್ತಾನೆ.

ಹೀಗೆ ಜನನದ ಮುಂಚೆಯೇ ಇಷ್ಟೊಂದು ಪರೀಕ್ಷೆಗಳನ್ನ ಎದುರಿಸಿದ ಮಗುವಿಗೆ- ಪರೀಕ್ಷಿತ ಎಂದು ನಾಮಕರಣ ಆಯಿತು.

ಆದರೆ ಮಹಾಭಾರತದ ಯುದ್ಧದ ನಂತರ ಯುಧಿಷ್ಠಿರನು ಸಾಮ್ರಾಟನಾಗುವನು. ಇದಕ್ಕಾಗಿ ಗಾಂಧಾರಿಯು ಕೃಷ್ಣನಿಗೆ ತನ್ನ ವಂಶವು ಕುರು ವಂಶದಂತೆ ನಿರ್ನಾಮ ಆಗಲೆಂದು ಶಪಿಸುವಳು. 36 ವರ್ಷಗಳ ಬಳಿಕ ಈ ಶಾಪವು ನಿಜವಾಗುತ್ತದೆ. ಯಾದವ ವಂಶಸ್ತರು ಯಾವುದೋ ಚಿಕ್ಕ ವಿಷಯದ ಸಲುವಾಗಿ ತಮ್ಮಲ್ಲೇ ಜಗಳ ಮಾಡಿಕೊಂಡು ಒಬ್ಬರನ್ನೊಬ್ಬರು ಸಾಯಿಸಿಕೊಳ್ಳುತ್ತಾರೆ. ಕೃಷ್ಣನು ಕಾಡಿಗೆ ಹೋಗುವನು. ಅಲ್ಲಿ ಕೃಷ್ಣನು ಜರ ಎಂಬ ಬೇಟೆಗಾರನಿಂದ ಸಾಯಲ್ಪಡುತ್ತಾನೆ.

ಕೃಷ್ಣನ ಸಾವಿನ ಸುದ್ದಿ ಕೇಳಿದ ಪಾಂಡವರು ದುಃಖದಲ್ಲಿ ಮುಳುಗಿ ಹೋಗುತ್ತಾರೆ. ಯುಧಿಷ್ಠಿರನಿಗೆ ಜ್ಞಾನೋದಯವಾಗಿ ತನ್ನ ಪದವಿ ಹಾಗು ಆಳ್ವಿಕೆ ತ್ಯಜಿಸಲು ಇದೇ ಸರಿಯಾದ ಸಮಯ ಎಂದು ಪಟ್ಟದಿಂದ ಕೆಳಗಿಳಿದು, ಅರ್ಜುನನ ಮೊಮ್ಮಗ ಪರೀಕ್ಷಿತನಿಗೆ ರಾಜನ ಪಟ್ಟ ನೀಡುವನು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon