Link copied!
Sign in / Sign up
1
Shares

ಪಾಕವಿಧಾನ : ಕೋಳಿ ದೋಸೆ

ಹೊಸ ಹೊಸ ರುಚಿಯನ್ನು ತಿನ್ನಬೇಕೆಂಬುದು ಎಲ್ಲರ ಬಯಕೆ, ಇದು ಸಹಜ ಕೂಡ. ನಿಮ್ಮ ಮೆನೆಯಲ್ಲಿ ನಿಮ್ಮ ಪತಿ ಮಕ್ಕಳು ಇವತ್ತು ಏನಾದರು ಹೊಸ ತರಹದ ತಿಂಡಿಯನ್ನು ಮಾಡು ಎಂದು ಕೇಳುವುದು ಸಹಜ. ನೀವು ನಾನು ಮಾಡಲಿ ಎನ್ನುವ ಬದಲು ಈ ಬಾರಿ ಈ ಹೊಸ ಬಗೆಯ ರುಚಿಯನ್ನು ಮಾಡಿ ನಿಮ್ಮ ಕುಟುಂಬಕ್ಕೆ ಬಡಿಸಿ. ಅವರ ಖುಷಿಯಲ್ಲಿ ಭಾಗಿಯಾಗಿ.

ಪೂರ್ವ ಸಿದ್ಧತೆ

೧.ಉದ್ದಿನ ಬೇಳೆ, ಅಕ್ಕಿ, ಕಡಲೆ ಬೇಳೆ, ಮತ್ತು ಮೆಂತ್ಯೆಯನ್ನು ೪ ರಿಂದ ೫ ತಾಸು(ಗಂಟೆ) ನೀರಿನಲ್ಲಿ ನೆನಸಿ.

೨.ಇದನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.

೩.ಇದಕ್ಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಮತ್ತು ಒಂದು ರಾತ್ರಿ ಪೂರ ಅದನ್ನು ಹಾಗೆಯೆ ಬಿಡಿ.

ಮಾಡುವ ವಿಧಾನ
ಕೋಳಿ ಮಸಾಲ

೧.ಕೋಳಿ ಮಾಂಸವನ್ನು ತೊಳೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ.

೨.ಸಣ್ಣಗೆ ಈರುಳ್ಳಿ, ಟಮೋಟ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ.

೩.ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾಗಲು ಬಿಡಿ, ನಂತರ ಅದಕ್ಕೆ ಕತ್ತರಿಸಿರುವ ಈರುಳ್ಳಿ,, ಮೆಣಸಿನಕಾಯಿ, ಕೋಳಿ ಮಾಂಸ, ಅರಿಶಿಣ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ ಮತ್ತು ರುಚಿಗೆ ಉಪ್ಪನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ೧೫ ರಿಂದ ೨೦ ನಿಮಿಷಗಳ ಕಾಲ ಬೇಯಿಸಿ (ಹೆಚ್ಚು ನೀರನ್ನು ಹಾಕಬೇಡಿ).

೪.ನಂತರ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಇದರ ಮೇಲೆ ಉದುರಿಸಿ ಪಕ್ಕಕ್ಕೆ ಇಡಿ.

ಚಟ್ನಿ

೧.ಎಣ್ಣೆಯಲ್ಲಿ ಮೆಣಸಿನಕಾಯಿ ಮತ್ತು ಟಮೊಟೊವನ್ನು ೨ ರಿಂದ ೩ ನಿಮಿಷಗಳ ಕಾಲ ಉರಿಯಿರಿ.

೨.ಜಾರಿಗೆ ಬೇಯಿಸಿದ ಮೆಣಸಿನಕಾಯಿ, ಟಮೋಟ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಮತ್ತು ರುಚಿಗೆ ಉಪ್ಪನ್ನು ಸೇರಿಸಿ ಮತ್ತು ಸ್ವಲ್ಪ ನೀರಿನ ಜೊತೆ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.

೩.ಒಂದು ಚಿಕ್ಕ ಪಾತ್ರೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ನಂತರ ಅದಕ್ಕೆ ಕೆಂಪು(ಒಣ)ಮೆಣಸಿನಕಾಯಿ, ಸಾಸಿವೆ, ಕಡ್ಲೆ ಬೇಳೆ ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಮತ್ತು ೩-೪ನಿಮಿಷಗಳ ಕಾಲ ಉರಿಯಿರಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ.

ಕೋಳಿ ಮಸಾಲ ದೋಸೆಯನ್ನು ಮಾಡುವ ವಿಧಾನ

೧.ಒಂದು ತವಾವನ್ನು ಬಿಸಿ ಮಾಡಿ ಅದರ ಸುತ್ತ ಎಣ್ಣೆಯನ್ನು ಹಾಕಿ.

೨.ದೋಸೆ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.

೩.ತವಾ ಮೇಲೆ ಒಂದು ಸೌಟಿನಿಂದ ದೋಸೆ ಹಿಟ್ಟನ್ನು ಹಾಕಿ ದೋಸೆ ತರ ಹಾಕಿ, ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ. ಇದರ ಮಧ್ಯಭಾಗಕ್ಕೆ ೨ ಅಥವಾ ೩ ಚಮಚ ಕೋಳಿ ಮಸಾಲವನ್ನು ಹಾಕಿ. ಚೆನ್ನಾಗಿ ಬೆಂದ ನಂತರ ಇದನ್ನು ಒಂದು ತಟ್ಟೆಗೆ ಹಾಕಿ ಚಟ್ನಿ ಜೊತೆ ಸವಿಯಲು ನೀಡಿ.

೪.ಎಷ್ಟು ದೋಸೆ ಬೇಕು ಅಷ್ಟರ ವರೆಗೆ ಇದನ್ನು ಪುನರಾವರ್ತಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon