Link copied!
Sign in / Sign up
7
Shares

ಮೊದಲಬಾರಿಗೆ ಕಿವುಡು ಮಗು ಅಮ್ಮನ ಧ್ವನಿ ಕೇಳಿ ಕೊಟ್ಟ ಪ್ರತಿಕ್ರಿಯೆ ನೀವು ಅಳದೆ ನೋಡಲಾಗುವುದಿಲ್ಲ!

ಪ್ರತಿಯೊಂದು ಮಗುವು ತನ್ನ ಅಮ್ಮನ ಧ್ವನಿಯನ್ನು ಕೇಳಿದೊಡನೆ ಪ್ರಶಾಂತವಾಗುತ್ತದೆ. ಅಮ್ಮನ ಧ್ವನಿಯಲ್ಲಿ ಅಂತದ್ದೊಂದು ಶಕ್ತಿ ಇದೆ. ಆದರೆ ತಾಯಿಯ ಧ್ವನಿ ಹೇಗಿದೆ ಎಂದು ಕೂಡ ತಿಳಿದಿರದ ಮಕ್ಕಳು ಇರುತ್ತಾರೆ. ಅವರಿಗೆ ಸಮಾಧಾನಗೊಳಿಸುವ ಮಾತುಗಳನ್ನ ಕೇಳಲು ಸಾಧ್ಯವಿಲ್ಲ, ಅಮ್ಮನ ಅಕ್ಕರೆಯ ಜೋಗುಳ ಕೇಳುತ್ತಾ ಮಲಗುವ ಭಾಗ್ಯವೂ ಇರುವುದಿಲ್ಲ.

ಇಲ್ಲೂ ಕೂಡ ಅಂತಹದ್ದೇ ಒಂದು ಹುಟ್ಟಿದಾಗಿನಿಂದ ತನ್ನ ಶ್ರವಣ ಶಕ್ತಿಯನ್ನ ಕಳೆದುಕೊಂಡಿರುವ ಮಗು ಇದೆ. ಈ ಮಗುವು ಕೂಡ ಇಲ್ಲಿಯವರೆಗೂ ಆಕೆಯ ಅಮ್ಮನ ಧ್ವನಿಯನ್ನೇ ಕೇಳಿಲ್ಲ. ಮನುಷ್ಯನಿಗೆ ಎಷ್ಟೇ ವಯಸ್ಸಾಗಿದ್ದರೂ ಅಮ್ಮ ಮನೆಯಲ್ಲಿ ಇದ್ದಾಳೆಂದರೆ, ಆಕೆಯ ಧ್ವನಿ ಕಿವಿಗೆ ಬಿದ್ದರೆ, ಏನೋ ನಿರಾಳ ಭಾವ. ಅಂತದ್ದರಲ್ಲಿ ಏನು ಅರಿಯದ ಎಳೇ ಕೂಸು ಇಲ್ಲಿಯವರೆಗೂ ಅಮ್ಮನ ಧ್ವನಿಯೇ ಕೇಳಿರದ ಮಗುವು ಕೊನೆಗೂ ಅಮ್ಮನ ಧ್ವನಿ ಮೊದಲ ಬಾರಿಗೆ ಕೇಳಿದಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಊಹಿಸಿ. ವಿಜ್ಞಾನದ ನೆರವಿನಿಂದ ಈ ಮಗುವು ತನ್ನ ತಾಯಿಯ ಧ್ವನಿಯನ್ನು ಕೊನೆಗೂ ಕೇಳಬಹುದು. ಆದರೆ ಆ ಧ್ವನಿಯನ್ನು ಮೊದಲ ಬಾರಿಗೆ ಕೇಳಿದೊಡನೆ ಆ ಮಗು ನೀಡಿದಂತಹ ಪ್ರತಿಕ್ರಿಯೆ ನಿಮ್ಮ ಕಣ್ಣಲ್ಲಿ ನೀರು ತುಂಬಿಸುವುದರಲ್ಲಿ ಯಾವುದೇ ಸಂಶಯ ಇಲ್ಲ! ಅಷ್ಟೇ ಅಲ್ಲದೆ ಈ ವಿಡಿಯೋ ಅಲ್ಲಿ ಇಂತಹದ್ದೇ ಇನ್ನೂ ಕೆಲವು ಮಕ್ಕಳ ಪ್ರತಿಕ್ರಿಯೆಗಳು ಇವೆ ಹಾಗು ಇವುಗಳು ಸೀದಾ ನಿಮ್ಮ ಹೃದಯಕ್ಕೆ ನಾಟುತ್ತವೆ !

ಈ ವಿಡಿಯೋ ನಿಮ್ಮ ಹೃದಯವನ್ನೂ ಮುಟ್ಟಿದ್ದರೆ, ಇದನ್ನು ದಯವಿಟ್ಟು ಶೇರ್ ಮಾಡಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon